For Quick Alerts
ALLOW NOTIFICATIONS  
For Daily Alerts

ಮಹಿಳೆಯರಿಗೂ ಅದೆಲ್ಲಾ ಆಸೆಗಳಿರುತ್ತವೆ, ಆದರೆ ಬಾಯ್ಬಿಟ್ಟು ಹೇಳಲ್ಲ!

By Arshad
|

ಜಗತ್ತಿನಲ್ಲಿ ಹಲವಾರು ರಹಸ್ಯಗಳು ಇರುತ್ತವೆ. ಅವುಗಳಲ್ಲಿ ಅದ್ಭುತವಾದ ರಹಸ್ಯ ಎಂದರೆ ಅದು ಹೆಣ್ಣು. ಆಕೆಯ ಕುರಿತಾಗಿ ಇನ್ನೂ ಹಲವಾರು ವಿಚಾರಗಳು ಪ್ರಪಂಚಕ್ಕೆ ತಿಳಿದಿಲ್ಲ. ತಿಳಿದುಕೊಳ್ಳುವುದರೊಳಗೆ ಇನ್ನು ಹಲವಾರು ರಹಸ್ಯಗಳು ಬಂದು ಅದರೊಂದಿಗೆ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ. ಏಕೆಂದರೆ ಆಕೆ ಸ್ತ್ರೀ, ಅವರು ಹಾಗೆಯೇ ರಹಸ್ಯದಲ್ಲಿಯೇ ಅತ್ಯಂತ ರಹಸ್ಯವಾದವರು.

ಇನ್ನು ಇವರ ಕಾಮಾಸಕ್ತಿಯ ಕುರಿತಾಗಿ ವಿಜ್ಞಾನಿಗಳಿಗೆ ಸರಿಯಾಗಿ ತಿಳಿದಿಲ್ಲ ಎಂದರೆ ನೀವೇ ಊಹಿಸಿ, ಇನ್ನು ನಮ್ಮ ನಿಮ್ಮಂತಹವರಿಗೆ ಎಷ್ಟು ತಿಳಿದಿರಬೇಕು. ಇಂದು ಮಹಿಳೆಯರ ಸ್ಥಾನಮಾನವು ಶತಮಾನಗಳ ಹಿಂದಿನ ಪರಿಸ್ಥಿತಿಗಿಂತ ಸ್ವಲ್ಪ ಸುಧಾರಿಸಿದೆ. ಅವರಿಗೆ ಸ್ವಲ್ಪ ಸ್ವಾತಂತ್ರ್ಯ, ಸ್ಥಾನಮಾನ ಮತ್ತು ಇನ್ನಿತರ ಸವಲತ್ತುಗಳು ಲಭ್ಯವಾಗಿವೆ. ಆದರೂ ಇವರು ಬೆಡ್‌ರೂಮಿನಲ್ಲಿ ತಮ್ಮ ಕಾಮಾಸಕ್ತಿಯ ಕುರಿತಾಗಿ ತಮ್ಮ ಸಂಗಾತಿಗೆ ಮನ ಬಿಚ್ಚಿ ತಿಳಿಸುವ ಮಟ್ಟಿಗೆ ಹೋಗಿಲ್ಲ. ಎಲ್ಲವನ್ನು ಗಂಡಸು ಗ್ರಹಿಸಬೇಕು ಎಂದು ಭಾವಿಸುತ್ತಾರೆ.

ಹೌದು, ಮಹಿಳೆಯರ ಮನವೇ ಅಂತಹದ್ದು, ಸದಾ ಚಂಚಲ, ಸದಾ ನಿಗೂಢ. ಪುರುಷ ತನಗೆ ಇಷ್ಟವಾಗಿದ್ದಾನೆ, ಆತನ ಸಂಗ ಬಯಸುತ್ತೇನೆ ಎಂದು ಅವರು ಬಾಯಿಬಿಟ್ಟು ಹೇಳಲಾರರು, ಆದರೆ ಈ ವಿಷಯಗಳನ್ನು ಕೆಲವು ಗುಪ್ತ ಸಂಜ್ಞೆಗಳ ಮೂಲಕ ಪ್ರಕಟಿಸಬಲ್ಲರು. ಆದರೆ ಈ ಗುಪ್ತ ಸಂಜ್ಞೆಗಳನ್ನು ಅರ್ಥೈಸಿಕೊಳ್ಳುವ ಜಾಣತನವಿದ್ದರೆ ಮಾತ್ರ ಪುರುಷರು ಆ ಮಹಿಳೆಯ ಹೃದಯವನ್ನು ಗೆಲ್ಲಬಲ್ಲರು. ಹುಟ್ಟಿನಿಂದಲೇ ಬಂದ ಹಲವು ಸ್ವಭಾವಗಳು ಗಂಡು ಹೆಣ್ಣುಗಳಿಗೆ ಭಿನ್ನವಾಗಿರುತ್ತದೆ. ಆ ಪ್ರಕಾರವೇ ನಮ್ಮ ಹಾವಭಾವಗಳು ಪ್ರಕಟಗೊಳ್ಳುತ್ತವೆ. ಹೆಣ್ಣಿನಿಂದ ಬರುವ ಈ ಹಾವಭಾವಗಳನ್ನು ಗಂಡಿನ ಹಾವಭಾವಗಳಿಗೆ ಹೋಲಿಸಿದರೆ ಎರಡೂ ವಿಭಿನ್ನ ಅರ್ಥವನ್ನು ನೀಡುವುದನ್ನು ಗಮನಿಸಬಹುದು.

ಈ ಸಂಜ್ಞೆಗಳನ್ನು ಅರ್ಥೈಸಿಕೊಳ್ಳದೇ ತಡವರಿಸುವ ಪುರುಷರನ್ನು ಮಹಿಳೆಯರು ಇಷ್ಟಪಡುವುದಿಲ್ಲ. ಪರಿಣಾಮ-ದಕ್ಕದೇ ಹೋಗುವ ಪ್ರೀತಿ, ಮುಂದುವರೆಯಬಹುದಾಗಿದ್ದ ಸಂಬಂಧದ ಕಡಿತ! ಹೀಗಾಗಬಾರದೆಂದಿದ್ದರೆ ಈ ಗುಪ್ತ ಸಂಜ್ಞೆಗಳನ್ನು ಗುರುತಿಸುವ ಚಾಲಾಕಿತನವನ್ನು ಕಲಿಯುವುದು ಉತ್ತಮ. ಅತಿ ಸಾಮಾನ್ಯವಾದ ಹತ್ತು ಗುಪ್ತ ಸಂಜ್ಞೆಗಳನ್ನು ಇಲ್ಲಿ ವಿವರಿಸಲಾಗಿದೆ... ಮುಂದೆ ಓದಿ....

ಆಕೆ ಮೈಮಾಟ ತೋರುವ ಬಟ್ಟೆ ಧರಿಸಿದ್ದರೆ!

ಆಕೆ ಮೈಮಾಟ ತೋರುವ ಬಟ್ಟೆ ಧರಿಸಿದ್ದರೆ!

ಸಾಧಾರಣವಾಗಿ ಪುರುಷರು ಮೈಮಾಟ ತೋರುವ ಬಟ್ಟೆಗಳನ್ನು ಇಷ್ಟಪಡುತ್ತಾರೆ. ಅದರಲ್ಲೂ ಹೆಚ್ಚು ಚರ್ಮ ತೋರುವ ಬಟ್ಟೆಗಳಿಗೆ ಅವರ ಕಣ್ಣು ಹೆಚ್ಚು ಅಗಲವಾಗುತ್ತದೆ. ಎದೆಸೀಳನ್ನು ತೋರುವ ಬಿಗಿಯಾದ ಮತ್ತು ಮೈಮಾಟ ಮೆರೆಯುವ ಬಟ್ಟೆಗಳನ್ನು ತೊಟ್ಟು ಮುಖ ಕೆಳಗೆ ಮಾಡಿ ಕಣ್ಣಿನ ವಾರೆನೋಟದ ನೋಟ ನೀಡುವುದು.

 ಡಬಲ್ ಮೀನಿಂಗ್ ಡೈಯಲಾಗ್ ಮಾತನಾಡುತ್ತಿದ್ದರೆ!

ಡಬಲ್ ಮೀನಿಂಗ್ ಡೈಯಲಾಗ್ ಮಾತನಾಡುತ್ತಿದ್ದರೆ!

ಸಾಧಾರಣವಾಗಿ ಮಹಿಳೆಯರು ಬೈಗುಳದ ಅಥವಾ ಎರಡರ್ಥ ಬರುವ ಪದಗಳನ್ನು ಉಪಯೋಗಿಸುವುದಿಲ್ಲ. ಆದರೆ ಈ ಸಮಯದಲ್ಲಿ ಎರಡರ್ಥ ಬರುವ ಪದಗಳನ್ನು ತಮ್ಮಮಾತುಗಳಲ್ಲಿ ಉಪಯೋಗಿಸಿವುದು ಸ್ಪಷ್ಟವಾದ ಗುಪ್ತ ಸಂಜ್ಞೆಯಾಗಿದೆ.

 ಅನಗತ್ಯ ಮೆಚ್ಚುಗೆ ಸೂಚಿಸುತ್ತಿದರೆ

ಅನಗತ್ಯ ಮೆಚ್ಚುಗೆ ಸೂಚಿಸುತ್ತಿದರೆ

ನಿಮ್ಮ ಚಿಕ್ಕ ಪುಟ್ಟ ಸಹಾಯ, ಸಾಧನೆ ಹಾಗೂ ಜ್ಞಾನಕ್ಕೆ ತನ್ನ ಮೆಚ್ಚುಗೆ ಸೂಚಿಸುವುದು. ಬೇರೆ ಸಮಯದಲ್ಲಿ ಅಧ್ವಾನವಾಗಿದ್ದ ನಿಮ್ಮ ಬಣ್ಣಗಳ ಆಯ್ಕೆ ಈ ಸಮಯದಲ್ಲಿ ವ್ಹಾ ಎಂಥಾ ಬಣ್ಣದ ಆಯ್ಕೆ ಎಂಬ ಮೆಚ್ಚುಗೆ ಬಂದರೆ ಇದರ ಅರ್ಥ ಬೇರೆಯೇ ಎಂದು ತಿಳಿದುಕೊಳ್ಳಬೇಕು.

 ಕುಂಟುನೆಪದಿಂದ ಸ್ಪರ್ಶಿಸುವುದು!

ಕುಂಟುನೆಪದಿಂದ ಸ್ಪರ್ಶಿಸುವುದು!

ಇಲ್ಲದ ಐಸ್ ಕ್ರೀಮ್ ಒರೆಸುವ ನೆವದಲ್ಲಿ ತುಟಿಯನ್ನು ಸ್ಪರ್ಶಿಸುವುದು, ಸಂದರ್ಭವಲ್ಲದಿದ್ದರೂ ನೃತ್ಯಕ್ಕೆ ಆಹ್ವಾನಿಸುವುದು ಅಥವಾ ನೃತ್ಯದ ಭಂಗಿಯೊಂದನ್ನು ಕಲಿಸಲು ಕರೆಯುವುದು

ನಿಮ್ಮ ಹತ್ತಿರ ಬಂದು ಕುಳಿತುಕೊಳ್ಳುವುದು

ನಿಮ್ಮ ಹತ್ತಿರ ಬಂದು ಕುಳಿತುಕೊಳ್ಳುವುದು

ಬೈಕಿನ ಹಿಂಭಾಗದಲ್ಲಿ ಕುಳಿತಾಗ ಮೈತಾಕುವಷ್ಟು ಮುಂದೆ ಸರಿಯುವುದು, ಸೋಫಾದಲ್ಲಿ ಸಾಕಷ್ಟು ಜಾಗವಿದ್ದರೂ ಅತ್ಯಂತ ಹತ್ತಿರ ಒತ್ತಿ ಕುಳಿತುಕೊಳ್ಳುವುದು ಮೊದಲಾದವು.

ಅನಗತ್ಯವಾಗಿ ಕೂದಲನ್ನು ಸವರಿಕೊಳ್ಳುವುದು

ಅನಗತ್ಯವಾಗಿ ಕೂದಲನ್ನು ಸವರಿಕೊಳ್ಳುವುದು

ಮುಂಗುರುಳನ್ನು ತೋರುಬೆರಳಿನಿಂದ ಸುರುಳಿಸುತ್ತಿಸುವುದು, ತುಟಿಗಳನ್ನು ಹಲ್ಲುಗಳ ನಡುವೆ ಸವರಿಕೊಳ್ಳುವುದು.

ಸೆಕ್ಸ್ ವಿಷಯದ ಬಗ್ಗೆ ಮಾತನಾಡುವುದು!

ಸೆಕ್ಸ್ ವಿಷಯದ ಬಗ್ಗೆ ಮಾತನಾಡುವುದು!

ಸಾಧಾರಣವಾಗಿ ಮಹಿಳೆಯರು ಲೈಂಗಿಕತೆಯ ಬಗ್ಗೆ ಪುರುಷರೊಡನೆ ನೇರವಾಗಿ ಮಾತನಾಡುವುದಿಲ್ಲ. ಆದರೆ ತನ್ನ ಇಂಗಿತವನ್ನು ತಿಳಿಸಲು ಲೈಂಗಿಕತೆಯ ಬಗ್ಗೆ ಸ್ಪಷ್ಟ ಪದಗಳನ್ನು ಉಪಯೋಗಿಸಿ ವಿಚಾರ ವಿಮರ್ಶಿಸುವುದು.

ಹೆಂಗಸರು ಏಕೆ ಮಿಲನದಲ್ಲಿ ಹಾತೊರೆಯುತ್ತಾರೆ?

ಹೆಂಗಸರು ಏಕೆ ಮಿಲನದಲ್ಲಿ ಹಾತೊರೆಯುತ್ತಾರೆ?

ಅದಾಗಿಯೂ ಹೆಂಗಸರು ಏಕೆ ಸ್ಪರ್ಶದ ಆನಂದವನ್ನು ಅನುಭವಿಸಲು ಹಾತೊರೆಯುತ್ತಾರೆ ಎಂಬುದಕ್ಕೆ ಕೆಲವೊಮ್ಮೆ ಸ್ವಾರ್ಥ ಕಾರಣವಾದರೆ, ಮತ್ತೊಮ್ಮೆ ಗಂಡಸನ್ನು ಯಾಮಾರಿಸುವ ಸಲುವಾಗಿ ಎಂದು ಹೇಳಲಾಗುತ್ತದೆ. ಆದರೆ ಹೆಂಗಸರು ಬುದ್ಧಿವಂತರು, ಅವರನ್ನು ನೀವು ಮೋಸಗೊಳಿಸಲು ಅಷ್ಟು ಸುಲಭವಲ್ಲ. ಹೆಂಗಸರು ಯಾವಾಗಲು ತಮ್ಮ ಅಗತ್ಯತೆಗಳನ್ನು ಮತ್ತು ನಿರ್ಧಾರಗಳನ್ನು ನಿಖರವಾಗಿ ತಿಳಿದಿರುತ್ತಾರೆ. ಅದರ ಮೂಲಕವೇ ಗಂಡಸನ್ನು ಅಳೆಯುತ್ತಾರೆ.

ಒಲವಿನ ಪ್ರತೀಕವಾಗಿ

ಒಲವಿನ ಪ್ರತೀಕವಾಗಿ

ನೀವು ಆಕೆಗೆ ಮಾಡಿದ ಒಳ್ಳೆಯ ಕೆಲಸ ಅಥವಾ ತೋರುತ್ತಿರುವ ಪ್ರೀತಿಯನ್ನು ನಿಮಗೆ ಪ್ರತಿಯಾಗಿ ನೀಡಲು ಆಕೆ ಮಿಲನವನ್ನು ಆಯ್ದುಕೊಳ್ಳುತ್ತಾಳೆ. ನಿಮ್ಮ ಕಾರ್ಯದಿಂದ ಆಕೆಗೆ ಸಂತೋಷವಾದಾಗ ಅದಕ್ಕಾಗಿ ಆಕೆ ತನ್ನನ್ನೇ ನಿಮಗೆ ಅರ್ಪಿಸಿಕೊಳ್ಳುತ್ತಾಳೆ.

ಸ್ವಾಭಾವಿಕವಾದ ಮುಂದಿನ ಹಂತ

ಸ್ವಾಭಾವಿಕವಾದ ಮುಂದಿನ ಹಂತ

ಆಗ ತಾನೇ ನೀವು ಒಂದು ಸಂಬಂಧಕ್ಕೆ ಕಾಲಿರಿಸಿದ್ದೀರಿ, ಮುಂದಿನ ದಿನಗಳಲ್ಲಿ ನೀವು ಮತ್ತು ಆಕೆ ಒಟ್ಟಿಗೆ ಇರುತ್ತೀರಿ. ಆಗ ನಿಮ್ಮ ಸಂಬಂಧವು ಮುಂದಿನ ಹಂತಕ್ಕೆ ತೆರಳುವ ಪೀಠಿಕೆಯಾಗಿ ಆಕೆ ನಿಮ್ಮೊಂದಿಗೆ ಮಿಲನದಲ್ಲಿ ತೊಡಗಿಸಿಕೊಳ್ಳುತ್ತಾಳೆ.

ಆಕೆಗೆ ಮೂಡ್ ಬಂದಿದೆ

ಆಕೆಗೆ ಮೂಡ್ ಬಂದಿದೆ

ಹೆಂಗಸರು ತಮಗೆ ಮಿಲನದ ಆಸೆ ಬಂದಿದೆ ಎಂದು ತೋರಿಸುವುದು ವಿರಳ, ಒಂದು ವೇಳೆ ನೀವೇನಾದರು ಆ ಭಾವನೆಯನ್ನು ಅವರಲ್ಲಿ ಹೊರ ಹೊಮ್ಮಿಸಿದ್ದರೆ, ಬಹುಶಃ ಈ ರಾತ್ರಿ ನೀವೇ ಅದೃಷ್ಟಶಾಲಿಗಳು.

 ಆಕೆಗೆ ಭಾವನಾತ್ಮಕ ಬೆಂಬಲ ಬೇಕು

ಆಕೆಗೆ ಭಾವನಾತ್ಮಕ ಬೆಂಬಲ ಬೇಕು

ದೈಹಿಕ ಪ್ರೀತಿಯು ಭಾವನಾತ್ಮಕ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಮಾರ್ಗವಷ್ಟೇ. ಆಕೆ ನಿಮ್ಮೊಂದಿಗೆ ಮಲಗಲು ಸಮ್ಮತಿಸಿದಳೆಂದರೆ ಆಕೆಗೆ ನೀವು ಭಾವನಾತ್ಮಕವಾಗಿ ಸಹ ಬೇಕು ಎಂದರ್ಥ.

ಒಂದಿಷ್ಟು ಮುತ್ತಿನ ಕತೆ

ಒಂದಿಷ್ಟು ಮುತ್ತಿನ ಕತೆ

ಹೌದು, ಹೆಂಗಸರಿಗೆ ಗಂಡಸು ಮುದ್ದಾಗಿರದಿದ್ದರು ಪರವಾಗಿಲ್ಲ. ತಮ್ಮನ್ನು ಮುದ್ದಾಡುವ ಮತ್ತು ರಮಿಸುವ ಗುಣವನ್ನು ಅವರು ಹೊಂದಿರಬೇಕು ಎಂದು ಭಾವಿಸುತ್ತಾರೆ. ನೀವು ಅವರನ್ನು ಉತ್ತಮವಾಗಿ ಚುಂಬಿಸಿದರೆ, ಮಿಲನದ ಸುಖ ನಿಮಗೆ ಕಟ್ಟಿಟ್ಟ ಬುತ್ತಿ. ಇನ್ನೇಕೆ ತಡ, ಮುದ್ದಾಡೆಂದಿದೆ ಮಲ್ಲಿಗೆ ಹೂವು.......

ನಿಮಗೆ ಉಡುಗೊರೆ ನೀಡಲು

ನಿಮಗೆ ಉಡುಗೊರೆ ನೀಡಲು

ನೀವು ಅವರಿಗೆ ವಜ್ರದ ಉಂಗುರ ತಂದಿರುತ್ತೀರಿ, ಅಥವಾ ಅವರಿಗೆ ಹಿಡಿಸುವ ಯಾವುದೋ ಒಂದು ಉಡುಗೊರೆಯನ್ನು ಅವರಿಗೆ ನೀಡಿದಾಗ ಅವರಿಗೆ ಆಗುವ ಆನಂದದಲ್ಲಿ ಅವರು ತಮ್ಮನ್ನೆ ಒಂದು ಉಡುಗೊರೆಯಾಗಿ ನಿಮಗೆ ನೀಡಿ ಬಿಡುತ್ತಾರೆ.

ಏಕಾಂತದಲ್ಲಿ ಪ್ರೀತಿ,ಪ್ರೇಮ, ಪ್ರಣಯ

ಏಕಾಂತದಲ್ಲಿ ಪ್ರೀತಿ,ಪ್ರೇಮ, ಪ್ರಣಯ

ಕಾರಿನ ಸೀಟಿನಲ್ಲಿ ಕುಳಿತು ಸೊಂಟ ಹುಳುಕಿಸಿಕೊಂಡರು ಸಹ ಗಂಡಸರು ಮಿಲನದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ವಿಚಾರದಲ್ಲಿ ಅವರು ಸಾಹಸ ಶೀಲರು. ಆದರೆ ಹೆಂಗಸರಿಗೆ ಇದು ಏಕಾಂತದಲ್ಲಿ ನಡೆಯುವ ದಿವ್ಯ ಪ್ರಕ್ರಿಯೆ. ಒಳ್ಳೆಯ ಹವಾಮಾನ, ದೃಶ್ಯ ವೈಭವ ಮತ್ತು ಬೆಳಕುಗಳ ಸಮ್ಮಿಲನವು ಆಕೆಯಲ್ಲಿ ಮಿಲನದ ಆಸೆಯನ್ನು ಚಿಗುರಿಸಬಲ್ಲವು.

ತಮ್ಮ ಗಂಡನನ್ನು ಒಪ್ಪಿಸಲು

ತಮ್ಮ ಗಂಡನನ್ನು ಒಪ್ಪಿಸಲು

ಯಾವುದೋ ಒಂದು ಕೆಲಸ ತನ್ನ ಗಂಡನಿಂದ ಆಗ ಬೇಕಿರುತ್ತದೆ. ಅದಕ್ಕೇ ಈ ಮಹಾನುಭಾವನವರು ಆಗೋಲ್ಲ ಎಂದಿರುತ್ತಾರೆ. ಏನಾದರು ಮಾಡಿ ಒಪ್ಪಿಸುವ ಧಾವಂತಕ್ಕೆ ಬೀಳುವ ಹೆಂಡತಿ, ಗಂಡನೊಂದಿಗೆ ಮಿಲನದಲ್ಲಿ ಪಾಲ್ಗೊಳ್ಳುತ್ತಾಳೆ. ಹೀಗೆ ಕೊಟ್ಟು ತೆಗೆದುಕೊಳ್ಳುವುದು ನಡೆಯುತ್ತ ಇರುತ್ತದೆ ಬಿಡಿ, ಬೆಡ್‍ರೂಮಿನಲ್ಲಿ!

ಪ್ರೀತಿಯ ಪರಾಕಾಷ್ಠೆ

ಪ್ರೀತಿಯ ಪರಾಕಾಷ್ಠೆ

ಹೆಂಗಸರಿಗೆ ಪ್ರೀತಿ ಮತ್ತು ಕಾಮ ಎರಡೂ ಬೇರೆ ಬೇರೆಯಲ್ಲ. ಅವೆರಡು ಅವರ ಪ್ರಕಾರ ಒಂದೇ, ಆಕೆ ನಿಮ್ಮೊಂದಿಗೆ ಮಲಗಲು ಇಷ್ಟಪಟ್ಟಲ್ಲಿ, ಅದು ಆಕೆ ನಿಮಗಾಗಿ ತೋರುತ್ತಿರುವ ಪ್ರೀತಿಯ ಪರಾಕಾಷ್ಠೆ ಎಂದಷ್ಟೇ ಭಾವಿಸಿ.

ದೇಹ ಬಿಸಿಯದಾಗ

ದೇಹ ಬಿಸಿಯದಾಗ

ಕೇವಲ ಗಂಡಸರು ಮಾತ್ರ ಮೂಡ್ ಬಂದು ದೇಹ ಬಿಸಿಯದಾಗ ಮಿಲನಕ್ಕೆ ಸಿದ್ಧವಾಗುತ್ತಾರೆ ಎಂದು ತಿಳಿಯಬೇಡಿ, ಈ ವಿಷಯದಲ್ಲಿ ಹೆಂಗಸರ ಭಾವನೆಯು ಸಹ ಅದೇ ಆಗಿರುತ್ತದೆ. ಯಾವುದನ್ನು ನಿಯಂತ್ರಿಸಲು ಆಗುವುದಿಲ್ಲವೋ, ಆಗ ಎಲ್ಲರೂ ಆ ಭಾವನೆಗೆ ಶರಣಾಗುತ್ತಾರೆ ಇದಕ್ಕೆ ಸ್ತ್ರೀಯರು ಸಹ ಹೊರತಲ್ಲ.

 ಒತ್ತಡವನ್ನು ನಿವಾರಿಸಿಕೊಳ್ಳಲು

ಒತ್ತಡವನ್ನು ನಿವಾರಿಸಿಕೊಳ್ಳಲು

ಹೆಂಗಸರಿಗೆ ಅಧಿಕ ಕಾರ್ಯದೊತ್ತಡದಿಂದ ಉಂಟಾಗುವ ಆಯಾಸದಿಂದ ಮುಕ್ತಿ ಪಡೆಯಲು ಸಿಗುವ ಮಾರ್ಗವೆಂದರೆ ಅದು ಮಿಲನ. ಏಕೆಂದರೆ ಹೆಂಗಸರು ತಮ್ಮ ಒತ್ತಡವನ್ನು ನಿವಾರಿಸಿಕೊಳ್ಳಲು ಮಿಲನದಲ್ಲಿ ಪಾಲ್ಗೊಳ್ಳುವುದು ಸಹಜ.

 ಆಕೆಯಲ್ಲಿ ಹಾರ್ಮೊನುಗಳು ಬಿಡುಗಡೆಯಾದಾಗ

ಆಕೆಯಲ್ಲಿ ಹಾರ್ಮೊನುಗಳು ಬಿಡುಗಡೆಯಾದಾಗ

ಮುಟ್ಟಿನ ಅವಧಿಯ ನಡುವೆ ಒಂದು ಹಂತದಲ್ಲಿ ಮಹಿಳೆಯರಲ್ಲಿ ಫಲವಂತಿಕೆಯು ರೂಪುಗೊಳ್ಳುತ್ತದೆ, ಇದನ್ನು ಒವುಲೇಟಿಂಗ್ ಎಂದು ಸಹ ಕರೆಯುತ್ತಾರೆ. ಈ ಅವಧಿಯಲ್ಲಿ ಸಹಜವಾಗಿ ಆಕೆಯಲ್ಲಿ ಕಾಮಾಸಕ್ತಿಯು ಕಂಡು ಬರುತ್ತದೆ. ಆಗ ನಡೆಯುವ ಮಿಲನವೇ ಆಕೆಯನ್ನು ಗರ್ಭವತಿಯನ್ನಾಗಿಸುತ್ತದೆ.

ಆಕೆ ನಿಮ್ಮ ಮೇಲೆ ಪ್ರಾಬಲ್ಯವನ್ನು ತೋರಲು

ಆಕೆ ನಿಮ್ಮ ಮೇಲೆ ಪ್ರಾಬಲ್ಯವನ್ನು ತೋರಲು

ಗಂಡಸರು ಹಾಸಿಗೆಯಲ್ಲಿ ಹೆಂಗಸಿನ ಮುಂದೆ ತಮ್ಮ ಪ್ರಾಬಲ್ಯವನ್ನು ತೋರಲು ಮುಂದಾಗುತ್ತಾರೆ. ಆದರೆ ನೆನಪಿರಲಿ ಒಂದೊಮ್ಮೆ ಆಕೆಯೇನಾದರು ಹಾಸಿಗೆಯಲ್ಲಿ ಪ್ರಾಬಲ್ಯ ಮೆರೆದರೆ, ಜೀವನದ ಪ್ರತಿ ಹಂತದಲ್ಲು ನಿಮ್ಮನ್ನು ಹಣ್ಣು ಗಾಯಿ ನೀರು ಗಾಯಿ ಮಾಡಿಬಿಡುತ್ತಾಳೆ.

ನೀವು ಸದಾ ಆಕೆಯನ್ನೇ ಅವಲಂಬಿಸಬೇಕು

ನೀವು ಸದಾ ಆಕೆಯನ್ನೇ ಅವಲಂಬಿಸಬೇಕು

ಗಂಡಸರಿಗೆ ತಮ್ಮ ಹೆಂಡತಿ ಆತನನ್ನೆ " ಅವಲಂಬಿಸಬೇಕು" ಎಂಬ ಭಾವನೆ ಇರುವುದಿಲ್ಲ. ಅದು ಆತನಿಗು ಸಹ ಹಿಡಿಸುವುದಿಲ್ಲ. ಆದರೆ ಹೆಂಗಸರಿಗೆ ಇದರ ವಿರುದ್ಧ ಭಾವನೆಯಿರುತ್ತದೆ. ಆಕೆಗೆ ತನ್ನವರು ಸದಾ ತನ್ನನ್ನೆ ಬಯಸಬೇಕು, ತನ್ನನ್ನೆ ಅವಲಂಬಿಸಬೇಕು ಎಂಬ ಭಾವನೆ ಇರುತ್ತದೆ. ಏಕೆಂದರೆ ನೀವೆಲ್ಲಿ ಆಕೆಯನ್ನು ತ್ಯಜಿಸಿ ಹೋಗುತ್ತೀರೋ ಎಂಬ ಅಭದ್ರತೆ ಮತ್ತು ಭಯ ಆಕೆಯನ್ನು ಕಾಡುತ್ತಿರಬಹುದು. ಅದಕ್ಕಾಗಿ ಆಕೆ ನಿಮ್ಮೊಂದಿಗೆ ಮಲಗಿ ಅದನ್ನು ನಿಮಗೆ ನೆನಪಿಗೆ ತರುವ ಪ್ರಯತ್ನ ಮಾಡುತ್ತಾಳೆ.

English summary

signs that she wants a physical relationship with you

Men want to make love, they make their intentions quite clear. But when women have sex on their mind, it is hard for them to be so explicit. That is why; it is important for men to know the signs that she wants to sleep with you.
X
Desktop Bottom Promotion