For Quick Alerts
ALLOW NOTIFICATIONS  
For Daily Alerts

ಸಂಗಾತಿ ರೋಮ್ಯಾಂಟಿಕ್ ಅಲ್ಲದಿದ್ದರೆ ಏನು ಮಾಡುವುದು?

|

ಆಧುನಿಕ ಜಗತ್ತಿನಲ್ಲಿ ಎಲ್ಲವೂ ಫಾಸ್ಟ್. ಅದೇ ಪ್ರೀತಿ ಕೂಡ. ಹುಡುಗ, ಹುಡುಗಿಯರು ನೋಡಿದ ತಕ್ಷಣ ಪ್ರೀತಿಸಿ, ಮುಂದೆ ಸಂಬಂಧ ಬೆಳೆಸಿಕೊಳ್ಳಬೇಕೆಂದು ಬಯಸುತ್ತಾರೆ. ಇನ್ನು ಕೆಲವು ಹುಡುಗಿಯರು ತಮ್ಮ ಹುಡುಗ ತುಂಬಾ ರೋಮ್ಯಾಂಟಿಕ್ ಆಗಿರಬೇಕೆಂಬ ಬಯಕೆ ಇರುವುದು. ತಾನು ಪ್ರೀತಿಸುವ ಹುಡುಗ ಯಾವಾಗಲೂ ರೋಮ್ಯಾಂಟಿಕ್ ಆಗಿದ್ದರೆ ಮತ್ತೇನೂ ಬೇಡ ಎನ್ನುವ ಭಾವನೆಯಲ್ಲಿ ಹುಡುಗಿ ಇರುತ್ತಾಳೆ. ನಾಲ್ಕು ಗೋಡೆಗಳ ಮಧ್ಯೆ ಅಥವಾ ಬೇರೆ ಕಡೆ ಇರಲಿ, ಆದರೆ ಮಹಿಳೆ ಮಾತ್ರ ತನ್ನ ಸಂಗಾತಿ ರೋಮ್ಯಾಂಟಿಕ್ ಆಗಿರಬೇಕೆನ್ನುವ ಇಚ್ಛೆ ಹೊಂದಿರುವಳು. ಆದರೆ ಕೆಟ್ಟ ಸುದ್ದಿಯೆಂದರೆ ಕೆಲವು ಪುರುಷರಿಗೆ ಈ ರೋಮ್ಯಾನ್ಸ್ ಎಲ್ಲಾ ಆಗಿಬರಲ್ಲ. ಅವರು ತುಂಬಾ ಪ್ರಾಯೋಗಿಕವಾಗಿರುವರು.

ರೊಮ್ಯಾಂಟಿಕ್ ಆಗಿರುವುದು ಹೇಗೆ ?

ಇಂತಹ ಪುರುಷರ ಜತೆ ಸಂಬಂಧ ಇಟ್ಟುಕೊಂಡಿರುವ ಮಹಿಳೆಯರಿಗೆ ರೋಮ್ಯಾನ್ಸ್ ಬಗ್ಗೆ ತುಂಬಾ ನಿರಾಶೆಯಾಗುವುದು. ಪುರುಷರೇ ರೋಮ್ಯಾನ್ಸ್ ವಿಷಯದಲ್ಲಿ ಮೊದಲ ಹೆಜ್ಜೆ ಇಡಬೇಕೆಂದು ಹೆಚ್ಚಿನ ಮಹಿಳೆಯರು ಭಾವಿಸಿದ್ದಾರೆ. ಆದರೆ ಮಹಿಳೆಯರು ಕೂಡ ರೋಮ್ಯಾನ್ಸ್ ವಿಷಯದಲ್ಲಿ ಮೊದಲಿಗರಾಗಬಹುದು. ನಿಮ್ಮ ಸಂಗಾತಿಗೆ ರೋಮ್ಯಾನ್ಸ್ ಬಗ್ಗೆ ನಿರಾಸಕ್ತಿಯಿದ್ದರೆ, ಅವರನ್ನು ಹೇಗೆ ಪರಿವರ್ತಿಸುವುದು ಎಂದು ತಿಳಿದುಕೊಳ್ಳುವ....

ನಿಮಗೇನು ಬೇಕು ಎಂದು ಹೇಳಿ

ನಿಮಗೇನು ಬೇಕು ಎಂದು ಹೇಳಿ

ಆತ ರೋಮ್ಯಾಂಟಿಕ್ ಆಗಿಲ್ಲವೆಂದು ಆತನಿಗೆ ಇದುವರೆಗೂ ಮನವರಿಕೆಯಾಗಿಲ್ಲ. ಇದರಿಂದ ನೀವು ಈ ಸಮಸ್ಯೆಯ ಬಗ್ಗೆ ಆತನಿಗೆ ತಿಳಿಹೇಳಿ, ಅದನ್ನು ಬಗೆಹರಿಸಿಕೊಳ್ಳಿ. ರೋಮ್ಯಾನ್ಸ್ ನಿಮಗೆ ಎಷ್ಟು ಅಗತ್ಯವೆಂದು ಆತನಿಗೆ ತಿಳಿದರೆ ಆಗ ಇದನ್ನು ಆತ ಮನವರಿಕೆ ಮಾಡಿಕೊಂಡು ಸರಿಪಡಿಸಲು ಬಯಸುತ್ತಾನೆ. ಇದು ನಿಮ್ಮ ಸಂಬಂಧ ಉಳಿಸುವುದು ಮತ್ತು ನಿಮಗೇನು ಬೇಕೋ ಅದನ್ನು ನೀಡುವುದು. ಇದರ ಬಗ್ಗೆ ಮಾತನಾಡಲು ನೀವು ಹೆದರಬೇಡಿ.

ಒಳ್ಳೆಯ ಬಟ್ಟೆಗಳನ್ನು ಧರಿಸಿ

ಒಳ್ಳೆಯ ಬಟ್ಟೆಗಳನ್ನು ಧರಿಸಿ

ನಿಮ್ಮ ಸಂಗಾತಿಯು ರೋಮ್ಯಾಂಟಿಕ್ ಅಲ್ಲದೆ ಇರುವುದಕ್ಕೆ ಕಾರಣವೆಂದರೆ ನೀವು ಈಗ ಆಕರ್ಷಣೀಯವಾಗಿ ಕಾಣಿಸುತ್ತಿಲ್ಲದೇ ಇರಬಹುದು. ಇದರಿಂದಾಗಿ ನೀವು ವೈಯಕ್ತಿಕ ಸ್ವಚ್ಛತೆ ಮತ್ತು ದೇಹವನ್ನು ಫಿಟ್ ಆಗಿಟ್ಟುಕೊಳ್ಳಿ. ಇದರಿಂದ ನಿಮ್ಮ ಕಡೆ ಆತ ಹೆಚ್ಚು ಆಕರ್ಷಿತನಾಗುತ್ತಾನೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಆತನನ್ನು ಪೀಡಿಸಬೇಡಿ

ಆತನನ್ನು ಪೀಡಿಸಬೇಡಿ

ನಿಮ್ಮ ಸಂಗಾತಿ ರೋಮ್ಯಾಂಟಿಕ್ ಆಗದೆ ಇರುವುದಕ್ಕೆ ಹಲವಾರು ಕಾರಣಗಳು ಇರಬಹುದು. ಹಿಂದಿನ ಕೆಲವು ಸಂಬಂಧ ಅಥವಾ ಬೇರೆ ಕಾರಣಗಳು ಕೂಡ ಇರಬಹುದು. ಇದರಿಂದ ಆತ ರೋಮ್ಯಾನ್ಸ್ ನಿಂದ ದೂರ ಉಳಿದಿರಬಹುದು. ನೀವು ಪದೇ ಪದೇ ಆತನನ್ನು ಪೀಡಿಸುತ್ತಾ ಇದ್ದರೆ ಆತ ನಿಮ್ಮನ್ನು ದ್ವೇಷಿಸಲು ಆರಂಭಿಸಬಹುದು.

ಇತರ ರೋಮ್ಯಾಂಟಿಕ್ ಪುರುಷರ ಜತೆ ಹೋಲಿಸಬೇಡಿ

ಇತರ ರೋಮ್ಯಾಂಟಿಕ್ ಪುರುಷರ ಜತೆ ಹೋಲಿಸಬೇಡಿ

ಪುರುಷರ ಅಹಂ ಎನ್ನುವುದು ತುಂಬಾ ಸೂಕ್ಷ್ಮ ವಿಚಾರವಾಗಿರುವುದು. ಮಹಿಳೆಯರು ಇದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ನೀವು ಬೇರೆ ರೋಮ್ಯಾಂಟಿಕ್ ಪುರುಷರಿಗೆ ಆತನನ್ನು ಹೋಲಿಕೆ ಮಾಡಿದರೆ ಆಗ ಆತನ ಅಹಂಗೆ ಧಕ್ಕೆಯಾಗುವುದು. ಇದರಿಂದ ಆತ ರೋಮ್ಯಾಂಟಿಕ್ ಆಗುವುದಿಲ್ಲ. ನಿಮ್ಮ ಕಂಪೆನಿಯ ಬಾಸ್ ಜತೆಗೆ ಸಂಗಾತಿಯ ಹೋಲಿಕೆ ಮಾಡುವುದು ತುಂಬಾ ಕೆಟ್ಟ ವಿಚಾರ. ಹೀಗೆ ಯಾವತ್ತೂ ಮಾಡದಿರಿ.

ಪರಸ್ಪರ ಕಾರ್ಯಕ್ರಮಗಳಿಗೆ ಹೊಂದಾಣಿಕೆ ಮಾಡಿಕೊಳ್ಳಿ

ಪರಸ್ಪರ ಕಾರ್ಯಕ್ರಮಗಳಿಗೆ ಹೊಂದಾಣಿಕೆ ಮಾಡಿಕೊಳ್ಳಿ

ನಿಮಗೆ ಇಷ್ಟವಿಲ್ಲದೆ ಇರುವ ಕೆಲವು ವಿಷಯಗಳಲ್ಲಿ ಭಾಗಿಯಾಗಬೇಕೆಂದು ಸಂಗಾತಿಯು ಬಯಸಬಹುದು. ಕ್ರೀಡಾ ಕಾರ್ಯಕ್ರಮದಿಂದ ಹಿಡಿದು ಆತ ವಿಡಿಯೋ ಗೇಮ್ ಆಡುವಾಗ ಜತೆಗೆ ಕುಳಿತುಕೊಳ್ಳುವ ವಿಷಯವಿರಬಹುದು. ಇದನ್ನು ನೀವು ಖಂಡಿತವಾಗಿಯೂ ಕಡೆಗಣಿಸಬಾರದು. ಇದನ್ನು ಆತ ನೀವು ಮಾಡುವಂತಹ ದೊಡ್ಡ ಉಪಕಾರವೆಂದು ಭಾವಿಸುತ್ತಾನೆ ಮತ್ತು ಮುಂದಿನ ಸಲ ನೀವು ರೋಮ್ಯಾಂಟಿಕ್ ಡೇಟ್ ಗೆ ಕರೆದಾಗ ಆತ ಖಂಡಿತವಾಗಿಯೂ ಇಲ್ಲವೆನ್ನಲ್ಲ.

ಆತನ್ನು ಪ್ರಶಂಸೆ ಮಾಡಿ

ಆತನ್ನು ಪ್ರಶಂಸೆ ಮಾಡಿ

ಆತ ತುಂಬಾ ರೋಮ್ಯಾಂಟಿಕ್ ಆಗಿರಬೇಕೆಂದು ನೀವು ಬಯಸುತ್ತಾ ಇರುವಂತೆ ಆತ ಕೂಡ ಇದೇ ನಿರೀಕ್ಷೆಯಲ್ಲಿರಬಹುದು. ಆತನನ್ನು ನೀವು ಇದಕ್ಕಾಗಿ ಶ್ಲಾಘಿಸಿ. ಒಂದು ರಾತ್ರಿಯೊಳಗೆ ಆತ ಬದಲಾಗುವುದಿಲ್ಲ. ನೀವು ತುಂಬಾ ತಾಳ್ಮೆಯಿಂದ ಕಾಯಬೇಕು ಮತ್ತು ಬಲವಾದ ಸಂಬಂಧ ಬೆಳೆಯುವಂತೆ ನೋಡಿಕೊಳ್ಳಬೇಕು ಮತ್ತು ನಿಮಗೆ ಬೇಕಿರುವಂತಹದ್ದು ಖಂಡಿತವಾಗಿಯೂ ಸಿಗುವುದು.

ಸಾಂಪ್ರದಾಯಿಕ ರೋಮ್ಯಾನ್ಸ್ ನಿಂದ ಹೊರಬನ್ನಿ

ಸಾಂಪ್ರದಾಯಿಕ ರೋಮ್ಯಾನ್ಸ್ ನಿಂದ ಹೊರಬನ್ನಿ

ಕೆಲವು ಅನಿರೀಕ್ಷಿತ ಸ್ಥಳಗಳಲ್ಲಿಯೂ ರೋಮ್ಯಾನ್ಸ್ ಸಿಗುವುದು ಎಂದು ನೀವು ಮನವರಿಕೆ ಮಾಡಿಕೊಳ್ಳಬೇಕು. ಇದರಿಂದ ಕೇವಲ ಕ್ಯಾಂಡರ್ ಲೈಟ್ ಡಿನ್ನರ್ ನಲ್ಲಿ ಮಾತ್ರ ರೋಮ್ಯಾನ್ಸ್ ಮೂಡಿಬರುವುದು ಎನ್ನುವ ಕಲ್ಪನೆ ಬಿಟ್ಟುಬಿಡಿ. ಇದರಿಂದ ನೀವಿಬ್ಬರು ತುಂಬಾ ಕ್ರಿಯಾತ್ಮಕವಾಗಿರುವಂತಹ ಸ್ಥಳ ಹುಡುಕಿ. ನಿಮ್ಮ ಚಟುವಟಿಕೆ ತುಂಬಾ ಆನಂದಿಸುವಂತಿದ್ದರೆ ಆಗ ರೋಮ್ಯಾನ್ಸ್ ಬಂದೇ ಬರುವುದು.

ನೀವೇ ಆರಂಭಿಸಿ

ನೀವೇ ಆರಂಭಿಸಿ

ಜೀವನದಲ್ಲಿ ನಿಜವಾಗಿಯೂ ನಿಮಗೆ ರೋಮ್ಯಾನ್ಸ್ ಬೇಕೆಂದಿದ್ದರೆ ಆಗ ನೀವು ಖಂಡಿತವಾಗಿಯೂ ಸಂಗಾತಿಗೋಸ್ಕರ ಕಾಯುವುದಿಲ್ಲ. ನೀವು ರೋಮ್ಯಾನ್ಸ್ ನಲ್ಲಿ ಮೊದಲ ಹೆಜ್ಜೆಯನ್ನಿಡಲು ಹಿಂಜರಿಯಬೇಡಿ. ಪುರುಷರು ಮಾತ್ರ ಮುಂದೆ ಬರುವರು ಎನ್ನುವ ಬಯಕೆ ಬಿಟ್ಟುಬಿಡಿ. ಇಂದಿನ ದಿನಗಳಲ್ಲಿ ಎಲ್ಲವನ್ನು ಸಮಾನವಾಗಿ ಕಾಣಲಾಗುತ್ತದೆ. ಇದರಿಂದ ನೀವೇ ಮುಂದಾಗಿ ರೋಮ್ಯಾನ್ಸ್ ಮಾಡಿದರೆ ಅದರಲ್ಲಿ ತಪ್ಪಿಲ್ಲ.

ನಿಮಗೆ ಆತ ಎಷ್ಟು ಮುಖ್ಯವೆಂದು ತಿಳಿಸಿ

ನಿಮಗೆ ಆತ ಎಷ್ಟು ಮುಖ್ಯವೆಂದು ತಿಳಿಸಿ

ನೀವು ಆತನಿಗೆ ಎಷ್ಟು ಮುಖ್ಯವೆಂದು ಹೇಳದೆಯೇ ಪ್ರೀತಿಸುತ್ತಿರುತ್ತೇವೆ. ಇದನ್ನು ನಾವು ತುಂಬಾ ಲಘುವಾಗಿ ಪರಿಗಣಿಸಿರುತ್ತೇವೆ. ಆದರೆ ನಿಮ್ಮ ಸಂಗಾತಿಯು ಮನಸ್ಸನ್ನು ಓದಬಲ್ಲವನಾಗಿರುವನು. ಆತ ನಿಮಗೆ ಎಷ್ಟು ಮುಖ್ಯವೆಂದು ನೀವು ಹೇಳಿದರೆ ಆಗ ಇದು ಆತನನ್ನು ಪ್ರೇರೇಪಿಸುತ್ತದೆ ಮತ್ತು ಹೆಚ್ಚು ರೋಮ್ಯಾಂಟಿಕ್ ಆಗಿಸುವುದು. ಆತನಿಗೆ ಉಡುಗೊರೆ ನೀಡುವ ಮೂಲಕ ಆತ ನಿಮಗೆ ಎಷ್ಟು ಮುಖ್ಯವೆನ್ನುವುದನ್ನು ತಿಳಿಸಿಕೊಡಬಹುದು.

ರೋಮ್ಯಾನ್ಸ್ ಗಿಂತಲೂ ಹೊರತಾದ ಜೀವನವಿದೆ

ರೋಮ್ಯಾನ್ಸ್ ಗಿಂತಲೂ ಹೊರತಾದ ಜೀವನವಿದೆ

ಇದನ್ನು ನೀವು ತುಂಬಾ ಸ್ಪಷ್ಟವಾಗಿ ಹಾಗೂ ಬಲವಾಗಿ ಅರ್ಥ ಮಾಡಿಕೊಳ್ಳಬೇಕು. ಕೇವಲ ರೋಮ್ಯಾಂಟಿಕ್ ಆಗದೆ ಇಲ್ಲದೆ ಇರುವುದರಿಂದ ಆತ ನಿಮ್ಮನ್ನು ಕಡಿಮೆ ಪ್ರೀತಿಸುತ್ತಾನೆ ಎಂದಲ್ಲ. ಪ್ರೀತಿಯನ್ನು ವ್ಯಕ್ತಪಡಿಸುವಂತಹ ರೀತಿ ಪ್ರತಿಯೊಬ್ಬರಲ್ಲೂ ಒಂದೇ ರೀತಿಯಾಗಿರುವುದಿಲ್ಲ. ಆತ ರೋಮ್ಯಾಂಟಿಕ್ ಇಲ್ಲದೆ ಇದ್ದರೆ ಆತನನ್ನು ಬದಲಾಯಿಸುವ ಬದಲು ನೀವು ಇದ್ದ ಹಾಗೆ ಆತನನ್ನು ಸ್ವೀಕರಿಸಿ. ಇದರಿಂದ ನೀವು ಪ್ರೀತಿಯಲ್ಲಿ ತುಂಬಾ ಸಂತೋಷವಾಗಿರುವಿರಿ.

English summary

What To Do When Your Boyfriend Is Not Romantic Enough?

For most girls of our generation, love and romance are things that go hand in hand. All of us enjoy it when our boyfriend is romantic and expresses his love for us. In fact, some girls go over the moon when the boyfriend indulges in some public display of affection.Indeed that is one thing that can make any girl feel like a princess. Here we shall talk about ten measures that you can adopt to make your boyfriend to become more romantic.
X
Desktop Bottom Promotion