For Quick Alerts
ALLOW NOTIFICATIONS  
For Daily Alerts

ಸೆಕ್ಸ್‌ಗೆ ಮುಂದಾಗುವ ಮುನ್ನ ಇರಲಿ ಜಾಗೃತಿ ; ಮಗಳಿಗೆ ತಾಯಿಯ ಭಾವುಕ ಪತ್ರ

|

ಸೆಕ್ಸ್ ಎಂಬುದು ಜಗತ್ತಿನ ಎಲ್ಲ ಜೀವಿಗಳ ಸಹಜ ಕ್ರಿಯೆಯಾಗಿದೆ. ಹಸಿವು, ನಿದ್ದೆ, ನೀರಡಿಕೆಗಳ ಹಾಗೆ ಇದೂ ಸಹ ಒಂದು ಅಗತ್ಯವಾಗಿದೆ. ಆದರೆ ಜಗತ್ತಿನಲ್ಲಿ ಅತಿ ಬುದ್ಧಿವಂತ ಜೀವಿ ಮನುಷ್ಯ ಸೆಕ್ಸ್‌ಗೆ ತೊಡಗುವ ಮುನ್ನ ವಿವೇಚನೆಯಿಂದ ವರ್ತಿಸಬೇಕಾಗುತ್ತದೆ. ಅದರಲ್ಲೂ ಹದಿಹರೆಯದ ಹೆಣ್ಣು ಮಕ್ಕಳು ಪ್ರಥಮ ಬಾರಿಗೆ ಮಿಲನ ಕ್ರಿಯೆಗೆ ಮುಂದಾಗುವ ಮುನ್ನ ಕೆಲ ಜಾಗೃತಿ ಕ್ರಮಗಳನ್ನು ವಹಿಸ ಬೇಕಾಗುತ್ತದೆ.

ಹದಿಹರೆಯದ ಮಗಳಿರುವ ಒಬ್ಬ ತಾಯಿ ತನ್ನ ಮಗಳು ಪ್ರಥಮ ಬಾರಿ ಮಿಲನ ಸುಖಕ್ಕೆ ಮುಂದಾಗುವ ಮುನ್ನ ಆಕೆಗೆ ಸಾಕಷ್ಟು ಸಲಹೆಗಳನ್ನು ನೀಡಬಯಸುತ್ತಾಳೆ. ಹೀಗೆಯೇ ಓರ್ವ ತಾಯಿಯು ತನ್ನ ಮಗಳಿಗೆ ಬರೆದ ಭಾವುಕ ಪತ್ರವೊಂದನ್ನು ನಿಮ್ಮೊಂದಿಗೆ ಯಥಾವತ್ತಾಗಿ ಇಲ್ಲಿ ಹಂಚಿಕೊಳ್ಳಲಾಗಿದೆ. ಇದು ಎಲ್ಲ ಹರೆಯದ ಮನಸ್ಸುಗಳಿಗೆ ಸಮರ್ಪಿತ....

ನನ್ನ ಮಗಳಿಗೊಂದು ಪತ್ರ

ನನ್ನ ಮಗಳಿಗೊಂದು ಪತ್ರ

ಇಂದಿಗೂ ಭಾರತೀಯ ಸಮಾಜದಲ್ಲಿ ಸೆಕ್ಸ್ ಎಂಬುದು ಮಡಿವಂತಿಕೆಯ ಹಾಗೂ ಬಹಿರಂಗವಾಗಿ ಮಾತನಾಡಬಾರದ ಸಂಗತಿಯಾಗಿದೆ. ಸಾಮಾನ್ಯವಾಗಿ ಪಾಲಕರು ಮಕ್ಕಳೆದುರು ಸೆಕ್ಸ್ ಬಗ್ಗೆ ಮಾತನಾಡುವುದಿಲ್ಲ. ಅದೇನಿದ್ದರೂ ನಾಲ್ಕು ಗೋಡೆಗಳ ಮಧ್ಯದ ವಿಷಯವಾಗಿದೆ. ನನ್ನ ತಂದೆ, ತಾಯಿಗಳು ನಾನು ಚಿಕ್ಕಂದಿ ನಿರುವಾಗಿನಿಂದಲೂ ನನ್ನೆದುರಿಗೆ ಸೆಕ್ಸ್ ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ. ಚಿಕ್ಕಂದಿನಿಂದಲೂ ಸೆಕ್ಸ್ ಬಗ್ಗೆ ನನ್ನಲ್ಲಿ ಒಂದು ತಣಿಯಲಾರದ ಕುತೂಹಲ ಇದ್ದೇ ಇತ್ತು. ಆದರೆ ನಾನು ಮಾತ್ರ ನನ್ನ ಮಗಳಿಗೆ ಓರ್ವ ಸಾಂಪ್ರದಾಯಿಕ ತಾಯಿಯಾಗದೆ ಸೆಕ್ಸ್ ವಿಷಯ ಸೇರಿಸಿ ನನಗೆ ತಿಳಿದ ಎಲ್ಲ ವಿಷಯಗಳನ್ನು ಸೂಕ್ತ ಸಮಯದಲ್ಲಿ ಹಂಚಿಕೊಳ್ಳುವೆನೆಂದು ನಿನಗೆ ಜನ್ಮ ನೀಡಿದಾಗಲೇ ಅಂದುಕೊಂಡಿದ್ದೆ. ಜಗತ್ತಿನಲ್ಲಿ ಎಲ್ಲರೂ ಮಾಡುವುದನ್ನೇ ನೀನೂ ಒಂದು ದಿನ ಮಾಡುವೆ ಎಂಬುದು ನನಗೆ ಗೊತ್ತು. ಅದರಲ್ಲಿ ಯಾವುದೇ ತಪ್ಪಿಲ್ಲ ಕೂಡ. ನೀನು ಹದಿಹರೆಯಕ್ಕೆ ಕಾಲಿಡುತ್ತಿರುವ ಈ ಮಧುರ ಘಳಿಗೆಯಲ್ಲಿ ಸೆಕ್ಸ್ ಬಗ್ಗೆ ನಿನಗೆ ಏಳು ಪ್ರಮುಖ ವಿಷಯಗಳನ್ನು ತಿಳಿಸಬಯಸುತ್ತೇನೆ.

ನನ್ನ ಮಗಳಿಗೊಂದು ಪತ್ರ

ನನ್ನ ಮಗಳಿಗೊಂದು ಪತ್ರ

ಸೆಕ್ಸ್ ಎಂಬುದು ಕೇವಲ ದೈಹಿಕ ಅವಶ್ಯಕತೆಯಲ್ಲ. ವಯಸ್ಸು ಹಾಗೂ ಅನುಭವದ ವಿಸ್ತಾರವಾದಂತೆ ಇದು ನಿನಗೂ ಅರ್ಥವಾಗುತ್ತದೆ. ಕತೆ ಕಾದಂಬರಿಗಳಲ್ಲಿ, ಸಿನಿಮಾಗಳಲ್ಲಿ ಸೆಕ್ಸ್ ಅನ್ನು ಕ್ಷಣಿಕ ಸುಖದ ಕ್ರಿಯೆಯಾಗಿ ಚಿತ್ರಿಸುವುದನ್ನು ನೀನು ನೋಡಿರಬಹುದು. ಅದನ್ನು ಕೇವಲ ಒಂದು ದೈಹಿಕ ವಾಂಛೆಯಾಗಿ ಬಿಂಬಿಸಿರುತ್ತಾರೆ. ಆದರೆ ಇದು ನಿಜವಲ್ಲ ಎಂಬುದನ್ನು ಹೇಳಬಯಸುವೆ. ನೀನು ಆತ್ಮೀಯವಾಗಿ ನಿನ್ನ ಭಾವನೆಗಳನ್ನು ಹಂಚಿಕೊಳ್ಳ ಬಹುದಾದ ವ್ಯಕ್ತಿಯೊಂದಿಗೆ ಮಾತ್ರ ದೀರ್ಘ ಕಾಲದವರೆಗೆ ಸೆಕ್ಸ್ ಸುಖ ಅನುಭವಿಸಲು ಸಾಧ್ಯ. ನೀನು ಪ್ರೀತಿಸುವ ವ್ಯಕ್ತಿಯೊಂದಿಗೆ ಸೆಕ್ಸ್ ಮಾಡಿದಲ್ಲಿ ಅದು ದಿವ್ಯ ಸುಖಾನುಭೂತಿ ಯಾಗಿರುತ್ತದೆ.

Most Read: ದಯವಿಟ್ಟು ನವದಂಪತಿಗಳ ಬಳಿ 'ಮಗು ಯಾವಾಗ' ಎಂದು ಮಾತ್ರ ಕೇಳಬೇಡಿ!!

ಆ ಕ್ಷಣದ ಭಾವೋದ್ವೇಗಕ್ಕೆ ಒಳಗಾಗಬೇಡ

ಆ ಕ್ಷಣದ ಭಾವೋದ್ವೇಗಕ್ಕೆ ಒಳಗಾಗಬೇಡ

ಕೆಲ ಬಾರಿ ನಿನ್ನ ಗೆಳೆಯ, ಗೆಳತಿಯರು ತಮ್ಮ ಸೆಕ್ಸ್ ಅನುಭವ ಹೇಳಿಕೊಂಡು ನೀನಿನ್ನೂ ಆ ಸುಖ ಅನುಭವಿಸಿಲ್ಲವಾ ಎಂದು ಗೇಲಿ ಮಾಡಬಹುದು. ಆದರೆ ಅವರೆಲ್ಲ ಅದನ್ನು ಮಾಡಿದ್ದಾರೆ ಎಂಬ ಒಂದೇ ಕಾರಣಕ್ಕೆ ನೀನೂ ಅದನ್ನು ಮಾಡಬೇಕಿಲ್ಲ. ಮಿಲನ ಕ್ರಿಯೆಗೆ ಸೂಕ್ತ ಸಮಯ, ಸಂದರ್ಭ ನಿರ್ಧರಿಸುವುದು ತೀರಾ ಕಷ್ಟದ ವಿಷಯವಾದರೂ ಯಾವುದೋ ಒತ್ತಡಕ್ಕೆ ಮಣಿದು ಅದಕ್ಕೆ ಮುಂದಾಗಬೇಡ. ನಿನಗಿಂತ ತುಸು ಹೆಚ್ಚು ಜಗತ್ತು ನೋಡಿರುವ, ಹೆಚ್ಚು ಅನುಭವ ಹೊಂದಿರುವ (ನಿನಗಿಂತ 25 ವರ್ಷ ಹೆಚ್ಚು!) ನಾನು ಹೇಳುವುದಿಷ್ಟೆ.. - ನಿನಗೆ ನೀನು ಅದಕ್ಕಾಗಿ ಸಂಪೂರ್ಣವಾಗಿ ಸಿದ್ಧವಾಗಿರುವೆ ಎಂಬುದು ಖಚಿತವಾಗುವವರೆಗೂ ಅದು ಬೇಡ. ಸೂಕ್ತ ವ್ಯಕ್ತಿ ಹಾಗೂ ಸೂಕ್ತ ಸಂದರ್ಭ, ಅವಶ್ಯಕತೆಗಳು ಬರುವವರೆಗೂ ತಾಳ್ಮೆ ಇರಲಿ. ಇದಕ್ಕಾಗಿ ಮುಂದ್ಯಾವತ್ತೋ ನನಗೆ ಖಂಡಿತ ಥ್ಯಾಂಕ್ಸ್ ಹೇಳುವೆ.

ಪ್ರೀತಿ ಹಾಗೂ ವಾಂಛೆಯ ಮಧ್ಯೆ ಗೊಂದಲ ಬೇಡ

ಪ್ರೀತಿ ಹಾಗೂ ವಾಂಛೆಯ ಮಧ್ಯೆ ಗೊಂದಲ ಬೇಡ

ನೀನು ಪ್ರೀತಿಸುವ ವ್ಯಕ್ತಿಯೊಂದಿಗೆ ದೈಹಿಕವಾಗಿ ಬೆರೆಯುವ ಆಸೆಯನ್ನು ನಿಯಂತ್ರಿಸಿಕೊಳ್ಳುವುದು ಎಷ್ಟು ಕಷ್ಟ ಎಂಬುದು ನನಗೆ ಗೊತ್ತು. ಹೊಸದಾಗಿ ಒಬ್ಬನನ್ನು ಭೇಟಿಯಾದಾಗ ಅದರ ಆಕರ್ಷಣೆಯೇ ಬೇರೆಯಾಗಿರುತ್ತದೆ. ಆದರೆ ಕೆಲ ದಿನಗಳಾದ ನಂತರ ಈ ಆಕರ್ಷಣೆ ಕಡಿಮೆಯಾಗಿ ವಾಸ್ತವ ಕಣ್ಣಿಗೆ ರಾಚುತ್ತದೆ. ದೀರ್ಘಾ ವಧಿಯ ಆತ್ಮೀಯ ಸಾಂಗತ್ಯದಿಂದ ಮಾತ್ರ ನಿಜವಾದ ಪ್ರೀತಿ ಬೆಳೆಯಲು ಸಾಧ್ಯ. ಆದರೆ ವಾಂಛೆ ಎಂಬುದು ಹೊಸದಾಗಿ ಮಾತ್ರ ಚೆಂದ. ದಿನಗಳೆದಂತೆ ಸಂಬಂಧ ಹಳತಾದಂತೆ ಅದರ ಬಣ್ಣ ಮಾಸುತ್ತದೆ.

ಯಾರನ್ನೂ ಖುಷಿಪಡಿಸಲು ಅದನ್ನು ಮಾಡಬೇಕಿಲ್ಲ

ಯಾರನ್ನೂ ಖುಷಿಪಡಿಸಲು ಅದನ್ನು ಮಾಡಬೇಕಿಲ್ಲ

ಕೇವಲ ತನ್ನ ಸಂಗಾತಿಯ ಸೆಕ್ಸ್ ಬಯಕೆಯನ್ನು ಈಡೇರಿಸಲೆಂದೇ ಕೆಲ ಹೆಣ್ಣು ಮಕ್ಕಳು ಅದಕ್ಕಾಗಿ ಮುಂದಾಗುತ್ತಾರೆ. ಸಂಗಾತಿಯ ದೈಹಿಕ ಸುಖದ ಬೇಡಿಕೆಯನ್ನು ತಿರಸ್ಕರಿಸಿದಲ್ಲಿ ಆತ ಏನು ತಿಳಿದು ಕೊಳ್ಳುವನೋ ಎಂದು ಅದಕ್ಕೆ ಒಪ್ಪಿ ಬಿಡುತ್ತಾರೆ. ಆದರೆ ಯಾರನ್ನೋ ಮೆಚ್ಚಿಸಲು ಮಿಲನಕ್ಕೆ ನೀನು ಮುಂದಾಗುತ್ತಿರುವೆ ಎಂದಾದಲ್ಲಿ ನಿನ್ನ ಸಂಬಂಧ ಉಳಿಸಲು ಸೆಕ್ಸ್ ಒಂದು ಅಸ್ತ್ರವಾಗಿದೆ ಎಂದರ್ಥ. ಆದರೆ ಇಂಥ ಸಂಬಂಧಗಳು ಶಾಶ್ವತವಾಗಿರಲಾರವು ಎಂಬುದು ಗೊತ್ತಿರಲಿ.

Most Read: ಸಂಗಾತಿ ಮೋಸ ಮಾಡುತ್ತಿರುವ ಬಗ್ಗೆ ತಿಳಿಯಬೇಕೇ? ಸತ್ಯ ತಿಳಿಯಲು ಹೀಗೆ ಮಾಡಿ...

ಬೇಡ ಎನ್ನಲು ಹಿಂಜರಿಕೆ ಯಾಕೆ?

ಬೇಡ ಎನ್ನಲು ಹಿಂಜರಿಕೆ ಯಾಕೆ?

ನಿನ್ನ ಪತಿಯೇ ಇರಲಿ ಅಥವಾ ಸಂಗಾತಿಯೇ ಇರಲಿ ನಿನಗೆ ಇಷ್ಟವಿಲ್ಲದಿದ್ದಲ್ಲಿ 'ನೋ' ಎನ್ನಲು ನೀನು ಸ್ವತಂತ್ರವಾಗಿರುವೆ. ಸೆಕ್ಸ್‌ನಲ್ಲಿ ತೊಡಗುವಂತೆ ಯಾರೊಬ್ಬರೂ ನಿನ್ನನ್ನು ಒತ್ತಾಯ ಮಾಡುವಂತಿಲ್ಲ. ಹಾಗೆ ಮಾಡುವುದು ಭಾರತದ ಕಾನೂನಿನ ಪ್ರಕಾರ ಅಪರಾಧವಾಗಿದೆ. ಯಾವುದೇ ನಿರ್ದಿಷ್ಟ ಸಂದರ್ಭದಲ್ಲಿ ಮಿಲನ ಕ್ರಿಯೆ ನಡೆಸಬಾರದು ಎಂಬುದನ್ನು ನಿರ್ಧರಿಸುವ ಹಾಗೂ ಅದೇ ಕಾಲಕ್ಕೆ ಸ್ಪಷ್ಟವಾಗಿ 'ಇಲ್ಲ' ಎಂದು ಹೇಳುವುದನ್ನು ಕಲಿತುಕೊಳ್ಳಲೇಬೇಕು.

ಸೆಕ್ಸ್ ಎಂಬುದನ್ನು ಸಮಸ್ಯೆಗಳಿಗೆ ಪರಿಹಾರವಾಗಿ ಉಪಯೋಗಿಸಬೇಡ

ಸೆಕ್ಸ್ ಎಂಬುದನ್ನು ಸಮಸ್ಯೆಗಳಿಗೆ ಪರಿಹಾರವಾಗಿ ಉಪಯೋಗಿಸಬೇಡ

ಜೀವನದಲ್ಲಿನ ಅನೇಕ ಅನುಭವಗಳಂತೆ ಸೆಕ್ಸ್ ಎಂಬುದು ಕೂಡ ಚಟವಾಗಿ ಬಿಡಬಹುದು. ತಮ್ಮ ಒತ್ತಡಗಳಿಂದ ಪಾರಾಗಲು ಅನೇಕ ಜನ ಸೆಕ್ಸ್ ಅನ್ನು ಕ್ಷಣಿಕ ಸುಖವಾಗಿ ಬಳಸುವುದನ್ನು ನೀನು ನೋಡಿರಬಹುದು. ಆದರೆ ಸೆಕ್ಸ್ ಅನ್ನು ಸಮಸ್ಯೆಗಳಿಗೆ ಪರಿಹಾರವಾಗಿ ನೀನು ಮಾತ್ರ ಯಾವತ್ತೂ ಉಪಯೋಗಿಸಬೇಡ. ಅದು ಕ್ಷಣಿಕವಾಗಿ ನೆಮ್ಮದಿ ನೀಡಿದರೂ ಅದರಿಂದ ಶಾಶ್ವತ ಪರಿಹಾರ ದೊರಕದು. ಅದರ ಬದಲು ಜೀವನದಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳನ್ನು ಎದೆಗೊಟ್ಟು ನಿಂತು ಎದುರಿಸು, ಜಯಿಸು.

English summary

Aware before going forward to sex! Mother's Emotional Letter to Her Daughter

These Essential Things About Sex I Want My Daughters to Know. “Sex” encompasses a pretty broad category of behaviors. Sex is a normal, healthy part of life when you choose it freely. Making clear decisions about things like sex when you are a teenager is a challenge. You will make mistakes. Sex is not something to be ...
Story first published: Wednesday, January 30, 2019, 13:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more