For Quick Alerts
ALLOW NOTIFICATIONS  
For Daily Alerts

ಜೀವನದ ಆ ಹಂತದಲ್ಲಾಗುವ ತಿರಸ್ಕಾರವನ್ನು ಮೆಟ್ಟಿ ನಿಲ್ಲವುದು ಹೇಗೆ ಗೊತ್ತಾ?

|

ಯಾರಿಗೇ ಆಗಲೀ, ಅದು ವೈಯಕ್ತಿಕ ಜೀವನ ಅಥವಾ ವೃತ್ತಿ ಜೀವನದಲ್ಲಾಗಲೀ ನಿರಾಕರಣೆಯನ್ನು ಅಷ್ಟು ಬೇಗ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಹೇ,, ಪರವಾಗಿಲ್ಲ ಎಂದು ಮಾತಲ್ಲಿ ಹೇಳಬಹುದಷ್ಟೇ ಆದರೆ ಮನಸ್ಸೊಳಗೆ ಆ ವಿಷಯ ಕೊರೆಯುತ್ತಲೇ ಇರುವುದಂತೂ ಸತ್ಯ.

ಯಾವುದಾದರೂ ಕೆಲಸದಲ್ಲಿ ನೀವು ಆಯ್ಕೆಯಾಗದಿದ್ದಾಗ ಅಥವಾ ಯಾವುದಾದರೂ ಹುಡುಗ/ಹುಡುಗಿ ನಿಮ್ಮನ್ನು ನಿರಾಕರಿಸಿದಾಗ ನಿಮ್ಮ ಮನಸ್ಸೊಳಗೆ ನಿಮ್ಮ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಏಳಲು ಶುರುವಾಗುತ್ತದೆ. ಇದರಿಂದ ನೀವು ಪ್ರಯೋಜನಕ್ಕೆ ಬಾರದವರು ಎಂಬ ಭಾವನೆ ಬಂದರೂ ಬರಬಹುದು. ಇಂತಹ ಸಮಯದಲ್ಲಿ ನೀವು ಇದರಿಂದ ಹೊರಬರಲು ಕೆಲವೊಂದು ಮಾರ್ಗಗಳನ್ನು ನೀಡಲಾಗಿದೆ.

ಜೀವನದಲ್ಲಿ ತಿರಸ್ಕಾರ ಮಾಡಿದಾಗ ಅದರಿಂದ ಹೊರಬರುವ ಮಾರ್ಗಗಳನ್ನು ಈ ಕೆಳಗೆ ನೀಡಲಾಗಿದೆ:

ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ:

ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ:

ಯಾರೋ ಒಬ್ಬರು ನಿಮ್ಮನ್ನು ಬೇಡ ಎಂದು ಹೇಳಿದ ಮಾತ್ರಕ್ಕೆ ನಿಮ್ಮ ಬಗ್ಗೆ ಅನುಮಾನ ಪಡಲು ಪ್ರಾರಂಭಿಸಬೇಡಿ. ನಿಮ್ಮ ಅರ್ಹತೆ ಏನು? ನೀವು ಹೇಗೆ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ಯಾವುದೋ ಒಂದು ಸಂದರ್ಭದಲ್ಲಿ ನಿರಾಕರಣೆಯಾದ ಮಾತ್ರಕ್ಕೆ ನಿಮಗೆ ಅರ್ಹತೆ ಇಲ್ಲ ಎಂಬ ಭಾವನೆ ಬೇಡ. ಈ ಸಮಯದಲ್ಲಿ ನೆನಪಿಡುವ ಪ್ರಮುಖ ವಿಷಯವೆಂದರೆ ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದಿರುವುದು.

ನಿಮ್ಮ ಭಾವನೆಗಳನ್ನು ಒಪ್ಪಿಕೊಳ್ಳಿ:

ನಿಮ್ಮ ಭಾವನೆಗಳನ್ನು ಒಪ್ಪಿಕೊಳ್ಳಿ:

ಹೌದು, ನಿರಾಕರಣೆಯಿಂದ ನಿಮಗೆ ಬೇಜಾರಾಗಿದ್ದರೆ, ಕೋಪಬಂದಿದ್ದರೆ ಅದನ್ನು ಒಪ್ಪಿಕೊಳ್ಳಿ. ನಿಮ್ಮ ಮನಸ್ಸಿನಲ್ಲಿ ಎಂತಹ ಭಾವನೆಗಳು ಓಡಾಡುತ್ತಿವೆ ಅದನ್ನು ಒಪ್ಪಿಕೊಂಡು, ಸ್ವೀಕರಿಸಿ. ಅದನ್ನು ಬಿಟ್ಟು ಮನಸ್ಸಲ್ಲಿ ನೋವಿಟ್ಟುಕೊಂಡು, ಹೊರಗೆ ಏನೂ ಆಗೇ ಇಲ್ಲ ಎಂಬಂತೆ ನಟಿಸುವುದು ಬೇಡ. ಈ ಮನಸ್ಥಿತಿ ನಿಮ್ಮನ್ನು ಮತ್ತಷ್ಟು ಚಿಂತಿಸುವಂತೆ ಮಾಡುತ್ತದೆ. ಭಾವನೆಗಳನ್ನು ಮುಚ್ಚಿಡಲು ಪ್ರಯತ್ನಿಸಬೇಡಿ ಏಕೆಂದರೆ ಭಾವನೆಗಳು ಒಳಗೇ ಸಂಗ್ರಹವಾಗಿ ಒಂದು ದಿನ ಬೇರೆಯದೇ ರೂಪ ಪಡೆದು ಆಚೆ ಬರುವ ಸಂಭವವಿದೆ.

ನಶ್ವರತೆ ಬೇಡ:

ನಶ್ವರತೆ ಬೇಡ:

ಕೆಲವೊಬ್ಬರು ಒಮ್ಮೆ ಸೋತರೆ ಅಥವಾ ಯಾವುದಾದರೂ ಕೆಲಸ ಕೈಗೂಡದಿದ್ದರೆ ಎಲ್ಲವೂ ಮುಗಿದೇ ಹೋಯಿತು ಎಂಬಂತೆ ಆಡುತ್ತಾರೆ. ಇದು ಸರಿಯಲ್ಲ, ಒಬ್ಬ ವ್ಯಕ್ತಿ ನಿಮ್ಮನ್ನು ತಿರಸ್ಕರಿಸಿದನೆಂದರೆ ಪ್ರಪಂಚವೇ ಅಂತ್ಯವಾಯಿತು ಎಂದಲ್ಲ. ಜೀವನದಲ್ಲಿ ಇಂತಹ ಹೋರಾಟಗಳು ಸಾಕಷ್ಟು ಬರುತ್ತವೆ. ಈ ಎಲ್ಲವನ್ನೂ ಮೆಟ್ಟಿ ಮುಂದೆ ಸಾಗಿದರಷ್ಟೇ ಜೀವನ ಸುಖಮಯ ಎಂಬುದನ್ನು ಎಂದಿಗೂ ಮರೆಯಬೇಡಿ. ಇಂತಹ ಮನಸ್ಥಿತಿಯಿಂದ ಮೊದಲು ಹೊರಗೆ ಬನ್ನಿ.

ನಿಮ್ಮ ಬಗ್ಗೆ ವಿಷಾದ ಬೇಡ:

ನಿಮ್ಮ ಬಗ್ಗೆ ವಿಷಾದ ಬೇಡ:

ಇದು ಹೆಚ್ಚಿನವರು ಮಾಡುವ ಒಂದು ಕೆಲಸ ಎಂದರೆ ತಪ್ಪಾಗಲ್ಲ. ಯಾರಾದರೂ ನಿಮ್ಮನ್ನು ಬೇಡ ಎಂದರೆ ಅದಕ್ಕೆ ವಿಷಾದ ಬೇಡ. ನಿಮಗೆ ಸರಿಹೊಂದುವಂತವರು ಇದ್ದೇ ಇರುತ್ತಾರೆ, ಅವರು ಸಿಗುತ್ತಾರೆ ಎನ್ನುವ ನಂಬಿಕೆಯಲ್ಲಿರಿ. ನಿಮ್ಮದಲ್ಲದ ವಸ್ತುವಿಗೆ ಆಸೆ ಪಡುವುದು ಸರಿಯಲ್ಲ. ಅಯ್ಯೋ ಹೀಗಾಯಿತಲ್ಲ ಎಂಬ ವಿಷಾದ ಬೇಡವೇ ಬೇಡ. ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಪಾಸಿಟಿವ್ ಆಲೋಚನೆಯಲ್ಲಿರಿ.

ಏಕಾಂಗಿಯಾಗಿ ಸ್ವಲ್ಪ ಸಮಯ ಕಳೆಯಿರಿ:

ಏಕಾಂಗಿಯಾಗಿ ಸ್ವಲ್ಪ ಸಮಯ ಕಳೆಯಿರಿ:

ಏಕಾಂಗಿಯಾಗಿ ಸಮಯ ಕಳೆಯುವುದು ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲು ಸಹಾಯ ಆಗುತ್ತದೆ. ಎಲ್ಲಿ ಎಡವಿದ್ದಿರಿ? ಅಥವಾ ಯಾವ ಕಾರಣಕ್ಕೆ ನಿರಾಕರಣೆಯಾದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಸ್ವಲ್ಪ ಸಮಯ ತೆಗೆದುಕೊಂಡು, ನಿರಾಕರಣೆಯ ಹಿಂದಿನ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸಿ. ಅದು ತಿಳಿದರೆ, ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿ. ಕೆಲಸದಲ್ಲಾದರೆ ಮುಂದೆ ಹೇಗೆ ಕೆಲಸಮಾಡಬೇಕು, ಎಂತಹ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.

English summary

How to Handle Rejections In Life In Kannada

Here we talking about How to Handle Rejections In Life In Kannada, read on
Story first published: Friday, July 16, 2021, 17:55 [IST]
X
Desktop Bottom Promotion