For Quick Alerts
ALLOW NOTIFICATIONS  
For Daily Alerts

ಈ 8 ವಿಚಾರಗಳನ್ನು ಮಹಿಳೆಯರು ಪುರುಷರಿಂದ ನಿರೀಕ್ಷಿಸುತ್ತಾರೆ....

By Sushma Charhra
|

ಮನುಷ್ಯನಿಗೆ ನಿರೀಕ್ಷೆಗಳಿರುತ್ತೆ. ಒಂದು ಲೆವೆಲ್‌ನ ನಿರೀಕ್ಷೆಗಳು ನಮ್ಮಲ್ಲಿ ಯಾವಾಗಲೂ ಹರಿದಾಡುತ್ತಲೇ ಇರುತ್ತವೆ. ಮಹಿಳೆಯರಲ್ಲಿ ಪುರುಷರಿಂತ ಭಿನ್ನವಾದ ಆಲೋಚನೆಗಳು ಮತ್ತು ನಿರೀಕ್ಷೆಗಳಿರುತ್ತವೆ. ಒಂದು ಸಂಬಂಧದಲ್ಲಿ ಮಹಿಳೆಯ ಬಗ್ಗೆ ಮಾತನಾಡುತ್ತಾ ಆಕೆಯ ನಿರೀಕ್ಷೆಯ ಬಗ್ಗೆ ಹೇಳುವುದಾದರೆ, ಮಹಿಳೆ ಪುರುಷನಿಂದ ಏನನ್ನು ನಿರೀಕ್ಷಿಸುತ್ತಿದ್ದಾಳೆ ಎಂದು ಹೇಳುವುದು ಅಷ್ಟು ಕಠಿಣವಾಗಲಾರದು.

ಮಹಿಳೆಯರು ತುಂಬಾ ನಿರೀಕ್ಷಿಸುತ್ತಾರೆ ಅನ್ನುವುದು ನೂರಕ್ಕೆ ನೂರು ಸತ್ಯ. ಆದರೆ ಅವರು ಸಣ್ಣಸಣ್ಣ ವಿಚಾರಗಳನ್ನು ಮತ್ತು ಭಾವನೆಗಳನ್ನು ನಿರೀಕ್ಷಿಸುವ ವ್ಯಕ್ತಿತ್ವದವರು. ಹಾಗಾದರೆ ಮಹಿಳೆ ಏನನ್ನು ನಿರೀಕ್ಷಿಸುತ್ತಾಳೆ ಎಂದು ಯಾರಾದರೂ ತಿಳಿಯಬೇಕು ಎಂದರೆ ನೀವು ಆಕೆಯ ಆಳಕ್ಕೆ ಇಳಿಯಬೇಕು ಅರ್ಥಾತ್ ಆಕೆಯ ಅಂತರಾಳವನ್ನು ಅರಿತುಕೊಳ್ಳಬೇಕಾಗುತ್ತದೆ, ಆಕೆಯ ಮನಸ್ಸನ್ನು ಓದಬೇಕಾಗುತ್ತದೆ. ಆದರೆ ಒಂದು ಸಾಮಾನ್ಯ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಕೆಲವೊಂದು ಪ್ರಮುಖ ನಿರೀಕ್ಷೆಗಳನ್ನು ಪ್ರತಿಯೊಬ್ಬ ಮಹಿಳೆಯೂ ಪುರುಷರಿಂದ ನಿರೀಕ್ಷಿಸುತ್ತಾಳೆ....

ತೋರ್ಪಡಿಕೆಯ ಪ್ರೀತಿಯನ್ನು ನಿಲ್ಲಿಸಬೇಡಿ

ತೋರ್ಪಡಿಕೆಯ ಪ್ರೀತಿಯನ್ನು ನಿಲ್ಲಿಸಬೇಡಿ

ಪ್ರೀತಿಸುತ್ತಿರುವಾಗ ಮಹಿಳೆಯರು ಪ್ರಪಂಚದ ಎತ್ತರದ ಸ್ಥಾನದಲ್ಲಿರುತ್ತಾರೆ. ಅದೇ ಮದುವೆಯಾಗಿ ಸಂಬಂಧಗಳಿಗೆ ಬಿದ್ದಾಗ ಹೂವು, ಸುತ್ತಾಟ, ಗಿಫ್ಟ್ ಗಳಲ್ಲಿದ್ದ ಪ್ರೀತಿ ಜವಾಬ್ದಾರಿಯಾಗಿ ಮಾರ್ಪಟ್ಟು, ಹಳೆಯ ಭಾವನೆಗಳು ಪುರುಷರಲ್ಲಿ ಇರುವುದಿಲ್ಲ. ಆದರೆ ಇದನ್ನು ಮಹಿಳೆಯರು ಇಷ್ಟ ಪಡುವುದಿಲ್ಲ. ಕೇವಲ ಪ್ರೀತಿಸುತ್ತಿದ್ದಾಗಲೋ ಇಲ್ಲ ಹೊಸದಾಗಿ ಮದುವೆ ಆದ ಸಂದರ್ಭದಲ್ಲಿ ಮಾತ್ರವಲ್ಲ. ಜೀವನ ಪರ್ಯಂತ ತೋರ್ಪಡಿಕೆಯ ಪ್ರೀತಿಯನ್ನು ಮಹಿಳೆಯರು ಹೆಚ್ಚು ಇಚ್ಛಿಸುತ್ತಾರೆ.

ನಿಮ್ಮ ಬಗ್ಗೆ ನೀವು ಆದಷ್ಟು ಓಪನ್ ಆಗಿರಿ

ನಿಮ್ಮ ಬಗ್ಗೆ ನೀವು ಆದಷ್ಟು ಓಪನ್ ಆಗಿರಿ

ಒಂದು ಸಂಬಂಧಕ್ಕೆ ಬೀಳುವ ಮೊದಲೇ ಪ್ರತಿ ಮಹಿಳೆಯೂ ತನ್ನ ಸಂಗಾತಿಯ ಬಗ್ಗೆ ಸಂಪೂರ್ಣ ತಿಳಿದುಕೊಂಡಿರಲು ಬಯಸುತ್ತಾಳೆ. ಆಕೆ ನಿಮ್ಮ ಬಗೆಗಿನ ಎಲ್ಲಾ ವಿಚಾರವನ್ನು ಆಕೆಯ ಬಳಿ ಹಂಚಿಕೊಳ್ಳಲು ಇಚ್ಛಿಸುತ್ತಾಳೆ ಮತ್ತು ಇಬ್ಬರ ಬಗ್ಗೆಯೂ ಹೋಲಿಸಿಕೊಳ್ಳುತ್ತಾಳೆ. ಇದು ಆಕೆಗೆ ನಿಮ್ಮನ್ನು ನಂಬುವ ಬಗ್ಗೆ ಹೆಚ್ಚು ಕಾನ್ಫಿಡೆನ್ಸ ಬರಲಿದೆ. ನೀವು ಎಲ್ಲವನ್ನೂ ಆಕೆಯ ಬಳಿ ಶೇರ್ ಮಾಡಿದಾಗ ಆಕೆ ನಿಮ್ಮನ್ನು ಅತೀ ಹೆಚ್ಚು ಪ್ರೀತಿಸುತ್ತಾಳೆ. ಅದು ಆಕೆಗೆ ಸೆಕ್ಯೂರ್ ಎಂಬ ಭಾವನೆ ನೀಡುತ್ತದೆ.

ಮಹಿಳೆಯರನ್ನು ಮಹಿಳೆಯರಂತೆಯೇ ಟ್ರೀಟ್ ಮಾಡಿ

ಮಹಿಳೆಯರನ್ನು ಮಹಿಳೆಯರಂತೆಯೇ ಟ್ರೀಟ್ ಮಾಡಿ

ಮಹಿಳೆಯರು ತಾವು ಬಯಸಿದ ರೀತಿಯಲ್ಲೇ ಪುರುಷರು ಅವರನ್ನು ಟ್ರೀಟ್ ಮಾಡಬೇಕು ಎಂದು ಬಯಸುತ್ತಾರೆ. ಮಹಿಳೆ ಎಂಬ ಯಾವುದೇ ವಿಶೇಷ ಸತ್ಕಾರಗಳನ್ನು ಅವರು ಬಯಸುವುದಿಲ್ಲ. ಮಹಿಳೆಯರನ್ನು ಮಹಿಳೆಯಂತೆಯೇ ಕಂಡರೆ ಅವರಿಗೆ ಅಚ್ಚುಮೆಚ್ಚು. ನೀನು ಮಹಿಳೆ ನಿನ್ನಿಂದಾಗದು ಎಂದು ಹೇಳಿದರೆ ಅವರಿಗೆ ಬಹಳ ಬೇಸರವಾಗುತ್ತೆ. ಸ್ವತಂತ್ರ ಮಹಿಳೆಯು ಪುರುಷ ಒಂದು ಕ್ಲಾಸ್ ಮೈಂಟೇನ್ ಮಾಡಬೇಕು ಮತ್ತು ತನ್ನದೇ ಆದ ವ್ಯಕ್ತಿತ್ವ ಹೊಂದಿರಬೇಕು ಎಂದು ಬಯಸುತ್ತಾಳೆ. ನಿಮ್ಮದೇ ಆದ ಮ್ಯಾನರಿಸಂನಲ್ಲಿ ಕೆಲಸ ನಿರ್ವಹಿಸುವುದನ್ನು ನೋಡಲು ಮಹಿಳೆಯರು ಹೆಚ್ಚು ಇಚ್ಛಿಸುತ್ತಾರೆ.

ಮಹಿಳೆಯರು ಹೆಚ್ಚು ಮಾತನಾಡಲು ಬಯಸುತ್ತಾರೆ

ಮಹಿಳೆಯರು ಹೆಚ್ಚು ಮಾತನಾಡಲು ಬಯಸುತ್ತಾರೆ

ಜಡೆಗಳು ಸೇರಿದ್ರೆ ಅಲ್ಲಿ ಮೌನಕ್ಕೆ ಆಸ್ಪದವೇ ಇರೋದಿಲ್ಲ.ಮಹಿಳೆಯರು ಹೆಚ್ಚು ಮಾತನಾಡಲು ಬಯಸುತ್ತಾರೆ. ನೀವು ಅವರ ಜೊತೆ ಹರಟಿದರೆ ಅವರಿಗೆ ಬಹಳ ಇಷ್ಟವಾಗುತ್ತೆ. ಒಂದು ವೇಳೆ ನೀವು ಆಕೆ ಹೇಳುವ ಎಲ್ಲಾ ವಿಚಾರಗಳಿಗೆ ತಲೆ ಅಲ್ಲಾಡಿಸಿದರೆ ಆಕೆಗೆ ಬಹಳ ಸಂತೋಷವಾಗುತ್ತೆ. ಅವನ ಮನಸ್ಸಲ್ಲಿ ಬರುವ ಆಲೋಚನೆಗಳಿಗೆ ಈತನಲ್ಲಿ ಜಾಗವಿದೆ ಎಂಬ ಭಾವನೆಯೇ ಆಕೆ ಖುಷಿ ನೀಡುತ್ತೆ. ಮಹಿಳೆಯ ಜೊತೆ ನೀವು ಉತ್ತಮ ಬಾಂಧವ್ಯ ಹೊಂದಬೇಕು ಎಂದರೆ ಮೊದಲು ಉತ್ತಮ ಕೇಳುಗನಾಗಬೇಕು. ಅತೀ ಹೆಚ್ಚು ಮಾತನಾಡುವವರ ಮಹಿಳೆಯರಿಗೆ ಪ್ರೀತಿ ಹೆಚ್ಚು.

ಪ್ರಮುಖ ದಿನಾಂಕಗಳನ್ನು ನೆನಪಿಟ್ಟುಕೊಳ್ಳಿ

ಪ್ರಮುಖ ದಿನಾಂಕಗಳನ್ನು ನೆನಪಿಟ್ಟುಕೊಳ್ಳಿ

ಪ್ರಮುಖ ದಿನಾಂಕಗಳು, ಪ್ರಮುಖ ಸ್ಥಳಗಳನ್ನು ಮರೆಯಬೇಡಿ. ಯಾವಾಗಲೂ ಪ್ರಮುಖ ದಿನಾಂಕಗಳನ್ನು ಮರೆತರೆ , ಖಂಡಿತ ಮಹಿಳೆಯರ ಮನಸ್ಸನ್ನು ನಿಮ್ಮಿಂದ ಗೆಲ್ಲಲು ಸಾಧ್ಯವಾಗುವುದಿಲ್ಲ. ಮತ್ತು ನಿಮ್ಮ ಸಂಬಂಧ ವಿರುದ್ಧ ದಿಕ್ಕಿನ ಸರಳ ರೇಖೆಯಲ್ಲಿ ತೆರಳಬೇಕಾಗುತ್ತದೆ. ಮದುವೆ ದಿನಾಂಕ. ಮೊದಲು ಕಿಸ್ ಮಾಡಿದ ದಿನ, ವ್ಯಾಲಂಟೈನ್ಸ್ ಡೇ, ಹುಟ್ಟಿದ ದಿನ ಇವುಗಳನ್ನೆಲ್ಲ ಮರೆಯಬೇಡಿ. ಇದು ಆಕೆಯನ್ನು ಖುಷಿಗೊಳಿಸುತ್ತೆ ಮತ್ತು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತೆ.

ತಯಾರಾಗಲು ಅವರಿಗೆ ಹೆಚ್ಚು ಸಮಯ ಕೊಡಿ

ತಯಾರಾಗಲು ಅವರಿಗೆ ಹೆಚ್ಚು ಸಮಯ ಕೊಡಿ

ಎಲ್ಲಿಗಾದರೂ ಹೊರಡುವಾಗ ಮಹಿಳೆಯರು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಆ ಸಮಯವನ್ನು ಅವರಿಗೆ ನೀವು ಬಿಡಲೇ ಬೇಕು. ಹೆಚ್ಚು ಸಮಯ ನೀಡದೆ ಗಡಿಬಿಡಿಗೊಳಿಸಿದರೆ ಮಹಿಳೆಯರಿಗೆ ಕಿರಿಕಿರಿಯಾಗುತ್ತೆ. ಬೇರೆ ಪುರುಷರು ಆಕೆಯನ್ನು ನೋಡಿದಾಗ ನೀವು ಹೊಟ್ಟೆ ಕಿಚ್ಚು ಪಡದೇ ಇರುವುದು ಅಥವಾ ನರ್ವಸ್ ಆಗದೇ ಇರುವುದನ್ನು ಮಹಿಳೆಯರು ಹೆಚ್ಚು ಇಷ್ಟ ಪಡುತ್ತಾರೆ. ಡ್ರೆಸ್ ಮಾಡಿಕೊಳ್ಳಲು ಮಹಿಳೆಯರಿಗೆ ಹೆಚ್ಚು ಸಮಯ ಬೇಕು. ಅದಕ್ಕೆ ನೀವು ಡಿಸ್ಟರ್ಬ್ ಮಾಡುವುದು ಅವರಿಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ನೀವು ಅವರಿಗೆ ಡ್ರೆಸ್ ಮಾಡಿಕೊಳ್ಳಲು ಬಿಡುವುದನ್ನು ಅವರು ನಿಮ್ಮಿಂದ ನಿರೀಕ್ಷಿಸುತ್ತಾರೆ.

ಮಹಿಳೆಯರು ಮಿಲನದ ಬಳಿಕವೂ ಮುದ್ದಾಟವನ್ನು ಬಯಸುತ್ತಾರೆ

ಮಹಿಳೆಯರು ಮಿಲನದ ಬಳಿಕವೂ ಮುದ್ದಾಟವನ್ನು ಬಯಸುತ್ತಾರೆ

ಪುರುಷ ಭಾವಪರವಶೆಯ ಹಂತವನ್ನು ತಲುಪಿದಾಗ ಆತನ ಜಾಗೃತ ಮನಸ್ಸು ಸ್ಥಗಿತಗೊಳ್ಳುತ್ತದೆ ಹಾಗೂ ಈ ಸಮಯದಲ್ಲಿ ನಿದ್ದೆ ಸ್ವಾಭಾವಿಕವಾಗಿಯೇ ಆವರಿಸುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಮಹಿಳೆಯರಿಗೆ ಮಿಲನದ ತಕ್ಷಣ ನಿದ್ದೆ ಬರುವುದಿಲ್ಲ. ಮಹಿಳೆಯರ ದೇಹದಲ್ಲಿ ಪ್ರಕೃತಿ ನಿರ್ಮಿಸಿರುವ ಈ ವೈಪರೀತ್ಯದಿಂದಲೇ ಮಹಿಳೆಯರು ಮಿಲನದ ಬಳಿಕವೂ ಕೊಂಚ ಹೆಚ್ಚು ಹೊತ್ತು ಮುದ್ದಾಟವನ್ನು ಬಯಸುತ್ತಾರೆ.

ಮಾತು ಕೊಟ್ಟು ಅದನ್ನು ಮುರಿಯಬೇಡಿ

ಮಾತು ಕೊಟ್ಟು ಅದನ್ನು ಮುರಿಯಬೇಡಿ

ಪ್ರತಿ ಮಹಿಳೆಯೂ ತನ್ನ ಪುರುಷ ನಂಬಿಕಸ್ಥನಾಗಿರಬೇಕು ಎಂದು ಬಯಸುತ್ತಾಳೆ. ಅದು ಸಾಧ್ಯವಾಗುವುದು ನೀವು ನಿಮ್ಮ ಮಾತನ್ನು ಉಳಿಸಿಕೊಂಡಾಗ ಮಾತ್ರ. ನೀವು ಯಾವುದೇ ಪ್ರಾಮಿಸ್ ಮಾಡದೇ ಇದ್ದರೆ ತೊಂದರೆ ಇಲ್ಲ ಆಕೆಗೆ. ಆದರೆ ಮಾತುಕೊಟ್ಟು ಅದನ್ನು ಮುರಿದರೆ ಮಾತ್ರ ಆಕೆ ಸುಮ್ಮನಿರಲಾರಳು. ಪ್ರತಿ ಮಹಿಳೆಗೂ ತನ್ನದೇ ಆದ ಆಸೆ ಆಕಾಂಕ್ಷೆಗಳಿರುತ್ತೆ. ಅದನ್ನುಪೂರ್ಣಗೊಳಿಸಿಕೊಳ್ಳಲು ಯಾವಾಗಲೂ ಪುರುಷರ ನೆರವನ್ನು ಬಯಸುತ್ತಾಳೆ. ಒಂದು ಸಂಬಂಧ ಉತ್ತಮವಾಗಿರ ಬೇಕೆಂದರೆ ಆಕೆಯ ಆಸೆಗಳಿಗೆ ನೀವು ಬೆಲೆ ನೀಡುವುದು ಬಹಳ ಮುಖ್ಯವಾಗುತ್ತದೆ. ಈ ಸರಳ ವಿಧಾನಗಳನ್ನು ಅನುಸರಿಸಿದರೆ ಖಂಡಿತ ಒಬ್ಬ ಪುರುಷ ಮತ್ತು ಮಹಿಳೆ ತಮ್ಮ ಸಂಬಂಧದಲ್ಲಿ ಸುಖವನ್ನುಕಾಣಲು ಸಾಧ್ಯವಿದೆ. ಮಹಿಳೆಯರ ಕೆಲವು ಸಿಂಪಲ್ ಆಸೆಗಳಿವು.ಇವುಗಳನ್ನು ಪೂರೈಸಿಕೊಂಡರೆ ನೀವು ಜೀವಮಾನವಿಡೀ ಸುಖದಿಂದ ಇರಲು ಸಾಧ್ಯವಿದೆ. ಈ ಲೇಖನ ನಿಮಗೆ ಇಷ್ಟವಾಯ್ತು ಎಂದು ಭಾವಿಸುತ್ತೀವಿ. ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ.

English summary

Things That Women Want From Men; Do You Know?

Women expect a lot but the expectations are all about small things or emotions. In order to know the wants a woman has, one must seek deep into her feelings and her mind to find it out. But in general, there are certain expectations and wants a woman has. Here are 7 things that women want from men and you should know about this...
X
Desktop Bottom Promotion