For Quick Alerts
ALLOW NOTIFICATIONS  
For Daily Alerts

ನಿಮ್ಮ ಮಾಜಿ ಪ್ರೇಮಿಯ ಬಗ್ಗೆ ಈ ರೀತಿ ಭಾವನೆಗಳಿದ್ದರೆ, ನೀವು ಏಕಾಂಗಿಯಾಗಿರುವುದು ಉತ್ತಮ

|

ಸಾಮಾನ್ಯವಾಗಿ ಯಾರಾದರೂ ಪ್ರೀತಿ ಕಳೆದಕೊಂಡಾಗ ಅಥವಾ ಪ್ರೀತಿಯಲ್ಲಿ ಸೋತಾಗ ತಕ್ಷಣ ಇನ್ನೊಂದು ಸಂಬಂಧ ಹುಡುಕುತ್ತಾ ಸಾಗುತ್ತಾರೆ. ಏಕೆಂದರ ಅವರಿಗೆ ಹಳೆಯ ಪ್ರೀತಿಯ ನೋವನ್ನು ಮರೆಯಲು, ತನ್ನ ನೋವನ್ನು ವ್ಯಕ್ತ ಪಡಿಸಲು ಇನ್ನೊಂದು ಜೀವದ ಅಗತ್ಯವಿರುತ್ತದೆ. ಆದರೆ ಹೀಗೆ ಮಾಡುವುದು ತಪ್ಪು.

ಪ್ರೀತಿಯಲ್ಲಿ ಸೋತಾಗ ಮತ್ತೊಬ್ಬರನ್ನು ಹುಡುಕುವುದರಿಂದ ನಿಮಗೆ ಮತ್ತಷ್ಟು ಹಾನಿಯಾಗುತ್ತದೆ. ಏಕೆಂದರೆ ಹಳೆಯ ಪ್ರೀತಿಯ ಲಕ್ಷಣಗಳು ನಿಮ್ಮ ಲ್ಲಿ ಹಾಗೆ ಉಳಿದಿರುತ್ತದೆ. ಆದ್ದರಿಂದ ನೀವು ನಿಮ್ಮ ಮಾಜಿ ಸಂಗಾತಿಯ ಬಗ್ಗೆ ಈ ರೀತಿ ಯೋಚಿಸುತ್ತಿದ್ದರೆ ಮತ್ತೊಂದು ಸಂಬಂಧ ಹುಡುಕಬೇಡಿ. ಏಕಾಂಗಿಯಾಗಿಯೇ ಉಳಿಯಿರಿ.

ನೀವು ನಿಮ್ಮ ಮಾಜಿ ಸಂಗಾತಿಯ ಬಗ್ಗೆ ಈ ರೀತಿ ಯೋಚಿಸುತ್ತಿದ್ದರೆ ಮತ್ತೊಂದು ಸಂಬಂಧ ಹುಡುಕಬೇಡಿ:

ನಿಮ್ಮ ಮಾಜಿ ಸಂಬಂಧದ ಬಗ್ಗೆ ಇನ್ನೂ ಯೋಚಿಸುತ್ತಿದ್ದರೆ:

ನಿಮ್ಮ ಮಾಜಿ ಸಂಬಂಧದ ಬಗ್ಗೆ ಇನ್ನೂ ಯೋಚಿಸುತ್ತಿದ್ದರೆ:

ನೀವು ಪ್ರತಿಯೊಬ್ಬ ವ್ಯಕ್ತಿಯನ್ನು ನಿಮ್ಮ ಮಾಜಿ ಸಂಗಾತಿಗೆ ಹೋಲಿಸಿದರೆ ಅಥವಾ ಅವನನ್ನು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುತ್ತಿದ್ದರೆ ಮತ್ತು ನೀವು ಅವನನ್ನು ಇನ್ನೊಬ್ಬ ಹುಡುಗ/ ಹುಡುಗಿಯ ಜೊತೆ ನೋಡಿದಾಗ ನಿಮ್ಮಲ್ಲಿ ನೋವು ಅಥವಾ ಕೋಪ ಅನುಭವಿಸುತ್ತಿದ್ದರೆ, ನೀವು ಹೊಸ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸುವ ಮೊದಲು ಅದರಿಂದ ಹೊರ ಬರಬೇಕು.

ನಿಮಗೆ ಒಬ್ಬಂಟಿಯಾಗಿರಲು ಸಾಧ್ಯವಾಗದಿದ್ದರೆ:

ನಿಮಗೆ ಒಬ್ಬಂಟಿಯಾಗಿರಲು ಸಾಧ್ಯವಾಗದಿದ್ದರೆ:

ಕೆಲವು ಜನರಿಗೆ, ಒಂಟಿಯಾಗಿರುವುದು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಹೊಸ ಸಂಬಂಧವನ್ನು ಹುಡುಕಲು ಪ್ರಾರಂಭಿಸುತ್ತಾರೆ. ಆದರೆ ಮೊದಲು ನೀವು ಒಬ್ಬರೇ ಇರುವಾಗ ಹೇಗೆ ಆರಾಮವಾಗಿ ಇರುವುದು ಎಂಬುದನ್ನು ಕಲಿಯಬೇಕು. ಹೀಗಿದ್ದಾಗ ಮಾತ್ರ ಮುಂದಿನ ಸಂಬಂಧದಲ್ಲಿ ಚೆನ್ನಾಗಿರಲು ಸಾಧ್ಯವಾಗುತ್ತದೆ. ಒಬ್ಬರೇ ಇರುವಾಗ ಹಿಂದಿನ ಸಂಬಂಧದ ಬಗ್ಗೆ ಯೋಚಿಸುತ್ತಿದ್ದರೆ, ನೀವು ಮತ್ತೊಂದು ಸಂಬಂಧ ಹುಡುಕುವುದು ಸರಿಯಲ್ಲ.

ನಿಮ್ಮನ್ನು ನೀವೇ ಕಳೆದುಕೊಂಡಿದ್ದರೆ:

ನಿಮ್ಮನ್ನು ನೀವೇ ಕಳೆದುಕೊಂಡಿದ್ದರೆ:

ಕೆಲವು ಜನರು ಪ್ರೀತಿಯಿಂದ ತಮ್ಮನ್ನು ತಾವೇ ಕಳೆದುಕೊಂಡಿರುತ್ತಾರೆ. ಅಂದರೆ ಅವರು ತಮ್ಮ ಪ್ರೇಮಿಯ ಇಷ್ಟ-ಕಷ್ಟಗಳನನು ಅಳವಡಿಸಿಕೊಳ್ಳುತ್ತಾರೆ ಮತ್ತು ಯಾವಾಗಲೂ ತಮ್ಮನ್ನು ದಂಪತಿಗಳೆಂದು ಭಾವಿಸಿರುತ್ತಾರೆ. ಸಂಬಂಧಗಳ ಜಗತ್ತಿನಲ್ಲಿ ನೀವು ನಿಮ್ಮ ತನವನ್ನು ಕಳೆದುಕೊಂಡಿದ್ದರೆ, ಸ್ವಲ್ಪ ಸಮಯದವರೆಗೆ ಒಬ್ಬಂಟಿಯಾಗಿ ಉಳಿಯುವ ಮೂಲಕ ನಿಮ್ಮನ್ನು ಮತ್ತೆ ಹುಡುಕಬಹುದು.

ನಿಮ್ಮ ಮನಸ್ಸು ಭಾರವಾಗಿದ್ದರೆ:

ನಿಮ್ಮ ಮನಸ್ಸು ಭಾರವಾಗಿದ್ದರೆ:

ನಿಮ್ಮ ಮಾಜಿ ಸಂಬಂಧದಿಂದ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿದ್ದರೆ, ನೀವು ಸ್ವಲ್ಪ ಸಮಯ ತೆಗೆದುಕೊಳ್ಳುವುದು ಉತ್ತಮ. ಉದಾಹರಣೆಗೆ, ನೀವು ಮೋಸ ಹೋಗಿರುವುದರಿಂದ ಎಲ್ಲರೂ ನಿಮ್ಮನ್ನು ಮೋಸಗೊಳಿಸುತ್ತಾರೆ ಎಂಬು ಭಾವನೆ ನಿಮ್ಮಲ್ಲಿದ್ದರೆ ಅದರಿಂದ ಹೊರಬರಲು ಸ್ವಲ್ಪ ಸಮಯ ತೆಗೆದುಕೊಳ್ಳಬೇಕು.

ನೀವು ಪ್ರತ್ಯೇಕತೆಯನ್ನು ಇಷ್ಟಪಡುತ್ತಿದ್ದರೆ:

ನೀವು ಪ್ರತ್ಯೇಕತೆಯನ್ನು ಇಷ್ಟಪಡುತ್ತಿದ್ದರೆ:

ನಿಮ್ಮ ಒಂಟಿತನದಿಂದ ಹೆಚ್ಚು ಸಮಯವನ್ನು ಕಳೆಯುತ್ತಿದ್ದರೆ, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹ್ಯಾಂಗೌಟ್ ಮಾಡಲು ಪ್ರಾರಂಭಿಸಿ. ಮೋಜು ಮಾಡಲು ಮತ್ತು ಖುಷಿ ಪಡಲು ನಿಮಗೆ ಗೆಳೆಯ ಅಥವಾ ಗೆಳತಿ ಅಗತ್ಯವಿಲ್ಲ. ನಿಮ್ಮ ಹಳೆಯ ಸ್ನೇಹಿತರಿಗೆ ಕರೆ ಮಾಡಿ. ಎಲ್ಲರ ಬಳಿ ಸೇರಿಕೊಂಡು ಸಮಯ ಕಳೆಯಿರಿ.

ನಿಮ್ಮನ್ನು ಪೂರ್ಣಗೊಳಿಸಲು ಇನ್ನೊಬ್ಬರು ಬೇಕು ಎಂದು ಭಾವಿಸುತ್ತಿದ್ದರೆ:

ನಿಮ್ಮನ್ನು ಪೂರ್ಣಗೊಳಿಸಲು ಇನ್ನೊಬ್ಬರು ಬೇಕು ಎಂದು ಭಾವಿಸುತ್ತಿದ್ದರೆ:

ಈ ರೀತಿ ನಿಮಗೆ ಅನಿಸುತ್ತಿದ್ದರೆ ಸ್ವಲ್ಪ ಸಮಯ ತೆಗೆದುಕೊಳ್ಳಬೇಕು. ನಿಮಗೆ ಬೆಂಬಲ ನೀಡಲು ನಿಮಗೆ ಬೇರೊಬ್ಬರ ಅಗತ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಿಮ್ಮನ್ನು ಪ್ರೀತಿಸಿ ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸಿ. ಒಬ್ಬಂಟಿಯಾಗಿರುವಾಗ ಸ್ವತಂತ್ರವಾಗಿರಲು ಮತ್ತು ನಿಮ್ಮ ಜೀವನವನ್ನು ಹೇಗೆ ಪ್ರೀತಿಸಬೇಕು ಎಂದು ತಿಳಿಯಿರಿ.

English summary

If You Found These Signs In Relationship Better You Should Stay Single

Here we are talking about If You Found These Signs In Relationship Better You Should Stay Single, read on
Story first published: Saturday, May 15, 2021, 12:35 [IST]
X
Desktop Bottom Promotion