For Quick Alerts
ALLOW NOTIFICATIONS  
For Daily Alerts

ನಿಮ್ಮ ಬಾಲ್ಯಕ್ಕೂ, ಈಗಿನ ಲವ್‌ ಲೈಫ್‌ಗೂ ನಡುವೆ ಇದೆ ಸಂಬಂಧ!

|

ನಮ್ಮ ಬಾಲ್ಯದಲ್ಲಿ ನಾವು ನೋಡುವ, ಅನುಭವಿಸುವ ಪ್ರತಿಯೊಂದು ಅಂಶಗಳೂ ಸಹ ನಮ್ಮ ಮುಂದಿನ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಒಳ್ಳೆಯ ನೆನಪುಗಳು ನಮ್ಮನ್ನು ಸಕಾರಾತ್ಮಕ ವ್ಯಕ್ತಿಗಳನ್ನಾಗಿ ಮಾಡುತ್ತದೆ ಅಷ್ಟೇ ಅಲ್ಲ, ನಾವು ಜೀವನವನ್ನು ಗ್ರಹಿಸುವ ರೀತಿಯನ್ನು ಬದಲಿಸುತ್ತದೆ. ಅದೇ ರೀತಿ ನಮ್ಮ ಪ್ರಸ್ತುತ ಪ್ರೇಮ ಜೀವನದ ಮೇಲೆ ನಮ್ಮ ಬಾಲ್ಯವು ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ತಿಳಿದುಕೊಳ್ಳಲು ಈ ಕೆಳಗೆ ಓದಿ.

ಪ್ರಸ್ತುತ ಪ್ರೀತಿ ಜೀವನದ ಮೇಲೆ ನಮ್ಮ ಬಾಲ್ಯವು ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಸಂಗಾತಿಯನ್ನಾಗಿ ಯಾರನ್ನು ಆರಿಸಿಕೊಳ್ಳುತ್ತೀರಿ:

ಸಂಗಾತಿಯನ್ನಾಗಿ ಯಾರನ್ನು ಆರಿಸಿಕೊಳ್ಳುತ್ತೀರಿ:

ನಮ್ಮ ಪೋಷಕರು ಮತ್ತು ನಮ್ಮ ಸುತ್ತಮುತ್ತಲಿನ ಇತರರನ್ನು ನೋಡಿಕೊಂಡು ಬೆಳೆಯುವುದು, ಭವಿಷ್ಯದಲ್ಲಿ ನಮ್ಮ ಪಾಲುದಾರರ ಆಯ್ಕೆಯ ಮೇಲೆ ಭಾರಿ ಪರಿಣಾಮ ಬೀರುತ್ತದೆ. ನಾವು ಇದನ್ನು ಅರಿವಿಲ್ಲದೆ ಮಾಡುತ್ತೇವೆ. ನೀವು ಬಾಲ್ಯದಲ್ಲಿ ಕಷ್ಟಕರವಾದ ಸಮಯವನ್ನು ಎದುರಿಸಿದ್ದರೆ, ಅಂದರೆ ನಿರಂತರ ಟೀಕೆ, ಮನೆಯಲ್ಲಿ ಜಗಳಗಳು, ದೈಹಿಕ ಮತ್ತು ಭಾವನಾತ್ಮಕ ನಿಂದನೆಯನ್ನು ಎದುರಿಸಿದ್ದರೆ, ನೀವು ಪ್ರಸ್ತುತ ಜೀವನದಲ್ಲಿ ಅಸುರಕ್ಷಿತರಾಗುವಿರಿ, ಆತಂಕಕ್ಕೊಳಗಾಗುವಿರಿ. ಅದನ್ನು ಹೋಗಲಾಡಿಸುವಂತ ಸಂಗಾತಿಯನ್ನು ಆರಿಸಿಕೊಳ್ಳುತ್ತೀರಿ. ಏಕೆಂದರೆ ನಿಮಗೆ ಮತ್ತೆ ಅದೇ ಜೀವನ ಬೇಕಾಗಿರವುದಿಲ್ಲ.

ನಿಮ್ಮ ಪೋಷಕರು ಮಾಡಿದ್ದನ್ನು ನೀವು ಪುನರಾವರ್ತಿಸುತ್ತೀರಿ:

ನಿಮ್ಮ ಪೋಷಕರು ಮಾಡಿದ್ದನ್ನು ನೀವು ಪುನರಾವರ್ತಿಸುತ್ತೀರಿ:

ನಿಮ್ಮ ಹೆತ್ತವರು ಹೇಳಿದ್ದನ್ನು ಆರೋಗ್ಯಕರ ಮತ್ತು ಧನಾತ್ಮಕವಾಗಿದ್ದರೆ, ಅದನ್ನು ಪುನರಾವರ್ತಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಆ ಮಾತುಗಳು ನಕಾರಾತ್ಮಕವಾಗಿದ್ದಾಗ ಸಮಸ್ಯೆ ಉದ್ಭವಿಸುತ್ತದೆ. ನಿಮ್ಮ ಸಂಗಾತಿಗೆ ನೀವು ಏನು ಹೇಳುತ್ತೀರೆಂಬುದನ್ನು ನೆನಪಿಡಿ. ಅಲ್ಲದೆ, ನಿಮ್ಮ ಪ್ರತಿಕ್ರಿಯೆಗಳ ಮೇಲೆ ನಿಗಾ ಇರಿಸಿ. ನಿಮಗೆ ತೊಂದರೆಯಾಗುತ್ತಿದೆ ಎಂದು ಅನಿಸಿದರೆ ವೃತ್ತಿಪರ ಸಹಾಯವನ್ನು ತೆಗೆದುಕೊಳ್ಳಿ.

ನಿಮಗಿಷ್ಟವಿಲ್ಲದ ವಿಷಯಳಗಳಿಗೆ ಹೇಗೆ ವರ್ತಿಸುತ್ತೀರಿ?:

ನಿಮಗಿಷ್ಟವಿಲ್ಲದ ವಿಷಯಳಗಳಿಗೆ ಹೇಗೆ ವರ್ತಿಸುತ್ತೀರಿ?:

ನಿರಾಕರಣೆ, ಭಿನ್ನಾಭಿಪ್ರಾಯ, ಯಾವುದೇ ರೀತಿಯ ಸಂಘರ್ಷವನ್ನು ನೀವು ಹೇಗೆ ನಿಭಾಯಿಸುತ್ತೀರಿ?ಎಂಬುದು ಸಹ ನಿಮ್ಮ ಬಾಲ್ಯವನ್ನು ಅವಲಂಬಿಸಿದೆ. ಸಂಘರ್ಷ ಆದಾಗ ಕೆಲವು ಜನರು ಮೌನವಾಗಿರುತ್ತಾರೆ, ಇನ್ನೂ ಕೆಲವರು ಕೋಪವನ್ನು ಹೊರಹಾಕಿ, ಸಮಾಧಾನವಾಗುತ್ತಾರೆ. ನಿಮ್ಮ ಸಂಗಾತಿಯೊಂದಿಗೆ ವಾದ ಮಾಡುವಾಗ ಯಾವ ಪದಗಳನ್ನು ಬಳಸುತ್ತೀರಿ? ಕೇವಲ ಭಾವನಾತ್ಮಕವಾಗಿ ಮಾತ್ರವಲ್ಲದೇ ದೈಹಿಕವಾಗಿಯೂ ಹಿಂಸಿಸುತ್ತಿದ್ದೀರಾ? ಇವೆಲ್ಲವೂ ನಿಮ್ಮ ಬಾಲ್ಯದ ವರದಾನವೇ. ನಿಮ್ಮ ಅಪ್ಪ-ಅಮ್ಮ ಹೇಗಿದ್ದರೋ, ಅದೇ ರೀತಿ ನೀವು ಇಂತಹ ಸನ್ನಿವೇಶ ನಿಭಾಯಿಸುತ್ತೀರಿ. ಆದರೆ, ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಳ್ಳುವುದು ಯಾವಾಗಲೂ ಅತ್ಯುತ್ತಮ ನೀತಿಯಾಗಿದ್ದು, ಅದು ಎರಡೂ ಅಭಿಪ್ರಾಯಗಳನ್ನು ಗೌರವಿಸುತ್ತದೆ. ವಾದಿಸುವುದು ಸಹಜ ಆದರೆ ನಿಮ್ಮ ಉದ್ವೇಗವನ್ನು ಪರೀಕ್ಷಿಸಿಕೊಳ್ಳಿ. ನಿಮ್ಮ ಸಂಗಾತಿಯ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಿ.

ಅಹಂಕಾರವನ್ನು ಹೇಗೆ ನಿಯಂತ್ರಣದಲ್ಲಿಟ್ಟುಕೊಳ್ಳುತ್ತೀರಿ?:

ಅಹಂಕಾರವನ್ನು ಹೇಗೆ ನಿಯಂತ್ರಣದಲ್ಲಿಟ್ಟುಕೊಳ್ಳುತ್ತೀರಿ?:

ನಮ್ಮಲ್ಲಿ ಬಹುತೇಕರಿಗೆ ಅಹಂ ಇದೆ ಆದರೆ ಅದನ್ನು ಒಪ್ಪಿಕೊಳ್ಳಲು ಸಿದ್ಧವಿರುವುದಿಲ್ಲ. ನಿಮ್ಮ ಹೆತ್ತವರು ಕೆಟ್ಟದ್ದನ್ನು ಮಾಡಿದ್ದರೆ, ಅದೇ ಹಾದಿಯಲ್ಲಿ ನಡೆಯುವ ಬದಲು, ಅವರ ತಪ್ಪುಗಳಿಂದ ಕಲಿಯಿರಿ. ನಿಮ್ಮಿಬ್ಬರ ನಡುವೆ ಉತ್ತಮ ಸಂವಹನ ವ್ಯವಸ್ಥೆಯನ್ನು ಮಾಡಿ. ಅವರ ನಕಾರಾತ್ಮಕ ನಿರ್ಧಾರಗಳು ನಿಮ್ಮ ವರ್ತಮಾನದ ಮೇಲೆ ಪರಿಣಾಮ ಬೀರಲು ಬಿಡಬೇಡಿ. ವೃತ್ತಿಪರ ಸಹಾಯವನ್ನು ಪಡೆಯಿರಿ.

English summary

How does your Childhood affect your Present Love Life in Kannada

Here we talking about How does your childhood affect your present love life in Kannada, read on
Story first published: Friday, October 8, 2021, 16:51 [IST]
X
Desktop Bottom Promotion