For Quick Alerts
ALLOW NOTIFICATIONS  
For Daily Alerts

ಬೆಸ್ಟ್‌ ಫ್ರೆಂಡ್ ಮೇಲೆ ಪ್ರೀತಿಯಾಗಿದ್ದರೆ, ಅದನ್ನು ವ್ಯಕ್ತಪಡಿಸಲು ದಾರಿಗಳಿಲ್ಲಿವೆ

|

ಹೆಚ್ಚಿವರಿಗೆ ಅವರವರ ಸ್ನೇಹಿತರ ಮೇಲೆ ಯಾವುದೋ ಒಂದು ಕ್ಷಣದಲ್ಲಾದರೂ, ಪ್ರೀತಿ ಆಗಿರುತ್ತದೆ. ಆದರೆ, ಅದನ್ನು ಹೇಳಿಕೊಳ್ಳಲು ಹಿಂದೆ-ಮುಂದೆ ನೋಡುತ್ತಾರೆ, ಕಾರಣ, ಪ್ರೀತಿ ಹೇಳಿಕೊಂಡರೆ, ಸ್ನೇಹಕ್ಕೆ ಎಲ್ಲಿ ಕುತ್ತು ಬಂದುಬಿಡುತ್ತದೆಯೋ ಎಂಬ ಭೀತಿ. ಇದೇ ಕಾರಣಗಳನ್ನು ಭಾವನೆಗಳನ್ನು ನಮ್ಮಲ್ಲೇ ಮುಚ್ಚಿಟ್ಟುಕೊಂಡು, ಅವರೆದುರು ನಟಿಸುತ್ತಿರುತ್ತೇವೆ.

ಆದರೆ, ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ ಭಾವನೆಗಳಿದ್ದರೆ, ಅದನ್ನು ಹೇಳಿಕೊಳ್ಳುವುದು ತುಂಬಾ ಮುಖ್ಯ, ಇದು ಪರಿಸ್ಥಿತಿ ಕೈ ಮೀರಿ ಹೋಗುವ ಸನ್ನಿವೇಶದಿಂದ ಕಾಪಾಡುತ್ತದೆ. ಆದ್ದರಿಂದ ಸ್ವಲ್ಪ ಧೈರ್ಯವನ್ನು ಮಾಡಿ, ಈ 4 ಮಾರ್ಗಗಳನ್ನು ಅನುಸರಿಸುವ ಮೂಲಕ ನಿಮ್ಮ ಬೆಸ್ಟ್ ಫ್ರೆಂಡ್‌ಗೆ ಅದು ಹುಡುಗ ಅಥವಾ ಹುಡುಗಿಯಾಗಿರಲಿ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಿ.

ಬೆಸ್ಟ್ ಫ್ರೆಂಡ್‌ಗೆ ಪ್ರೇಮ ನಿವೇದನೆ ಮಾಡಲು ದಾರಿಗಳನ್ನು ಈ ಕೆಳಗೆ ನೀಡಲಾಗಿದೆ:

ಅವರಿಗೆ ಸೂಕ್ಷ್ಮ ಸುಳಿವುಗಳನ್ನು ನೀಡಿ:

ಅವರಿಗೆ ಸೂಕ್ಷ್ಮ ಸುಳಿವುಗಳನ್ನು ನೀಡಿ:

ನಿಮ್ಮ ಆತ್ಮೀಯ ಸ್ನೇಹಿತರಿಗೆ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳುವ ಮೊದಲ ಹೆಜ್ಜೆ ಎಂದರೆ, ಅವರಿಗೆ ಸೂಕ್ಷ್ಮ ಚಿಹ್ನೆಗಳನ್ನು ನೀಡುವುದು. ಇದು ಸಣ್ಣ ಫ್ಲರ್ಟಿಂಗ್ ಮೂಲಕ ಅಥವಾ ಅವರಿಗೆ ಸ್ವಲ್ಪ ಹೆಚ್ಚಿನ ಕಾಳಜಿಯನ್ನು ತೋರಿಸುವ ಮೂಲಕ ಆಗಿರಬಹುದು. ಆದಾಗ್ಯೂ, ಇದನ್ನು ಸಣ್ಣ ಕೀಲಿಯಾಗಿ ಬಳಸಬೇಕು. ಸಮಯ ಬಂದಿದೆ ಎಂದು ನಿಮಗನಿಸಿದಾಗ ಅವರಿಗೆ ನೇರವಾಗಿ ಹೇಳಬಹುದು, ಅವರು ಈಗಾಗಲೇ ನಿಮ್ಮಿಂದ ಇದನ್ನು ನಿರೀಕ್ಷಿಸುತ್ತಿರಬಹುದು.

ನಿಮ್ಮ ನೆಚ್ಚಿನ ಸ್ಥಳದಲ್ಲಿ ಭೇಟಿಯಾಗಿ ತಿಳಿಸಿ:

ನಿಮ್ಮ ನೆಚ್ಚಿನ ಸ್ಥಳದಲ್ಲಿ ಭೇಟಿಯಾಗಿ ತಿಳಿಸಿ:

ನಾವೆಲ್ಲರೂ ನಮ್ಮ ಸ್ನೇಹಿತರೊಂದಿಗೆ ಯಾವಾಗಲೂ ಹ್ಯಾಂಗ್ ಔಟ್ ಮಾಡಲು ಒಂದು ನೆಚ್ಚಿನ ಸ್ಥಳವನ್ನು ಹೊಂದಿದ್ದೇವೆ. ಅದು ಕೆಫೆಯಾಗಿರಲಿ ಅಥವಾ ಹತ್ತಿರದ ಉದ್ಯಾನವನವಾಗಿರಲಿ, ಈ ಸ್ಥಳವು ಸ್ವರ್ಗದಂತೆ ತೋರುತ್ತದೆ. ಆದ್ದರಿಂದ, ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ನಿರ್ಧರಿಸಿದಾಗ, ನಿಮ್ಮ ನೆಚ್ಚಿನ ಸ್ಥಳದಲ್ಲಿ ಭೇಟಿಯಾಗಲು ಸ್ನೇಹಿತರನ್ನು ಕೇಳಿ ಮತ್ತು ನೀವಿಬ್ಬರು ಇಲ್ಲಿಗೆ ಏಕೆ ಬಂದಿದ್ದೀರಿ ಎಂದು ಹೇಳಿ. ಆ 3 ಮಾಂತ್ರಿಕ ಪದಗಳನ್ನು ಎಂದಿಗೂ ಸಂಪೂರ್ಣವಾಗಿ ಉಚ್ಚರಿಸಬೇಡಿ, ಬದಲಿಗೆ ಅವುಗಳನ್ನು ಸ್ವಲ್ಪ ವಿಭಿನ್ನವಾಗಿ ವ್ಯಕ್ತಪಡಿಸಲು ಪ್ರಯತ್ನಿಸಿ.

ಉಡುಗೊರೆಯೊಂದಿಗೆ ಪತ್ರವು ಪರಿಪೂರ್ಣ:

ಉಡುಗೊರೆಯೊಂದಿಗೆ ಪತ್ರವು ಪರಿಪೂರ್ಣ:

ನಿಮ್ಮ ಸ್ನೇಹಿತರಿಗೆ ಅವರಿಗೆ ಇಷ್ಟವಾಗುವ ವಿಷಯವನ್ನು ಉಡುಗೊರೆಯಾಗಿ ನೀಡಿ ಮತ್ತು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಸಿಹಿ ಪತ್ರವನ್ನು ಲಗತ್ತಿಸಲು ಮರೆಯಬೇಡಿ. ಇದನ್ನು ನಿಮ್ಮಲ್ಲಿ ಕೆಲವರು ಪ್ರೀತಿಯನ್ನು ವ್ಯಕ್ತಪಡಿಸುವ ಹಳೆಯ ಶಾಲಾ ವಿಧಾನ ಎಂದು ಹೇಳಬಹುದು, ಆದರೆ, ಓಲ್ಡ್ ಈಸ್ ಗೋಲ್ಡ್‌ ಅನ್ನೋದು ಮರೆಯಬೇಡಿ. ನಿಮ್ಮ ಪತ್ರವನ್ನು ಅದು ಹೇಗೆ ಮತ್ತು ಯಾವಾಗ ಬರೆದಿದ್ದೀರಿ ಎಂಬುದನ್ನು ಹೇಳಿ, ಅವರ ಮೇಲಿರುವ ಭಾವನೆಗಳನ್ನು ವ್ಯಕ್ತಪಡಿಸಿ ಮತ್ತು ಉಳಿದದ್ದನ್ನು ಅವರಿಗೆ ಬಿಟ್ಟುಬಿಡಿ. ಅವರಿಗೂ ಅದೇ ರೀತಿ ಅನಿಸಿದರೆ, ಪ್ರತಿಕ್ರಿಯಿಸುತ್ತಾರೆ ಅಥವಾ ನಿಮಗೆ ತಿಳಿಸುತ್ತಾರೆ, ನಿಮಗೆ ಉತ್ತರ ಸಿಗದಿದ್ದರೆ, ನೀವಿಬ್ಬರು ಇನ್ನೂ ಸ್ನೇಹಿತರಾಗಬಹುದು ಎಂಬ ಅಂಶದಿಂದ ಸಂತೋಷವಾಗಿರಿ.

ಮಧ್ಯರಾತ್ರಿ ಕರೆ ಮಾಡಿ:

ಮಧ್ಯರಾತ್ರಿ ಕರೆ ಮಾಡಿ:

ನಿಮ್ಮ ಉತ್ತಮ ಸ್ನೇಹಿತನನ್ನು ಕರೆ ಮಾಡಲು ಸರಿಯಾದ ಸಮಯ ಎಂದು ಯಾವುದೂ ಇಲ್ಲ. ಯಾವುದೇ ಒಳ್ಳೆಯ ಕಾರಣವಿಲ್ಲದೆ ಅವರಿಗೆ ರಾತ್ರಿಯಿಡೀ ಸಂದೇಶ ಕಳುಹಿಸಲು ಅಥವಾ ಬೆಳಿಗ್ಗೆ 3 ಗಂಟೆಗೆ ಕರೆ ಮಾಡುವ ಸಂಪೂರ್ಣ ಸ್ವಾತಂತ್ರ್ಯವಿದೆ. ಆದ್ದರಿಂದ, ನಿಮ್ಮ ಪ್ರೀತಿಯನ್ನು ಮುಖಾಮುಖಿಯಾಗಿ ಹೇಳಿಕೊಳ್ಳಲು ನಿಮಗೆ ಅವಕಾಶ ಸಿಗದಿದ್ದರೆ, ರಾತ್ರಿಯಲ್ಲಿ ಅವರು ಬಿಡುವಿರುವಾಗ ಕರೆ ಮಾಡಿ, ಭಾವನೆಗಳನ್ನು ಹಂಚಿಕೊಳ್ಳಿ. ಆದರೆ, ಅನಾವಶ್ಯಕವಾದ ವಿಷಯಗಳನ್ನು ಹೇಳಿ ಎಡವಟ್ಟು ಮಾಡಬೇಡಿ.

ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಮಾರ್ಗಗಳನ್ನು ಹುಡುಕುತ್ತಿದ್ದರೆ ಮೇಲೆ ತಿಳಿಸಿದ ಮಾರ್ಗಗಳು ಖಂಡಿತವಾಗಿಯೂ ನಿಮ್ಮ ಸಹಾಯಕ್ಕೆ ಬರುತ್ತವೆ, ನಿಮ್ಮ ಸ್ನೇಹಿತನು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ಮೊದಲು ತಿಳಿದುಕೊಳ್ಳುವುದು ಯಾವಾಗಲೂ ಒಳ್ಳೆಯದು. ಅವರು ಈಗಾಗಲೇ ಸಂಬಂಧದಲ್ಲಿದ್ದರೆ, ಹೀಗೆ ಮಾಡುವುದನ್ನು ತಡೆಯಿರಿ. ನೀವು ಸ್ನೇಹಿತರಾಗಿರುವುದರಿಂದ ಅವರು ಹೌದು ಎಂದು ಹೇಳಬೇಕೆಂದು ನಿರೀಕ್ಷಿಸಬೇಡಿ. ಅಲ್ಲದೆ, ಇದು ನಿಮ್ಮ ಸಂಬಂಧವನ್ನು ಎಂದಿಗೂ ಬದಲಾಯಿಸುವುದಿಲ್ಲ ಅಥವಾ ಅದರ ಬಗ್ಗೆ ಅವರನ್ನು ಕೇಳುವುದಿಲ್ಲ ಎಂಬ ಅಂಶವನ್ನು ನಿರಂತರವಾಗಿ ಒತ್ತಿ ಹೇಳಬೇಡಿ ಏಕೆಂದರೆ ಅದು ನಿಮಗೆ ವಿಷಯಗಳನ್ನು ಕೆಟ್ಟದಾಗಿ ಮಾಡಬಹುದು. ಎಲ್ಲವೂ ಸ್ವಾಭಾವಿಕವಾಗಿ ನಡೆಯಲಿ.

English summary

Best Way to Confess your Love to your Bestfriend in Kannada

Here we talking about Best way to confess your love to your bestfriend in Kannada, read on
Story first published: Thursday, January 6, 2022, 17:37 [IST]
X
Desktop Bottom Promotion