For Quick Alerts
ALLOW NOTIFICATIONS  
For Daily Alerts

ಮಹಿಳೆಯರಿಗೆ ಕಿರಿಕಿರಿ ಅನಿಸುವ ಗಂಡಸರ ಅಭ್ಯಾಸಗಳಿವು

By Sushma Charhra
|

ತಪ್ಪನ್ನು ಕ್ಷಮಿಸಿ ಬಿಡುವುದನ್ನು ಪ್ರತಿದಿನವೂ ಮಹಿಳೆಗೆ ಮಾಡಲು ಸಾಧ್ಯವಿಲ್ಲ. ಪುರುಷರಿಗೆ ಮರೆತುಬಿಡುವ ಅಭ್ಯಾಸ ಚೆನ್ನಾಗೇ ಇರುತ್ತೆ ಆದರೆ ಮಹಿಳೆಯ ಸ್ವಭಾವ ಹಾಗಲ್ಲ. ಅವರು ಯಾವುದನ್ನೂ ಅಷ್ಟು ಸುಲಭದಲ್ಲಿ ಮರೆತುಬಿಡುವುದಿಲ್ಲ. ಪ್ರತಿ ದಿನವೂ ಅದೇ ತಪ್ಪು ಪುನಃ ಪುನಃ ಮರುಕಳಿಸಿದರೆ ಅದನ್ನು ಅವರು ಸಹಿಸಲಾರರು. ಆದರೆ ಪುರುಷರು ಮಹಿಳೆಯರು ಪ್ರತಿ ದಿನ ಒಂದೇ ತಪ್ಪು ಮಾಡುತ್ತಿದ್ದರೂ ಬೇಕಿದ್ದರೆ ಅವರನ್ನು ಕ್ಷಮಿಸಿಬಿಡುತ್ತಾರೆ. ಕ್ಷಮಿಸುತ್ತಾರೆ ಅನ್ನುವುದಕ್ಕಿಂತ ಅದನ್ನು ಅವರು ತಲೆಗೆ ಹಾಕಿಕೊಳ್ಳುವುದೇ ಇಲ್ಲ. ಹುಟ್ಟುಹಬ್ಬವನ್ನು ಮರೆತುಬಿಡುವುದು, ಮದುವೆ ದಿನವನ್ನು ಮರೆತುಬಿಡುವುದು, ಪ್ರಮುಖ ಕೆಲವು ದಿನಾಂಕವನ್ನು ಮರೆಯುವುದು, ಇವು ಮಹಿಳೆಗೆ ಬಹಳ ಪ್ರಮುಖವೆನಿಸುತ್ತದೆ. ಇಂತಹ ವಿಚಾರಗಳು ಆಕೆಗೆ ಬಹಳ ಸಿಟ್ಟು ತರಿಸುತ್ತದೆ.

Habits women hate in men

ಇಲ್ಲಿ ನಾವು ಅತ್ಯಂತ ಸಾಮಾನ್ಯವಾಗಿರುವ ಕೆಲವು ಕಾರಣಗಳನ್ನು ಪಟ್ಟಿ ಮಾಡಿದ್ದೇವೆ.ಪ್ರತಿ ಸಂಬಂಧದಲ್ಲೂ ಕೂಡ ಮಹಿಳೆಯು ಕೆಲವು ಅಭ್ಯಾಸಗಳನ್ನು ಪುರುಷರಿಂದ ಗಮನಿಸುತ್ತಾಳೆ ಮತ್ತು ಅದರಿಂದ ಕಿರಿಕಿರಿ ಅನುಭವಿಸುತ್ತಾಳೆ. ಪುರುಷರು ಅದೇ ಅಭ್ಯಾಸವನ್ನು ಪುನರಾವರ್ತಿಸಿದಾಗ ಆಕೆಗೆ ಕೋಪವೂ ಬರಬಹುದು. ಆದರೆ ನೆನಪಿರಲಿ ಸಂಬಂಧ ಅನ್ನುವುದು ಇಬ್ಬರಿಂದಲೂ ಆಗಿರುತ್ತದೆ., ಇಬ್ಬರ ನಡುವೆ ಒಂದು ಒಪ್ಪಂದ ಇಲ್ಲದೇ ಇದ್ದರೆ ಸಂಬಂಧ ಮುರಿದುಬೀಳುತ್ತೆ. ಹಾಗಾದ್ರೆ ಆಕೆಯ ಕೋಪಕ್ಕೆ ಕಾರಣವಾಗುವ ಪುರುಷರ ಅಭ್ಯಾಸಗಳು ಯಾವುದು ನೋಡೋಣ ಬನ್ನಿ..

1.ಆಟ ಆಡುತ್ತಾ ಕುಳಿತಿರುವುದು

1.ಆಟ ಆಡುತ್ತಾ ಕುಳಿತಿರುವುದು

ಸಮಯ ಸಿಕ್ಕಿದೆ ಅಂದ್ರೆ ವೀಡಿಯೋ ಗೇಮ್ ಹಿಡಿದು ಆಟ ಆಡುತ್ತಾ ಕುಳಿತಿರುವುದನ್ನುಕಂಡ್ರೆ ಮಹಿಳೆಗೆ ಕಿರಿಕಿರಿಯಾಗುತ್ತೆ. ದೊಡ್ಡವರಾದ ಮೇಲೂ ಯುವಕರಾಗಿದ್ದಾಗ ಹೇಗೆ ವರ್ತಿಸುತ್ತಿದ್ದೀರೋ ಹಾಗೆ ವರ್ತಿಸುತ್ತಿದ್ದು, ಟಿವಿ, ಕಂಪ್ಯೂಟರ್, ಇಲ್ಲವೇ ಮೊಬೈಲ್ ನಲ್ಲಿ ಯಾವಾಗಲೂ ಆಟ ಆಡುತ್ತಿದ್ದರೆ ಆಕೆಗೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಸಂಗಾತಿ ಪಕ್ಕದಲ್ಲೇ ಇದ್ದರೂ ಆಕೆಗೆ ಸಮಯ ಮೀಸಲಿಡದೇ ಯಾವಾಗಲೂ ಹೀಗೆ ಸ್ಕ್ರೀನ್ ಬಟನ್ ಒತ್ತುತ್ತಾ ಕುಳಿತಿರುವುದು ಆಕೆಯ ಮನಸ್ಸಿಗೆ ಬೇಸರವನ್ನುಂಟು ಮಾಡುತ್ತದೆ. ನೀವು ಯಾವಾಗಲಾದರೂ ಯೋಚಿಸಿದ್ದೀರಾ ಅಥವಾ ಗಮನಿಸಿದ್ದೀರಾ, ನೀವು ಹೀಗೆ ವರ್ತಿಸುವುದರಿಂದ ನಿಮ್ಮ ಸಂಗಾತಿ ಯಾವ ರೀತಿ ಬೇಸರಿಸಿಕೊಳ್ಳುತ್ತಾರೆ ಅನ್ನುವುದನ್ನು. ಪುರುಷರಿಗೆಇದು ನೈಜತೆಗೆ ಹತ್ತಿರವಲ್ಲ ಎಂದು ಅನ್ನಿಸುತ್ತಿದ್ದರೂ ಮಹಿಳೆಯರ ಭಾವನೆಯ ವಿಚಾರದಲ್ಲಿ ಖಂಡಿತ ಸತ್ಯ.

2.ನಿಮ್ಮ ಭಾವನೆಗಳ ಬಗ್ಗೆ ಸತ್ಯ ಹೇಳದೇ ಇರುವುದು

2.ನಿಮ್ಮ ಭಾವನೆಗಳ ಬಗ್ಗೆ ಸತ್ಯ ಹೇಳದೇ ಇರುವುದು

ಪುರುಷರು ತಮ್ಮ ಭಾವನೆಗಳನ್ನು ಹಂಚಿಕೊಳ್ಳದೆ ಅದನ್ನು ಮರೆಮಾಚಲು ಯತ್ನಿಸಿದರೆ ಮಹಿಳೆಯರಿಗೆ ಬೇಸರವಾಗುತ್ತೆ. ಇದರಿಂದ ಕಿರಿಕಿರಿಗೆ ಒಳಗಾಗುವ ಮಹಿಳೆಯರು ಅದನ್ನು ಪುರುಷರ ಮುಂದೆ ತೋರಿಸಿಕೊಳ್ಳುತ್ತಾರೆ. ಆದರೆ ಸರಿಯಾದ ಸಿದ್ಧತೆ ಮಾಡಿಕೊಳ್ಳದ ಪುರುಷರು,ಯಾವಾಗಲೂ ಅದೇ ತಪ್ಪನ್ನು ಮತ್ತೆ ಮತ್ತೆ ಮಾಡುತ್ತಲೇ ಇರುತ್ತಾರೆ. ಅವರಲ್ಲಿ ಯಾವುದೇ ಬದಲಾವಣೆಯೂ ಇರುವುದಿಲ್ಲ. ಆದರೆ ಇದನ್ನು ಮಹಿಳೆಯರು ಹಗುರವಾಗಿ ಪರಿಗಣಿಸುವುದಿಲ್ಲ. ತಮ್ಮ ಬಳಿ ಹೇಳಿಕೊಳ್ಳದೆ ಇನ್ಯಾರ ಬಳಿ ಇವರ ಭಾವನೆಗಳನ್ನು ಹೇಳಿಕೊಳ್ಳುತ್ತಾರೆ ನೋಡೋಣ ಎಂದು ಮಹಿಳೆಯರು ತಮಗೆ ತಾವೇ ಕಿರಿಕಿರಿ ಅನುಭವಿಸುತ್ತಾರೆ. ಗಂಡಸರು ಕಣ್ಣೀರು ಹಾಕುವುದಾಗಲಿ, ಭಾವನೆಗಳನ್ನು ಹೊರಹಾಕುವುದಕ್ಕಾಗಲಿ ಹಿಂದೆಮುಂದೆ ನೋಡುತ್ತಾರೆ ಆದರೆ ಇದು ಮಹಿಳೆಯರಿಗೆ ಅಷ್ಟು ಸರಿಕಾಣುವುದಿಲ್ಲ. ಯಾವಾಗ ಪುರುಷರು ಭಾವನೆಗಳನ್ನು ವ್ಯಕ್ತಪಡಿಸದೆ ಮನಸ್ಸಿನಲ್ಲೇ ಹುದುಗಿಸಿ ಇಟ್ಟುಕೊಳ್ಳುತ್ತಾರೋ ಆಗ ಮಹಿಳೆಯರು ಮನಸ್ಸಿನಲ್ಲೇ ಕಿಚಿಕಿಚಿ ಅನುಭವಿಸುತ್ತಾರೆ.

3.ಪುರುಷರು ಮಹಿಳೆಯರು ಅಳೆದುತೂಗುವುದು

3.ಪುರುಷರು ಮಹಿಳೆಯರು ಅಳೆದುತೂಗುವುದು

ಪುರುಷರು ಮಹಿಳೆಯರ ಕೆಲಸವನ್ನು ಅಳೆದುತೂಗುವುದು ಮಾಡಿದಾಗ ಮಹಿಳೆಯರಿಗೆ ಕಿರಿಕಿರಿಯಾಗುತ್ತೆ. ಉದಾಹರಣೆಗೆ, ಮಹಿಳೆಯರು ಡ್ರೈವಿಂಗ್ ಮಾಡುವಾಗ ನೀನು ಉತ್ತಮವಾಗಿ ಡ್ರೈವಿಂಗ್ ಮಾಡುತ್ತಿಲ್ಲ ಅಥವಾ ಮಾಡುವುದಿಲ್ಲ ಎಂದು ಹೇಳಿದರೆ ಮಹಿಳೆಗೆ ಕೋಪ ಬರುತ್ತೆ. ಆಕೆಗೆ ತನನ್ನು ಪುರುಷ ಗೌರವಿಸುತ್ತಿಲ್ಲ ಎಂದೆನಿಸಬಹುದು ಮತ್ತು ಆಕೆ ಅದನ್ನು ಲೈಟಾಗಿ ತೆಗೆದುಕೊಳ್ಳಲಾರಳು. ಅದರೆ ಪುರುಷರು ತಮ್ಮ ಮಹಿಳೆಯೊಂದಿಗಿನ ಸಂಬಂಧದಲ್ಲಿ ಮಾತನಾಡುವಾಗ ಲಿಂಗಭೇದಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಸ್ತಾಪಿಸದೇ ಇರುವುದೇ ಸೂಕ್ತ. ಆಕೆ ತನ್ನನ್ನು ಹೆಣ್ಣೆಂದು ಜರೆಯುವುದನ್ನು ಸಹಿಸಲಾರಳು. ಅದು ಆಕೆಯ ಕೋಪಕ್ಕೆ ಕಾರಣವಾಗುತ್ತೆ ಹಾಗಾಗಿ ಆದಷ್ಟು ಆಕೆಯನ್ನು ಹೊಗಳುವುದನ್ನು ಕಲಿತರೆ ಪುರುಷರು ತಮ್ಮ ಸಂಬಂಧವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಸಾಧ್ಯ.

4.ಮರೆತು ಬಿಡುವ ಚಾಳಿ

4.ಮರೆತು ಬಿಡುವ ಚಾಳಿ

ಪ್ರತಿದಿನವೂ ಒಂದಲ್ಲ ಒಂದು ವಿಚಾರವನ್ನು ಮರೆತುಬಿಡುವುದು ಮಹಿಳೆಯರಿಗೆ ಅಷ್ಟು ಸರಿಕಾಣುವುದಿಲ್ಲ. ಪುರುಷರಿಗೆ ಮರೆತುಬಿಡುವುದು ಒಂದು ಚಾಳಿ. ಆದರೆ ಇದು ಮಹಿಳೆಯರಿಗೆ ತಾತ್ಸಾರ. ಹುಟ್ಟಿದ ಹಬ್ಬ ಮರೆತು ವಿಷ್ ಮಾಡದೇ ಇರುವುದು, ಮದುವೆ ತಾರೀಖು ನೆನಪಿಲ್ಲದೆ ಇರುವುದು, ಪ್ರಮುಖ ದಿನಾಂಕವನ್ನು ನೆನಪಿಟ್ಟುಕೊಳ್ಳದೆ ಇರುವುದು, ಮಹಿಳೆಯರಿಗೆ ದೊಡ್ಡ ಸಮಸ್ಯೆಯೆಂಬಂತೆ ಕಾಣಿಸುತ್ತದೆ. ಅವರು ಹೇಳಿದ ಯಾವುದೋ ವಸ್ತುವನ್ನು ಮರೆತು ತರದೇ ಇರುವುದು,ಇದು ಮಹಿಳೆಯರ ಕೋಪಕ್ಕೆ ಕಾರಣವಾಗುತ್ತೆ ಮತ್ತು ಇದನ್ನು ಅವರು ಕ್ಷಮಿಸುವುದಿಲ್ಲ. ಮನಸ್ಸಿಗೆ ಕಿರಿಕಿರಿ ಮಾಡಿಕೊಳ್ಳುತ್ತಾರೆ.

5.ಪದೇ ಪದೇ ಒಂದೇ ಬಟ್ಟೆಯನ್ನು ಧರಿಸುತ್ತಲೇ ಇರುವುದು

5.ಪದೇ ಪದೇ ಒಂದೇ ಬಟ್ಟೆಯನ್ನು ಧರಿಸುತ್ತಲೇ ಇರುವುದು

ಹಾಕಿದ ಬಟ್ಟೆಯನ್ನೇ ಪದೇ ಪದೇ ಧರಿಸುವುದು ಮಹಿಳೆಗೆ ಕಿರಿಕಿರಿಯಾಗುತ್ತೆ. ಪ್ರತಿ ದಿನ ಬೇಗ ಸ್ನಾನಕ್ಕೆ ಹೋಗಿ, ಆ ಬಟ್ಟೆ ಹಾಕ್ಕೊಳಿ, ಈ ಬಟ್ಟೆ ಹಾಕ್ಕೊಳಿ ಎಂದು ಹೇಳುತ್ತಲೇ ಇರಲು ಆಕೆಗೆ ಇಷ್ಟವಾಗುವುದಿಲ್ಲ. ತನ್ನ ಸಂಗಾತಿ ಸ್ಟೈಲಿಶ್ ಆಗಿ ಇರಬೇಕು ಎಂದು ಆಕೆ ಬಯಸುತ್ತಾಳೆ. ಬಟ್ಟೆಗಳನ್ನು ಹರಡಿಕೊಂಡಿರುವುದು , ನಿಮ್ಮ ವಾಲ್ ಡ್ರೋಬ್ ಅಶಿಸ್ತಿನ ಕೂಪವಾಗಿದ್ದರೆ ಅದನ್ನು ಅವಳು ಸಹಿಸುವುದಿಲ್ಲ.

6.ತಮ್ಮ ಹಿಂದಿನ ಸಂಬಂಧದ ಬಗ್ಗೆ ಪದೇ ಪದೇ ಹೇಳುವುದು

6.ತಮ್ಮ ಹಿಂದಿನ ಸಂಬಂಧದ ಬಗ್ಗೆ ಪದೇ ಪದೇ ಹೇಳುವುದು

ನಿಮ್ಮ ಸಂಗಾತಿಯ ಬಳಿ ನಿಮ್ಮ ಎಕ್ಸ್ ಬಗ್ಗೆ ಹೇಳಲೇಬಾರದು. ನಿಮ್ಮ ಹಳೆಯ ಸ್ನೇಹಿತೆ ಈಗಲೂ ನಿಮ್ಮ ತಲೆಯಲ್ಲಿರುವುದನ್ನು ಅವಳು ಸಹಿಸಲಾರಳು. ಹಳೆಯ ಸ್ನೇಹಿತೆಯ ಗುಣಗಾನ ನೀವು ಮಾಡುತ್ತಿದ್ದರೆ ಮುಂದೆ ಮಂಗಳಾರತಿ ಸ್ವೀಕರಿಸಲು ರೆಡಿಯಾಗಿರಬೇಕು ಅಷ್ಟೇ. ನಿಮ್ಮ ಸಂಗಾತಿಯನ್ನು ಖುಷಿಯಾಗಿಡಬೇಕು ಎಂದರೆ ನೀವು ನಿಮ್ಮ ಹಳೆಯ ಸಂಗಾತಿಯನ್ನು ತಲೆಯಿಂದ ದೂರವೇ ಇಡಬೇಕು. ಆಕೆಯ ಬಗ್ಗೆ ಈಕೆಯ ಎದುರು ಎಂದೂ ಮಾತನಾಡಬಾರದು. ಭೂತಕಾಲವನ್ನು ಹಿಂದಕ್ಕೇ ಬಿಟ್ಟು ವರ್ತಮಾನದಲ್ಲಿ ನಡೆದರೆ ಮಾತ್ರ ಭವಿಷ್ಯವೂ ಚೆನ್ನಾಗಿರುತ್ತದೆ.

ಇವು ಪುರುಷರಿಂದ ಮಹಿಳೆಯರು ಪದೇ ಪದೇ ಕಿರಿಕಿರಿಗೆ ಒಳಗಾಗುವ ಪ್ರಮುಖ ಆರು ವಿಚಾರಗಳು. ಇವು ನಿಮ್ಮ ಅಭ್ಯಾಸವೂ ಆಗಿದ್ದಲ್ಲಿ ಖಂಡಿತ ಬದಲಾಯಿಸಿಕೊಳ್ಳಿ. ಸರಿ ಅನ್ನಿಸಿದಲ್ಲಿ ಇನ್ನಷ್ಟು ಮಂದಿಗೆ ಶೇರ್ ಮಾಡಿ.

Read more about: relationship
English summary

MOST ANNOYING HABITS OF MEN THAT WOMEN HATE, BEING IN A RELATIONSHIP

In every relationship, women find few habits of their men to be disgusting or at least annoying. In this article, I am listing the most common ones that women feel annoyed about.
Story first published: Saturday, May 12, 2018, 10:43 [IST]
X
Desktop Bottom Promotion