For Quick Alerts
ALLOW NOTIFICATIONS  
For Daily Alerts

ಪ್ರೇಮಿಗಳು ಬೇರೆ-ಬೇರೆ ಕಡೆ ಇದ್ದಾಗ ಸಂಬಂಧದಲ್ಲಿ ಈ ವಾಸನೆ ಬಡಿದರೆ ಹುಷಾರ್!

|

ನಮ್ಮಲ್ಲಿ ಪ್ರೇಮಿಗಳು ಆಗಿರಲಿ ಮದುವೆ ಆಗಿರಲಿ ಯಾವಾಗಲೂ ಒಟ್ಟಿಗೆ ಇರಲ್ಲ. ದೂರ ದೂರ ಇರುವ ಸಾಧ್ಯತೆ ಇರುತ್ತದೆ. ಕೆಲಸದ ನಿಮಿತ್ತ ಪತಿ ಹಾಗೂ ಪತ್ನಿ ದೂರ ದೂರದ ಊರುಗಳಲ್ಲಿ ಇರಬಹುದು. ಅಥವಾ ಪ್ರೇಮಿಗಳು ದೂರ ದೂರದಲ್ಲಿ ಇರಬಹುದ್ದು. ಹೀಗಿದ್ದಾಗ ಜಾಸ್ತಿ ಪ್ರೀತಿ ಇರುತ್ತೆ ಎಂದು ಹೇಳುವುದುಂಟು.

long distance relationship

ಆದರೆ ಇದು ಎಷ್ಟು ನಿಜ ಎಂದು ಯಾರಿಗೂ ಗೊತ್ತಿಲ್ಲ. ದೂರ ಇದ್ದರ ಸಂಬಂಧವು ದೂರ ಆಗುತ್ತದೆ ಎನ್ನುವ ಮಾತು ಕೂಡ ಇದೆ. ಭಾವನೆ, ಪ್ರೀತಿ ಎಲ್ಲವೂ ದೂರವಾಗುತ್ತದೆ ಎನ್ನುತ್ತಾರೆ. ಹಾಗಾದರೆ ದೂರದ ಸಂಬಂಧದಲ್ಲಿ ಲೋಪ ಉಂಟಾಗಿದೆ ಎಂದು ಅರಿಯುವುದು ಹೇಗೆ? ದೂರದಲ್ಲಿರುವ ನಿಮ್ಮ ಸಂಗಾತಿ ಬದಲಾಗಿದ್ದಾಳೆ ಅಥವಾ ಆಗಿದ್ದಾನೆ ಎನ್ನುವುದನ್ನು ತಿಳಿಯುವುದು ಹೇಗೆ? ದೂರದ ಸಂಬಂಧ ಹಳಸಿದೆ ಎನ್ನುವುದಕ್ಕೆ ಇಲ್ಲಿದೆ ಕೆಲವೊಂದು ಟಿಪ್ಸ್.

ಈ ರೀತಿಯ ನಡವಳಿಕೆ ನಿಮ್ಮ ಸಂಗಾತಿಯಲ್ಲಿ ಕಂಡರೆ ದೂರದ ಸಂಬಂಧಕ್ಕೆ ಗುಡ್ ಬಾಯ್ ಹೇಳುವುದು ಒಳ್ಳೆಯದು. ಹಾಗಾದರೆ ಯಾವೆಲ್ಲ ಸೂಚನೆಗಳು ನಿಮ್ಮನ್ನು ಅಲರ್ಟ್ ಮಾಡಬಹುದು ಎನ್ನುವುದಕ್ಕೆ ಉತ್ತರ ಇಲ್ಲಿದೆ.

ಮಾತಿನಲ್ಲಿ ಬದಲಾದರೆ

ಮಾತಿನಲ್ಲಿ ಬದಲಾದರೆ

ಮಾತುಗಾರಿಕೆ ಅಥವಾ ಸಂವಹನ ಅನ್ನುವುದು ಎಲ್ಲ ಸಂಬಂಧಗಳ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ದೂರದ ಸಂಬಂಧಕ್ಕೆ ಮಾತು ಅತೀ ಮುಖ್ಯ. ಅದು ಕಾಲ್ ಮೂಲಕ ಆಗಿರಬಹುದು, ಮೆಸೇಜ್, ವಿಡಿಯೋ ಕಾಲ್ ಆಗಿರಬಹುದು. ಯಾವುದಾದರೂ ಒಂದು ರೂಪದಲ್ಲಿ ದೂರದ ಸಂಬಂಧದಲ್ಲಿ ದಿನ ನಿತ್ಯ ಸಂಹವನ ನಡೆಯಲೇ ಬೇಕು. ಅದು ಸಂಬಂಧಕ್ಕೆ ಒಂದು ಅರ್ಥ ಸಿಗುತ್ತದೆ. ಆದರೆ ನಿಮ್ಮ ದೂರದ ಸಂಗಾತಿಯ ಸಂವಹನ ಏಕಾಏಕಿ ನಿಂತಿರುತ್ತೆ. ಒಂದು ವಾರ ಆದರೂ ಯಾವುದೇ ರೀತಿಯ ಕರೆ ಇರುವುದಿಲ್ಲ. ಮಾತುಕತೆಯೇ ಇಲ್ಲ ಎಂದಾದರೆ ನೀವು ಯೋಚಿಸಬೇಕಾದ ವಿಚಾರ. ಯಾರು ಕೂಡ ಸುಮ್ಮನೆ ಏಕಾಏಕಿ ಮಾತು ನಿಲ್ಲಿಸುವುದಿಲ್ಲ. ಬದಲಾಗಿ ಅದಕ್ಕೆ ಕಾರಣ ವಿರುತ್ತೆ. ಅಂದರೆ ನಿಮ್ಮ ಮೇಲಿನ ಆಸಕ್ತಿ ಕಳೆದುಕೊಂಡಿದರಬಹುದು. ಅಥವಾ ಮಾತನಾಡಿ ಏನು ಪ್ರಯೋಜನ ಇಲ್ಲ ಎನ್ನುವ ಭಾವನೆ. ಅಥವಾ ಬೇರೆ ಸಂಬಂಧಕ್ಕೆ ಹೊರಳಿದರೆ ಸಂವಹನದಲ್ಲಿ ಅಂತರ ಸಾಮಾನ್ಯ. ಈ ರೀತಿಯ ವರ್ತನೆ ನಿಮ್ಮ ಸಂಗಾತಿಯಿಂದ ನಿಮಗೆ ಕಂಡು ಬಂದರೆ ನೀವು ಕೂಡ ಮಾತು ಬಿಟ್ಟು ಬಿಡಿ. ಅಂತರ ಪಾಲಿಸಿ. ಮುಂದೆ ಅರಿವಾಗಿ ಅವರೇ ನಿಮ್ಮಲ್ಲಿ ಮಾತನಾಡುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಸರಿ ಹೊಂದಾಣಿಕೆ ಆಗುವುದಿಲ್ಲ ಎಂದಾದರೆ ಈ ಸಂಬಂಧಕ್ಕೆ ನಾಂದಿ ಹಾಡುವುದು ಒಳ್ಳೆಯದು.

ಭೇಟಿ ಆಗಲು ಹಿಂದೇಟು!

ಭೇಟಿ ಆಗಲು ಹಿಂದೇಟು!

ದೂರದ ಸಂಬಂಧ ಎಂದಾಗ ಸಂಗಾತಿಯನ್ನು ನೋಡಲು ಮನಸ್ಸು ಮಿಡಿಯುತ್ತೆ, ಕಣ್ಣುಗಳು ಅವರನ್ನ ನೋಡಲು ಕಾಯುತ್ತ ಇರುತ್ತೆ. ಆದರೆ ನೀವು ಅವರನ್ನು ಭೇಟಿ ಆಗಲು ಅಥವಾ ಡೇಟ್ ಮಾಡಲು ಮುಂದಾಗುತ್ತೀರಿ. ಅದಕ್ಕೆ ಅವರು ಒಕೆ ಎಂದು ಪದೇ ಪದೇ ನಿಮ್ಮಿಂದ ತಪ್ಪಿಸಿಕೊಳ್ಳುತ್ತಿದ್ದರೆ. ಎಲ್ಲೋ ವ್ರಾಂಗ್ ಹೊಡಿತಿದೆ ಎನ್ನುವುದನ್ನು ನೀವು ಅರಿಯಲೇಬೇಕು. ಹೌದು, ಡೇಟ್ ಬಗ್ಗೆ ಮಾತನಾಡಲು ನೀವು ಸಾವಿರ ಸಲ ಕರೆ ಮಾಡಿದರೆ ಫೋನ್ ರಿಸೀವ್ ಮಾಡದೆ ಇರುವುದು. ಡೇಟ್ ಗೆ ದಿನ ನಿಗದಿಯಾದರು ಆ ದಿನ ನೆಪ ಹೇಳಿ ತಪ್ಪಿಸಿಕೊಳ್ಳುವುದು ಪದೇ ಪದೇ ಮಾಡಿದರೆ ನಿಮ್ಮ ದೂರದ ಸಂಬಂಧದಲ್ಲಿ ಲೋಪ ಇದೆ ಎಂದು ಅರ್ಥ. ಒಂದು , ಎರಡು ಬಾರಿ ಈ ರೀತಿ ಸಮಸ್ಯೆಯಾಗಿ ಅದಕ್ಕೆ ತಕ್ಕುದಾದ ಕಾರಣ ಹೇಳಿದರೆ ಅದನ್ನು ಒಪ್ಪಿಕೊಳ್ಳಬಹುದು. ಆದರೆ ಪದೇ ಪದೇ ಈ ರೀತಿ ಮಾಡಿದರೆ ಅವರಿಗೆ ನಿಮ್ಮ ಜೊತೆ ಡೇಟ್ ಮಾಡಲು ಅಥವಾ ಭೇಟಿ ಆಗಲು ಇಷ್ಟವಿಲ್ಲ ಎಂದು ಅರ್ಥವಾಗುತ್ತದೆ.

ದೂರದ ಸಂಬಂಧದಲ್ಲಿ ಅನಿಶ್ಚಿತತೆ ಹರಿದಾಡುತ್ತಿದ್ದರೆ!

ದೂರದ ಸಂಬಂಧದಲ್ಲಿ ಅನಿಶ್ಚಿತತೆ ಹರಿದಾಡುತ್ತಿದ್ದರೆ!

ಸಂಬಂಧ ಎಂದರೆ ಖುಷಿ ಖುಷಿಯಲ್ಲಿ ಇರಬೇಕು. ಅದರಲ್ಲೂ ದೂರದ ಸಂಬಂಧದಲ್ಲಿ ಖುಷಿ ಕೊಂಚ ಜಾಸ್ತಿಯೇ ಇರಬೇಕು. ಏಕೆಂದರೆ ದೂರದಲ್ಲಿರುವ ಕಾರಣ ಅವರನ್ನು ನೋಡುವ, ಮಾತನಾಡುವ ಬಯಕೆ ಜಾಸ್ತಿ ಇರುತ್ತದೆ. ಖುಷಿಯಿಂದ ಫೋನ್ ಕಾಲ್, ವಿಡಿಯೋ ಕಾಲ್ ಮಾಡುವ ಬಯಕೆ ಇರಬೇಕು. ಆದರೆ ಈ ಖುಷಿ ಇಲ್ಲದಿದ್ದರೆ ಅಥವಾ ಅನಿಶ್ಚಿತತೆ ಕಾಡುತ್ತಿದ್ದರೆ ಯಾವುದೇ ಸರಿ ಇಲ್ಲ ಎಂದು ಆಗುತ್ತದೆ. ಹೌದು, ಫೋನ್ ಮಾಡಲು ಅಥವಾ ವಿಡಿಯೋ ಕಾಲ್ ಮಾಡಲು ಮನಸ್ಸು ಇಲ್ಲದೆ ಇರುವುದು. ಫೋನ್ ನಲ್ಲಿ ಅವರ ಹೆಸರು ನೋಡಿದಾಗ ಉರಿ ಉಂಟಾಗುವುದು ಇವೆಲ್ಲ ಸಂಬಂಧದಲ್ಲಿನ ಅನಿಶ್ಚಿತತೆಯ ಲಕ್ಷಣವಾಗಿದೆ. ಈ ರೀತಿಯ ಗುಣಗಳು ನಿಮ್ಮಲ್ಲಿ ನೀವು ಕಂಡುಕೊಂಡರೆ ಆ ದೂರದ ಸಂಬಂಧದ ಬಗ್ಗೆ ಒಂದಿಷ್ಟು ಯೋಚಿಸುವುದು ಉತ್ತಮ ಐಡಿಯಾ.

ಅವರಿಲ್ಲದ ಭವಿಷ್ಯವನ್ನು ನಿರೀಕ್ಷಿಸುವುದು

ಅವರಿಲ್ಲದ ಭವಿಷ್ಯವನ್ನು ನಿರೀಕ್ಷಿಸುವುದು

ದೂರದ ಸಂಬಂಧದಲ್ಲಿ ಬಿರುಕು ಮೂಡಿದೆ ಅಥವಾ ಆಸಕ್ತಿ ಇಲ್ಲ ಎನ್ನುವುದು ನಮ್ಮ ನಡವಳಿಕೆಯಿಂದಲೂ ಕೆಲವೊಂದು ಬಾರಿ ಗಮನಕ್ಕೆ ಬರುತ್ತದೆ. ಹೌದು, ನಿಮ್ಮ ಸಂಗಾತಿ ದೂರದಲ್ಲಿ ಇದ್ದರೆ ನಿಮಗೆ ಅವರ ನೆನಪು ಇಲ್ಲದೆ ಇರುವುದು ಕೂಡ ಒಂದು ರೀತಿಯಲ್ಲಿ ನೀವು ಅವರನ್ನು ದೂರ ಮಾಡುತ್ತಿದ್ದೀರಿ ಎಂಬುವ ಅರ್ಥವಾಗಿದೆ. ಅವರನ್ನು ನಿಮ್ಮ ಭವಿಷ್ಯದ ಪಾಲುದಾರೆ ಅಥವಾ ಪಾಲುದಾರ ಎಂಬುವುದನ್ನು ನೀವು ಪರಿಗಣಿಸಲು ಹೋಗದೆ ಇರುವುದು ಕೂಡ ಒಂದು ರೀತಿಯ ಸಮಸ್ಯೆಯಾಗಿದೆ. ಇನ್ನು ದೂರದಲ್ಲಿ ಸಂಬಂಧವಿದ್ದರು ಮದುವೆಗೆ ನೀವು ಮುಂದಾಗದೆ ಇರುವುದು ಕೂಡ ದೂರದ ಸಂಬಂಧಕ್ಕೆ ಅಂತ್ಯ ಹಾಡಬೇಕಾಗುತ್ತದೆ.

ಸಾಮಾಜಿಕ ಜಾಲತಾಣ ಬಳಕೆ ಮಾಡದಿದ್ದರೆ!

ಸಾಮಾಜಿಕ ಜಾಲತಾಣ ಬಳಕೆ ಮಾಡದಿದ್ದರೆ!

ಕೆಲವೊಂದು ಬಾರಿ ನಿಮ್ಮ ಸಂಗಾತಿ ಸಾಮಾಜಿಕ ಜಾಲತಾಣ ಇಲ್ಲ, ನಾನು ಬಳಕೆ ಮಾಡುವುದಿಲ್ಲ ಎಂದು ಹೇಳಬಹುದು. ಕೆಲವರು ಈ ಬಗ್ಗೆ ನಿಜ ಹೇಳಿರುತ್ತಾರೆ. ನಿಜ ಹೇಳಿದ್ದರೆ ಸಮಸ್ಯೆ ಏನು ಇಲ್ಲ. ಆದರೆ ಕೆಲವರು ತಮ್ಮ ಮಾಹಿತಿ, ಆನ್ ಲೈನ್ ಇರುವಿಕೆ ಬಗ್ಗೆ ಮುಚ್ಚಿಡುವ ಉದ್ದೇಶದಿಂದ ಈ ರೀತಿ ಮಾಡಿರುವ ಸಾಧ್ಯತೆ ಇರುತ್ತಾರೆ. ತಾವು ಏನು ಮಾಡುತ್ತಿದ್ದೇವೆ ಎನ್ನುವ ಬಗ್ಗೆ ಚಲನವಲಗಳನ್ನು ತಮ್ಮ ಸಂಗಾತಿ ನೋಡುತ್ತಾನೆ ಎನ್ನುವ ದೃಷ್ಟಿಯಿಂದ ಇದನ್ನು ಮರೆಮಾಚಿರುವ ಸಾಧ್ಯತೆ ಇದೆ. ಹೀಗಾಗಿ ದೂರದಲ್ಲಿರುವ ಸಂಗಾತಿ ಸಾಮಾಜಿಕ ಜಾಲತಾಣ ಬಳಕೆ ಮಾಡುತ್ತಿಲ್ಲ ಎಂದಾದರೆ ಕೊಂಚ ಯೋಚಿಸಿ.

ದೂರದ ಸಂಬಂಧವನ್ನು ಸುಂದರವಾಗಿಸುವುದು ಹೇಗೆ?

ದೂರದ ಸಂಬಂಧವನ್ನು ಸುಂದರವಾಗಿಸುವುದು ಹೇಗೆ?

ದೂರದ ಸಂಬಂಧ ಎಂದರೆ ದೂರದಲ್ಲಿ ಸಂಗಾತಿಗಳು ವಾಸಿಸುವುದು. ಅವರು ದೈಹಿಕವಾಗಿ ದೂರ ಇದ್ದರು, ಮಾನಸಿಕವಾಗಿ ಹತ್ತಿರವಾಗಿ ಇರುತ್ತಾರೆ. ಇನ್ನು ದೂರದ ಸಂಬಂಧದಲ್ಲಿ ನಂಬಿಕೆ ಅತೀ ಮುಖ್ಯ. ಹೀಗಾಗಿ ನಂಬಿಕೆ ಇಟ್ಟು ಸಂಬಂಧ ನಡೆಸಿದರೆ ಎಲ್ಲವೂ ಸರಿಯಾಗಿ ಇರುತ್ತದೆ. ಇನ್ನು ಈಗ ಟೆಕ್ನಾಲಜಿ ಬೆಳೆದಿರುವುದರಿಂದ ಫೊನ್ ಕಾಲ್, ವಿಡಿಯೋ ಕಾಲ್ ನಂತಹ ವ್ಯವಸ್ಥೆ ಇದೆ. ಹೀಗಾಗಿ ಫೋನ್ ಕಾಲ್, ವಿಡಿಯೋ ಕಾಲ್ ಮಾಡುವ ಮೂಲಕ ಸಂಬಂಧವನ್ನು ಇನ್ನು ಹತ್ತಿರವಾಗಿಸಬಹುದು. ಅಲ್ಲದೇ ಅವರನ್ನು ತಿಂಗಳಿಗೊಮ್ಮೆ ಹೋಗಿ ಭೇಟಿಯಾಗುವುದು ಅವರನ್ನು ಎಲ್ಲಿಗಾದರು ಕರೆದುಕೊಂಡು ಹೋಗುವ ಕೆಲಸ ಮಾಡಬೇಕಿದೆ. ಇನ್ನು ಮುಖ್ಯವಾಗಿ ದೂರ ಇದ್ದಾರೆ ಎಂದರೆ ಎಲ್ಲಾ ವಿಷಯಗಳನ್ನು ಮರೆಮಾಚುವುದು ಅಲ್ಲ ದಿನ ನಿತ್ಯದ ವಿಚಾರಗಳನ್ನು ಶೇರ್ ಮಾಡಿಕೊಳ್ಳಬೇಕು. ಈ ಮೂಲಕ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳಬಹುದು.

English summary

Red Flags In A Long-Distance Relationship in Kannada

This red flags in a long distance relationship shows your relationship not going smoothly read on...
Story first published: Saturday, September 24, 2022, 19:15 [IST]
X
Desktop Bottom Promotion