For Quick Alerts
ALLOW NOTIFICATIONS  
For Daily Alerts

ಸಂಗಾತಿಯೊಂದಿಗೆ ನಿಮ್ಮ ಬಾಂಧವ್ಯ ಎಷ್ಟು ಗಟ್ಟಿ.. ಈ 7 ಪ್ರಶ್ನೆಗಳಿಂದ ತಿಳಿಯಬಹುದು

|

ಪ್ರೀತಿ, ಪ್ರೇಮದ ಒಂದು ಸಂಬಂಧ ದೀರ್ಘಕಾಲ ಬಾಳಬೇಕಾದರೆ ಸಂಗಾತಿಗಳಿಬ್ಬರ ಮಧ್ಯೆ ಉತ್ತಮ ಹೊಂದಾಣಿಕೆ, ವಿಶ್ವಾಸ, ಇಬ್ಬರ ಇಷ್ಟಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಹೀಗಾಗಿ ಸಂಬಂಧವು ಬಹುಕಾಲ ಉಳಿಯಲು ಕಾರಣವಾಗುವ ಅಂಶಗಳ ಬಗ್ಗೆ ವಿವರವಾಗಿ ತಿಳಿಯುವುದು ಅಗತ್ಯ. ಯಾವೆಲ್ಲ ವಿಷಯಗಳ ಮೇಲೆ ಪ್ರೀತಿಯ ಸಂಬಂಧ ಬಹುಕಾಲ ಬಾಳುತ್ತದೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ....

ಪರಸ್ಪರಿಗೆ ಹೊಂದಿಕೆಯಾಗುವ ಅಂಶಗಳ ಪಾತ್ರ

ಪರಸ್ಪರಿಗೆ ಹೊಂದಿಕೆಯಾಗುವ ಅಂಶಗಳ ಪಾತ್ರ

ನಿಮ್ಮ ಪ್ರೀತಿಯ ಸಂಬಂಧವನ್ನು ಬಹುಕಾಲದವರೆಗೆ ಮುಂದುವರಿಸಲು ಅನೇಕ ವಿಷಯಗಳನ್ನು ಪಾಲಿಸಬೇಕಾಗುತ್ತದೆ. ಅದರಲ್ಲಿ ಇಬ್ಬರ ಮಧ್ಯೆ ಯಾವೆಲ್ಲ ವಿಷಯಗಳಲ್ಲಿ ಸಾಮ್ಯತೆ ಇದೆ ಎಂಬುದು ಪ್ರಮುಖವಾಗಿದೆ. ಆದರೆ ಈ ಸಾಮ್ಯತೆ ಎಂಬುದನ್ನು ನಿರ್ಧರಿಸುವುದು ಮಾತ್ರ ತೀರಾ ಕಷ್ಟಕರವಾಗಿದೆ. ದುಡ್ಡು ಅಥವಾ

ಇನ್ನಿತರ ವಸ್ತುಗಳನ್ನು ಎಣಿಸಿದಂತೆ ಈ ವಿಷಯವನ್ನು ಸುಲಭವಾಗಿ ಅಳೆಯಲಾಗದು. ಸಾಮ್ಯತೆ ಅಥವಾ ಹೊಂದಾಣಿಕೆ ಎಂಬುದು ಸಂಪೂರ್ಣ ಭಾವನಾತ್ಮಕ ವಿಷಯವಾಗಿದೆ. ಆಪ್ತ ಸಲಹಾ ತಜ್ಞರ ಪ್ರಕಾರ, ಸೂಕ್ತ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕಂಡುಕೊಳ್ಳುವ ಮೂಲಕ ನೀವು ನಿಮ್ಮ ಪ್ರೀತಿಯ ಜೀವನದ ಬಾಂಧವ್ಯ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ನಿರ್ಧರಿಸಲು ಸಾಧ್ಯ. ಹಾಗಾಗಿ ಈ 7 ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮೂಲಕ ನಿಮ್ಮ ಲವ್ ಲೈಫ್ ಹೇಗಿದೆ ಎಂದು ಕಂಡುಕೊಳ್ಳಿ.

ನಿಮ್ಮ ಸಮಯವನ್ನು ಹೇಗೆ ಕಳೆಯಲು ಬಯಸುವಿರಿ?

ನಿಮ್ಮ ಸಮಯವನ್ನು ಹೇಗೆ ಕಳೆಯಲು ಬಯಸುವಿರಿ?

ನಿಮಗೆ ಸಿಗುವ ವಿಶ್ರಾಂತಿಯ ಸಮಯಕ್ಕೂ ಸಂಗಾತಿಯ ಹೊಂದಾಣಿಕೆಗೂ ಏನು ಸಂಬಂಧ ಎಂದು ನೀವು ಅಂದುಕೊಳ್ಳುತ್ತಿರಬಹುದು. ಅಪ್ರಸ್ತುತವೆನ್ನಿಸುವ ಈ

ಒಂದು ವಿಷಯವೇ ಸಂಬಂಧದ ಬಾಳಿಕೆಯಲ್ಲಿ ಮುಖ್ಯವಾಗಿದೆ ಎಂದರೆ ನೀವು ನಂಬಲೇಬೇಕು. ಉದಾಹರಣೆಗೆ ನೋಡಿದರೆ- ನಿಮಗೆ ಸಿಗುವ ರಜೆಯ ಸಮಯದಲ್ಲಿ ನೀವು ವಾಕ್ ಹೋಗಬೇಕು ಎಂದುಕೊಳ್ಳುವಿರಿ. ಆದರೆ ನಿಮ್ಮ ಸಂಗಾತಿಯು ಆ ಸಮಯದಲ್ಲಿ ಮನೆಯ ಒಳಗೆಯೇ ಇದ್ದು ಟಿವಿ ನೋಡಬೇಕು, ಪುಸ್ತಕ ಓದಬೇಕು ಎಂದು ಬಯಸಿದರೆ ಏನು ಮಾಡುವಿರಿ? ಇಂಥ ಸಂದರ್ಭದಲ್ಲಿ ನಿಮ್ಮ ಆಸೆಯನ್ನು ಹತ್ತಿಕ್ಕಿ ಸಂಗಾತಿಯ ಬಯಕೆಗೆ ಸ್ಪಂದಿಸಲು ಬಯಸುವಿರಾ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ನಿಮ್ಮ ದೀರ್ಘಕಾಲದ ಸಂಬಂಧ ಉಳಿಸಿಕೊಳ್ಳಲು ಪ್ರಮುಖ ಅಂಶವಾಗಿದೆ.

ಇತ್ತೀಚೆಗೆ ನೀವು ಓದಿರುವ ಅತಿ ಕುತೂಹಲಕರ ಪುಸ್ತಕ ಯಾವುದು?

ಇತ್ತೀಚೆಗೆ ನೀವು ಓದಿರುವ ಅತಿ ಕುತೂಹಲಕರ ಪುಸ್ತಕ ಯಾವುದು?

ಒಬ್ಬ ವ್ಯಕ್ತಿಯ ವಿಚಾರಧಾರೆ ಹಾಗೂ ಜಾಣ್ಮೆಯ ಬಗ್ಗೆ ತಿಳಿಯ ಬೇಕಾದರೆ ಆತ ಏನು ಓದುತ್ತಿದ್ದಾನೆ ಎಂಬುದು ಮುಖ್ಯವಾಗುತ್ತದೆ. ತಜ್ಞರ ಪ್ರಕಾರ ಇಬ್ಬರು ಸಂಗಾತಿಗಳ ಮಧ್ಯೆ ಚರ್ಚೆ ಎಂಬುದು ಬಹಳ ಮುಖ್ಯ ವಿಷಯವಾಗಿದೆ. ಚರ್ಚೆ ಇಲ್ಲದಿದ್ದರೆ ಸಂಬಂಧವೇ ಹಾಳಾಗಬಹುದು. ಸಂಗಾತಿಯು ಯಾವ ವಿಷಯದ ಬಗ್ಗೆ ಓದಲು ಇಷ್ಟ ಪಡುತ್ತಾರೆ ಎಂಬುದನ್ನು ತಿಳಿದರೆ ಸಂಬಂಧ ಗಟ್ಟಿಗೊಳಿಸಲು ಎಷ್ಟೊ ಸಹಾಯವಾಗುತ್ತದೆ. ಅಂದರೆ ಬುದ್ಧಿಮತ್ತೆಯ ಸಾಮ್ಯತೆಯು ಸಹ ಇಬ್ಬರ ಮಧ್ಯದ ಗಟ್ಟಿ ಸಂಬಂಧಕ್ಕೆ ಕಾರಣವಾಗುತ್ತದೆ.

ನಿಮಗೆ ದೇವರಲ್ಲಿ ನಂಬಿಕೆ ಇದೆಯಾ?

ನಿಮಗೆ ದೇವರಲ್ಲಿ ನಂಬಿಕೆ ಇದೆಯಾ?

ಒಬ್ಬ ಮನುಷ್ಯನ ವೈಯಕ್ತಿಕ ನಂಬಿಕೆಯ ವಿಷಯಗಳು ಸಹ ಸಂಬಂಧದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ದೇವರ ಬಗ್ಗೆ ನಂಬಿಕೆ ಅಥವಾ ಅಪನಂಬಿಕೆಗಳು ಸಹ ಸಂಬಂಧಗಳ ವಿಷಯದಲ್ಲಿ ಮುಂಚೂಣಿಗೆ ಬರುತ್ತವೆ. ಧರ್ಮ, ಜಾತಿಗಳು ಪ್ರೀತಿಯ ಸಂಬಂಧ ಗಳಲ್ಲಿ ಅಡ್ಡ ಬರಲಾರವು. ಆದರೂ ಇಬ್ಬರ ನಂಬಿಕೆಗಳು ಮಾತ್ರ ಮುಖ್ಯವಾಗುತ್ತವೆ.

ನೀವೊಂದು ಜಾಕ್ ಪಾಟ್ ಗೆದ್ದರೆ ಏನು ಮಾಡುವಿರಿ?

ನೀವೊಂದು ಜಾಕ್ ಪಾಟ್ ಗೆದ್ದರೆ ಏನು ಮಾಡುವಿರಿ?

ಪ್ರೀತಿ ಎಂಬುದು ಕುರುಡು.. ಇದು ಸಾರ್ವತ್ರಿಕ ಸತ್ಯ. ಪ್ರೀತಿಯ ಬಲೆಯಲ್ಲಿ ಬಿದ್ದಾಗ ವಾಸ್ತವ ಕಣ್ಣಿಗೆ ಕಾಣುವುದೇ ಇಲ್ಲ. ಆದರೆ ಪ್ರೀತಿಯಲ್ಲಿರುವಾಗ ನಿಮಗೆ ಒಂದು ಕೋಟಿ ರೂಪಾಯಿ ಜಾಕ್ ಪಾಟ್ ಹೊಡೆದರೆ ಏನು ಮಾಡುವಿರಿ? ಅದನ್ನು ಸಂಗಾತಿಗೆ ಕೊಟ್ಟರೆ ಆತ ಅಥವಾ ಅವಳು ಏನು ಮಾಡಬಹುದು? ಈ ವಿಷಯದ ಬಗ್ಗೆ ವಿಚಾರ ಮಾಡಿ. ದುಡ್ಡು ಸರ್‍ವಸ್ವ ಅಲ್ಲವಾದರೂ ಎಲ್ಲದಕ್ಕೂ ದುಡ್ಡು ಬೇಕೆ ಬೇಕು. ಹೊಟ್ಟೆ ತುಂಬಿಸಲು ಹಣ ಬೇಕೇ ಬೇಕು.

ನಿಮ್ಮ ದೃಷ್ಟಿಯಲ್ಲಿ ’ಮೋಸ’ ಎಂದರೇನು?

ನಿಮ್ಮ ದೃಷ್ಟಿಯಲ್ಲಿ ’ಮೋಸ’ ಎಂದರೇನು?

ಮೋಸ ಅಥವಾ ವಂಚನೆಯ ವಿಷಯಗಳ ಬಗ್ಗೆ ಪ್ರತಿಯೊಬ್ಬರ ಅಭಿಪ್ರಾಯಗಳು ಬೇರೆ ಬೇರೆಯಾಗಿರುತ್ತವೆ. ಸಂಗಾತಿಯು ಮೂರನೇ ವ್ಯಕ್ತಿಯನ್ನು ಚುಂಬಿಸುವುದು ಇನ್ನೊಬ್ಬ ಸಂಗಾತಿಗೆ ಮಹಾ ಪರಾಧವಾಗಿ ಕಾಣಬಹುದು. ಇನ್ನೊಂದು ರೀತಿಯ ವ್ಯಕ್ತಿ ಅದನ್ನು ತುಂಬಾ ಹಗುರವಾಗಿಯೂ ಪರಿಗಣಿಸಬಹುದು. ಅಂದರೆ ಮೋಸ ಅಥವಾ ವಂಚನೆಯ ವಿಷಯದಲ್ಲಿ ನಿಮ್ಮ ಸಂಗಾತಿ ಯೊಂದಿಗೆ ನಿಮ್ಮ ವಿಚಾರಗಳು ಸಾಮ್ಯತೆ ಹೊಂದಿರ ದಿದ್ದಲ್ಲಿ ನೀವು ಆ ಸಂಗಾತಿಯೊಂದಿಗೆ ಜೀವನ ಪೂರ್ತಿ ಕಳೆಯಲು ಇಷ್ಟಪಡುತ್ತೀರಾ ಎಂಬುದನ್ನು ವಿಚಾರ ಮಾಡಿ.

ಯಾವೆಲ್ಲ ವಿಷಯಗಳಿಂದ ನೀವು ಲೈಂಗಿಕವಾಗಿ ಉದ್ರೇಕಗೊಳ್ಳುವಿರಿ?

ಯಾವೆಲ್ಲ ವಿಷಯಗಳಿಂದ ನೀವು ಲೈಂಗಿಕವಾಗಿ ಉದ್ರೇಕಗೊಳ್ಳುವಿರಿ?

ಲೈಂಗಿಕತೆಯು ಸಂಗಾತಿಗಳಿಬ್ಬರ ಸಂಬಂಧದ ಮೂಲ ಅಡಿಪಾಯ ವಾಗಿದೆ. ಲೈಂಗಿಕವಾಗಿ ಸಂಗಾತಿಯ ಭಾವನೆಗಳೊಂದಿಗೆ ನಿಮ್ಮ ಭಾವನೆಗಳು ಸರಿ ಹೊಂದುತ್ತವೆಯಾ ಎಂಬುದು ಮುಖ್ಯ ಸಂಗತಿಯಾಗಿದೆ. ಆತನ ಲೈಂಗಿಕ ಅಭ್ಯಾಸಗಳಿಂದ ನಿಮಗೆ ಕಿರಿಕಿರಿಯಾಗುತ್ತದೆಯಾ ಅಥವಾ ಸುಖ ಸಿಗುತ್ತದೆಯಾ ಎಂಬ ಬಗ್ಗೆ ತಿಳಿದುಕೊಳ್ಳಿ.

ಕೆಲಸ ಅಥವಾ ಕುಟುಂಬ.. ಯಾವುದು ಮುಖ್ಯ?

ಕೆಲಸ ಅಥವಾ ಕುಟುಂಬ.. ಯಾವುದು ಮುಖ್ಯ?

ಇದೊಂದು ಕ್ಲಿಷ್ಟಕರವಾದ ಪ್ರಶ್ನೆಯಾಗಿದೆ. ಆದರೂ ಇದಕ್ಕೆ ಸಿಗುವ ಉತ್ತರದ ಆಧಾರದಲ್ಲಿ ಕ್ಲಿಷ್ಟಕರ ಸಮಯದಲ್ಲಿ ನಿಮ್ಮ ಸಂಗಾತಿಯು ಹೇಗೆ ವರ್ತಿಸಬಹುದು ಎಂಬುದನ್ನು ಅರಿತುಕೊಳ್ಳಬಹುದು. ನನಗೆ ಕೆಲಸಕ್ಕಿಂತ ಕುಟುಂಬದ ಹಿತವೇ ಮುಖ್ಯ ಎಂದು ಸಂಗಾತಿ ಹೇಳಿದರೆ ಅದೊಂದು ರೀತಿಯ ಬಾಲಿಶ ವರ್ತನೆಯನ್ನು ತೋರಿಸುತ್ತದೆ. ಅದೇ ಕಾಲಕ್ಕೆ ನನಗೆ ಕೆಲಸವೇ ಮುಖ್ಯ ಎಂದು ಹೇಳಿದಲ್ಲಿ ಆತನಿಗೆ ಕೆಲಸ ಹಾಗೂ ಕುಟುಂಬದ ಮಧ್ಯೆ ಸಮತೋಲನ ಸಾಧಿಸಲಾಗುತ್ತಿಲ್ಲ ಎನ್ನಬೇಕಾಗುತ್ತದೆ. ಹೀಗಾಗಿ ಇಂಥದೊಂದು ಸಂದರ್ಭದಲ್ಲಿ ಸಂಗಾತಿಯು ಹೇಗೆ ವರ್ತಿಸಬಹುದು ಎಂಬುದನ್ನು ಅರ್ಥ ಮಾಡಿಕೊಂಡರೆ ಜೀವನ ನೆಮ್ಮದಿಯಿಂದ ಸಾಗುತ್ತದೆ.

English summary

questions to know your compatibility with your partner

Among the many factors that play a key role in making your love story a happy one, it is perhaps a little difficult to evaluate compatibility. Because this is one factor that, unlike money, you cannot count (yes, money plays a big role too) or feel it like physical attraction. According to relationship experts, asking the right questions can assess compatibility thereby helping a couple to determine the strength of their love life.
X
Desktop Bottom Promotion