For Quick Alerts
ALLOW NOTIFICATIONS  
For Daily Alerts

ಸೆಕ್ಸ್ ಬಗೆಗಿನ ಸೀಕ್ರೆಟ್ಸ್‌ನ್ನು ಪುರುಷರು ಅರಿತಿರಬೇಕು ಎಂದು ಮಹಿಳೆಯರು ಬಯಸುತ್ತಾರಂತೆ!

|

ಪ್ರತಿ ಮಹಿಳೆಯೂ ತನ್ನ ಸಂಗಾತಿ ಸೆಕ್ಸ್ ಬಗ್ಗೆ ಖಂಡಿತವಾಗಿಯೂ ಅರಿತಿರಬೇಕು ಎಂದು ಬಯಸುವ ಕೆಲವು ಸೀಕ್ರೆಟ್ಸ್ ಗುಟ್ಟುಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ.. ಮುಂದೆ ಓದಿ

ಒಳ್ಳೆಯ ಮಾತು ಅತ್ಯುತ್ತಮ ಕಾಮೋತ್ತೇಜಕ

ಮಾತು ಮತ್ತು ಮಹಿಳೆ-ಇವೆರಡನ್ನೂ ಪ್ರತ್ಯೇಕಿಸುವಂತೆಯೇ ಇಲ್ಲ. ಹಾಸ್ಯ ಮಾತುಗಾರ ಪ್ರಾಣೇಶ್ ರವರ ಪ್ರಕಾರ ಮಹಿಳೆಯರಿಗೆ ಸದಾ ಮಾತೇ ಮುಖ್ಯವಾದುದರಿಂದ ಇವರನ್ನು'ಮಾತೆ' ಎನ್ನುತ್ತಾರಂತೆ. ಇದು ವಿನೋದದ ವಿಷಯ ಎನಿಸಿದರೂ ಪ್ರಣಯದ ಸಮಯದಲ್ಲಿ ಮಹಿಳೆ ತನ್ನ ಇನಿಯನ ಮಾತುಗಳನ್ನು ಕೇಳಬಯಸುವುದು ಮಾತ್ರ ಸುಳ್ಳಲ್ಲ. ಮಿಲನಕ್ಕೂ ಮುನ್ನ ಕೊಂಚ ಹೊತ್ತ್ತುಜೊತೆಯಾಗಿ ನಡೆದಾಡಿ ಆತ್ಮೀಯ ಪದಗಳನ್ನು ಬದಲಿಸಿಕೊಳ್ಳುವುದು ಹಾಗೂ ಆದಷ್ಟೂ ಮಾತುಗಳಲ್ಲಿ ತನ್ಮಯರಾಗುವುದು ಅದ್ಭುತವಾದ ಕಾಮೋತ್ತೇಜಕವಾಗಿದೆ.

ಈ ಸಮಯದಲ್ಲಿ ಪುರುಷ ತನ್ನ ಸಂಗಾತಿಯನ್ನೆಷ್ಟು ಪ್ರೀತಿಸುತ್ತೇನೆ, ಆಕೆಗಾಗಿ ಜೀವನ ಮುಡಿಪಾಗಿಡಬಲ್ಲೆ ಎಂಬ ಮಾತುಗಳಿಂದ ಆಕೆಯ ವಿಶ್ವಾಸವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು ಹಾಗೂ ಇವು ಮಾನಸಿಕವಾಗಿ ಮಹಿಳೆಯನ್ನು ಸಂಗಾತಿಯತ್ತ ಆಕರ್ಷಿಸಲು ನೆರವಾಗುತ್ತವೆ. ಹಾಗಾಗಿ ಪ್ರತಿ ಮಹಿಳೆಯೂ ತನ್ನ ಸಂಗಾತಿ ತನ್ನೊಂದಿಗೆ ಹೆಚ್ಚು ಮಾತನಾಡಬೇಕೆಂದು ಬಯಸುತ್ತಾಳೆ....

 ಹೆಚ್ಚಿನ ಮಹಿಳೆಯರು ತಮ್ಮ ರೂಪದ ಬಗ್ಗೆ ಕುತೂಹಲಿಯಾಗಿರುತ್ತಾರೆ

ಹೆಚ್ಚಿನ ಮಹಿಳೆಯರು ತಮ್ಮ ರೂಪದ ಬಗ್ಗೆ ಕುತೂಹಲಿಯಾಗಿರುತ್ತಾರೆ

ಯಾವುದೇ ದಂಪತಿಗಳು ಎಷ್ಟೇ ಕಾಲದವರೆಗೆ ಜೊತೆಯಗಿದ್ದರೂ ಸರಿ, ಪ್ರತಿ ಬಾರಿಯೂ ಮಹಿಳೆ ತನ್ನ ರೂಪವನ್ನು ತನ್ನ ಸಂಗಾತಿ ಮೆಚ್ಚುವಷ್ಟಿಲ್ಲ ಎಂದೇ ಅಂದುಕೊಳ್ಳುತ್ತಿರುತ್ತಾರೆ. ಈ ಕೀಳರಿಮೆಯನ್ನು ಪ್ರಕಟಿಸದ ಮಹಿಳೆಯರು ತಮ್ಮ ರೂಪವನ್ನು ಸಂಗಾತಿ ಬೆಳಕಿನಲ್ಲಿ ನೋಡಬಾರದೆಂದೇ ಕತ್ತಲಿನಲ್ಲಿಯೇ ಬಟ್ಟೆ ಬದಲಿಸಿ ರಾತ್ರಿಯ ಉಡುಪುಗಳನ್ನು ಧರಿಸುತ್ತಾರೆ. ಆದರೆ ತನ್ನ ಸಂಗಾತಿ ಈ ವಿಷಯವನ್ನು ಗಮನಿಸಬೇಕು ಎಂಬ ಬಯಕೆ ಎಲ್ಲಾ ಮಹಿಳೆಯಲ್ಲಿದ್ದರೂ ಕೇವಲ ಕೆಲವೇ ಸೂಕ್ಷ್ಮಸಂವೇದಿ ಪುರುಷರು ಮಾತ್ರ ಈ ವ್ಯತ್ಯಾಸವನ್ನು ಗಮನಿಸುತ್ತಾರೆ. ಸುಳ್ಳೇ ಆಗಿದ್ದರೂ ಸರಿ, ಆಕೆ ಸುಂದರಳಾಗಿದ್ದಾಳೆ ಎಂದು ಹೇಳದಿದ್ದರೂ ಸರಿ, ಮೊದಲಿನಷ್ಟು ಆಕರ್ಷಣೀಯವಾಗಿಲ್ಲ ಎಂಬಂತಹ ಋಣಾತ್ಮಕ ಪದಗಳನ್ನು ಎಂದೂ ಬಳಸುವುದಿಲ್ಲ. ಬದಲಿಗೆ ಆಕೆಯಲ್ಲಿ ಏನು ತನ್ನನ್ನು ಆಕರ್ಷಿಸುತ್ತದೆ ಎಂಬುದನ್ನು ಪುರುಷರು ತಮ್ಮ ಮಾತುಗಳಿಂದ ಪ್ರಕಟಿಸಬೇಕು ಎಂಬುದು ಪ್ರತಿ ಮಹಿಳೆಯ ಆಶಯವಾಗಿದೆ.

ಯಾವುದೇ ಮಹಿಳೆಯನ್ನು ಆಕೆಯ ಜೀವನದಿಂದ ಲೈಂಗಿಕ ಜೀವನವನ್ನು ಪ್ರತ್ಯೇಕಿಸುವಂತಿಲ್ಲ

ಯಾವುದೇ ಮಹಿಳೆಯನ್ನು ಆಕೆಯ ಜೀವನದಿಂದ ಲೈಂಗಿಕ ಜೀವನವನ್ನು ಪ್ರತ್ಯೇಕಿಸುವಂತಿಲ್ಲ

ದಿನದ ಹಲವು ಜಂಜಡಗಳಲ್ಲಿ ಒಂದು ವಿಷಯದಲ್ಲಿರುವ ದುಗುಡಗಳನ್ನು ಇನ್ನೊಂದಕ್ಕೆ ಸಂಬಂಧಿಸದೇ ಇರುವುದು ಪುರುಷರಿಗೆ ಕಷ್ಟವಾಗದೇ ಹೋದರೂ ಮಹಿಳೆಯರಿಗೆ ಮಾತ್ರ ತುಂಬಾ ಕಷ್ಟ. ಉದಾಹರಣೆಗೆ ಪುರುಷರು ಕಛೇರಿಯ ಕೆಲಸದ ತಲೆಬಿಸಿಯನ್ನು ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಮರೆತೇ ಬಿಡುತ್ತಾರೆ. ಆದರೆ ಮಹಿಳೆಯರಿಗೆ ಈ ಸಮಯದಲ್ಲಿಯೂ ಲೈಂಗಿಕ ತೃಪ್ತಿ ದೊರಕಬೇಕೆಂದರೆ ದಿನದ ಅವಧಿಯಲ್ಲಿ ಉತ್ತಮ ಮನೋಭಾವ ಹಾಗೂ ತೃಪ್ತಿಕರ ಅನುಭವಗಳಿಂದ ಕಳೆದಿರಬೇಕು.

ಯಾವುದೇ ಮಹಿಳೆಯನ್ನು ಆಕೆಯ ಜೀವನದಿಂದ ಲೈಂಗಿಕ ಜೀವನವನ್ನು ಪ್ರತ್ಯೇಕಿಸುವಂತಿಲ್ಲ

ಯಾವುದೇ ಮಹಿಳೆಯನ್ನು ಆಕೆಯ ಜೀವನದಿಂದ ಲೈಂಗಿಕ ಜೀವನವನ್ನು ಪ್ರತ್ಯೇಕಿಸುವಂತಿಲ್ಲ

ದಿನದ ಅವಧಿಯಲ್ಲಿ ಮಹಿಳೆಯನ್ನು ಆಕೆಯ ಸಂಗಾತಿ ಯಾವ ಬಗೆಯಲ್ಲಿ ನಡೆಸಿಕೊಂಡಿದ್ದ, ಆಕೆಯ ಕೋರಿಕೆಗಳಿಗೆ ಹೇಗೆ ಸ್ಪಂದಿಸಿದ್ದ ಎಂಬ ವಿಷಯಗಳು ಆಕೆ ಪ್ರಣಯದ ಸಮಯದಲ್ಲಿ ನೀಡುವ ಸಹಕಾರಕ್ಕೆ ಅಡಿಪಾಯವಾಗಿವೆ. ಒಂದು ವೇಳೆ ಆಕೆಯ ಸೂಚನೆಗಳಿಗೆ ಓಗೊಡದೇ ಇರುವುದು, ಹೊಲಸು ಭಾಷೆ, ದರ್ಪದ ಪದಗಳು, ನೋಯಿಸುವಂತಹ ಪದಗಳು ಹಾಗೂ ಟೀಕೆ ಮೊದಲಾದವು ಅಕೆಯ ಮನೋಭಾವವನ್ನು ಕುಂಠಿತ ಗೊಳಿಸಬಹುದು ಹಾಗೂ ಇದು ಪ್ರಣಯದ ಸಮಯದಲ್ಲಿ ಹಿನ್ನಡೆಗೆ ಕಾರಣವಾಗಬಹುದು.

ಕಾಮಪರಾಕಾಷ್ಠೆಯೇ ಎಲ್ಲವೂ ಅಲ್ಲ

ಕಾಮಪರಾಕಾಷ್ಠೆಯೇ ಎಲ್ಲವೂ ಅಲ್ಲ

ಸಾಮಾನ್ಯವಾಗಿ ತನ್ನ ಸಂಗಾತಿಯನ್ನು ಕಾಮಪರಾಕಾಷ್ಠೆಯತ್ತ ಕೊಂಡೊಯ್ಯುವವನೇ ನಿಜವಾದ ಪ್ರೇಮಿ ಎಂದೇ ಹೆಚ್ಚಿನವರು ಅಂದುಕೊಂಡಿದ್ದಾರೆ. ಈ ಕ್ಷಣಗಳು ಲಭಿಸಿದರೆ ಒಳ್ಳೆಯದೇ ಆದರೆ ಸದಾ ಹೀಗೇ ಆಗಬೇಕೆಂದೇನಿಲ್ಲ. ಹೆಚ್ಚಿನ ಮಹಿಳೆಯರು ಕಾಮಪರಾಕಾಷ್ಠೆ ಪಡೆಯಲು ತಮ್ಮ ಹಾಗೂ ತಮ್ಮ ಸಂಗಾತಿಯಿಂದ ಹೆಚ್ಚಿನ ಒತ್ತಡವನ್ನು ಬಯಸುತ್ತಾರೆ. ಹಾಗಾಗಿ ಪ್ರತಿ ಮಹಿಳೆಯೂ ಕಾಮಪರಾಕಾಷ್ಠೆ ಲಭಿಸದಿದ್ದರೂ ಸರಿ, ತನ್ನ ಇನಿಯ ತನ್ನೊಂದಿಗೆ ಹೆಚ್ಚು ಕಾಲ ಮುನ್ನಲಿವಿನಲ್ಲಿ ಜೊತೆಯಾಗಿರಬೇಕು ಎಂದು ಬಯಸುತ್ತಾಳೆ.

ಲೈಂಗಿಕ ಕ್ರೀಡೆಯೇ ಮುಖ್ಯವಾದ ಕ್ರಿಯೆಯಾಗಬೇಕಿಲ್ಲ

ಲೈಂಗಿಕ ಕ್ರೀಡೆಯೇ ಮುಖ್ಯವಾದ ಕ್ರಿಯೆಯಾಗಬೇಕಿಲ್ಲ

ಕೆಲವು ಪುರುಷರಿಗೆ ಕಾಮವೇ ಅತಿ ಅಗತ್ಯವಾದ ವಿಷಯವಾಗಿದ್ದು ಇತರ ವಿಷಯಗಳನ್ನು ಮರೆತೇ ಬಿಟ್ಟಿರುತ್ತಾರೆ. ಇವರು ನಗುವುದನ್ನು, ಸಂಗಾತಿಯೊಂದಿಗೆ ಪೋಲಿ ಮಾತುಗಳನ್ನಾಡುವುದನ್ನು, ಪೋಲಿ ಆಟಗಳಾಡುವುದನ್ನು, ಕೊಂಚ ತುಂಟತನ ತೋರುವುದನ್ನೆಲ್ಲಾ ಮರೆತೇ ಬಿಟ್ಟಿರುತ್ತಾರೆ. ಲಘುಘಳಿಗೆಗಳಲ್ಲಿ ಮೈಮರೆತು, ಸಂಗಾತಿಯೊಂದಿಗೆ ಆಡುವ ಇತರ ಆಟಗಳೆಲ್ಲವೂ ಮಹಿಳೆಗೆ ಅತಿ ಅಪ್ಯಾಯಮಾನವಾಗಿದ್ದು ಆಕೆ ನಿರಾಳತೆ ಅನುಭವಿಸಲು ನೆರವಾಗುತ್ತದೆ. ಹಾಗಾಗಿ ತನ್ನ ಇನಿಯ ಕೇವಲ ಲೈಂಗಿಕ ಕ್ರೀಡೆಗೆ ಮಾತ್ರವೇ ಪ್ರಾಮುಖ್ಯತೆ ನೀಡದೇ ಎಲ್ಲಾ ವಿಷಯಗಳಲ್ಲೂ ಹೆಚ್ಚಿನ ಆಸಕ್ತಿ ತೋರಿ ಸಂತೋಷವನ್ನು ಹಂಚಬೇಕು ಎಂದು ಮಹಿಳೆ ಅಪೇಕ್ಷಿಸುತ್ತಾಳೆ. ಇದು ಬಳಿಕ ಲೈಂಗಿಕ ಕ್ರಿಯೆಯಲ್ಲಿ ಇಬ್ಬರ ಮೇಲಿನ ಒತ್ತಡವನ್ನೂ ಕಡಿಮೆ ಮಾಡುತ್ತದೆ ಹಾಗೂ ಆತ್ಮೀಯ ಕ್ಷಣಗಳ ಗರಿಷ್ಟ ಸಂತೋಷ ಅನುಭವಿಸಲು ಸಾಧ್ಯವಾಗುತ್ತದೆ.

ಲೈಂಗಿಕ ಕ್ರಿಯೆಗೂ ಹೊರತಾದ ಸ್ಪರ್ಶ, ಕಾಳಜಿಗಳಿಗೆ ಮಹಿಳೆಯರು ಹೆಚ್ಚು ಸ್ಪಂದಿಸುತ್ತಾರೆ

ಲೈಂಗಿಕ ಕ್ರಿಯೆಗೂ ಹೊರತಾದ ಸ್ಪರ್ಶ, ಕಾಳಜಿಗಳಿಗೆ ಮಹಿಳೆಯರು ಹೆಚ್ಚು ಸ್ಪಂದಿಸುತ್ತಾರೆ

ಮಹಿಳೆಯರು ಪ್ರೇಮ, ಮುದ್ದಾಟ, ಚುಂಬನ, ಕೈ-ಕೈ ಹಿಡಿದುಕೊಳ್ಳುವುದು ಮೊದಲಾದವುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ಲೈಂಗಿಕ ಸಂಪರ್ಕಕ್ಕೂ ಮುನ್ನಾ ಸಮಯದ ಮುನ್ನಲಿವಿನ ಹೊರತಾಗಿ ತಮ್ಮ ಸಂಗಾತಿ ಇದಾವುದನ್ನೂ ಮಾಡುವುದಿಲ್ಲ ಎಂದು ಹೆಚ್ಚಿನ ಮಹಿಳೆಯರು ದೂರುತ್ತಾರೆ. ತನ್ನ ಸಂಗಾತಿ ತನ್ನನ್ನು ಸ್ಪರ್ಶಿಸುವುದರಿಂದ ತನ್ನ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಆಕೆ ಸಂಗಾತಿಗೆ ಸ್ಪಷ್ಟಪಡಿಸುವುದೂ ಅಗತ್ಯವಾಗಿದೆ. ಇಲ್ಲದಿದ್ದರೆ ಈ ಬಗೆಯ ಅಗತ್ಯವಿದೆ ಎಂದು ಆತನಿಗೆ ಅರಿವಾಗದೇ ಹೋಗಬಹುದು. ಇದರ ಹೊರತಾಗಿ ಮಹಿಳೆಯೂ ತನ್ನ ಇನಿಯನಿಗೆ ನಿರಾಳವಾಗಿಸುವ ಮಸಾಜ್, ಮುಖವನ್ನು ನೇವರಿಸುವುದು, ಕೂದಲನ್ನು ಮೃದುವಾಗಿ ಕೊಂಕಿಸುವುದು ಮೊದಲಾದವುಗಳಿಂದ ತಾನೇ ಪ್ರಾರಂಭಿಸಬಹುದು. ಪುರುಷರು ಈ ಕ್ರಿಯೆಗಳನ್ನು ಇಷ್ಟ ಪಡುತ್ತಾರೆ ಹಾಗೂ ಬಳಿಕ ತಾವೂ ಮುಂದುವರೆಯುತ್ತಾರೆ. ಹೀಗಾಗಲು ಆತ ಯಾವ ಬಗೆಯಲ್ಲಿ ಮುಂದುವರೆಯಬೇಕೆಂದು ಮಹಿಳೆಯೇ ತಿಳಿಸಿದ್ದಷ್ಟೂ ಉತ್ತಮ.

ಲೈಂಗಿಕ ಕ್ರಿಯೆಗೂ ಹೊರತಾದ ಸ್ಪರ್ಶ, ಕಾಳಜಿಗಳಿಗೆ ಮಹಿಳೆಯರು ಹೆಚ್ಚು ಸ್ಪಂದಿಸುತ್ತಾರೆಪ್ರಣಯದಾಟ ಮುಗಿದ ಬಳಿಕವೂ ಆತ್ಮೀಯವಾಗಿ ಗಮನಿಸುವುದು ಅಗತ್ಯ

ಲೈಂಗಿಕ ಕ್ರಿಯೆಗೂ ಹೊರತಾದ ಸ್ಪರ್ಶ, ಕಾಳಜಿಗಳಿಗೆ ಮಹಿಳೆಯರು ಹೆಚ್ಚು ಸ್ಪಂದಿಸುತ್ತಾರೆಪ್ರಣಯದಾಟ ಮುಗಿದ ಬಳಿಕವೂ ಆತ್ಮೀಯವಾಗಿ ಗಮನಿಸುವುದು ಅಗತ್ಯ

ಸಾಮಾನ್ಯವಾಗಿ ಮಹಿಳೆಯರು ಲೈಂಗಿಕ ಚಟುವಟಿಕೆಯ ಬಳಿಕವೂ ಆತ್ಮೀಯ ಘಳಿಗೆಗಳನ್ನು ಮುಂದುವರೆಸಬಯಸುತ್ತಾಳೆ. ಕೆಲವು ಮಹಿಳೆಯರು ತಮ್ಮ ಸಂಗಾತಿ ಲೈಂಗಿಕ ಕ್ರಿಯೆ ಮುಗಿದ ತಕ್ಷಣವೇ ಮಗ್ಗುಲು ಬದಲಿಸಿ ಮಲಗಿ ಬಿಡುತ್ತಾರೆ ಎಂದು ದೂರುತ್ತಾರೆ. ಇದು ಸತ್ಯ ಕೂಡಾ, ಏಕೆಂದರೆ ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಪುರುಷರ ದೇಹದಲ್ಲಿ ಹೆಚ್ಚಿನ ಪ್ರಮಾಣದ ಎಂಡಾರ್ಫಿನ್ ಗಳು ಸ್ರವಿಸುತ್ತವೆ ಹಾಗೂ ಸ್ಖಲನದ ಮರುಕ್ಷಣವೇ ಈ ಕ್ರಿಯೆಗಳೆಲ್ಲಾ ಹಿನ್ನಡೆ ಪಡೆಯುತ್ತವೆ. ನಿಮಿರುತನ ಇಳಿಯುತ್ತ್ತಾಹೋಗುತ್ತದೆ ಹಾಗೂ ಆತ ಈ ಕ್ಷಣ ಎಲ್ಲಾ ಲೈಂಗಿಕ ಭಾವನೆಗಳಿಂದ ಮುಕ್ತನಾಗುತ್ತಾ ಬರುತ್ತಾನೆ ಹಾಗೂ ಆಸಕ್ತಿಯನ್ನು ಕಳೆದುಕೊಳ್ಳುತ್ತಾನೆ. ಮಹಿಳೆಯರಲ್ಲಿ ಈ ಹಿನ್ನಡೆ ಅತಿ ನಿಧಾನವಾಗಿ ಜರುಗುತ್ತದೆ. ಹಾಗಾಗಿ ಒಂದು ವೇಳೆ ನಿಮಗೆ ಆತ ತಕ್ಷಣವೇ ಮಲಗುವುದು ಇಷ್ಟವಾಗದೇ ಇದ್ದಲ್ಲಿ ಆತನ ಮನ ನೋಯದಂತೆ ನಿಧಾನವಾಗಿ ತಿಳಿಸಿ. ಪರ್ಯಾಯವಾಗಿ ಆತ ನಿಮ್ಮ ಬಾಹುಗಳಲ್ಲಿಯೇ ಮಲಗಲಿ ಹಾಗೂ ಕೊಂಚ ಹೊತ್ತಿನ ಬಳಿಕ ನಿಧಾನವಾಗಿ ಆತನನ್ನು ನಿದ್ದೆಯಿಂದೆಬ್ಬಿಸಿ.

English summary

Secrets about Sex Women Want Men to Know

Read on these different sex secrets women always wanted men to know at first place.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more