For Quick Alerts
ALLOW NOTIFICATIONS  
For Daily Alerts

ಪ್ರೀತಿಯಲ್ಲಿ ಬಿದ್ದಿರುವವರು ಈ ತಪ್ಪುಕಲ್ಪನೆಗಳನ್ನು ನಿಜವೆಂದೇ ನಂಬಿರುತ್ತಾರೆ!

|

ಪ್ರೀತಿ ಒಂದು ಮಧುರವಾದ ಸಂಬಂಧ. ಎರಡು ಮನಸುಗಳು ನಂಬಿಕೆ ಎಂಬ ತಳಪಾಯ ಹಾಕಿ, ಕನಸಿನ ಗೋಪುರ ಕಟ್ಟಿಕೊಲ್ಲುವುದು ಸಾಮಾನ್ಯ. ಆದರೆ ಅದು ವಾಸ್ತವಕ್ಕೆ ದೂರವಿರದಂತೆ ನೋಡಿಕೊಳ್ಳುವುದು ಪ್ರೀತಿಯಲ್ಲಿ ಬಿದ್ದ ಪ್ರತಿ ಗಂಡು ಹೆಣ್ಣಿನ ಮೇಲಿರುವ ಜವಾಬ್ದಾರಿ.

ಪ್ರೀತಿಯಲ್ಲಿ ಬಿದ್ದವರಿಗೆ ಜಗತ್ತಲ್ಲಿ ಬೇರೇನೂ ಕಾಣುವುದಿಲ್ಲ ಎಂಬ ಮಾತಿದೆ. ಅದು ನಿಜ ಕೂಡಾ. ಸದಾ ಅವರದ್ದೇ ಲೋಕದಲ್ಲಿ ತೇಲುತ್ತಿರುತ್ತಾರೆ. ಆದರೆ ಅವರು ನಂಬಿಕೊಂಡ ಕೆಲವು ವಿಚಾರಗಳು ಸತ್ಯಕ್ಕೆ ದೂರವಾಗಿರುತ್ತವೆ. ಅಂತಹ ಕೆಲವು ವಿಚಾರಗಳನ್ನು ನಾವು ಇಲ್ಲಿ ಹೇಳಲಿದ್ದೇವೆ.

ಪ್ರೀತಿಯಲ್ಲಿ ನಿಜ ಎಂದು ನಂಬಿರುವ ಕೆಲವು ತಪ್ಪು ಕಲ್ಪನೆಗಳನ್ನು ಈ ಕೆಳಗೆ ವಿವರಿಸಲಾಗಿದೆ.

ನನ್ನ ಸೋಲ್ ಮೇಟ್ ಸಿಕ್ಕಿದ್ದಾರೆ :

ನನ್ನ ಸೋಲ್ ಮೇಟ್ ಸಿಕ್ಕಿದ್ದಾರೆ :

ಪ್ರತಿಯೊಬ್ಬ ವ್ಯಕ್ತಿಯು ತನಗೆ ನಿಜವಾದ ಪ್ರೀತಿ ಅಥವಾ ಸೋಲ್ ಮೇಟ್ ಸಿಕ್ಕಿದ್ದಾರೆ ಎಂದು ನಂಬುವುದು ದೊಡ್ಡ ತಪ್ಪು. ನೀವು ಒಬ್ಬ ವ್ಯಕ್ತಿಯೊಂದಿಗೆ ಸಂಬಂಧವನ್ನು ಬೆಳೆಸಲು ಬಯಸುತ್ತೀರಿ ಏಕೆಂದರೆ ಅವನು / ಅವಳು ನಿಮ್ಮ ಅವಶ್ಯಕತೆಗಳಿಗೆ ಸರಿಹೊಂದುವ ಮತ್ತು ನಿಮ್ಮ ಮನಸ್ಸಿಗೆ ಹೊಂದಿಕೆಯಾಗುವ ಏಕೈಕ ವ್ಯಕ್ತಿ ಅಷ್ಟೇ ಹೊರತು ಸೋಲ್ ಮೇಟ್ ಎಂಬುದೇನಿಲ್ಲ. ನೀವು ಅವರನ್ನು ಇಲ್ಲಿ ಭೇಟಿಯಾಗಿರುವುದರಿಂದ ಅವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದೀರಿ, ಒಂದುವೇಳೆ ಜಗತ್ತಿನ ಇನ್ನಾವುದೇ ಮೂಲೆಯಲ್ಲಿದ್ದರೆ, ನಿಮಗೆ ಅಲ್ಲಿರುವ ವ್ಯಕ್ತಿಯ ಜೊತೆ ಪ್ರೀತಿ ಆಗುತ್ತಿತ್ತು. ನಿಮ್ಮ ಆತ್ಮಕ್ಕೆ ಸರಿಹೊಂದುವಂತಹ ವ್ಯಕ್ತಿಗಳು ಈ ಭೂಮಿ ಮೇಲೆ ಸಾಕಷ್ಟು ಜನರಿರುತ್ತಾರೆ.

ಇಬ್ಬರ ವ್ಯಕ್ತಿತ್ವ ಒಂದೇ ರೀತಿಯಿದ್ದರೆ ಸಂಬಂಧ ಗಟ್ಟಿಯಾಗಿರುತ್ತೆ :

ಇಬ್ಬರ ವ್ಯಕ್ತಿತ್ವ ಒಂದೇ ರೀತಿಯಿದ್ದರೆ ಸಂಬಂಧ ಗಟ್ಟಿಯಾಗಿರುತ್ತೆ :

ಒಂದೇ ರೀತಿಯ ವ್ಯಕ್ತಿತ್ವ ಮತ್ತು ಮನೋಧರ್ಮಗಳು ಪರಸ್ಪರ ಆಕರ್ಷಿಸಿ, ಪ್ರೀತಿ ಆಗುತ್ತದೆ ಎಂಬ ನಂಬಿಕೆಯನ್ನು ಅನೇಕ ಜನರು ಹೊಂದಿದ್ದಾರೆ. ಆದರೆ ಇದು ಅಪನಂಬಿಕೆ ಅಷ್ಟೇ. ಏಕೆಂದರೆ ಈ ಜಗತ್ತಲ್ಲಿ ಒಬ್ಬರಂತೆ ಮತ್ತೊಬ್ಬರಿರಲೂ ಸಾಧ್ಯವಿಲ್ಲ. ಪ್ರತಿಯೊಬ್ಬರದೂ ವಿಭಿನ್ನ ಮನಸ್ಥಿತಿ ಅಥವಾ ವ್ಯಕ್ತಿತ್ವ ಆಗಿರುತ್ತದೆ. ಅವರ ಆಸೆ ಅಭಿರುಚಿಗಳು ಒಂದೇ ಆಗಿರಬಹುದೇ ಹೊರತು ಅವರ ವ್ಯಕ್ತಿತ್ವವಲ್ಲ.

ಸಂಬಂಧದಲ್ಲಿ ಪ್ರೀತಿಯೇ ಎಲ್ಲ:

ಸಂಬಂಧದಲ್ಲಿ ಪ್ರೀತಿಯೇ ಎಲ್ಲ:

ಜನರು ಸಂಬಂಧಕ್ಕೆ ಪ್ರೀತಿಯೇ ಎಲ್ಲ ಎಂದು ನಂಬಿರುವುದು ಮತ್ತೊಂದು ತಪ್ಪು ಕಲ್ಪನೆ. ಸಂಬಂಧ ಆರಂಭವಾಗುವುದು ಆಕರ್ಷಣೆಯಿಂದ, ಮುಂದುವರೆಯುವುದು ಪ್ರೀತಿಯಿಂದ. ಆದರೆ ಪ್ರೀತಿಯೇ ಸಂಬಂಧವನ್ನು ಕಾಪಾಡುವುದಿಲ್ಲ. ದೀರ್ಘಾವಧಿಯ ಸಂಬಂಧಗಳಲ್ಲಿ ಬದುಕಲು ಜವಾಬ್ದಾರಿಗಳು, ಕಟ್ಟುಪಾಡುಗಳು, ಹೊಂದಾಣಿಕೆ, ಸಮರ್ಪಣೆ, ತ್ಯಾಗ ಮುಂತಾದ ಅನೇಕ ಅಂಶಗಳಿವೆ. ಮನೋಧರ್ಮ, ಪ್ರಾಮಾಣಿಕತೆ,ನಮ್ರತೆ ಇತ್ಯಾದಿಗಳು ಸಂಬಂಧಗಳಲ್ಲಿ ಮುಖ್ಯ. ಆದರೆ ಪ್ರೀತಿಯು ಅಂತಹ ಎಲ್ಲ ಗುಣಗಳಿಗೆ ಹಿನ್ನೆಲೆಯಾಗಿದೆ.

ಲೈಂಗಿಕ ಚಟುವಟಿಕೆಗಳು ಪ್ರೀತಿಯನ್ನು ಗಟ್ಟಿ ಮಾಡುವುದು:

ಲೈಂಗಿಕ ಚಟುವಟಿಕೆಗಳು ಪ್ರೀತಿಯನ್ನು ಗಟ್ಟಿ ಮಾಡುವುದು:

ಲೈಂಗಿಕ ಚಟುವಟಿಕೆಗಳು ಸಂಬಂಧಗಳನ್ನು ಬೆಳೆಸಲು ಸಹಾಯ ಮಾಡುತ್ತದೆ, ಆದರೆ ಇದನ್ನೇ ಪ್ರತಿ ಸಂಬಂಧದ ಅವಶ್ಯಕ ಅಂಶ ಎಂದು ನಂಬುವುದು ತಪ್ಪು ಪರಿಕಲ್ಪನೆ. ಸಂಬಂಧ ದೈಹಿಕ ಅವಶ್ಯಕತೆಗಳು ಮತ್ತು ತೃಪ್ತಿಗಿಂತ ಹೆಚ್ಚು. ಸಂಬಂಧದಲ್ಲಿ ಮಾನಸಿಕ ನೆಮ್ಮದಿ ಮತ್ತು ಭಾವನಾತ್ಮಕ ಬಾಂಧವ್ಯ ಯಾವಾಗಲೂ ಅಗತ್ಯವಾಗಿರುತ್ತದೆ ಮತ್ತು ಲೈಂಗಿಕತೆಯು ಅದನ್ನು ಸಾಧಿಸುವ ಒಂದು ಮಾರ್ಗವಾಗಿದೆ ಅಷ್ಟೇ. ಲೈಂಗಿಕ ಚಟುವಟಿಕೆಗಳಿಲ್ಲದಿದ್ದರೂ ಸಹ ಇಬ್ಬರು ದೀರ್ಘಕಾಲೀನ ಸಂಬಂಧಗಳಲ್ಲಿ ಉಳಿಯುಬಹುದು.

ಹೊಸ ಸಂಬಂಧವು ಬ್ರೇಕ್ ಅಪ್ ಮರೆಯಲು ಉತ್ತಮ ಮಾರ್ಗ :

ಹೊಸ ಸಂಬಂಧವು ಬ್ರೇಕ್ ಅಪ್ ಮರೆಯಲು ಉತ್ತಮ ಮಾರ್ಗ :

ಇದು ಹೆಚ್ಚಾಗಿ ನಡೆಯುವ ವಿಚಾರ. ಒಂದು ಬ್ರೇಕ್ ಅಪ್ ನೋವನ್ನು ಮರೆಯಲು ತಕ್ಷಣ ಮತ್ತೊಂದು ಸಂಬಂಧವನ್ನು ಹುಡುಕುತ್ತಾರೆ. ಆದರೆ ಇದು ತಪ್ಪು ಕಲ್ಪನೆ. ಹೊಸ ಸಂಬಂಧದಿಂದ ನಿಮ್ಮ ನೋವು ಮರೆಯಾಗುವುದಿಲ್ಲ, ಬದಲಾಗಿ ಹೊಸ ಜಂಜಾಟ ಗಳಿಗೆ ಕಾರಣವಾಗಬಹುದು. ಹೊಸ ಸಂಬಂಧ ಹುಡುಕುವ ಬದಲು ಈ ಹಿಂದಿನ ಬ್ರೇಕ್ ಅಪ್ ಗೆ ಕಾರಣವೇನು ಎಂಬುದ್ದನ್ನು ಅರಿತುಕೊಳ್ಳಲು ಪ್ರಯತ್ನಸಬೇಕು. ಇದು ಮುಂದಾಗುವ ಸಮಸ್ಯೆಗಳನ್ನ ಪರಿಹರಿಸಲು ಸಹಾಯ ಮಾಡುತ್ತದೆ.

English summary

Common Relationship Myths Busted in Kannada

Here we talking about Common Relationship Myths Busted in Kannada, read on
Story first published: Friday, May 21, 2021, 17:32 [IST]
X
Desktop Bottom Promotion