For Quick Alerts
ALLOW NOTIFICATIONS  
For Daily Alerts

ಸಂಬಂಧದಲ್ಲಿ ಹುಳಿಹಿಂಡುವ ಈ ವಿಚಾರಗಳನ್ನು ನಿಮ್ಮ ಸಂಗಾತಿಯೊಂದಿಗೆ ಎಂದಿಗೂ ಹಂಚಿಕೊಳ್ಳಬೇಡಿ

|

ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವುದರಿಂದ ನಿಮ್ಮ ಸಂಬಂಧವು ಗಟ್ಟಿಯಾಗುತ್ತದೆ, ಆದರೆ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವುದು ಸರಿಯಲ್ಲ. ಹೀಗೆ ಮಾಡುವುದರಿಂದ ನಿಮ್ಮ ಸಂಬಂಧ ಹಾಳಾಗಬಹುದು. ಏಕೆಂದೆರೆ, ಕೆಲವು ವಿಷಯಗಳನ್ನು ನಿಮ್ಮ ಸಂಗಾತಿಗೆ ಸ್ವೀಕರಿಸಲು ಸಾಧ್ಯವಾಗುವುದಿಲ್ಲ ಅಥವಾ ಅವರ ಮನಸ್ಸನ್ನು ಕೆಡಿಸಿ, ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಬಹುದು. ಹಾಗಾದರೆ, ಅಂತಹ ವಿಷಯಗಳಾವುವು? ಯಾವ ವಿಷಯಗಳನ್ನು ಬಹಿರಂಗಪಡಿಸಬಾರದು ಎಂಬುದನ್ನ ಇಲ್ಲಿ ನೋಡೋಣ.

ನಿಮ್ಮ ಸಂಗಾತಿಯ ಬಳಿ ಹಂಚಿಕೊಳ್ಳಬಾರದ ಕೆಲವು ರಹಸ್ಯ ವಿಚಾರಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮಾಜಿ ಪ್ರೇಮಿಗಳ ಪಟ್ಟಿ:

ಮಾಜಿ ಪ್ರೇಮಿಗಳ ಪಟ್ಟಿ:

ಹೌದು, ಪ್ರತಿಯೊಬ್ಬ ವ್ಯಕ್ತಿಯ ಹಿಂದಿನ ಜೀವನ ಅಥವಾ ಸಂಗಾತಿಗಳ ಬಗ್ಗೆ ನಿಮ್ಮ ಈಗಿನ ಸಂಗಾತಿಯ ಜೊತೆಗೆ ಹಂಚಿಕೊಳ್ಳಬೇಡಿ. ಯಾರೊಂದಿಗಾದರೂ ಸಂಬಂಧದಲ್ಲಿರುವುದು ಮತ್ತು ನಂತರ ಬೇರೆಯಾಗಿರುವ ವಿಷಯ ಹೇಳುವುದು ತಪ್ಪಲ್ಲ, ಆದರೆ, ನೀವು ಎಷ್ಟು ಸಂಬಂಧಗಳನ್ನು ಹೊಂದಿದ್ದೀರಿ, ಎಷ್ಟು ಸಲ ಬ್ರೇಕಪ್ ಆಗಿದೆ ಎಂಬುದನ್ನು ನಿಮ್ಮ ಸಂಗಾತಿಗೆ ಹೇಳಬೇಡಿ. ಇದನ್ನು ಮಾಡುವುದರಿಂದ, ನಿಮ್ಮ ಸಂಗಾತಿಯ ಮನಸ್ಸಲ್ಲಿ ಮುಂದೆ ನೂರಾರು ಪ್ರಶ್ನೆಗಳು ಮೂಡಲು ಆರಂಭವಾಗುತ್ತವೆ. ಆದ್ದರಿಂದ ಆಗಿ ಹೋಗಿರುವುದನ್ನು ಪದೇ ಪದೇ ನೆನಸಿಕೊಂಡು ಜೀವನ ಹಾಳುಮಾಡಿಕೊಳ್ಳುವುದರ ಬದಲು, ಬಂದ ಜೀವನ ಎದುರಿಸುವುದು ಒಳ್ಳೆಯದು.

ಮಾಜಿ ಪ್ರೇಮಿಯ ನೆನಪುಗಳು:

ಮಾಜಿ ಪ್ರೇಮಿಯ ನೆನಪುಗಳು:

ಮಾಜಿ ಪ್ರೇಮಿಯ ನೆನಪುಗಳು ಅಥವಾ ಆಕೆಯೊಂದಿಗೆ ಕಳೆದ ಕ್ಷಣಗಳನ್ನು ಅಥವಾ ಯಾವುದೇ ವಿಷಯ ಅಥವಾ ಘಟನೆಯ ಬಗ್ಗೆ ಏನಾದರೂ ನೆನಪಿದ್ದರೆ, ಅದನ್ನು ನಿಮ್ಮ ಸಂಗಾತಿಗೆ ತಿಳಿಸಬೇಡಿ. ಇದನ್ನು ಪ್ರತಿ ಬಾರಿ ಮಾಡಿದಾಗಲೂ, ನೀವಿನ್ನೂ ಹಳೆಯ ಪ್ರೇಮಿಯ ನೆನಪಿನಲ್ಲಿದ್ದೀರಿ ಎಂದು ನಿಮ್ಮ ಸಂಗಾತಿ ಭಾವಿಸುತ್ತಾರೆ. ಇದು ನಿಮ್ಮ ಸಂಬಂಧಕ್ಕೆ ಒಳ್ಳೆಯದಲ್ಲ. ಆದ್ದರಿಂದ ಎಂದಿಗೂ ನಿಮ್ಮ ಮಾಜಿ ಪ್ರೇಮಿಯ ಬಗೆಗಿನ ನೆನಪುಗಳನ್ನು ಹಂಚಿಕೊಳ್ಳಬೇಡಿ.

ನಿಮ್ಮ ಸಂಗಾತಿಯ ಕುಟುಂಬ ಅಥವಾ ಸ್ನೇಹಿತರ ಬಗ್ಗೆ:

ನಿಮ್ಮ ಸಂಗಾತಿಯ ಕುಟುಂಬ ಅಥವಾ ಸ್ನೇಹಿತರ ಬಗ್ಗೆ:

ನಿಮ್ಮ ಸಂಗಾತಿಯ ಸ್ನೇಹಿತ ಅಥವಾ ಕುಟುಂಬದ ಸದಸ್ಯರ ಬಗ್ಗೆ ಇಷ್ಟವಿಲ್ಲದಿದ್ದರೆ, ಇದನ್ನು ನಿಮ್ಮ ಸಂಗಾತಿಗೆ ಎಂದಿಗೂ ಹೇಳಬೇಡಿ. ನಿಮ್ಮ ಸಂಗಾತಿಯ ಸ್ನೇಹಿತರು ಅಥವಾ ಕುಟುಂಬದ ಸದಸ್ಯರನ್ನು ಇಷ್ಟಪಡಬೇಕೆಂದೇನಿಲ್ಲ. ಅವರವರ ಮನೋಭಾವಕ್ಕೆ ಬಿಟ್ಟ ವಿಚಾರವಿದು. ಹಾಗಂತ ಇದನ್ನು ನಿಮ್ಮ ಸಂಗಾತಿಯ ಬಳಿ ಹೇಳುವುದು ಒಳ್ಳೆಯದಲ್ಲ. ಈ ವಿಚಾರ ನಿಮ್ಮ ಸಂಗಾತಿ ಅರ್ಥಮಾಡಿಕೊಂಡರೆ, ಉತ್ತಮ, ಆದರೆ ನಿಮ್ಮ ಸಂಗಾತಿಯ ಕುಟುಂಬದ ಬಗ್ಗೆ ಅವರ ಮುಂದೆಯೇ ಎಂದಿಗೂ ಕೆಟ್ಟದಾಗಿ ಮಾತನಾಡಬೇಡಿ.

ಮಾಜಿ ಜೊತೆ ಭವಿಷ್ಯದ ಯೋಜನೆ :

ಮಾಜಿ ಜೊತೆ ಭವಿಷ್ಯದ ಯೋಜನೆ :

ನಾವು ಸಂಬಂಧದಲ್ಲಿರುವಾಗ, ಭವಿಷ್ಯದ ಬಗ್ಗೆ ಯೋಚಿಸಲು ಒಲವು ತೋರುತ್ತೇವೆ. ಆದರೆ ಸಂಬಂಧ ಮುರಿದು ಹೋದಾಗ ಯೋಚನೆ ಮಾಡಿದ್ದ ಎಲ್ಲಾ ಕೆಲಸಗಳು ಅಲ್ಲಿಗೇ ಮುಗುದುಹೋಗುತ್ತವೆ. ಇಂತಹ ಸನ್ನಿವೇಶದಲ್ಲಿ, ಹೊಸ ಸಂಬಂಧಕ್ಕೆ ಬಂದ ನಂತರ, ನಿಮ್ಮ ಮಾಜಿಯೊಂದಿಗೆ ಯಾವ ಭವಿಷ್ಯದ ಯೋಜನೆಯನ್ನು ಮಾಡಿದ್ದೀರಿ ಎಂಬುದನ್ನು ನಿಮ್ಮ ಈಗಿನ ಸಂಗಾತಿಗೆ ಎಂದಿಗೂ ಹೇಳಬೇಡಿ. ನಿಮ್ಮ ಪ್ರಸ್ತುತ ಇರುವ ಸಂಗಾತಿಯೊಂದಿಗೆ ಹೇಗೆ ಜೀವನ ನಡೆಸಬೇಕು ಎಂಬುದರ ಕಡೆಗೆ ಮಾತ್ರ ಗಮನ ಕೊಡಿ.

ಮಾಜಿ ಪ್ರೇಮಿಗಿರುವ ಹೋಲಿಕೆ ಬಗ್ಗೆ:

ಮಾಜಿ ಪ್ರೇಮಿಗಿರುವ ಹೋಲಿಕೆ ಬಗ್ಗೆ:

ಈ ತಪ್ಪನ್ನು ಎಂದಿಗೂ ಮಾಡಬೇಡಿ. ನಿಮ್ಮ ಈಗಿನ ಸಂಗಾತಿಯ ನಡವಳಿಕೆ, ಕೆಲವೊಂದು ಆಲೋಚನೆಗಳು ಮಾಜಿ ಪ್ರೇಮಿಯನ್ನೇ ಹೋಲುತ್ತಿದ್ದರೂ, ಅದನ್ನು ಎಂದಿಗೂ ಆಕೆ ಅಥವಾ ಅವನ ಮುಂದೆಯೇ ಹೇಳಬೇಡಿ. ಇದು ಅವರ ಮನಸ್ಸಲ್ಲಿ ಹುಳಿ ಹಿಂಡಲು ಕಾರಣವಾಗಬಹುದು. ಒಮ್ಮೆ ಬ್ರೇಕಪ್ ಆಗಿ, ಹೊಸ ಸಂಗಾತಿ ಸಿಕ್ಕರೆಂದರೆ, ಹಳೆಯ ವಿಚಾರಗಳನ್ನು ಮರೆತು ಬಿಡುವುದೇ ಲೇಸು. ಇಲ್ಲವಾದಲ್ಲಿ ಅದೇ ವಿಚಾರ ಮುಂದೆ ನಿಮ್ಮ ನಡುವೆ ಮನಸ್ತಾಪಕ್ಕೆ ಕಾರಣವಾಗಬಹುದು.

English summary

Never Share These Secret Things With Your Partner in Kannada

Here we talking about Never Share These Secret Things With Your Partner in Kannada, read on
Story first published: Saturday, October 16, 2021, 16:57 [IST]
X
Desktop Bottom Promotion