For Quick Alerts
ALLOW NOTIFICATIONS  
For Daily Alerts

ನೀವು ಈ ರೀತಿ ರೋಮ್ಯಾಂಟಿಕ್ ಆಗಿದ್ದರೆ ನಿಮ್ಮ ಸಂಗಾತಿಗೆ ಇಷ್ಟವಂತೆ!!

|

ಒಂದು ಹೆಣ್ಣಿನ ಹೃದಯ ಗೆಲ್ಲಲು ಏನೇನೋ ಕಸರತ್ತು ನಡೆಸುತ್ತಾರೆ . ಅವಳಿಗೆ ಯಾವ ತಿಂಡಿ ಇಷ್ಟ , ಯಾವ ಬಣ್ಣ ಇಷ್ಟ , ಯಾವ ಹೂ ಇಷ್ಟ , ಹೀಗೆ ಅನೇಕ ರೀತಿಯ ವಿಷಯಗಳನ್ನು ಹುಡುಗರು ತಮ್ಮ ಕಾಲೇಜಿನ ವಿದ್ಯಾಭ್ಯಾಸಕ್ಕಿಂತ ಹೆಚ್ಚಾಗಿ ಸಂಶೋಧನೆ ಮಾಡುತ್ತಾರೆ . ಆದರೆ ಕೊನೆಗೆ ಆಕೆಯ ಮನಸ್ಸನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋಲುತ್ತಾರೆ. ನೀರಿನಲ್ಲಿ ಮೀನಿನ ಹೆಜ್ಜೆಯನ್ನು ಬೇಕಾದರೂ ಕಂಡುಹಿಡಿಯಬಹುದು ಆದರೆ ಹೆಣ್ಣಿನ ಮನಸ್ಸಿನಲ್ಲಿರುವುದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ ಎಂದು ಹಿಂದೆ ಯಾರೋ ಒಬ್ಬ ಮಹಾ ಪುರುಷರು ಹೇಳಿರುವ ಹಾಗೆ ಆಕೆಗೆ ಯಾವುದು ಇಷ್ಟ , ಯಾವುದು ಕಷ್ಟ ಎಂದು ಆಕೆಯ ಬಾಯಲ್ಲೇ ಕೇಳಿ ತಿಳಿದುಕೊಳ್ಳಬಹುದೇ ವಿನಃ ಹಾಗೆಯೇ ನಿಮಗೆ ನೀವೇ ಅಂದುಕೊಂಡರೆ ಅದು ಖಂಡಿತ ತಪ್ಪೇ.

 

ಆಕೆಯ ಮನ ಗೆಲ್ಲಲು ನೀವು ಆಕೆಗೆ ಇಷ್ಟ ಆಗಲು ದುಬಾರಿ ಗಿಫ್ಟ್ ಗಳನ್ನೂ ಕೊಡಬೇಕೆಂದೇನೂ ಇಲ್ಲ . ಏಕೆಂದರೆ ಅದು ಕ್ಷಣಿಕ. ದುಬಾರಿ ವಸ್ತುಗಳನ್ನು ನೋಡಿ ಯಾರಿಗೆ ತಾನೇ ಖುಷಿಯಾಗುವುದಿಲ್ಲ ಹೇಳಿ . ಆದರೆ ಆ ಖುಷಿ ಜೀವನ ಪರ್ಯಂತ ಕೊನೆ ತನಕ ಏನೂ ಉಳಿಯುವುದಿಲ್ಲ. ನಿಮ್ಮ ಸಂಗಾತಿಗೆ ನೀವು ಮನಃಪೂರ್ವಕ ವಾಗಿ ಇಡೀ ಜೀವನ ಇಷ್ಟವಾಗಬೇಕೆಂದರೆ , ನೀವು ಪ್ರತಿದಿನ ನಡೆದುಕೊಳ್ಳುವ ರೀತಿ ಕೂಡ ಒಂದು ಮುಖ್ಯ ಕಾರಣವಾಗುತ್ತದೆ. ಅದಕ್ಕಾಗಿ ಮತ್ತು ಆ ರೀತಿ ಹೇಗೆ ನಾವು ಇರಬೇಕು ಎಂಬುದರ ಬಗ್ಗೆ ನೀವು ಅಗಾಧವಾದ ಚಿಂತೆಯಲ್ಲಿ ಮುಳುಗುವ ಅವಶ್ಯಕತೆ ಇಲ್ಲ. ಕೆಲವು ಸರಳ ವ್ಯಕ್ತಿತ್ವಗಳಿಂದ ಮತ್ತು ನಡವಳಿಕೆಗಳಿಂದ ನೀವು ಆಕೆಯ ಮನ ಗೆಲ್ಲಬಹುದು . ನೀವು ಕೊನೆವರೆಗೂ ಆಕೆಯ ಮನದಲ್ಲಿ ಅರಸನಾಗಿ ಬಾಳಬಹುದು. ಹಾಗಿದ್ದರೆ ಯಾವ ಯಾವ ವಿಷಯಗಳ ಬಗ್ಗೆ ಹೆಚ್ಚು ಒತ್ತು ನೀಡಿದರೆ ಆಕೆಯ ಜೊತೆ ನೀವು ಸಂತೋಷವಾಗಿ ಇರಬಹುದು ಎಂದು ಈಗ ತಿಳಿಯೋಣ...

Romantic Gestures that Your Partner Will Love
 

ನಿಮ್ಮ ಹೃದಯದ ಭಾವನೆಗಳನ್ನು ಹೀಗೂ ವ್ಯಕ್ತಪಡಿಸಿ

ನಿಮ್ಮ ಸಂಗಾತಿಯ ಮೇಲೆ ನಿಮಗೆ ಬೆಟ್ಟದಷ್ಟು ಪ್ರೀತಿ ಇರುವುದಂತೂ ನಿಜ . ಆದರೆ ಅದನ್ನು ತೋರಿಸಿಕೊಳ್ಳುವುದಕ್ಕೆ ನಿಮಗೆ ಮಜುಗರ ಅಥವಾ ಸಮಯದ ಆಭಾವ ಅಥವಾ ಇನ್ನೇನೋ ಬೇರೆ ಕಾರಣದಿಂದ ಹಾಗೆ ಸುಮ್ಮನಾಗಿರುತ್ತೀರಿ . ಆದರೆ ನೀವು ಗಮನಿಸಬೇಕು . ನಿಮಗೆ ಇದು ಖಂಡಿತ ಒಳ್ಳೆಯ ಸಮಯ . ನಿಮ್ಮ ಭಾವನೆಗಳನ್ನು ಆಕೆಯನ್ನು ಹೊರಗಡೆ ಕರೆದುಕೊಂಡು ಹೋಗಿ ಆಕೆಗೆ ಇಷ್ಟವಾದ ವಸ್ತುಗಳನ್ನು ಕೊಡಿಸಿಯೇ ಹೇಳಬೇಕೆಂದೇನೂ ಇಲ್ಲ . ಒಂದು ಸಣ್ಣ ಕಾಗದ ದ ಮೇಲೆ ನಿಮ್ಮ ಮನಸ್ಸಿನ ಭಾವನೆಯನ್ನು ಅಕ್ಷರಗಳ ರೂಪದಲ್ಲಿ ಅಥವಾ ನೀವು ಚಿತ್ರ ಬರೆಯುವುದರಲ್ಲಿ ನೈಪುಣ್ಯತೆ ಹೊಂದಿದಲ್ಲಿ ಅದನ್ನು ಕಾರ್ಟೂನ್ ರೂಪದಲ್ಲಿ ಕೆಲವು ಪ್ರೀತಿ ಹುಟ್ಟಿಸುವಂತಹ ಹೃದಯದ ಚಿತ್ರಗಳನ್ನು ಬರೆದು ಆ ಚೀಟಿಯನ್ನು ಆಕೆಯ ಡ್ರೆಸಿಂಗ್ ಟೇಬಲ್ ಮೇಲೆ ಅಥವಾ ಬೆಡ್ ರೂಮ್ ನಲ್ಲಿ ಇಡಬಹುದು . ಆಕೆಗೆ ನೋಡಿದರೆ ಖಂಡಿತ ಅಚ್ಚರಿ ಮೂಡುತ್ತದೆ ಮತ್ತು ನಿಮ್ಮ ಮೇಲೆ ಇರುವ ಪ್ರೀತಿ ದುಪ್ಪಟ್ಟಾಗುತ್ತದೆ .

ಆಕೆಗೆ ಸಹಾಯ ಮಾಡಿ

ಸಾಮಾನ್ಯವಾಗಿ ಹೆಂಗಸರು ಮನೆಯಲ್ಲಿದ್ದರೆ ಬಹುತೇಕ ಸಮಯವನ್ನು ಅಡುಗೆ ಮನೆಯಲ್ಲಿ ಕಳೆಯುತ್ತಾರೆ . ವೀಕೆಂಡ್ ಗಳಲ್ಲಿ ನೀವು ಹೇಗೂ ಮನೆಯಲ್ಲಿರುತ್ತೀರಿ . ಆಗ ಆಕೆಗೆ ಅಡುಗೆ ಮನೆಯ ಕೆಲಸ ಕಾರ್ಯಗಳಲ್ಲಿ ಆಕೆ ಹೇಳದಿದ್ದರೂ ನೀವೇ ಹೋಗಿ ನಿಮ್ಮ ಕೈಲಾದ ಸಹಾಯ ಮಾಡಿ . ಆಕೆಗೆ ತರಕಾರಿ ಹಚ್ಚಿ ಕೊಡುವುದರಲ್ಲಿ ಅಥವಾ ಕಾಫಿ ಮಾಡುವುದರಲ್ಲಿ ಅಥವಾ ನಿಮಗೆ ಅಡುಗೆ ಮಾಡಲು ಬರುವುದಾದರೆ ನೀವೇ ನಿಮ್ಮ ಕೈಯಾರೆ ಅಡುಗೆ ಮಾಡಿ ಪ್ರೀತಿಯಿಂದ ಬಡಿಸಿ . ಆಕೆಯನ್ನು ನಗುನಗುತ್ತಾ ಸಂತೋಷದಿಂದ ಮಾತನಾಡಿಸಿ ಆಕೆಯನ್ನೂ ನಗೆಗಡಲಲ್ಲಿ ತೇಲಿಸಿ . ಇದರಿಂದ ಆಕೆ ನಿಮಗೆ ಆಕೆಯ ಮೇಲಿರುವ ಪ್ರೀತಿ ಮತ್ತು ಕಾಳಜಿಯನ್ನು ಅತ್ಯಂತ ಹತ್ತಿರದಿಂದ ಗಮನಿಸುತ್ತಾಳೆ . ಆ ಸವಿನೆನಪುಗಳು ಆಕೆಯ ಮನದಲ್ಲಿ ಜೀವನ ಪರ್ಯಂತ ಉಳಿಯುತ್ತವೆ ನಿಮ್ಮನ್ನು ಯಾವಾಗಲೂ ಹೆಚ್ಚಾಗಿ ಪ್ರೀತಿಸುತ್ತಾಳೆ .

ಆಕೆಯನ್ನು ಪ್ರೀತಿಯಿಂದ ಮುದ್ದಿಸಿ

ಒಂದು ವೇಳೆ ನಿಮ್ಮ ಸಂಗಾತಿ ಯಾವುದಾದರೂ ಕ್ಷಣವನ್ನು ಬೇಸರದಿಂದ ಕಳೆಯುತ್ತಿದ್ದರೆ , ಆಕೆಯ ಮನಸ್ಸಿಗೆ ನೋವಾಗಿದ್ದರೆ ಮತ್ತು ನೀವು ಅದನ್ನು ಗಮನಿಸಿದ್ದೇ ಆದರೆ , ತಕ್ಷಣ ಆಕೆಗೆ ಯಾವ ಕೆಲಸವನ್ನೂ ಮಾಡಲು ಬಿಡಬೇಡಿ . ಆಕೆಗೆ ವಿಶ್ರಾಂತಿ ಇಂದ ಇರಲು ಹೇಳಿ ಆಕೆಯ ಗಮನ ಬೇರೆಡೆ ಸೆಳೆಯುವಂತೆ ಮಾಡಿ . ಆಕೆಗೆ ಜೋಕ್ ಹೇಳಿ ಅಥವಾ ಆಕೆಗೆ ಇಷ್ಟವಾಗುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಮತ್ತು ಆಕೆಗೆ ಇಷ್ಟವಾಗುವ ಐಸ್ ಕ್ರೀಮ್ ಕೊಡಿಸಿ ಆಕೆಯ ಮನ ಬೇಸರದಿಂದ ದೂರಾಗುವಂತೆ ಮಾಡಿ . ಏಕೆಂದರೆ ಮದುವೆ ಆದ ಮೇಲೆ ಆಕೆಗೆ ಗಂಡ ಮನೆ ಮಕ್ಕಳೇ ಪ್ರಪಂಚ . ಆ ಪ್ರಪಂಚದಲ್ಲಿ ಸದಾ ನಲಿವಿದ್ದರೆ ಜೀವನ ಎಂಥ ಸುಖಮಯ ಅಲ್ಲವೇ?

Romantic Gestures that Your Partner Will Love

ಆಕೆಗಾಗಿ ಒಂದು ಸಾಂಗ್ ಡೆಡಿಕೇಟ್ ಮಾಡಿ

ಇದು ಖಂಡಿತ ನೀವು ನಿಮ್ಮ ಭಾವನೆಗಳನ್ನು ವ್ಯಕ್ತ ಪಡಿಸುವುದರಲ್ಲಿ ಬಹಳ ಸಹಾಯ ಮಾಡುತ್ತದೆ . ನಿಮ್ಮ ಭಾವನೆಗಳನ್ನು ನೀವು ಅಕ್ಷರ ರೂಪದಲ್ಲಿ ಬರೆಯುವುದಕ್ಕಿಂತ ಅಥವಾ ಬೇರೇನಾದರೂ ಮಾಡುವುದಕ್ಕಿಂತ ಇದು ಸುಲಭದ ಕೆಲಸ . ನೀವು ನಿಮ್ಮ ಸಂಗಾತಿಯ ಜೊತೆ ಇರುವ ಸಮಯಕ್ಕೆ ತಕ್ಕಂತೆ ಹೊಂದಿಕೆ ಆಗುವಂತಹ ಯಾವುದಾದರೂ ಒಂದು ರೋಮ್ಯಾಂಟಿಕ್ ಸಾಂಗ್ ಅನ್ನು ಆಕೆಯ ಮೊಬೈಲ್ ಗೆ ಕಳುಹಿಸಿ . ಇಲ್ಲವೇ ನಿಮ್ಮ ದನಿಯೇ ಚೆನ್ನಾಗಿದೆ ಎಂದರೆ ಆ ಹಾಡನ್ನು ಕೆಲವು ಸಾಲುಗಳು ಆಕೆಯ ಮುಂದೆ ಹಾಡಿ ಆಕೆ ಖುಷಿಯಾಗುವಂತೆ ಮಾಡಬಹುದು . ಇದೂ ಕೂಡ ಒಂದು ಮರೆಯಲಾರದ ಕ್ಷಣವಾಗಿ ಆಕೆ ನಿಮ್ಮ ಜೊತೆ ಕಳೆದ ರೀತಿಯನ್ನು ಆಗಾಗ ಮೆಲುಕು ಹಾಕುವಂತೆ ಮಾಡುತ್ತದೆ ಕೂಡ .

ಸೋಶಿಯಲ್ ಮೀಡಿಯಾ ದಲ್ಲೂ ನಿಮ್ಮ ಪ್ರೀತಿ ವ್ಯಕ್ತಪಡಿಸಿ

ಇತ್ತೀಚಿಗಂತೂ ಫೇಸ್ ಬುಕ್ ಟ್ವಿಟ್ಟರ್ ಬಹಳ ಸದ್ದು ಮಾಡುತ್ತಿದೆ . ಪ್ರತಿ ವಿಷಯಕ್ಕೂ ಜನ ಇವುಗಳ ಮೊರೆ ಹೋಗುತ್ತಿದ್ದಾರೆ . ಕೆಲವು ಸಂಬಂಧಗಳು ಫೇಸ್ ಬುಕ್ ನಿಂದ ಬೆಸೆದುಕೊಂಡ ಉದಾಹರಣೆಗಳು ಕೂಡ ನಮ್ಮ ಕಣ್ಣ ಮುಂದೆಯೇ ಇವೆ . ಜನ ತಮ್ಮ ಪೋಸ್ಟ್ ನ ಬಗ್ಗೆ ಏನು ಹೇಳಿದರು ಎಂಬುದರ ಬಗ್ಗೆಯೇ ಅನೇಕರು ತಲೆಕೆಡಿಸಿಕೊಂಡಿರುತ್ತಾರೆ ಮತ್ತು ಅದರಲ್ಲೇ ಮುಳುಗಿ ಹೋಗಿರುತ್ತಾರೆ ಕೂಡ . ಆದ್ದರಿಂದ ಪ್ರೀತಿಗೆ ಸೋಶಿಯಲ್ ಮೀಡಿಯಾಗಳು ಒಳ್ಳೆಯ ವೇದಿಕೆ ಆಗುತ್ತಿರುವ ಈ ಸಂಧರ್ಭದಲ್ಲಿ ನೀವೇಕೆ ನಿಮ್ಮ ಪ್ರೀತಿಯ ಭಾವನೆಯನ್ನು ಇವುಗಳಲ್ಲಿ ವ್ಯಕ್ತ ಪಡಿಸಬಾರದು? ನೀವು ಮತ್ತು ಆಕೆ ಜೊತೆಯಿರುವ ಒಂದು ಒಳ್ಳೆಯ ಫೋಟೋ ವನ್ನು ಒಂದು ರೋಮ್ಯಾಂಟಿಕ್ ಕ್ಯಾಪ್ಷನ್ ಕೊಟ್ಟು ಸೋಶಿಯಲ್ ಮೀಡಿಯಾ ದಲ್ಲಿ ಪೋಸ್ಟ್ ಮಾಡಿ . ಇದನ್ನು ನೋಡಿ ಆಕೆಯೂ ಖುಷಿಯಾಗುತ್ತಾಳೆ ಮತ್ತು ಅನೇಕ ಲೈಕ್ಸ್ ಜೊತೆಗೆ ಅನೇಕರಿಂದ ಒಳ್ಳೆಯ ಕಾಮೆಂಟ್ಸ್ ಕೂಡ ಹರಿದು ಬರುತ್ತವೆ . ಇದರಿಂದಲೂ ನೀವು ಆಕೆಯ ಹೃದಯದಲ್ಲಿ ಗಟ್ಟಿಯಾಗಿ ನೆಲಸಬಹುದು.

Romantic Gestures that Your Partner Will Love

ಯಾವುದೇ ಒಂದು ಸಂಬಂಧ ಪ್ರೀತಿಯಲ್ಲಿ ಯಾವುದೇ ಸಂದರ್ಭಕ್ಕೂ ಅಲುಗಾಡದೆ ಗಟ್ಟಿ ಎನಿಸಿ ಕೊಳ್ಳಬೇಕಾದರೆ ನಿಮ್ಮ ಮತ್ತು ನಿಮ್ಮ ಸಂಗಾತಿಯ ಪ್ರಯತ್ನ ಬಹಳ ಮುಖ್ಯ. ಇಬ್ಬರ ಕಡೆಯಿಂದಲೂ ಪ್ರೀತಿಯ ಅವಶ್ಯಕತೆ ಇರುತ್ತದೆ . ಹಾಗಾಗಿ ನಿಮ್ಮ ಸಂಗಾತಿ ನಿಮ್ಮ ಮೇಲೆ ಅತೀವ ಪ್ರೀತಿ ತೋರಿಸುತ್ತಿದ್ದಾಳೆ ಎಂದರೆ ನೀವೂ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಆಕೆಯ ಮೇಲೆ ಅಷ್ಟೇ ಪ್ರೀತಿ ತೋರಿಸಿ ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಿ . ಏಕೆಂದರೆ ಸಂಬಂಧ ಎನ್ನುವುದು ಇಂದು ಶುರುವಾಗಿ ನಾಳೆ ಕೊನೆಯಾಗುವುದಲ್ಲ . ಬದಲಿಗೆ ಅದಕ್ಕೆ ಕೊನೆಯೇ ಇರುವುದಿಲ್ಲ.

ಈ ಸಂಪೂರ್ಣ ಲೇಖನದ ಒಂದು ಕಿರು ನೋಟ:

*ನಿಮ್ಮ ಪ್ರತಿದಿನದ ನಡವಳಿಕೆ ನಿಮ್ಮ ಸಂಗಾತಿಯ ಪ್ರೀತಿಯನ್ನು ಗಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ .

*ನಿಮ್ಮ ಸಂಗಾತಿಗೆ ಪ್ರೀತಿಯನ್ನು ಯಾವೆಲ್ಲ ಮಾರ್ಗಗಳಿಂದ ತೋರಿಸಬಹುದು ಎಂಬುದರ ಬಗ್ಗೆ ಮೊದಲು ಗಮನ ಹರಿಸಿ .

*ಆದಷ್ಟು ಸರಳತೆಯಿಂದ ನಿಮ್ಮ ಸಂಗಾತಿಯ ಮನ ಗೆಲ್ಲಲು ಪ್ರಯತ್ನಿಸಿ ಏಕೆಂದರೆ ಅದು ಶಾಶ್ವತ .

English summary

Romantic Gestures that Your Partner Will Love

Small gestures can do great things. For every successful relationship, you need to invest some extra efforts to keep your relationship intact. Expensive gifts and big surprises are not the ultimate solutions to a long-lasting relationship. Your day to day behaviour, your day to day gestures can contribute to a lot. Small gestures are enough to make your feel partner special. If you are confused about what to do then here are a few tips that can help you through.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more