For Quick Alerts
ALLOW NOTIFICATIONS  
For Daily Alerts

ಸೋಲ್‌ಮೇಟ್ ಸಿಗುವವರೆಗೆ ಸಿಂಗಲ್ ಆಗಿರುವುದೇ ಬೆಸ್ಟ್ ಏಕೆ ಗೊತ್ತಾ?

|

ಏಕಾಂಗಿಯಾಗಿರುವ ಪ್ರತಿಯೊಬ್ಬರು ತನಗೊಂದು ಲವರ್ ಇರಬೇಕು ಅಂದುಕೊಳ್ಳುತ್ತಾರೆ. ಏಕಾಂಗಿಯಾಗಿರುವಾಗ ಅನೇಕರು ಪ್ರೇಮದ ಬಗ್ಗೆ ಕನವರಿಸುತ್ತಾ ಇರುತ್ತಾರೆ. ನಾನು ಈಗ ಪ್ರೀತಿಯಲ್ಲಿ ಬೀಳಬೇಕು ಎಂದು ಹಾಡು ಹೇಳುವವರು ಇರುತ್ತಾರೆ. ಇದಕ್ಕಾಗಿ ಫೇಸ್ ಬುಕ್, ಸೋಶಿಯಲ್ ಮೀಡಿಯಾದಲ್ಲಿ ತಮಗೆ ಸೆಟ್ ಆಗುವ ಸಂಗಾತಿಯನ್ನು ಹುಡುಕುವುದರಲ್ಲಿ ಬ್ಯುಸಿ ಇರುತ್ತಾರೆ. ಹೀಗೆ ಮಾಡುವುದು ನಿಜಕ್ಕೂ ತಪ್ಪು ನಿರ್ಧಾರ.

ಯಾಕೆಂದ್ರೆ ಅರ್ಜಂಟ್ ನಲ್ಲಿ ಲವ್ ಮಾಡಿ ಪ್ರೇಮಪಾಶಕ್ಕೆ ಸಿಲುಕಿ ನಂತರ ಸಮಸ್ಯೆಯಲ್ಲಿ ಬೀಳುವುದಕ್ಕಿಂತ ಏಕಾಂಗಿಯಾಗಿ ಇರುವುದು ಒಳ್ಳೆಯದು. ಅಥವಾ ನಿಮ್ಮ ಸೋಲ್ ಮೇಟ್ ಅಥಾವ ನಿಮ್ಮ ರೈಟ್ ಪಾರ್ಟ್ನಾರ್ ಸಿಗೋವರೆಗೆ ಏಕಾಂಗಿಯಾಗಿರುವುದು ಉತ್ತಮ ಐಡಿಯಾ. ಹೌದು, ವ್ರಾಂಗ್ ಪರ್ಸನ್ ಜೊತೆ ಲವ್ ಗೆ ಬಿದ್ದು ಅನಾಹುತ, ನೋವು ಪಡುವುದಕ್ಕಿಂತ ಸಿಂಗಲ್ ಆಗಿ ಇದ್ದು ರೈಟ್ ಪರ್ಸನ್ ಗಾಗಿ ಕಾಯುವುದು ಒಳ್ಳೆಯದು.

ಹಾಗಾದರೆ ಯಾವ ಕಾರಣಕ್ಕಾ ನಮಗೆ ಉತ್ತಮ ಗರ್ಲ್ ಫ್ರೆಂಡ್ ಸಿಗೋವರೆಗೆ ನಾವು ಸಿಂಗಲ್ ಆಗಿರುವುದು ಒಳ್ಳೆಯದು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ:

ನಿಮ್ಮ ದೌರ್ಬಲ್ಯ ಮತ್ತು ಸಾಮರ್ಥ್ಯಗಳನ್ನು ಸಮಾನಾಗಿ ಸ್ವೀಕರಿಸುತ್ತಾರೆ!

ನಿಮ್ಮ ದೌರ್ಬಲ್ಯ ಮತ್ತು ಸಾಮರ್ಥ್ಯಗಳನ್ನು ಸಮಾನಾಗಿ ಸ್ವೀಕರಿಸುತ್ತಾರೆ!

ಮನುಷ್ಯರು ಎಂದ ಮೇಲೆ ದೌರ್ಬಲ್ಯಗಳು ಮತ್ತು ಸಾಮರ್ಥ್ಯಗಳು ಸಾಮಾನ್ಯ. ಹೀಗಾಗಿ ಇದನ್ನು ಸಮಾನಾಗಿ ಸ್ವೀಕರಿಸುವ ವ್ಯಕ್ತಿಯನ್ನು ನೀವು ನಿಮ್ಮ ಬಾಳ ಸಂಗಾತಿಯಾಗಿ ಮಾಡಿಕೊಳ್ಳುವುದು ಒಳ್ಳೆಯದು. ಯಾಕೆಂದರೆ ನಾಳೆ ನಿಮ್ಮ ದೌರ್ಬಲ್ಯವನ್ನು ಅವರು ಅಣಕಿಸುವಂತೆ ಇರಬಾರದು. ಅಲ್ಲದೇ ಅನೇಕ ಪ್ರೇಮ ಪ್ರಕರಣಗಳು ದೌರ್ಬಲ್ಯ ಅಥವಾ ನ್ಯೂನತೆಗಳನ್ನು ಒಪ್ಪಿಕೊಳ್ಳದೆ ಇರುವುದರಿಂದ ಅಂತ್ಯಗೊಳ್ಳುವುದು ಇದೆ.

ಒಂದು ವೇಳೆ ನೀವು ಅರ್ಜಂಟ್ ನಲ್ಲಿ ಪ್ರೀತಿಗೆ ಬಿದ್ದು ಸಂಬಂಧ ಆರಂಭಿಸಿದಾಗ ಅವಳು ಅಥವಾ ಅವನು ನಿಮ್ಮ ದೌರ್ಬಲ್ಯವನ್ನು ಒಪ್ಪಿಕೊಳ್ಳದಿದ್ದರೆ ಸಂಬಂಧವೇ ಹಾಳಾಗುತ್ತದೆ. ಇನ್ನು ನಿಮ್ಮ ದೌರ್ಬಲ್ಯವನ್ನು ಸ್ವೀಕರಿಸದ ವ್ಯಕ್ತಿ ಬೇರೆಯವರ ಸಾಮಾರ್ಥ್ಯಕ್ಕೆ ಸಾಮಾನ್ಯವಾಗಿ ಆಕರ್ಷಿತರಾಗುತ್ತಾರೆ. ಇದು ಕೂಡ ದೊಡ್ಡ ಸಮಸ್ಯೆ ತಂದಿಡುತ್ತದೆ. ಉದಾಹರಣೆಗೆ ನೀವು ಕಪ್ಪಾಗಿದ್ದೀರಿ ಅಂದುಕೊಳ್ಳಿ ನಿಮ್ಮನ್ನು ಇಷ್ಟಪಡುವ ವ್ಯಕ್ತಿ ಕಪ್ಪಾಗಿದ್ದರು ಪರವಾಗಿಲ್ಲ ಎಂದು ನಿಮ್ಮ ಜೊತೆ ಬಂದರೆ ಅಲ್ಲಿಗೆ ಸಂಬಂಧ ಚೆನ್ನಾಗಿರುತ್ತದೆ. ಹೀಗಾಗಿ ನಿಮ್ಮ ಸಂಗಾತಿಯನ್ನು ಹುಡುಕುವಾಗ ಕಾದು ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯ ಐಡಿಯಾ.

ಸಂಬಂಧ ಎಂದರೆ ಕೊನೆಯವರೆಗೆ ಉಳಿಯುವ ಬಂಧ!

ಸಂಬಂಧ ಎಂದರೆ ಕೊನೆಯವರೆಗೆ ಉಳಿಯುವ ಬಂಧ!

ಸಂಬಂಧ ಎಂದರೆ ಅದು ನೂರು ಜನ್ಮದ ಅನುಬಂಧ ಅನ್ನುತ್ತಾರೆ. ಒಂದು ವ್ಯಕ್ತಿ ಮೇಲೆ ಪ್ರೀತಿ ಚಿಗುರಿ ಅದು ಮುಂದುವರೆದು ಕೊನೆಯವರೆಗೂ ಇದ್ದರೆ ಅದು ನಿಜಕ್ಕೂ ಅನುಬಂಧ. ನಿಮ್ಮ ಇಬ್ಬರ ನಡುವೆ ಕೆಮೆಸ್ಟ್ರಿ ಇದ್ದರೆ ಮಾತ್ರ ಆ ಸಂಬಂಧ ನೂರು ಕಾಲ ಉಳಿಯುತ್ತದೆ. ನಿಮಗೆ ಕೆಮೆಸ್ಟ್ರಿ ಇರೋ ವ್ಯಕ್ತಿ ಸಿಗಬೇಕು ಅಂದರೆ ನೀವು ಖಂಡಿತವಾಗಿಯೂ ಕಾಯಬೇಕು. ಕಾದು ನೀವು ನಿಮ್ಮ ಕೆಮೆಸ್ಟ್ರಿಗೆ ಸೂಟ್ ಆಗುವ ವ್ಯಕ್ತಿಯನ್ನು ಚೂಸ್ ಮಾಡಬೇಕು.

ಒಂದು ವೇಳೆ ನೀವು ನಿಮ್ಮ ಕೆಮೆಸ್ಟ್ರಿಗೆ ಸೂಟ್ ಆಗದ ವ್ಯಕ್ತಿಯನ್ನು ಆರಿಸಿಕೊಂಡು ಪ್ರೇಮಕ್ಕೆ ಬಿದ್ದರೆ ಆ ಸಂಬಂಧದಲ್ಲಿ ಖಂಡಿತ ಒಡಕು ಬರುತ್ತದೆ. ಆ ಪ್ರೇಮ ನೂರು ವರ್ಷ ಬಿಡಿ ಮೂರು ವರ್ಷವೂ ಇರೋದಿಲ್ಲ. ಈ ರೀತಿ ಆದರೆ ನಿಮಗೆ ಮತ್ತೆ ಪ್ರೇಮಿಸುವ ಬಯಕೆ ದೂರವಾಗುತ್ತದೆ. ಪ್ರೇಮ ಎಂದರೆ ಅಲರ್ಜಿ ಆಗುತ್ತದೆ. ಹೀಗಾಗಿ ಏಕಾಂಗಿಯಾಗಿ ಇದ್ದರೂ ಪರವಾಗಿಲ್ಲ ಸರಿಯಾಗಿ ಕೆಮೆಸ್ಟ್ರಿ ಇರೋ ವ್ಯಕ್ತಿಯ ಕೈಹಿಡಿಯುವುದು ಒಳ್ಳೆಯದು. ಅದು ಉತ್ತಮ ಆಯ್ಕೆ ಕೂಡ. ಇನ್ನು ಮದುವೆಯಾಗುವವರ ವಿಚಾರದ ಬಗ್ಗೆ ಮಾತನಾಡುವುದಾದರೆ. ನಾವು ಒಂದೇ ಬಾರಿ ಮದುವೆಯಾಗುತ್ತೇವೆ ಅವರೊಡನೆ ಜೀವಿಸುತ್ತೇವೆ. ಹೀಗಾಗಿ ಈ ಬಂಧ ಕೊನೆಯವರೆಗೆ ಇರಬೇಕಾದರೆ ನಮಕೆ ಸೂಟ್ ಆಗುವ ನಮ್ಮ ಜೊತೆ ಕೆಮೆಸ್ಟ್ರಿ ವರ್ಕ್ ಆಗುವವರನ್ನೇ ಮದುವೆಯಾಗುವುದು ಒಳ್ಳೆಯದು.

ನಿಜವಾದ ಪ್ರೀತಿ ನಿಮ್ಮ ಹತ್ತಿರ ಬಂದೇ ಬರುತ್ತೆ!

ನಿಜವಾದ ಪ್ರೀತಿ ನಿಮ್ಮ ಹತ್ತಿರ ಬಂದೇ ಬರುತ್ತೆ!

ನಾವು ಸಿನಿಮಾಗಳಲ್ಲಿ ನೋಡಿದ ಹಾಗೇ ಜೀವನ ಇರುವುದಿಲ್ಲ ಆದರೆ ಸಾಮ್ಯತೆ ಅಂತು ಖಂಡಿತ ಇರುತ್ತದೆ. ನೀವು ಪ್ರೀತಿ ಇಲ್ಲ ಎಂದು ದುಡುಕುತ್ತಾ ಯಾವುದೋ ಪ್ರೇಮ ಪಾಶಕ್ಕೆ ಬೀಳಬೇಡಿ ಅದಕ್ಕಾಗಿ ಕಾಯಿರಿ. ದೇವರೆ ಒಳ್ಳೆ ಪ್ರೀತಿಯೇ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದರು ತಪ್ಪಿಲ್ಲ. ಆದರೆ ಸುಮ್ಮನೆ ಅವಾಂತರ ಮಾಡಿಕೊಳ್ಳುವುದಕ್ಕಿಂತ ಏಕಾಂಗಿಯಾಗಿ ಇದ್ದು ಬಿಡಿ. ಹೀಗೆ ಇದ್ದಾಗ ಖಂಡಿತ ಒಂದಲ್ಲ ಒಂದು ದಿನ ಒಂದು ಒಳ್ಳೆ ಸಮಯಕ್ಕೆ ಆ ವ್ಯಕ್ತಿ ಖಂಡಿತ ನಿಮ್ಮ ಮುಂದೆ ಬರಬಹುದು.

ಇವರೇ ನನ್ನ ಸರಿಯಾದ ಜೋಡಿ ಎಂದು ನಿಮಗೆ ಅನಿಸಬಹುದು. ಅಥವಾ ಒಂದು ಸ್ಪಾರ್ಕ್ ನಿಮ್ಮ ಹೃದಯದಲ್ಲಿ ಮೂಡಬಹುದು. ಉದಾಹರಣೆಗೆ ಸಿನಿಮಾದಲ್ಲಿ ನೋಡುವಂತೆ ಹೀರೋಗೆ ತಕ್ಷಣ ಹಿರೋಯಿನ್ ಎದುರು ಬರುವುದು ಇವಳೇ ನನ್ನ ಸಂಗಾತಿ ಅನ್ನೋ ಫಿಲಿಂಗ್ ಬರುತ್ತದೆ. ಇನ್ನು ಮದುವೆಯೂ ಅಷ್ಟೇ ಹಿಂದೂ ಸಂಪ್ರಾದಾಯದ ಪ್ರಕಾರ ಹೇಳಬೇಕಾದರೆ ಮದುವೆ ಅನ್ನೋದು ಒಂದು ಯೋಗವಂತೆ ,ಬಯಸದೆ ಬರುವ ಭಾಗ್ಯ ಹೀಗಾಗಿ ಕೆಲವರು ಎಷ್ಟೇ ಹುಡುಕಿದರು ಮದುವೆ ಆಗೋದಿಲ್ಲ. ಹುಡುಕಿ ಸುಸ್ತಾಗಿ ಕೂರುವಾಗ ಕೆಲವೊಂದು ಬಾರಿ ಮದುವೆಯ ಸೂಚನೆ ಸಿಗುವುದುಂಟು. ಹೀಗೆ ಒಂದಲ್ಲ ಒಂದು ದಿನ ನಿಮ್ಮ ಜೀವನದಲ್ಲೂ ಇದು ನಡೆಯಲಿದೆ ಎನ್ನುವ ವಿಶ್ವಾಸದಿಂದ ಬದುಕಿ.

ಕಷ್ಟದಲ್ಲಿ-ಖುಷಿಯಲ್ಲಿ ಒಟ್ಟಿಗೆ ಇರುವ ಬಂಧನ!

ಕಷ್ಟದಲ್ಲಿ-ಖುಷಿಯಲ್ಲಿ ಒಟ್ಟಿಗೆ ಇರುವ ಬಂಧನ!

ಪ್ರೀತಿ ಎಂದರೆ ಕಷ್ಟದಲ್ಲಿ-ಖುಷಿಯಲ್ಲಿ ಒಟ್ಟಿಗೆ ಇದ್ದರೆ ಮಾತ್ರ ಆ ಪ್ರೀತಿಗೆ ಒಂದು ಅರ್ಥ. ನೀವು ಖುಷಿಯಲ್ಲಿದ್ದಾಗ ನಿಮಗೆ ಒಂದು ಪ್ರೀತಿ ಬೇಕು ಎಂದು ಒಂದು ವ್ಯಕ್ತಿಯನ್ನು ಒಲಿಸಿಕೊಳ್ಳುತ್ತೀರಿ. ಆದರೆ ಅಳು ಇದ್ದಾಗ ಆ ವ್ಯಕ್ತಿ ನಿಮ್ಮ ಜೊತೆ ಇರದೆ ಹೋಗಬಹುದು. ಇದು ನಿಮ್ಮನ್ನು ಖಿನ್ನತೆಗೆ ದೂಡುತ್ತದೆ. ಹೀಗಾಗಿ ನಿಮ್ಮ ಖುಷಿ ಹಾಗೂ ಕಷ್ಟದಲ್ಲಿರುವಾಗ ಒಟ್ಟಿಗೆ ಇರುವ ವ್ಯಕ್ತಿಗೆ ಕಾದು ಆ ವ್ಯಕ್ತಿ ಜೊತೆ ಪ್ರೇಮ ಬೆಳೆಸಿ.

ಉದಾಹರಣೆಗೆ ನಿಮ್ಮ ಬಳಿ ಬೇಕಾದಷ್ಟು ದುಡ್ಡು ಇರುತ್ತದೆ ನೀವು ನಿಮ್ಮ ಇಚ್ಚೆಗೆ ಒಂದು ಪ್ರೀತಿಯನ್ನು ಮಾಡುತ್ತೀರಿ. ಹೀಗೆ ಪ್ರೀತಿ ಮಾಡಿದ ವ್ಯಕ್ತಿ ಹಣ ಎಲ್ಲಾ ಖರ್ಚು ಮಾಡುತ್ತಾರೆ ಅಂದುಕೊಳ್ಳಿ. ನಿಮ್ಮ ಹಣ ಖಾಲಿಯಾಗುತ್ತದೆ. ಹೀಗಿದ್ದಾಗ ನಿಮ್ಮಲ್ಲಿ ಹಣವಿಲ್ಲ ಎಂದು ಅರಿತು ನೀವು ಪ್ರೀತಿಸಿದ ಆ ವ್ಯಕ್ತಿ ನಿಮ್ಮನ್ನು ಬಿಟ್ಟು ಹೋದರೆ ನೀವು ಹಣ ಕಳೆದುಕೊಂಡ ಖಿನ್ನತೆಯ ಜೊತೆಗೆ ಸಂಗಾತಿ ಹೋದ ಖಿನ್ನತೆಯು ನಿಮ್ಮನ್ನು ಆವರಿಸುತ್ತದೆ.

ಬ್ಯಾಚುಲರ್ ಜೀವನ ಇಲ್ಲ ಎಂದು ನೊಂದುಕೊಳ್ಳುತ್ತಾರೆ!

ಬ್ಯಾಚುಲರ್ ಜೀವನ ಇಲ್ಲ ಎಂದು ನೊಂದುಕೊಳ್ಳುತ್ತಾರೆ!

ಇದು ಮದುವೆಯಾಗುವವರ ವಿಚಾರಕ್ಕೆ ಸಂಬಂಧಪಟ್ಟದ್ದು. ಅನೇಕರು ಮದುವೆಯಾದ ನಂತರ ಬ್ಯಾಚುಲರ್ ಇರೋ ಖುಷಿಯನ್ನು ಕಳೆದುಕೊಳ್ಳುತ್ತಾರೆ. ಪತಿ ಆಗಲಿ ಪತ್ನಿಯಾಗಲಿ ಎಲ್ಲರಿಗೂ ಈ ಒಂದೆ ಸಮಸ್ಯೆ ಇರುತ್ತದೆ. ಹೀಗಾಗಿ ಮದುವೆ ಆಗೋ ಮುನ್ನ ನಿಮ್ಮ ಬ್ಯಾಚುಲರ್ ಲೈಫ್ ಎಂಜಾಯ್ ಮಾಡಿ. ಕೊಂಚ ಲೇಟ್ ಆದರೂ ಪರವಾಗಿಲ್ಲ ಏಕಾಂಗಿಯಾಗಿದ್ದು ಎಲ್ಲವನ್ನೂ ಎಂಜಾಯ್ ಮಾಡಿಕೊಂಡು ಬಳಿಕ ಮದುವೆಯಾಗಬಹುದು.

ಸಾಮಾನ್ಯವಾಗಿ ಯುವಕರು 30 ಯುವತಿಯರು 25ರಲ್ಲಿ ಮದುವೆಯಾಗುವುದು ಸಾಮಾನ್ಯ. ಇನ್ನು ಕೆಲ ಯುವಕರು ಮೂವತ್ತರ ನಂತರವೂ ಮದುವೆ ಆಗುತ್ತಾರೆ. ಒಂದು ಅಧ್ಯಯನದ ಪ್ರಕಾರ ಅತೀ ಸಣ್ಣ ವರ್ಷ ಅಂದರೆ 25ರೊಳಗಿನ ವಯಸ್ಸಿನಲ್ಲಿ ಮದುವೆಯಾದ ಅನೇಕರು ಡಿವೋರ್ಸ್ ಪಡೆದಿದ್ದಾರಂತೆ. ಅಂದರೆ ಬ್ಯಾಚುಲರ್ ಜೀವನ ಆರಂಭದ ವೇಳೆಯೇ ಮದುವೆಯಾಗುತ್ಯ್ತಾರೆ. ಮದುವೆಯಾದ ನಂತರ ಬ್ಯಾಚುಲರ್ ಜೀವನದ ಬಗ್ಗೆ ಯೋಚಿಸುತ್ತಾರೆ. ಇದು ಜೀವನವನ್ನೇ ಹಾಳುಗೆಡವುತ್ತದೆ. ಹೀಗಾಗಿ ಮಿಂಗಲ್ ಆಗುವ ಮುನ್ನ ಯೋಚಿಸಿ. ಏಕಾಂಗಿಯಾಗಿದ್ದರೂ ಪರವಾಗಿಲ್ಲ ಸಮಸ್ಯೆ ತಂದಿಟ್ಟುಕೊಳ್ಳಬೇಡಿ.

English summary

Reasons To Stay Single Until You Find Someone Worth Your Time in kannada

Here are reasons to stay single until you find someone worth your time Read on...
Story first published: Friday, July 22, 2022, 17:54 [IST]
X
Desktop Bottom Promotion