For Quick Alerts
ALLOW NOTIFICATIONS  
For Daily Alerts

ಇಷ್ಟೆಲ್ಲಾ ಲಾಭವಿದೆ ಎಂದಾದರೆ ಒಬ್ಬಂಟಿಯಾಗಿ ಇರುವವರು ಮದುವೆಯ ಬಗ್ಗೆ ಯೋಚಿಸುವುದೇ ಇಲ್ಲ..!

|

ಈ ಒಬ್ಬಂಟಿಯಾಗಿ ಇರುವವರನ್ನೆಲ್ಲಾ ಬಹುತೇಕ ಸಂಬಂಧಿಕರು ಕೇಳುವ ಮೊದಲ ಪ್ರಶ್ನೆ "ಯಾವಾಗ ನಿನ್ನ ಮದುವೆ?, ಯಾರನ್ನಾದರೂ ಇಷ್ಟಪಟ್ಟಿದ್ದೀಯಾ?, ಬೇಗ ಮದುವೆ ಆಗು ವಯಸ್ಸು ಆದ ಮೇಲೆ ಒಳ್ಳೆ ವರ/ವಧು ಸಿಗಲ್ಲ" ಹೀಗೆ ಏನೆಲ್ಲಾ ಪ್ರಶ್ನೆಗಳನ್ನು ಕೇಳಿ ತಲೆಕೆಡಿಸುತ್ತಾರೆ.

ತಾವು ಒಂಟಿಯಾಗಿ ನೆಮ್ಮದಿಯಾಗಿ, ಸಂತೋಷವಾಗಿ ಇದ್ದರೂ ಇಂಥಾ ಪ್ರಶ್ನೆಗಳು ಕೆಲವರಲ್ಲಿ ಗೊಂದಲ ಮೂಡಿಸುತ್ತದೆ. ಹೌದೇನೋ ನಾನು ಮದುವೆ ಆಗಬೇಕೇನೋ, ಮದುವೆಯ ಜೀವನ ಚೆನ್ನಾಗಿರಬಹುದು ಎಂದೆಲ್ಲಾ.

ವೈವಾಹಿಕ ಬದುಕು ಸಹ ಚೆನ್ನಾಗಿರುತ್ತದೆ, ಅದೊಂದು ರೀತಿಯ ಜವಾಬ್ದಾರಿಯುತ ಬದುಕಾದರೂ ಏಕಾಂಗಿಯಾಗಿರುವಾಗ ಸಿಗುವ ನೆಮ್ಮದಿ, ಸಂತೋಷ. ಸ್ವಾತಂತ್ರ್ಯ ಮದುವೆ ನಂತರ ಇರುವುದು ಕಷ್ಟಸಾಧ್ಯ. ಒಬ್ಬಂಟಿಯಾಗಿ ಇರುವವರು ಹೆಚ್ಚು ಚಿಂತಿಸಬೇಕಿಲ್ಲ, ನೀವು ಒಬ್ಬಂಟಿಯಾಗಿ ಇರುವುದರಿಂದ ಸಾಕಷ್ಟು ಲಾಭಗಳಿವೆ.

ಹಲವು ಅಧ್ಯಯನಗಳ ಪ್ರಕಾರ ಏಕಾಂಗಿಯಾಗಿ ಇರುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ?

1. ಕಡಿಮೆ ಒತ್ತಡ ಇರುತ್ತದೆ

1. ಕಡಿಮೆ ಒತ್ತಡ ಇರುತ್ತದೆ

ಒಂಟಿಯಾಗಿರುವ ಹೆಚ್ಚಿನ ವ್ಯಕ್ತಿಗಳು ತಮ್ಮ ಜೀವನದಲ್ಲಿ ಕಡಿಮೆ ಒತ್ತಡವನ್ನು ಹೊಂದಿರುತ್ತಾರೆ. ಇದು ಕೇವಲ ಸಂಬಂಧದಿಂದಲ್ಲ ಆದರೆ ಇತರ ಕಾರಣಗಳಿಂದ ಕೂಡಿದೆ. ಆರ್ಥಿಕ ಒತ್ತಡ ಸಹ ಅವುಗಳಲ್ಲಿ ಪ್ರಮುಖವಾದದ್ದು. ನೀವು ಒಬ್ಬಂಟಿಯಾಗಿರುವಾಗ, ನೀವು ಗಳಿಸುತ್ತೀರಿ ಮತ್ತು ಅದನ್ನು ನಿಮಗಾಗಿ ಅಷ್ಟೇ ಖರ್ಚು ಮಾಡುತ್ತೀರಿ. ಹೀಗಾಗಿ ಇದು ನಿಮ್ಮ ಜೇಬಿನ ಮೇಲೆ ಭಾರವನ್ನು ಉಂಟುಮಾಡುವ ಮತ್ತು ಇನ್ನೊಬ್ಬ ವ್ಯಕ್ತಿಯನ್ನು, ಕುಟುಂಬವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮ ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ ಮತ್ತು ನಿಮ್ಮ ಜೀವನವನ್ನು ಸಂತೋಷದಿಂದ ಕಳೆಯಲು ಸಹಾಯ ಮಾಡುತ್ತದೆ.

2. ಹೆಚ್ಚು ಕೆಲಸ ಮಾಡಲು, ಫಿಟ್‌ ಆಗಿರಲು ಒಲವು ತೋರುತ್ತೀರಿ

2. ಹೆಚ್ಚು ಕೆಲಸ ಮಾಡಲು, ಫಿಟ್‌ ಆಗಿರಲು ಒಲವು ತೋರುತ್ತೀರಿ

ಒಂಟಿ ವ್ಯಕ್ತಿಗಳು ಹೆಚ್ಚು ಸಮಯವನ್ನು ಕೆಲಸ ಮಾಡಲು ಮತ್ತು ವ್ಯಾಯಾಮ ಮಾಡಲು ಒಲವು ತೋರುತ್ತಾರೆ. ಇದು ಸಾಮಾನ್ಯ, ಏಕೆಂದರೆ ಅವರು ತಮ್ಮ ಅತ್ಯುತ್ತಮವಾಗಿ ಕಾಣಲು ಮತ್ತು ಗುಂಪಿನಲ್ಲಿ ತಮ್ಮನ್ನು ತಾವು ಎದ್ದು ಕಾಣುವಂತೆ ಮಾಡಲು ಬಯಸುತ್ತಾರೆ. ಇದು ಅವರ ಆರೋಗ್ಯದ ಪರವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹೃದಯ ಸಮಸ್ಯೆಗಳು, ಸ್ಥೂಲಕಾಯತೆ ಮತ್ತು ಸಂಭವಿಸಬಹುದಾದ ಇತರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ವಿಶೇಷವಾಗಿ ಪುರುಷರು ಒಂಟಿಯಾಗಿರುವಾಗ ಅವರ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿರುವುದು ಕಂಡುಬಂದಿದೆ.

3. ನೆಮ್ಮದಿಯ ನಿದ್ರೆ ನಿಮ್ಮದಾಗಿರುತ್ತದೆ

3. ನೆಮ್ಮದಿಯ ನಿದ್ರೆ ನಿಮ್ಮದಾಗಿರುತ್ತದೆ

ಇದರ ಬಗ್ಗೆ ನೀವು ಒಬ್ಬಂಟಿಯಾಗಿರುವ ಹಾಗೂ ವೈವಾಹಿಕ ಬಂಧನದಲ್ಲಿರುವ ವ್ಯಕ್ತಿಯೊಂದಿಗೆ ಸಮಾಲೋಚಿಸಿದಾಗ ಚೆನ್ನಾಗಿ ತಿಳಿಯುತ್ತದೆ. ರಾತ್ರಿಯ ನಿದ್ರೆ ನಿಮ್ಮ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ ಏಕೆಂದರೆ ಇದು ಆರೋಗ್ಯ ವ್ಯವಸ್ಥೆಗಳ ಸರಿಯಾದ ಕಾರ್ಯನಿರ್ವಹಣೆಯೊಂದಿಗೆ ಸಂಬಂಧಿಸಿದೆ. ನೀವು ಉತ್ತಮ ನಿದ್ದೆ ಮಾಡಿದಾಗ ನೀವು ಉತ್ತಮವಾಗಿ ಗಮನಹರಿಸಬಹುದು, ನೀವು ಉತ್ತಮ ಮನಸ್ಥಿತಿಯನ್ನು ಹೊಂದಿರುತ್ತೀರಿ ಮತ್ತು ಇದು ನಿಮ್ಮ ಆರೋಗ್ಯದ ಮೇಲೆ ಸಹ ಸಕಾರಾತ್ಮಕ ಪರಿಣಾಮ ಬೀರುತ್ತದೆ.

4. ನಿಮ್ಮದೇ ಇಷ್ಟವಾದ ಸ್ವಂತ ವೇಳಾಪಟ್ಟಿಯನ್ನು ತಯಾರಿಸಬಹುದು

4. ನಿಮ್ಮದೇ ಇಷ್ಟವಾದ ಸ್ವಂತ ವೇಳಾಪಟ್ಟಿಯನ್ನು ತಯಾರಿಸಬಹುದು

ನೀವು ವೈವಾಹಿಕ ಸಂಬಂಧದಲ್ಲಿರುವಾಗ, ನಿಮ್ಮ ಸಂಗಾತಿಯನ್ನು ಸಹ ಪರಿಶೀಲಿಸಬೇಕು ಮತ್ತು ಅದಕ್ಕೆ ತಕ್ಕಂತೆ ನಿಮ್ಮ ಸಮಯವನ್ನು ಹೊಂದಿಸಿಕೊಳ್ಳಬೇಕು. ಆದರೆ ಏಕಾಂಗಿಯಾಗಿ ಇರುವವರಿಗೆ ನಿಮ್ಮ ಸ್ವಂತ ವೇಳಾಪಟ್ಟಿಯನ್ನು ಮಾಡುವುದು ಅತ್ಯುತ್ತಮ ವಿಷಯವಾಗಿದೆ. ನೀವು ಬೇರೆ ಯಾವುದೇ ವ್ಯಕ್ತಿಗೆ ಬದ್ಧರಾಗಿರಬೇಕಾಗಿಲ್ಲ ಮತ್ತು ನಿಮ್ಮ ಸ್ವಂತ ಅಗತ್ಯಗಳಿಗೆ ಅನುಗುಣವಾಗಿ ನೀವು ಕೆಲಸ ಮಾಡಬಹುದು. ನೀವು ಬದ್ಧರಾಗಿದ್ದರೆ, ಸಂಬಂಧವು ಕೆಲವೊಮ್ಮೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

5. ಏಕಾಂಗಿ ಬದುಕಲ್ಲೇ ಹೆಚ್ಚು ಸಂತೋಷ ಇರುತ್ತದೆ

5. ಏಕಾಂಗಿ ಬದುಕಲ್ಲೇ ಹೆಚ್ಚು ಸಂತೋಷ ಇರುತ್ತದೆ

ಒಂಟಿಯಾಗಿರುವವರು, ವಿಶೇಷವಾಗಿ ಹೆಣ್ಣುಮಕ್ಕಳು ತಮ್ಮ ವೈವಾಹಿಕ ಜೀವನಕ್ಕೆ ಹೋಲಿಸಿದಾಗ ಅವರು ಒಬ್ಬಂಟಿಯಾಗಿದ್ದಾಗಲೇ ಹೆಚ್ಚು ಸಂತೋದಿಂದ ಇದ್ದಾರೆ ಎಂದು ಹಲವು ಅಧ್ಯಯನಗಳು ಹೇಳಿದೆ. ಇನ್ನು ಪುರುಷರ ವಿಚಾರದಲ್ಲೂ ಇದು ಸುಳ್ಳಲ್ಲ.

ಪುರುಷರು ಒಂಟಿಯಾಗಿರುವಾಗ ಮೋಜಿನ ಜೀವನವನ್ನು ಕಳೆಯುತ್ತಾರೆ ಮತ್ತು ಸಾಮಾನ್ಯವಾಗಿ ತಮ್ಮನ್ನು ತಾವು ಹೆಚ್ಚು ಮುಕ್ತವಾಗಿ ಮತ್ತು ಸಂತೋಷದಿಂದ ಇರುತ್ತಾರೆ. ಒಂಟಿ ವ್ಯಕ್ತಿಗಳು ತಮ್ಮ ಗುರಿಗಳ ಮೇಲೆ ಕೇಂದ್ರೀಕರಿಸಲು ಹೆಚ್ಚಿನ ಸಮಯವನ್ನು ಹೊಂದಿರುತ್ತಾರೆ, ಹೀಗಾಗಿ ಅವರು ಶೀಗ್ರ ಯಶಸ್ಸನ್ನು ಸಹ ಪಡೆಯುತ್ತಾರೆ.

English summary

Health Benefits Of Staying Single in Kannada

Here we are discussing about Health Benefits Of Staying Single in Kannada. Read more.
Story first published: Tuesday, June 21, 2022, 15:03 [IST]
X
Desktop Bottom Promotion