For Quick Alerts
ALLOW NOTIFICATIONS  
For Daily Alerts

ಗಂಡ-ಹೆಂಡತಿ ಪರಸ್ಪರ ದೂರವಿದ್ದರೆ ಒತ್ತಡವೇ ಹೆಚ್ಚು!

By Hemanth
|

ದೊಡ್ಡ ಕಂಪೆನಿಯಲ್ಲಿ ಪತಿಗೆ ಹುದ್ದೆಯಿದ್ದು, ಇದಕ್ಕಾಗಿ ಆತ ಯಾವಾಗಲೂ ಬೇರೆ ರಾಜ್ಯ ಅಥವಾ ದೇಶಗಳಿಗೆ ಸುತ್ತಾಡಿಕೊಂಡು ಇರಬೇಕಾಗುವುದು. ಇನ್ನು ಕೆಲವರು ಪತ್ನಿಯನ್ನು ಊರಿನಲ್ಲೇ ಬಿಟ್ಟು ವಿದೇಶಗಳಿಗೆ ದುಡಿಯಲು ಹೋಗಿ ತಮ್ಮ ಮುಂದಿನ ಜೀವನ ಕಟ್ಟಲು ಬಯಸುವರು. ಆದರೆ ಇಂತಹ ಸಂದರ್ಭಗಳಲ್ಲಿ ಇಬ್ಬರ ನಡುವೆ ಪ್ರೀತಿ, ನಂಬಿಕೆ ಹಾಗೂ ಗೌರವ ಮುಖ್ಯವಾಗಿರುವುದು. ಯಾಕೆಂದರೆ ದೂರದಲ್ಲಿರುವ ಸಂಗಾತಿಯ ನೆನಪು ಪ್ರತಿ ಕ್ಷಣವೂ ಕಾಡುವುದು. ಒಮ್ಮೆ ಇಬ್ಬರು ಜತೆಯಾದರೆ ಆಗ ಪ್ರೀತಿಯ ಕಾರಂಜಿಯು ಚಿಮ್ಮುವುದು. ಸಂಗಾತಿಯಿಂದ ದೂರದಲ್ಲಿದ್ದರೆ ಆಗ ಪ್ರೀತಿಯ ಬೆಲೆ ಕೂಡ ಚೆನ್ನಾಗಿ ತಿಳಿಯುವುದು. ದಿನಗಳು ಹಾಗೂ ತಿಂಗಳುಗಳ ಬಳಿಕ ಪರಸ್ಪರ ಭೇಟಿಯಾಗುವ ಕ್ಷಣವನ್ನು ಊಹಿಸಲು ಸಾಧ್ಯವಿಲ್ಲ. ಆದರೆ ಇಂತಹ ಸಂಬಂಧಗಳಲ್ಲಿ ಯಾವಾಗಲೂ ಒತ್ತಡವೆನ್ನುವುದು ಅತಿಯಾಗಿರುವುದು. ಈ ಬಗ್ಗೆ ಲೇಖನದಲ್ಲಿ ಮುಂದೆ ಓದುತ್ತಾ ತಿಳಿಯಿರಿ.

ದೀರ್ಘ ಅಂತರದ ಸಂಬಂಧದಲ್ಲಿ ಒತ್ತಡವ್ಯಾಕೆ?

ಪ್ರತಿದಿನ ನೀವು ಸಂಗಾತಿಯನ್ನು ನೋಡಲು ಸಾಧ್ಯವಾಗದೆ ಇದ್ದಾಗ ಅದರಲ್ಲಿ ಒಂದು ರೀತಿಯ ಅನ್ಯೋನ್ಯತೆಯು ಬೆಳೆಯುವುದು. ಇದರಿಂದ ಮನಸ್ಸಿನಲ್ಲಿ ಅಭದ್ರತೆಯು ಕಾಡುವುದು. ಸಂಗಾತಿಯನ್ನು ಕಳೆದುಕೊಳ್ಳುವ ಅಭದ್ರತೆ ಇದಾಗಿರುವುದು. ಭವಿಷ್ಯದ ಬಗ್ಗೆ ಊಹಿಸಲು ನಮಗೆ ಸಾಧ್ಯವಾಗಲ್ಲ. ಇದರಿಂದ ಸಂಬಂಧವನ್ನು ಭದ್ರವಾಗಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮಲ್ಲಿ ಅಭದ್ರತೆಯ ಒತ್ತಡ ಉಂಟಾಗುವುದು. ಸಂಗಾತಿಯು ನಮಗೆ ಮೋಸ ಮಾಡುತ್ತಿಲ್ಲವಲ್ಲಾ? ಮತ್ತು ನಿಷ್ಠರಾಗಿದ್ದಾರೆಯಾ ಇತ್ಯಾದಿ ಪ್ರಶ್ನೆಗಳು ಕಾಡುವುದು. ಇದರಿಂದ ಒತ್ತಡ ಉಂಟಾಗುವುದು ಮತ್ತು ಇದನ್ನು ದೂರ ಮಾಡಲು ಹಾಗಲ್ಲ.

relationship

ದೀರ್ಘಕಾಲದ ಸಂಬಂಧದಲ್ಲಿ ಎಲ್ಲರು ಏನು ಮಾಡುವರು?

1. ಸತ್ಯ ಹೇಳಿ

ಪ್ರೀತಿ ಹಾಗೂ ಸಂಬಂಧವನ್ನು ಉಳಿಸಿಕೊಳ್ಳುವ ಮೊದಲ ವಿಧಾನವೆಂದು ಸತ್ಯವನ್ನು ಹೇಳಬೇಕು. ಅದರಲ್ಲೂ ಸಂಗಾತಿಗಳು ದೂರದೂರ ಇರುವಾಗ ನಂಬಿಕೆ ಕಾಪಾಡುವುದು ದೊಡ್ಡ ವಿಚಾರ ಮತ್ತು ಇದರಿಂದ ನೀವಿಬ್ಬರು ಸಂತೋಷವಾಗಿರಬಹುದು. ನೀವು ಪರಸ್ಪರ ಜತೆಯಾಗಿರದೇ ಇದ್ದರೆ ಅಥವಾ ವಾರದಲ್ಲಿ, ತಿಂಗಳಿಗೊಮ್ಮೆ ಭೇಟಿಯಾಗುತ್ತಲಿದ್ದರೆ ಆಗ ನಿಮ್ಮಲ್ಲಿ ಚಿಂತೆಯು ಕಾಡುವುದು ಸಾಮಾನ್ಯ. ನೀವಿಬ್ಬರು ಸಂಬಂಧಕ್ಕೆ ಭದ್ರಬುನಾದಿ ಹಾಕುವುದು ಅಗತ್ಯ, ದೂರವಾಗಿದ್ದರೂ ಪರಸ್ಪರರಿಗಾಗಿ ಹೆಚ್ಚು ಸಮಯ ಕಳೆಯಲು ನೀವು ಪ್ರಯತ್ನಿಸಿ. ಪ್ರತಿಯೊಂದು ಸಂಬಂಧದಲ್ಲಿ ಏರು-ಪೇರುಗಳು ಇರುವುದು ಸಹಜ. ಪರಿಸ್ಥಿತಿಯನ್ನು ನಿಭಾಯಿಸಲು ನೀವು ಸುಳ್ಳು ಹೇಳುತ್ತೀರಿ ಎಂಬುದಕ್ಕೆ ಅರ್ಥವೇ ಇರುವುದಿಲ್ಲ. ತಮ್ಮ ಕುತ್ತಿಗೆಗೆ ಬಂದಾಗ ಅಥವಾ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಹಲವರು ತಮ್ಮ ಸಂಗಾತಿಗೆ ಸುಳ್ಳು ಹೇಳಿ ಇದನ್ನು ನಿಭಾಯಿಸುತ್ತಾರೆ. ಆದರೆ ನಿಮ್ಮ ಪ್ರೀತಿ ಸದೃಢವಾಗಿ ಬೆಳೆಯಬೇಕು ಎಂದಾದಲ್ಲಿ, ನಿಮ್ಮ ಸಂಗಾತಿಗೆ ಇದರಿಂದ ನೋವುಂಟಾಗುತ್ತದೆ ಎಂದು ಗೊತ್ತಿದ್ದರು ಸಹ ಸುಳ್ಳನ್ನು ಹೇಳಲು ಹೋಗಬೇಡಿ. ಆ ಅಭ್ಯಾಸವನ್ನು ಅಪ್ಪಿ ತಪ್ಪಿ ಸಹ ಬಳಸಿಕೊಳ್ಳಲು ಹೋಗಬೇಡಿ.

ಸುಳ್ಳೆಂಬುದು ವಿಷದಂತೆ. ಒಂದು ಸುಳ್ಳು ಸಾವಿರ ಸುಳ್ಳಿಗೆ ಜನ್ಮ ನೀಡುತ್ತದೆ. ಅದನ್ನು ನೀವು ಮುಂದುವರಿಸಿ ಕೊಂಡು ಹೋಗುತ್ತಲೆ ಇರುತ್ತೀರಿ. ಈ ರೀತಿ ನೀವು ನಿಮ್ಮ ಸಂಬಂಧವನ್ನು ತುಂಡು ತುಂಡು ಮಾಡುತ್ತೀರಿ. ಸುಳ್ಳುಗಳು ನಿಮ್ಮ ಸಂಬಂಧವನ್ನು ಒಡೆಯುತ್ತವೆ. ಆದ್ದರಿಂದಲೇ ನೀವು ನಿಮ್ಮ ಸಂಬಂಧದಲ್ಲಿ ಸುಳ್ಳನ್ನು ಹೇಳಬಾರದು. ಒಂದು ವೇಳೆ ನಿಮ್ಮ ಪ್ರೀತಿಯು ನಿಮಗೆ ಪ್ರಪಂಚದ ಅತ್ಯಂತ ಅಮೂಲ್ಯವಾದ ಅಂಶವಾಗಿದ್ದರೆ, ಸುಳ್ಳು ಹೇಳುವುದನ್ನು ಬಿಟ್ಟು ಬಿಡಿ.

2.ಪರಸ್ಪರರ ಬಗ್ಗೆ ತಿಳಿಯಿರಿ

ಸಂಗಾತಿಯಿಂದ ನೀವು ಸುದೀರ್ಘವಾಗಿ ದೂರವಿರಬೇಕಾದರೆ ನೀವು ಸಂಗಾತಿ ಬಗ್ಗೆ ಪ್ರತಿಯೊಂದು ವಿಚಾರಗಳನ್ನು ಕೂಡ ಸರಿಯಾಗಿ ತಿಳಿದುಕೊಳ್ಳಬೇಕು. ನೀವು ಮರು ಯೋಚನೆ ಮಾಡಿ. ನೀವು ದೂರದ ಊರಿನಲ್ಲಿ ಇರುತ್ತೀರಿ. ಆಕೆ/ ಆತನ ದಿನನಿತ್ಯದ ಜೀವನದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಹಾಗೂ ತೊಂದರೆಗಳು ಇರುವುದು. ಇದು ನಿಮಗೆ ತಿಳಿಯದೆ ಇರಬಹುದು. ಈ ಬಗ್ಗೆ ತನಿಖೆ ಮಾಡುವ ಬದಲು ಸಂಗಾತಿಯೊಂದಿಗೆ ಬೆರೆತುಕೊಂಡು ಆಕೆ/ಆತನಿಗೆ ಇನ್ನಷ್ಟು ಹತ್ತಿರವಾಗುವಂತಹ ಕೆಲವು ಪ್ರಶ್ನೆಗಳನ್ನು ಕೇಳಿ ಮತ್ತು ಸಂಪೂರ್ಣವಾಗಿ ಸಂಗಾತಿಯನ್ನು ತಿಳಿಯಿರಿ. ಆ ಹೋಟೆಲ್ ಗೆ ನೀನು ಮತ್ತು ಸ್ನೇಹಿತರು ಪದೇ ಪದೇ ಹೋಗಲು ನೀವ್ಯಾಕೆ ಇಷ್ಟಪಡುತ್ತೀರಿ? ಅಲ್ಲಿ ಏನು ತಿನ್ನುತ್ತೀರಿ ಎನ್ನುವ ಪ್ರಶ್ನೆಗಳನ್ನು ಕೇಳಿ. ಇದರಿಂದ ನೀವಿಬ್ಬರು ಮತ್ತಷ್ಟು ಹತ್ತಿರವಾಗುತ್ತೀರಿ. ಆಕೆ/ ಆತನ ದಿನನಿತ್ಯದ ಜೀವನದ ಬಗ್ಗೆ ನಿಮಗೆ ತಿಳಿಯುವುದು. ನೆನಪಿಡಿ ಸಂಸಾರದಲ್ಲಿ ಪ್ರತಿಯೊಬ್ಬರಲ್ಲಿಯೂ ಒಂದೊಂದು ರೀತಿಯ ಗುಣಗಳು ಇರುತ್ತದೆ. ಈ ಗುಣಗಳಿಂದಲೇ ಸಮಾಜವು ಜನರನ್ನು ಒಳ್ಳೆಯವರು ಅಥವಾ ಕೆಟ್ಟವರು ಎಂದು ಪರಿಗಣಿಸುತ್ತದೆ. ಆದರೆ ಇದೆಲ್ಲವೂ ನಿಮಗೆ ಅರ್ಥವನ್ನು ನೀಡಲ್ಲ. ಯಾಕೆಂದರೆ ಸಂಗಾತಿಯ ಬಗ್ಗೆ ನೀವು ತೀರ್ಪು ನೀಡುವಂತಿಲ್ಲ. ಆಕೆ/ ಆತನನ್ನು ಪ್ರೀತಿಸಬೇಕು ಅಷ್ಟೇ.

3. ಸಣ್ಣ ಸೂಚನೆಗಳನ್ನು ಕೊಡುತ್ತಲಿರಿ

ನಿಮ್ಮ ಸಂಗಾತಿಯನ್ನು ಪ್ರಶಂಸೆ ಮಾಡಿ ಮತ್ತು ನಿಮ್ಮಿಬ್ಬರ ಸಂಬಂಧವು ಮತ್ತಷ್ಟು ಉತ್ತಮವಾಗಲು ಕೆಲವೊಂದು ಸಣ್ಣ ಸೂಚನೆಗಳನ್ನು ನೀಡಿ. ಪ್ರೀತಿಯ ಸೂಚನೆಗಳು ನೆರವಾಗುವುದು. ನಿಮ್ಮದೇ ಕೈಬರಹದಲ್ಲಿ ಬರೆದಿರುವಂತಹ ಪತ್ರ ಅಥವಾ ಆಕೆ/ ಆತನಿಗೆ ತಿಳಿಯದೆ ಊಟ ಆರ್ಡರ್ ಮಾಡುವುದು, ಉಡುಗೊರೆ ನೀಡುವುದು ಇತ್ಯಾದಿಗಳು ದೂರದ ಸಂಬಂಧ ಉಳಿಸುವುದು. ಎಲ್ಲವೂ ನಿಮ್ಮ ಮೇಲಿದೆ ಮತ್ತು ನೀವು ಮುಂದಾಗದೆ ಇದ್ದರೆ ಸಂಬಂಧ ಉಳಿಯದು.

4.ಪ್ರತಿ ಕ್ಷಣವನ್ನು ಸಂಭ್ರಮಿಸಿ

ದೀರ್ಘ ಅಂತರದ ಸಂಬಂಧವೆಂದರೆ ನೀವು ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುವಿರಿ ಎನ್ನುವುದು. ಹೀಗೀಗ ವೀಡಿಯೋ ಕಾಲ್ ಸಾಮಾನ್ಯವಾಗಿರುವ ಕಾರಣ ಪರಸ್ಪರರು ಪ್ರತಿಯೊಂದು ಕ್ಷಣಗಳನ್ನು ಸಂಭ್ರಮಿಸಿ. ಸಂಗಾತಿಗೆ ನಿಮ್ಮ ಪ್ರೀತಿಯು ಸಾಕಷ್ಟಿದೆ ಮತ್ತು ಪ್ರತಿ ಕ್ಷಣವನ್ನು ಸಂಭ್ರಮಿಸಬೇಕಾಗಿದೆ. ಫೋನ್ ಅಥವಾ ವೀಡಿಯೊ ಕಾಲ್ ಮೂಲಕ ನೀವು ಸಂಗಾತಿಯೊಂದಿಗೆ ಮಾತನಾಡಿದಾಗ, ಇನ್ನಷ್ಟು ಸಮಯ ಅವರೊಂದಿಗೆ ಇರಬೇಕೆಂದು ಮನಸ್ಸು ಬಯಸುವುದು. ತುಂಬಾ ದೀರ್ಘ ಸಮಯದ ಬಳಿಕ ನೀವಿಬ್ಬರು ಭೇಟಿಯಾದಾಗ ಪ್ರೀತಿಯ ನೆನಪುಗಳನ್ನು ನೀವಿಬ್ಬರು ಹಂಚಿಕೊಳ್ಳಲಿದ್ದೀರಿ.ಇಂತಹ ಲೇಖನಗಳನ್ನು ನೀವು ಓದಿಕೊಂಡು ಖುಷಿಯಾದರೆ ಶೇರ್ ಮಾಡಿ.

5. ಆತ/ ಆಕೆಯ ಮೇಲೆ ಎಂದೂ ಅನುಮಾನ ಪಟ್ಟುಕೊಳ್ಳಬೇಡಿ

ಒಂದು ವೇಳೆ ನಿಮ್ಮ ಸಂಬಂಧ ಗಟ್ಟಿಯಾಗಿಯೇ ಇದ್ದರೆ ಪರಸ್ಪರರ ಬಗ್ಗೆ ಅತ್ಯಂತ ಖಾಸಗಿಯಾದ ವಿಷಯಗಳನ್ನೂ ಕೇಳಿ ಸ್ಪಷ್ಟೀಕರಿಸಿಕೊಳ್ಳುವುದು ಉತ್ತಮ. ಉದಾಹರಣೆಗೆ ಒಂದು ವೇಳೆ ನಿಮಗೆ ಮೂರನೆಯವರಿಂದ ನಿಮ್ಮ ಮನದನ್ನ ಬೇರೆ ಯಾರನ್ನೋ ಊಟಕ್ಕೆ ಕರೆದುಕೊಂಡು ಹೋಗುತ್ತಿರುವ ಬಗ್ಗೆ ತಿಳಿದು ಬಂದರೆ ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ನೇರವಾಗಿಯೇ ಯಾರನ್ನು ಊಟಕ್ಕೆ ಕರೆದುಕೊಂಡು ಹೋಗುತ್ತಿದ್ದೀರಿ? ಏನು ವಿಷಯ ಎಂದು ನೇರವಾಗಿ ಕೇಳಿ. ಇದರಿಂದ ದೊರಕುವ ಉತ್ತರದ ಮೂಲಕ ತಲೆಯಲ್ಲಿ ಅನುಮಾನದ ಹುಳಗಳು ಕೊರೆಯುವುದು ತಪ್ಪುತ್ತದೆ ಹಾಗೂ ಅನಾವಶ್ಯಕವಾದ ಗೊಂದಲ ಇಲ್ಲವಾಗುತ್ತದೆ.

Read more about: relation love romance
English summary

Let's Rest Together Reliving The Past Memories Of Love

The thing about long distance is the days of hunger to be with the partner and when you get to meet finally, your heart says, "let's rest together reliving the past memories of love". Long distance relationships are the most refined form of relationships where trust, respect and the sanctity of love is judged each moment. If you ever have been in a long distance relationship you will know how it feels to be in love with the thoughts of being with the partner. The beauty about long distance relationship is the way it is handled.
X
Desktop Bottom Promotion