For Quick Alerts
ALLOW NOTIFICATIONS  
For Daily Alerts

2019ರ ಹೊಸ ವರುಷದಲ್ಲಿ ದಂಪತಿಗಳು ತೆಗೆದುಕೊಳ್ಳಬೇಕಾದ ನಿರ್ಣಯಗಳು

|

ವೈವಾಹಿಕ ಜೀವನದಲ್ಲಿ ದಂಪತಿಯು ಪರಸ್ಪರ ಅನ್ಯೋನ್ಯತೆ ಹಾಗೂ ಪ್ರೀತಿ ವಿಶ್ವಾಸದಿಂದ ಇದ್ದರೆ ಆಗ ಜೀವನ ಕೂಡ ಸುಖಮಯವಾಗಿರುವುದು. ದಂಪತಿಯು ಹೊಸ ವರ್ಷ ಬಂದಾಗ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ಇದು ವೈಯಕ್ತಿಕ ನಿರ್ಣಯಗಳು ಅಥವಾ ಇನ್ನು ಕೆಲವೊಂದು ದಾಂಪತ್ಯಕ್ಕೆ ಸಂಬಂಧಿಸಿದ ನಿರ್ಣಯಗಳು ಆಗಿರಬಹುದು.

ಆದರೆ ಇಂತಹ ನಿರ್ಣಯಗಳನ್ನು ಕೇವಲ ಹೊಸ ವರ್ಷದ ಆರಂಭದಲ್ಲಿ ತೆಗೆದುಕೊಂಡು ಬಳಿಕ ಮರೆತು ಬಿಡುವುದು ಸರಿಯಲ್ಲ. ವರ್ಷವಿಡಿ ಈ ನಿರ್ಣಯಗಳಿಗೆ ಅನುಗುಣವಾಗಿ ಸಾಗಿದರೆ ಆಗ ಜೀವನ ನಿಮ್ಮ ಯೋಜನೆಯಂತೆ ಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ನಿಮ್ಮ ಸಂಬಂಧದ ಗುರಿಗಳು ಏನು?

ನಿಮ್ಮ ಸಂಬಂಧದ ಗುರಿಗಳು ಏನು?

ಈ ಹೊಸ ವರ್ಷದ ಆರಂಭದಲ್ಲಿ ನೀವು ಒಮ್ಮೆ ಹಿಂತಿರುಗಿ ನೋಡಿ ನಿಮ್ಮ ಸಂಗಾತಿ ಜತೆಗಿನ ಜೀವನ ಯಾವ ರೀತಿಯಲ್ಲಿ ಸಾಗಿದೆ ಎಂದು ನೋಡಬಹುದು. ನೀವಿಬ್ಬರು ಹಂಚಿಕೊಂಡಿರುವ ಸಂಭ್ರಮದ ಕ್ಷಣಗಳು, ಪರಸ್ಪರ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಮತ್ತು 2019ರಲ್ಲಿ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಪ್ರಯತ್ನಿಸಿ. ಹೊಸ ವರ್ಷದಲ್ಲಿ ಕೆಲವು ನಿರ್ಣಯಗಳನ್ನು ನೀವು ತೆಗೆದುಕೊಂಡರೆ ಅದರಿಂದ ನಿಮ್ಮ ಪ್ರೀತಿಯ ಜೀವನವು ಉತ್ತಮವಾಗುವುದು.

ವಾರಕ್ಕೊಮ್ಮೆ ಡೇಟ್ ನೈಟ್

ವಾರಕ್ಕೊಮ್ಮೆ ಡೇಟ್ ನೈಟ್

ಪ್ರತಿಯೊಂದು ಸಂಬಂಧವು ಆರಂಭದಲ್ಲಿ ಹನಿಮೂನ್ ಸಮಯವನ್ನು ಹೊಂದಿರುವುದು ಮತ್ತು ಆದರೆ ಇದರ ಬಳಿಕ ಅದು ತನ್ನ ಆಕರ್ಷಣೆ ಕಳೆದುಕೊಳ್ಳುವುದು ಸಹಜ. ಆಕರ್ಷಣೆಯು ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ತುಂಬಾ ಸವಾಲಿನ ಕೆಲಸ. ವಾರದಲ್ಲಿ ಒಂದು ದಿನವಾದರೂ ನಿಮ್ಮ ಸಂಗಾತಿ ಜತೆಗೆ ಡೇಟ್ ನೈಟ್ ಮಾಡಿ. ಆ ದಿನ ನೀವು ಸಂಗಾತಿಯೊಂದಿಗೆ ಮಕ್ಕಳು, ಬಿಲ್, ವೃತ್ತಿ, ಕುಟುಂಬ ಸಮಸ್ಯೆ ಅಥವಾ ವೃತ್ತಿಯ ಬಗ್ಗೆ ಮಾತನಾಡಬೇಡಿ.

Most Read: ಹೆಂಡತಿಯು ತನ್ನ ಗಂಡನಲ್ಲಿ ಎಂದೂ ಹಂಚಿಕೊಳ್ಳದ ಕೆಲವೊಂದು ಗುಟ್ಟುಗಳು

ಫೋನ್ ಇಲ್ಲದೆ ಒಂದು ಗಂಟೆ

ಫೋನ್ ಇಲ್ಲದೆ ಒಂದು ಗಂಟೆ

ನಿಮ್ಮ ಸಂಗಾತಿ ಜತೆಗೆ ಮಾತನಾಡಿ ಮತ್ತು ದಿನದಲ್ಲಿ ಒಂದು ಗಂಟೆ ಫೋನ್ ಇಲ್ಲದೆ ಜತೆಯಾಗಿ ಇರಬೇಕು ಎಂದು ಅವರಿಗೆ ಮನವರಿಕೆ ಮಾಡಿಕೊಡಿ. ಇಂದಿನ ದಿನಗಳಲ್ಲಿ ಫೋನ್ ಎನ್ನುವುದು ಅವಿಭಾಜ್ಯ ಅಂಗವಾಗಿರುವ ಕಾರಣದಿಂದಾಗಿ ಇದು ನಿಮಗೆ ದೊಡ್ಡ ಸವಾಲಿನ ಕೆಲಸವಾಗಬಹುದು. ಆದರೆ ಫೋನ್ ಇಲ್ಲದೆ ನೀವಿಬ್ಬರು ಜತೆಯಾಗಿ ಕಳೆದರೆ ಆ ಸಮಯವನ್ನು ಖಂಡಿತವಾಗಿಯೂ ಮರೆಯಲು ಸಾಧ್ಯವಿಲ್ಲ.

ಪ್ರತಿಕ್ರಿಯಿಸುವ ಮೊದಲು ಆಲೋಚಿಸಿ

ಪ್ರತಿಕ್ರಿಯಿಸುವ ಮೊದಲು ಆಲೋಚಿಸಿ

ಜಗಳಗಳು ಆಗುವಂತಹ ಸಮಯದಲ್ಲಿ ನಾವು ತುಂಬಾ ಆಲೋಚನೆ ಮಾಡಿಕೊಂಡು ಮಾತನಾಡಬೇಕು. ಆದರೆ ನಾವು ಇದನ್ನು ಯಾವತ್ತೂ ಪಾಲಿಸಿಕೊಂಡು ಹೋಗುವುದಿಲ್ಲ. ಇದಕ್ಕೆ ಒಂದು ಸರಳವಾಗಿರುವ ಪರಿಹಾರವಿದೆ. ಮುಂದಿನ ಸಲ ನೀವು ಸಂಗಾತಿಯೊಂದಿಗೆ ಜಗಳ ಮಾಡಲು ತಯಾರಾದಾಗ ಅಥವಾ ಅವರಿಗೆ ಬೈಯಬೇಕೆಂದು ಅನಿಸಿದಾಗ ದೀರ್ಘವಾಗಿ ಉಸಿರಾಡಿಕೊಂಡು ನಿಮ್ಮ ಭಾವನೆಗಳು(ಅದು ಕೋಪ, ಕಿರಿಕಿರಿ ಅಥವಾ ಏನೇ ಆಗಿದ್ದರೂ) ಅದನ್ನು ಗುರುತಿಸಿಕೊಳ್ಳಿ. ಐದು ವರ್ಷದ ಬಳಿಕ ಈ ವಿಚಾರವು ಯಾವುದೇ ಮಹತ್ವ ಹೊಂದಿದೆಯಾ ಅಥವಾ ಇಲ್ಲವಾ ಎಂದು ನಿಮಗೆ ನೀವೇ ಪ್ರಶ್ನಿಸಿಕೊಳ್ಳಿ. ಈ ರೀತಿಯಾಗಿ ನೀವು ಪರಿಸ್ಥಿತಿಯನ್ನು ನಿಮ್ಮ ಕೈಮೀರಿ ಹೋಗುವುದನ್ನು ತಪ್ಪಿಸಬಹುದು.

 ಹೊಸ ಗುರಿ ಹಾಕಿಕೊಳ್ಳಿ

ಹೊಸ ಗುರಿ ಹಾಕಿಕೊಳ್ಳಿ

ನೀವಿಬ್ಬರು ಜತೆಯಾಗಿ ಸಾಧಿಸಬಹುದಾದ ಹೊಸ ಗುರಿಯನ್ನು ಹಾಕಿಕೊಳ್ಳಿ. ಇದು ಕೈದೋಟವಾಗಿರಬಹದುಉ, ಹೊಸ ಜಾಗಗಳಿಗೆ ತಿಂಗಳಿಗೊಮ್ಮೆ ಪ್ರವಾಸ ಅಥವಾ ಹೊಸ ಕೌಶಲ್ಯ ವೃದ್ಧಿ ಮಾಡುವುದು. ನಿಮಗಿಬ್ಬರಿಗೂ ಆಸಕ್ತಿ ಇರುವಂತಹ ವಿಚಾರಗಳ ಬಗ್ಗೆ ಯೋಚಿಸಿ ಮತ್ತು 2019ನ್ನು ತುಂಬಾ ವಿಶೇಷವಾಗಿಸಿಕೊಳ್ಳಿ.

ನಿಮಗೋಸ್ಕರ ಸಮಯ ಮೀಸಲಿಡಿ

ನಿಮಗೋಸ್ಕರ ಸಮಯ ಮೀಸಲಿಡಿ

ಪ್ರತಿಯೊಬ್ಬರಿಗೂ ತಮ್ಮದೇ ಆಗಿರುವಂತಹ ಸಮಯವು ಬೇಕಾಗಿರುವುದು. ನಿಮಗೆ ಹಾಗೂ ನಿಮ್ಮ ಸಂಗಾತಿಗೆ ಕೂಡ ವೈಯಕ್ತಿಕ ಸಮಯ ಬೇಕಾಗಿರುತ್ತದೆ. ಇದರಿಂದಾಗಿ ನಿಮಗೋಸ್ಕರವಾಗಿ ಸ್ವಲ್ಪ ಸಮಯವನ್ನು ಮೀಸಲಿಡುವುದು ತುಂಬಾ ಅಗತ್ಯ. ಈ ವೇಳೆ ನೀವು ಪತ್ರಿಕೆ ಓದಬಹುದು, ಧಾನ್ಯ ಮಾಡಬಹುದು ಅಥವಾ ಹಾಗೆ ಕುಳಿತುಕೊಳ್ಳಬಹುದು. ಹೀಗೆ ನಿಮಗೋಸ್ಕರ ಸಮಯ ಮೀಸಲಿರಿಸಿದರೆ ಆಗ ನಿಮ್ಮ ದೇಹವು ಮತ್ತೆ ಉತ್ಸಾಹ ಪಡೆಯುವುದು.

ಆಲಿಸಿರಿ

ಆಲಿಸಿರಿ

ನಿಮ್ಮ ಸಂಗಾತಿಯು ಮಾತನಾಡುತ್ತಾ ಇರುವಾಗ ನೀವು ಮೊಬೈಲ್ ನಲ್ಲಿ ಮುಳುಗಿಹೋಗಬೇಡಿ. ಆಕೆ ಅಥವಾ ಆತ ಏನು ಹೇಳುತ್ತಿದ್ದಾನೆ ಎಂದು ಕೇಳಿಸಿಕೊಳ್ಳಿ. ಇದಕ್ಕೆ ನೀವು ಸರಿಯಾದ ಪ್ರತಿಕ್ರಿಯೆ ನೀಡಿ ಮತ್ತು ಪ್ರಶ್ನೆಗಳನ್ನು ಕೇಳಿ. ನೀವು ತುಂಬಾ ಒಳ್ಳೆಯ ಆಲಿಸುವವರಾಗಿ ಮತ್ತು ಈ ಸಣ್ಣ ಹೆಜ್ಜೆಗಳು ನಿಮ್ಮ ಸಂಬಂಧದಲ್ಲಿ ಯಾವ ರೀತಿಯ ಬದಲಾವಣೆಗಳನ್ನು ಉಂಟು ಮಾಡುತ್ತದೆ ಎಂದು ನಿಮಗೆ ಊಹಿಸಲು ಸಾಧ್ಯವಾಗದು. ಇದು ಎಲ್ಲವೂ ಸರಿಯಾದ ಕಾರಣಕ್ಕೆ ಆಗುವುದು.

Most Read: ಗಂಡ-ಹೆಂಡತಿ ಪ್ರತ್ಯೇಕವಾಗಿ ಮಲಗಬೇಕಂತೆ! ಸಂಬಂಧ ಇನ್ನಷ್ಟು ಅನ್ಯೋನ್ಯತೆಯಾಗಿ ಇರುತ್ತದೆಯಂತೆ!

ಭಾವನಾತ್ಮಕವಾಗಿ ಪ್ರಾಮಾಣಿಕವಾಗಿರಿ

ಭಾವನಾತ್ಮಕವಾಗಿ ಪ್ರಾಮಾಣಿಕವಾಗಿರಿ

ನೀವು ತುಂಬಾ ಅಂತರ್ಮುಖಿ ಅಥವಾ ಹೆಚ್ಚು ಬೆರೆಯದ ವ್ಯಕ್ತಿಯಾಗಿದ್ದರೆ ಆಗ ಭಾವನೆಗಳನ್ನು ಸಂಗಾತಿಯ ಜತೆಗೆ ಹೇಳಿಕೊಳ್ಳುವುದು ತುಂಬಾ ಸವಾಲಿನ ಕೆಲಸವಾಗಬಹುದು. ನಿಮಗೆ ತುಂಬಾ ಅಸೂಯೆ, ಅಸುರಕ್ಷತೆ, ಕಿರಿಕಿರಿ, ಕೋಪ ಅಥವಾ ಯಾವುದೇ ರೀತಿಯ ನಕಾರಾತ್ಮಕ ಭಾವನೆಗಳು ಇದ್ದರೂ ಅದನ್ನು ಹೇಳಿಕೊಳ್ಳಿ. ಸಂಗಾತಿಯು ಇದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಇದರಿಂದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುವುದು ಮತ್ತು ಅಪಾರ್ಥ ಮಾಡಿಕೊಳ್ಳುವುದು ತಪ್ಪುವುದು.

ಹಂಚಿಕೊಳ್ಳುವುದು ಅತೀ ಮುಖ್ಯವಾಗಿರುವಂತಹ ಸಂಬಂಧ

ಹಂಚಿಕೊಳ್ಳುವುದು ಅತೀ ಮುಖ್ಯವಾಗಿರುವಂತಹ ಸಂಬಂಧ

ಸಂಗಾತಿ ಜತೆಗೆ ನೀವು ಎಷ್ಟೇ ಪ್ರೀತಿಯಲ್ಲಿ ಮುಳುಗಿದ್ದರೂ, ನಿಮ್ಮೊಳಗೆ ಹಂಚಿಕೊಳ್ಳುವುದು ಸಂಬಂಧದಲ್ಲಿ ಅತಿ ಮುಖ್ಯವಾಗಿರುವುದು. ನೀವು ಸಂತೋಷವಾಗಿ ಇರದೇ ಇದ್ದರೆ ಆಗ ನೀವು ಖಂಡಿತವಾಗಿಯೂ ಸಂಬಂಧದಲ್ಲಿ ಶೇ. 100ರಷ್ಟು ಭಾಗಿಯಾಗಲು ಸಾಧ್ಯವಾಗುವುದಿಲ್ಲ. ಸಂತೋಷವನ್ನು ನಿಮ್ಮ ಕೈಯಲ್ಲಿ ಇಟ್ಟುಕೊಳ್ಳಿ ಮತ್ತು ಸಂಬಂಧವು ಯಾವುದೇ ಮಹತ್ವವನ್ನು ಹೊಂದಿಲ್ಲವೆಂದು ನಿಮಗೆ ಅನಿಸಿದರೆ ಆಗ ನೀವು ಅದರಿಂದ ಹಿಂದಕ್ಕೆ ಸರಿಯುವುದರಿಂದ ಹಿಂಜರಿಯಬೇಡಿ.

English summary

2019 New Year resolutions for couples to take their love life

This is the perfect time of the year when you can look back and think about how your relationship with your partner had fared, the best memories you shared, the situations you could have dealt in a better way, and look for ways on how you can take the relationship to next level in 2019. Here are some New Year resolutions that would help you to deal with your love life in a better way.
Story first published: Friday, January 11, 2019, 15:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more