For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ಪ್ರೀತಿ ಡ್ರಗ್ಸ್‌ನಷ್ಟೇ ಪವರ್‌‌ಫುಲ್ ಅಂತೆ!

|

ಯಾವುದೇ ಪ್ರಣಯ ಒಂದು ಸಿಹಿಯಾದ ಭಾವನೆಯಿಂದ ಪ್ರಾರಂಭಗೊಳ್ಳುತ್ತದೆ. ಸಂಗಾತಿಯ ಬಗ್ಗೆ ಮನಸ್ಸಿನಲ್ಲಿ ಮೂಡುವ ಯಾವುದೇ ಆಲೋಚನೆ ವ್ಯಕ್ತಿಯಲ್ಲಿ ನಸುನಗೆ ಮೂಡಿಸುತ್ತದೆ ಹಾಗೂ ಹೃದಯ ಸಂಗಾತಿಯನ್ನು ನೋಡಲು ಹಾತೊರೆಯುತ್ತದೆ.

ಕುತೂಹಲಕಾರಿ ಎಂದರೆ, ಈ ಬಗ್ಗೆ ನಡೆಸಿದ ಒಂದು ಅಧ್ಯಯನ ಪ್ರೇಮದಲ್ಲಿರುವ ವ್ಯಕ್ತಿಗಳ ಮೆದುಳಿನ ಒಂದು ವಿಶಿಷ್ಟ ಭಾಗದಲ್ಲಿ ಕೊಕೇಯ್ನ್ ಹಾಗೂ ಓಪಿಯಂ ನಂತಹ ಅತ್ಯಂತ ಪ್ರಬಲ ಮಾದಲ ವಸ್ತುಗಳು ಮಾಡುವಂತಹ ಪ್ರಭಾವಕ್ಕೆ ಒಳಗಾಗಿರುತ್ತದೆ ಎಂದು ತಿಳಿಸಿದೆ. ಗಾಬರಿಯಾಯಿತೇ? ಈ ಅಧ್ಯಯನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ ಬನ್ನಿ,

ಈ ಅಧ್ಯಯನ ನಡೆಸಿದ್ದು ಹೇಗೆ?

ಈ ಅಧ್ಯಯನ ನಡೆಸಿದ್ದು ಹೇಗೆ?

ಅಂದ ಹಾಗೆ, ಈ ಅಧ್ಯಯನ ನಡೆದದ್ದು ಭಾರತದಲ್ಲಲ್ಲ, ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ. ಇಲ್ಲಿನ ಎಂಟು ವಿದ್ಯಾರ್ಥಿನಿಯರು ಮತ್ತು ಏಳು ವಿದ್ಯಾರ್ಥಿಗಳು, ಒಟ್ಟು ಹದಿನೈದು ವ್ಯಕ್ತಿಗಳನ್ನು ಆರಿಸಿ ಇವರ ಹಸ್ತಕ್ಕೆ ಕೊಂಚವೇ ನೋವು ನೀಡುವ ಹೊತ್ತಿನಲ್ಲಿಯೇ ಇವರ ಸಂಗಾತಿಯ ಚಿತ್ರವನ್ನು ತೋರಿಸಲಾಯ್ತು.

ಅಧ್ಯಯನದ ವಿವರ

ಅಧ್ಯಯನದ ವಿವರ

ಈ ಹಂತದಲ್ಲಿ ಇವರ ಮೆದುಳಿನಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು functional magnetic resonance imaging machine ಎಂಬ ವಿಶೇಷವಾದ ಮೆದುಳಿನ ತರಂಗಗಳನ್ನು ಅಳೆಯುವ ಉಪಕರಣದಿಂದ ಅತಿಸೂಕ್ಷ್ಮವಾಗಿ ದಾಖಲಿಸಿಕೊಳ್ಳಲಾಯ್ತು. ಅಲ್ಲದೇ ಅಧ್ಯಯನದ ಕಡೆಯಲ್ಲಿ ನಿಮಗೆ ಎದುರಾದ ನೋವು ಎಷ್ಟು ಮಟ್ಟಿನದು ಎಂಬುದನ್ನು ತಿಳಿಸುವಂತೆ ಕೋರಲಾಯ್ತು.

ಕಂಡು ಬಂದ ವಿವರಗಳು

ಕಂಡು ಬಂದ ವಿವರಗಳು

ಈ ಉಪಕರಣ ಒದಗಿಸಿದ ಫಲಿತಾಂಶಗಳನ್ನು ನೋಡಿದಾಗ ಸಂಶೋಧಕರಿಗೆ ಆಘಾತ ಕಾದಿತ್ತು. ಏಕೆಂದರೆ ಈ ವಿವರಗಳು ನೋವು ನಿವಾರಕ ಗುಳಿಗೆಗಳನ್ನು ಸೇವಿಸಿದ ಬಳಿಕ ಎದುರಾಗುವ ಪರಿಣಾಮಗಳನ್ನೇ ಹೋಲುತ್ತಿದ್ದವು. ಅಷ್ಟೇ ಅಲ್ಲ, ಒಂದು ವೇಳೆ ವ್ಯಕ್ತಿ ಕೋಕೇಯ್ನ್ ಅಥವಾ ಮಾರ್ಫಿನ್ ನಂತಹ ಮಾದಕ ವಸ್ತುಗಳನ್ನು ಸೇವಿಸಿದಾಗ ಆತನ ಮೆದುಳಿನ ಯಾವ ಭಾಗದಲ್ಲಿ ಅತಿ ಹೆಚ್ಚಾದ ಪ್ರಭಾವ ಕಂಡುಬರುತ್ತದೆಯೋ ಅದೇ ಭಾಗದಲ್ಲಿ ಈ ವ್ಯಕ್ತಿಗಳ ಮೆದುಳಿನಲ್ಲಿಯೂ ಇದೇ ರೀತಿಯ ಪ್ರಭಾವ ಕಂಡುಬಂದಿತ್ತು.

ಅಂಕಿ ಅಂಶಗಳು

ಅಂಕಿ ಅಂಶಗಳು

ವಾಸ್ತವವಾಗಿ ನೋವು ಎಂದರೆ ನಮ್ಮ ಮೆದುಳು ಗ್ರಹಿಸುವ ಸೂಚನೆಯೇ ಆಗಿದೆ. ಯಾವಾಗ ವ್ಯಕ್ತಿಗೆ ತನ್ನ ಪ್ರೇಮಿಯ ಚಿತ್ರ ಕಂಡುಬಂದಿತ್ತೋ ಆಗ ಆತನ ಮೆದುಳು ಆ ಸಮಯದಲ್ಲಿ ಎದುರಾಗಿದ್ದ ಪ್ರಬಲ ನೋವನ್ನು ಸುಮಾರು ಹನ್ನೆರಡು ಶೇಖಡಾದಷ್ಟು ಹಾಗೂ ಸಾಮಾನ್ಯ ನೋವನ್ನು ಸುಮಾರು ನಲವತ್ತೈದು ಶೇಖಡಾದಷ್ಟು ಕಡಿಮೆಯಾಗಿಸಿದ್ದುದು ಕಂಡುಬಂದಿತ್ತು. ವ್ಹಾ! ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಪ್ರೇಮಿಯ ಬದಲಾಗಿ ಆಕರ್ಷಕರಾಗಿರುವ ಬೇರೊಬ್ಬ ಸ್ನೇಹಿತ/ತೆಯನ್ನು ತೋರಿಸಿದಾಗಲೂ ಪ್ರೇಮಿಯಷ್ಟಲ್ಲದಿದ್ದರೂ ಸರಿ, ಕೊಂಚ ನೋವು ನಿವಾರಕ ಗುಣ ಇಲ್ಲೂ ಕಂಡುಬಂದಿತ್ತು.

English summary

Love's effect on the brain as powerfuls Drugs says study

Interesting, a study suggests that this euphoric, romantic feeling of being in a relationship affects the same part of the brain that drugs like cocaine and opium do. Shocked? Read on to know more about this research.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more