ಪ್ರತಿ ಸಂಬಂಧಕ್ಕೂ ಕೂಡ ಯಾಕೆ ಲೈಂಗಿಕ ಕ್ರಿಯೆ ಮಹತ್ವ ಪಡೆಯುತ್ತೆ?

By Sushma Charhra
Subscribe to Boldsky

ಪ್ರತಿ ಜೀವಿಗೂ ಲೈಂಗಿಕ ಕ್ರಿಯೆ ಅತ್ಯಂತ ಹೆಚ್ಚು ತೃಪ್ತಿ ನೀಡುವ ವಿಚಾರವಾಗಿದೆ. ಪುರುಷ ಮತ್ತು ಮಹಿಳೆ ಇಬ್ಬರಲ್ಲೂ ಈ ಲೈಂಗಿಕ ಕ್ರಿಯೆಯ ಭಾವನೆಗಳು ಭಿನ್ನವಾಗಿರುತ್ತೆ. ಸಂತೋಷ ಪಡುವ ವಿಚಾರಕ್ಕೆ ಬಂದರೆ, ಪ್ರತಿ ಪುರುಷ ಮತ್ತು ಮಹಿಳೆ ಇಬ್ಬರೂ ಕೂಡ ಲೈಂಗಿಕ ಕ್ರಿಯೆ ಅತೀ ಹೆಚ್ಚು ಸಂತೋಷ ಮತ್ತು ತೃಪ್ತಿ ನೀಡುತ್ತೆ ಎಂದೇ ಹೇಳುತ್ತಾರೆ.

ಒಂದು ಸಂಬಂಧಕ್ಕಾಗಿ ಲೈಂಗಿಕ ಕ್ರಿಯೆ ಬಹಳ ಮುಖ್ಯವಾದದ್ದು. ಇದೊಂದು ಪ್ರಾಪಂಚಿಕವಾಗಿ, ನೈಸರ್ಗಿಕವಾಗಿ ಮನುಷ್ಯನಿಗೆ ತೃಪ್ತಿ ನೀಡುವ ವಿಚಾರವಾಗಿದೆ. ಒತ್ತಡ ನಿವಾರಣೆಗೆ ಕೂಡ ಇದು ಸಹಾಯ ಮಾಡುತ್ತೆ. ನಿಮ್ಮ ಸಂಗಾತಿಯೊಂದಿಗೆ ಆಪ್ತವಾಗಿರಲು ಇದು ಬಹಳ ನೆರವಾಗುತ್ತೆ. ನಂಬಿಕೆ ಮತ್ತು ಸಂವಹನಕ್ಕೆ ಪ್ರತಿ ಸಂಬಂಧದಲ್ಲೂ ಲೈಂಗಿಕ ಕ್ರಿಯೆ ಪ್ರಮುಖ ಪಾತ್ರ ವಹಿಸುತ್ತೆ. ಲೈಂಗಿಕ ಕ್ರಿಯೆಯು ಹೆಚ್ಚು ಹತ್ತಿರವಾಗಿದ್ದೇವೆ ಎಂಬ ಭಾವನೆ ತರಿಸುತ್ತೆ ಮತ್ತು ಒಬ್ಬರನ್ನೊಬ್ಬರು ಪ್ರೀತಿಯಿಂದ ಇರಲು ನೆರವಾಗುತ್ತೆ.

Romance

ಲೈಂಗಿಕತೆ ಯಾವುದಕ್ಕಾಗಿ ಬಹಳ ಮುಖ್ಯ...?

ದೈಹಿಕವಾಗಿ ಒಬ್ಬರನ್ನೊಬ್ಬರು ಕೂಡುವ ಪ್ರಕ್ರಿಯೆ ಲೈಂಗಿಕತೆ ಯಾವ ಕಾರಣಕ್ಕೆ ಅಷ್ಟು ಮಹತ್ವ ಪಡೆದಿದೆ..ಪ್ರೀತಿಯ ಸಂವೇದನೆಯೇ ಲೈಂಗಿಕತೆಯ ಮಹತ್ವವನ್ನು ಸಾರುತ್ತೆ. ಲೈಂಗಿಕತೆಯು ಪ್ರತಿ ಸಂಬಂಧಕ್ಕೂ ಕೂಡ ಬಹಳ ಮುಖ್ಯ. ನೀವು ನಿಮ್ಮ ಸಂಗಾತಿಯ ಜೊತೆ ಲೈಂಗಿಕತೆಯಲ್ಲಿ ತೊಡಗುವುದು ಎಂದರೆ ನೀವು ಅವರ ಪ್ರೀತಿಯಲ್ಲಿ ಬೀಳುವುದು ಎಂದರ್ಥ. ಹಾಗಾದ್ರೆ ಯಾವೆಲ್ಲ ಕಾರಣಕ್ಕೆ ಲೈಂಗಿಕತೆ ಅಷ್ಟೊಂದು ಮಹತ್ವ ಪಡೆಯುತ್ತೆ ಎಂಬುದನ್ನು ತಿಳಿದುಕೊಳ್ಳೋಣ..

ಸಂಬಂಧ ವೃದ್ಧಿಸುತ್ತೆ

ದೈಹಿಕವಾಗಿ ನೀವು ನಿಮ್ಮ ಸಂಗಾತಿಯ ಜೊತೆ ಸಂಬಂಧ ಹೊಂದಿರುತ್ತೀರಿ. ಇಬ್ಬರ ನಡುವಿನ ಸಂಬಂಧಕ್ಕೆ ದೈಹಿಕವಾಗಿ ಹೊಂದಾಣಿಕೆಯಾಗುವುದು ಬಹಳ ಮುಖ್ಯ. ಕೇವಲ ದೈಹಿಕವಾಗಿ ಮಾತ್ರ ಇದು ಒಬ್ಬ ಪುರುಷ ಮತ್ತು ಮಹಿಳೆಯನ್ನು ಹತ್ತಿರಕ್ಕೆ ತರುವುದಿಲ್ಲ ಬದಲಾಗಿ ಭಾವನಾತ್ಮಕವಾಗಿ ಕೂಡ ಇಬ್ಬರನ್ನೂ ಹತ್ತಿರಗೊಳಿಸುತ್ತೆ. ಹಾಗಾದ್ರೆ ನಿಮ್ಮ ಮಲಗುವ ಕೋಣೆ ನಿಮ್ಮನ್ನು ಭಾವನಾತ್ಮಕವಾಗಿ ಜೋಡಿಸಿದರೆ ಏನಾಗುತ್ತೆ? ಮಲಗುವ ಕೋಣೆಯ ಈ ರಸಾಯನಶಾಸ್ತ್ರವು ನಿಮ್ಮ ಹಾರ್ಮೋನುಗಳ ಮೇಲೆ ಪರಿಣಾಮವನ್ನುಂಟು ಮಾಡುತ್ತೆ. ಸಂಬಂಧವು ಗಟ್ಟಿಯಾಗಿರಿಸುವ ತಾಕತ್ತು ಇದಕ್ಕಿದೆ. ಜಗಳದ ನಿಯಂತ್ರಣಕ್ಕೆ., ಸಂಬಂಧದಲ್ಲಿನ ಮನಸ್ತಾಪದ ನಿವಾರಣೆಗೆ ಲೈಂಗಿಕ ಕ್ರಿಯೆಯು ಸಹಕಾರಿ. ಅದಕ್ಕಾಗಿಯೇ ಅಲ್ವೇ ಗಾದೆ ಇರುವುದು, ಗಂಡಹೆಂಡಿರ ಜಗಳ ಉಂಡುಮಲಗುವ ತನಕ ಎಂದು. ಈ ಸಂಬಂಧವು ದಿನದಿಂದ ದಿನಕ್ಕೆ ನಿಮ್ಮ ಬಾಂಧವ್ಯವನ್ನು ಹೆಚ್ಚಿಸಿ ಒಬ್ಬರನ್ನೊಬ್ಬರು ಗಟ್ಟಿಯಾಗಿರಲು ಸಹಕರಿಸುತ್ತೆ.

ಒತ್ತಡ ನಿವಾರಿಸಲು ಸಹಕಾರಿ

ಲೈಂಗಿಕ ಕ್ರಿಯೆಯ ನಂತರ ಪ್ರತಿಯೊಬ್ಬರು ಒತ್ತಡದಿಂದ ಮುಕ್ತರಾಗುತ್ತಾರೆ ಎಂಬುದನ್ನು ಅಧ್ಯಯನವೊಂದು ಬಹಿರಂಗಗೊಳಿಸಿದೆ. ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ವ್ಯಕ್ತಿಗಳಿಗೆ ಒತ್ತಡದ ಸಮಸ್ಯೆ ಎಂದಿಗೂ ಕಾಡುವುದಿಲ್ಲ. ಈಗಿನ ಜೀವನ ಶೈಲಿಗೆ ಒತ್ತಡ ಸಾಮಾನ್ಯವಾಗಿದೆ. ಇದು ಹೆಚ್ಚಿನ ಸಂಬಂಧವನ್ನು ಹಾಳ ಮಾಡುವ ಹಂತಕ್ಕೂ ತಲುಪಿದೆ. ಆದರೆ ಯಾರಲ್ಲಿ ಲೈಂಗಿಕಾಸಕ್ತಿ ಇರುತ್ತೋ ಅಂತವರು ತಮ್ಮ ಸಂಬಂಧವನ್ನು ಗಟ್ಟಿಯಾಗಿರಿಸಿಕೊಂಡಿರಲು ಸಾಧ್ಯವಿದೆ. ಮೆದುಳಿನಲ್ಲಿ ಒತ್ತಡ ನಿವಾರಣೆಗೆ ಬೇಕಾಗುವ ರಸಾಯನಿಕವನ್ನು ಲೈಂಗಿಕ ಕ್ರಿಯೆಯು ಬಿಡುಗಡೆಗೊಳಿಸುತ್ತೆ. ಯಾವುದೇ ಮಾತ್ರೆ ಸೇವಿಸಿ ಒತ್ತಡ ನಿವಾರಿಸಿಕೊಳ್ಳುವುದಕ್ಕಿಂತ ಒತ್ಡಡ ನಿವಾರಣೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಉತ್ತಮ ಮಾರ್ಗವಾಗಿದೆ.

Romance

ಸಂವೇದನೆಗೆ ಬೇಕೇ ಬೇಕು

ಸಂಬಂಧದಲ್ಲಿ ಸಂವೇದನೆ ಬಹಳ ಮುಖ್ಯ. ಇಬ್ಬರ ನಡುವಿನ ಸಂವೇದನೆಗೆ ಖಂಡಿತ ಲೈಂಗಿಕ ಕ್ರಿಯೆಯು ಸಹಾಯ ಮಾಡುತ್ತೆ. ಹೀಗೆ ಒಬ್ಬರನ್ನೊಬ್ಬರು ತಮ್ಮೆಲ್ಲ ಭಾವನೆಗಳನ್ನು ಹಂಚಿಕೊಳ್ಳಲು ನೆರವಾಗುವ ಲೈಂಗಿಕ ಕ್ರಿಯೆಯು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತೆ. ನೀವು ಹೇಗೆ ಬದುಕುತ್ತಿದ್ದೀರಿ ಎಂಬುದಲ್ಲ ಆದರೆ ನಿಮ್ಮ ಲೈಂಗಿಕ ಜೀವನ ಸುಖವಾಗಿದ್ದರೆ ಖಂಡಿತ ನೀವು ನಿಮ್ಮ ಜೀವನದಲ್ಲಿ ಸುಖವಾಗಿರಲು ಸಾಧ್ಯವಿದೆ. ದೈಹಿಕ ಸಂಪರ್ಕದ ಮೂಲಕ ಇಬ್ಬರ ನಡುವಿನ ಸಂವೇದನೆಗೆ ಲೈಂಗಿಕ ಕ್ರಿಯೆ ಸಹಾಯ ಮಾಡುತ್ತೆ. ಒಳ್ಳೆಯ ವಿಧಾನದಲ್ಲಿ ನೀವು ನಿಮ್ಮ ಸಂಗಾತಿಯ ಜೊತೆ ಸಂವೇದಿಸಲು ಇರುವ ಅತ್ಯುತ್ತಮ ಮಾರ್ಗ ಅಥವಾ ಸಮಯ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು.

ನಿದ್ದೆ ಮಾಡಲು ಸಹಕಾರಿ

ಲೈಂಗಿಕತೆಯು ದೇಹಕ್ಕೊಂದು ಉತ್ತಮ ವ್ಯಾಯಾಮವಾಗಿರುತ್ತೆ. ಯಾವ ಜೋಡಿ ಹೆಚ್ಚು ಬ್ಯುಸಿಯಾಗಿರುತ್ತಾರೋ, ಅಂತವರಿಗೆ ವ್ಯಾಯಾಮ ಮಾಡಲು ಸಮಯವಿಲ್ಲದ್ದರೆ ಖಂಡಿತ ಮಲಗುವ ಕೋಣೆಯಲ್ಲಿ ವ್ಯಾಯಾಮ ಮಾಡುವುದು ಒಳಿತು ಅರ್ಥಾತ್ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಉತ್ತಮ ವಿಧಾನ. ಆ ಮೂಲಕ ನಿಮಗೆ ಉತ್ತಮ ನಿದ್ದೆ ಬರುತ್ತೆ ಮತ್ತು ಆರೋಗ್ಯವಾಗಿರಲು ಸಾಧ್ಯವಿದೆ. ಇದು ನಿಮ್ಮ ದೇಹವನ್ನು ಸುಸ್ತಾಗುವಂತೆ ಮಾಡುತ್ತೆ ಮತ್ತು ನಿದ್ದೆಗೆ ಜಾರುವಂತೆ ಮಾಡುತ್ತೆ. ಲೈಂಗಿಕತೆಯಲ್ಲಿ ತೊಡಗುವುದರಿಂದ ಆಕ್ಸಿಟೋಸಿನ್ ಎಂಬ ಹಾರ್ಮೋನು ಬಿಡುಗಡೆಗೊಂಡು ನಿದ್ದೆ ಬರುವಂತೆ ಮಾಡುತ್ತೆ.

ಸಂತೋಷವಾಗಿಡುತ್ತೆ

ಲೈಂಗಿಕತೆಯು ಹೆಚ್ಚಿನವರನ್ನು ಸಂತೋಷವಾಗಿರಿಸುತ್ತೆ. ಯಾವ ಜೋಡಿಯು ನಿಯಮಿತವಾಗಿ ಲೈಂಗಿಕತೆಯಲ್ಲಿ ತೊಡಗಿರುತ್ತಾರೋ ಅಂತವರು ಲೈಂಗಿಕತೆಯಲ್ಲಿ ತೊಡಗದ ವ್ಯಕ್ತಿಗಳಿಗಿಂತ ಹೆಚ್ಚು ಸಂತೋಷವಾಗಿರುತ್ತಾರೆ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತೆ ಮತ್ತು ನಿಮ್ಮ ಸುತ್ತ ಧನಾತ್ಮಕ ಶಕ್ತಿಯನ್ನು ಬರುವಂತೆ ಮಾಡುತ್ತೆ. ನೀವು ಪಾಸಿಟೀವ್ ಆಗಿದ್ದಾಗ ನಿಮ್ಮ ಜೀವನದಲ್ಲಿ ನಡೆಯುವುದೆಲ್ಲವ ಪಾಸಿಟೀವ್ ಆಗಿರುತ್ತದೆ.

Romance

ಹಾರ್ಮೋನುಗಳು ಸಮತೋಲನದಲ್ಲಿ ಇರಲು

ನೀವು ಯಾವಾಗಲೂ ಲೈಂಗಿಕತೆಯಲ್ಲಿ ತೊಡಗುವುದರಿಂದಾಗಿ ನಿಮ್ಮ ದೇಹದಲ್ಲಿ ಹಾರ್ಮೋನುಗಳು ಸಮತೋಲನದಲ್ಲಿ ಇರಲು ನೆರವಾಗುತ್ತೆ. ಹಾರ್ಮೋನಲ್ ಬ್ಯಾಲೆನ್ಸ್ ನಿಮ್ಮ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಉಪಕಾರಿಯಾಗಿದೆ. ಮೊದಲನೆಯದಾಗಿ ಒತ್ತಡ ನಿವಾರಣೆ, ನಿದ್ದೆಯ ಸಮಸ್ಯೆಯ ನಿವಾರಣೆ ಇತ್ಯಾದಿ. ಅಷ್ಟೇ ಅಲ್ಲ, ಫರ್ಟಿಲಿಟಿಯನ್ನು ಹೆಚ್ಚಿಸುವ ಸಾಮರ್ಥ್ಯವೂ ಹಾರ್ಮೋನುಗಳ ಸಮತೋಲನದಿಂದ ಆಗುತ್ತೆ. ನಿಮ್ಮ ದೇಹವು ಆರೋಗ್ಯಕರವಾಗಿರಲು ಲೈಂಗಿಕತೆಯು ನೆರವಾಗುತ್ತೆ. ಅಷ್ಟೇ ಅಲ್ಲ, ಯಾರು ಲೈಂಗಿಕತೆಯಲ್ಲಿ ಸರಿಯಾಗಿ ತೊಡಗಿಕೊಂಡಿರುವುದಿಲ್ಲವೋ ಅಂತವರ ದೇಹದ ನೈಸರ್ಗಿಕ ಪ್ರಕ್ರಿಯೆಗಳಲ್ಲಿ ವ್ಯತ್ಯಯಗಳಿರುವ ಸಾಧ್ಯತೆಗಳಿರುತ್ತೆ. ದಾಂಪತ್ಯ ಸಂಬಂಧದಲ್ಲಿ ಪ್ರೀತಿ ಮತ್ತು ಲೈಂಗಿಕತೆ ಸಮಾನವಾಗಿ ಸಾಗಬೇಕು. ಯಾವುದೇ ಒಂದು ಇಲ್ಲದಿದ್ದರೂ ಕೂಡ ಸಂಬಂಧ ಹಾಳಾಗಬಹುದು. ಹಾಗಾಗಿ ನಿಮ್ಮ ಜೀವನದ ಸುಖಕ್ಕೆ ಇದು ಬೇಕೇಬೇಕು.

For Quick Alerts
ALLOW NOTIFICATIONS
For Daily Alerts

    English summary

    Reasons Why Sex Is Important In Every Relationship

    Sex is very important in a relationship, as it is the universal form of pleasure, and a way to de-stress. It also gives you a level of closeness with your SO. In fact, it is just as imperative as trust and communication, in every relationship. Sex feels more connected when your partner and you lose each other in making love. Let's see the reasons why sex is important in a relationship.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more