For Quick Alerts
ALLOW NOTIFICATIONS  
For Daily Alerts

ಪ್ರೀತಿಯಲ್ಲಿ ಬೀಳದೇ ಇರಲು ಹೀಗೆ ಮಾಡಿ

By Hemanth
|

ಪ್ರೀತಿ ಅನ್ನುವುದು ಅದಾಗಿಯೇ ಮೂಡಿ ಎರಡು ಮನಸ್ಸುಗಳ ಮಿಲನ ಮಾಡಿಸುವುದು. ಕೆಲವರಿಗೆ ಮೊದಲ ನೋಟದಲ್ಲಿ ಪ್ರೀತಿ ಮೂಡಿದರೆ ಇನ್ನು ಕೆಲವರಿಗೆ ನಿಧಾನವಾಗಿ ಪ್ರೀತಿ ಹುಟ್ಟುವುದು. ಆದರೆ ನೀವು ಪ್ರೀತಿಗೆ ಬೀಳಲು ಕಾರಣವೇನು? ಕೆಲವೊಂದು ಸಲ ನೀವು ಕೆಟ್ಟ ವ್ಯಕ್ತಿಯ ಆಯ್ಕೆ ಮಾಡಿಕೊಂಡಿರುವುದು ಯಾಕಾಗಿ? ಹಠಾತ್ ಆಗಿ ಮೂಡಿದ ಪ್ರೀತಿಯು ಕೊನೆಯ ತನಕ ಉಳಿಯದೇ ಇರಲು ಕಾರಣವೇನು?

ಪ್ರೀತಿಯೆನ್ನುವ ಹೇಗೆ ಮೂಡುವುದು ಮತ್ತು ಅದನ್ನು ಹೇಗೆ ನಿಭಾಯಿಸಬೇಕೆನ್ನುವ ಬಗ್ಗೆ ಯಾವುದೇ ವಿಶ್ವವಿದ್ಯಾನಿಲಯಗಳು ಕಲಿಸುವುದಿಲ್ಲ. ಇದು ನಿಮ್ಮ ಮನಸ್ಸಿನೊಳಗಿನ ಭಾವನೆಗಳು. ನೀವು ಪ್ರೀತಿಸಿರುವ ವ್ಯಕ್ತಿ ನಿಮ್ಮನ್ನು ಅರ್ಥ ಮಾಡಿಕೊಳ್ಳಲು ವಿಫಲನಾಗಿ ಅಥವಾ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗದೆ ಇರುವಾಗ ಪ್ರೀತಿಯು ದೂರವಾಗುವುದು.

ಯಾರನ್ನಾದರೂ ಪ್ರೀತಿಸಲು ನಿಮ್ಮನ್ನು ನೀವು ಒತ್ತಾಯಿಸುವುದು ಮತ್ತು ಪ್ರೀತಿಯೇ ಇಲ್ಲದೆ ಇರುವಂತಹ ಸಂಬಂಧದಲ್ಲಿ ಮುಂದುವರಿಯುವುದು ಇಂದಿನ ದಿನಗಳಲ್ಲಿ ಜನರಿಗೆ ಅಭ್ಯಾಸವಾಗಿ ಹೋಗಿದೆ. ಕೆಟ್ಟ ಆಯ್ಕೆಯೊಂದಿಗೆ, ಕೆಟ್ಟ ಪರಿಸ್ಥಿತಿಯಲ್ಲಿ ಪ್ರೀತಿಗೆ ಬಿದ್ದು ಇದನ್ನು ಆರೋಗ್ಯಕರ ಸಂಬಂಧವಾಗಿಸಲು ಹೆಣಗಾಡುತ್ತಿರುವರು. ಇದು ತಪ್ಪು ಮತ್ತು ಎರಡನೇಯದಾಗಿ ಪ್ರೀತಿ ಹುಟ್ಟದೆ ಇರುವಾಗ ಪ್ರೀತಿಯ ನಾಟಕವಾಡುವುದು ತಪ್ಪು.

couples

ಪ್ರೀತಿಯನ್ನು ಅರ್ಥಮಾಡಿಕೊಳ್ಳುವುದೇ ಸರಿಯಾದ ಮಾರ್ಗ. ಆದರೆ ಯಾರೂ ಇದನ್ನು ಮಾಡುವುದಿಲ್ಲ. ಈ ಲೇಖನದಲ್ಲಿ ನಿಮ್ಮ ಬಗ್ಗೆ ಭಾವನೆಗಳೇ ಇಲ್ಲದೆ ಇರುವಂತಹ ವ್ಯಕ್ತಿಯನ್ನು ಯಾಕೆ ಪ್ರೀತಿಸಬಾರದು ಮತ್ತು ವಿಷಕಾರಿ ಪರಿಸ್ಥಿತಿಯಲ್ಲಿ ಪ್ರೀತಿಸಬಾರದು ಎನ್ನುವ ಬಗ್ಗೆ ತಿಳಿಸಲಿದ್ದೇವೆ. ಪ್ರೀತಿ ಅನ್ನುವುದು ಅಮೋಘ ಭಾವನೆ. ಆದರೆ ಅದನ್ನು ಸರಿಯಾದ ವ್ಯಕ್ತಿ ಜತೆಗೆ ಹಂಚಿಕೊಳ್ಳಿ. ಪ್ರೀತಿಯಲ್ಲಿ ಬೀಳದೇ ಇರುವ ಲಕ್ಷಣಗಳು ಯಾವುದು?

1. ಅರ್ಥ ಮಾಡಿಕೊಳ್ಳಿ

ಪ್ರೀತಿ ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಹೃದಯ ಮತ್ತು ಮೆದುಳಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಆದರೆ ಇದು ಎಲ್ಲಿಂದ ಬರುತ್ತಿದೆ ಎನ್ನುವುದನ್ನು ನೀವು ಅರ್ಥೈಸಿಕೊಳ್ಳಿ. ಪ್ರೀತಿಯ ಸಾಧ್ಯತೆಯ ಅರ್ಥೈಸಿ. ಪ್ರೀತಿಯನ್ನು ನಿಮ್ಮದೇ ರೀತಿಯಲ್ಲಿ ಅರ್ಥ ಮಾಡಿಕೊಂಡರೆ ಆಗ ಪ್ರೀತಿಯಿಂದ ನಿಮಗೆ ಏನು ಬೇಕೆಂದು ಅರ್ಥ ಮಾಡಿಕೊಳ್ಳಬಹುದು. ಇದರ ಬಳಿಕ ಪ್ರೀತಿಸುವುದು ತುಂಬಾ ಸುಲಭವಾಗಲಿದೆ. ಪ್ರೀತಿಯ ಅರ್ಥ ಮಾಡಿಕೊಳ್ಳಿ. ಬೇರೇನೂ ಅಲ್ಲ.

2. ವಿವರಣೆಗೆ ಗಮನ ಕೊಡಿ

ಅರ್ಥ ಮಾಡಿಕೊಂಡ ಬಳಿಕ ಮತ್ತು ನಿಮ್ಮ ಮುರಿದ ಸಂಬಂಧದ ಬಗ್ಗೆ ಎಲ್ಲವನ್ನು ಹಂಚಿಕೊಂಡ ಬಳಿಕ ನೀವು ಪ್ರೀತಿಸುತ್ತಿರುವ ದಾರಿ ಸರಿಯಾಗಿಲ್ಲ ಮತ್ತು ಆ ವ್ಯಕ್ತಿಯ ಪ್ರೀತಿಯಲ್ಲಿ ಬೀಳುವುದು ತಪ್ಪೆಂದು ನಿಮಗೆ ಅನಿಸಬಹುದು. ನೀವು ಅಂದುಕೊಂಡಂತಹ ವ್ಯಕ್ತಿ ಅವನಾಗಿ ಇಲ್ಲದೆ ಇರಬಹುದು. ನೀವು ಬೇರೆ ವಿಧದ ವ್ಯಕ್ತಿಯ ಹುಡುಕಬೇಕು. ಈ ವಿಧವು ನಿಮಗೆ ಅಂತ್ಯದಲ್ಲಿ ನೋವುಂಟು ಮಾಡುವುದಿಲ್ಲ. ನಿಮ್ಮ ವಿಧದ ವ್ಯಕ್ತಿಯಿಂದ ದೂರವಿರಲು ಪ್ರಯತ್ನಿಸಿ. ಹಲವಾರು ವಿಧದ ವ್ಯಕ್ತಿಗಳು ಇರುವರು ಮತ್ತು ನಿಮಗೆ ಯಾವ ವಿಧದ ವ್ಯಕ್ತಿ ಬೇಕೆಂದು ಮೊದಲು ಗುರುತಿಸಿಕೊಳ್ಳಬೇಕು.

3. ಹೆಚ್ಚು ವಾಸ್ತವಿಕವಾಗಿರಿ

ಪ್ರೀತಿ ಅನ್ನುವುದು ಭಾವನೆಗಳ ಸಂಗಮ. ಇದರಲ್ಲಿ ವಾಸ್ತವಿಕತೆ ಯಾಕೆ ಎಂದು ಪ್ರಶ್ನಿಸಬಹುದು. ನೀವು ಪ್ರೀತಿಯನ್ನು ವಿಶ್ಲೇಷಿಸುವಾಗ ತುಂಬಾ ವಾಸ್ತವಿಕವಾಗಿರಬೇಕು. ಯಾಕೆಂದರೆ ಹೀಗೆ ಮಾಡದೇ ಇದ್ದರೆ ಆಗ ನಿಮಗೆ ನೋವಾಗುವುದು. ನೀವು ಪ್ರೀತಿಸುವ ವ್ಯಕ್ತಿಯು ವಾಸ್ತವಿಕ ರೀತಿಯಿಂದ ಯೋಚಿಸುತ್ತಿಲ್ಲವೆಂದು ನಿಮಗೆ ತಿಳಿದಿದೆಯಾ? ಉದಾಹರಣೆಗೆ: ನೀವು ಯಾರನ್ನಾದರೂ ಪ್ರೀತಿಸಿದ್ದೀರಿ ಮತ್ತು ಅಂತ್ಯದಲ್ಲಿ ನಿಮ್ಮ ಮನಸ್ಸಿಗೆ ನೋವಾಯಿತು. ಮುಂದಿನ ಸಲ ನೀವು ಪ್ರೀತಿಸುವ ಮೊದಲು ತುಂಬಾ ಯೋಚನೆ ಮಾಡುತ್ತೀರಿ ಮತ್ತು ನೋವಾಗದೆ ಇರುವಂತೆ ನೋಡಿಕೊಳ್ಳುವಿರಿ. ನಿಮ್ಮಲ್ಲಿ ಮೂಡುತ್ತಿರುವ ಪ್ರೀತಿಯು ಸರಿಯಾದ ಆಯ್ಕೆಯಲ್ಲವೆಂದು ನಿಮಗೆ ಅನಿಸಿದರೆ ಆಗ ನೀವು ಹೃದಯ ಮತ್ತು ಬುದ್ದಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ನಿಮಗೆ ನೆರವಾಗದೆ ಇದ್ದರೆ ಯಾವುದೇ ಸಂಬಂಧ ಬೆಳೆಸಬೇಡಿ.

4.ಹಿಂದಿನ ಘಟನೆಯಿಂದ ಕಲಿಯಿರಿ

ನೀವು ಹಿಂದೆ ಮಾಡಿರುವಂತಹ ತಪ್ಪುಗಳು ಭವಿಷ್ಯದಲ್ಲಿ ಮುಂದುವರಿಸಬೇಡಿ. ನೀವು ಇದನ್ನು ಮುಂದುವರಿಸಿದರೆ ಆಗ ನೀವು ಸೋಲುತ್ತೀರಿ ಮತ್ತು ಜೀವನದಲ್ಲಿ ಯಾವುದೇ ಪಾಠ ಕಲಿಯಲಿಲ್ಲವೆಂದು ಹೇಳಬಹುದು. ಪ್ರೀತಿಯ ವಿಚಾರದಲ್ಲಿ ಹಿಂದಿನ ಘಟನೆಯಿಂದ ಪಾಠ ಕಲಿಯಬೇಕು ಮತ್ತು ಇದು ಮುಂದೆ ಪ್ರೀತಿಯಲ್ಲಿ ಬೀಳುವಾಗ ನೆರವಾಗುವುದು. ಪ್ರೀತಿ ಅನ್ನುವುದು ಭಾವನೆಗಳನ್ನು ವ್ಯಕ್ತಪಡಿಸುವುದು ಮತ್ತು ನೀವು ಇದನ್ನು ಸರಿಯಾದ ವ್ಯಕ್ತಿಯೊಂದಿಗೆ ಹಂಚಿಕೊಳ್ಳದೆ ಇದ್ದರೆ ನೀವೇನು ಮಾಡುತ್ತಲಿದ್ದೀರಿ?

ನೀವು ಪ್ರೀತಿಸುತ್ತಿರುವ ವ್ಯಕ್ತಿಯು ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವೆಂದಾದರೆ ಆಗ ನೀವು ಆ ಸಂಬಂಧದಿಂದ ಹೊರನಡೆಯಿರಿ. ನೀವು ಪ್ರೀತಿಸುವ ಸಲುವಾಗಿ ಭೂಮಿ ಮೇಲೆ ಹುಟ್ಟಿಲ್ಲ, ಇದು ಅದರ ಒಂದು ಅಂಗ ಮಾತ್ರ. ಸಂಬಂಧ ಸರಿಯಾಗಿಲ್ಲವೆಂದಾದರೆ ಅದರಿಂದ ಹೊರನಡೆಯಿರಿ ಮತ್ತು ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ. ಪ್ರೀತಿ ವ್ಯಕ್ತಪಡಿಸುವಾಗ ಮತ್ತು ಪ್ರೀತಿ ಒಪ್ಪಿಕೊಳ್ಳುವ ಮೊದಲು ಈ ನಾಲ್ಕು ವಿಚಾರಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಪ್ರೀತಿಯೇ ಇಲ್ಲದೆ ಪ್ರೀತಿಸಲು ಆರಂಭಿಸಿದರೆ ಆಗ ಅಂತಿಮವಾಗಿ ನೋವೇ ನಿಮಗೆ ಜಾಸ್ತಿಯಾಗಲಿದೆ. ಇದನ್ನು ಮರೆಯಲು ವರ್ಷಗಳೇ ಬೇಕಾಗಬಹುದು. ನೀವು ಹೀಗೆ ಮಾಡಬೇಡಿ. ನೀವು ಲಾಭನಷ್ಟವನ್ನು ನೋಡಲು ಹೋಗಬೇಡಿ. ನಿಮಗೆ ಆ ವ್ಯಕ್ತಿಯು ಯೋಗ್ಯನಾ ಎಂದು ತಿಳಿಯಿರಿ. ಪ್ರೀತಿ ಅನ್ನುವುದು ಎರಡು ಕಡೆಗಳಿಂದ ಬರಬೇಕು. ಆಗ ಮಾತ್ರ ಪ್ರೀತಿ ಮುಂದುವರಿಯಲು ಸಾಧ್ಯ. ನಿಮಗೆ ಲೇಖನವು ಇಷ್ಟವಾಗಿದ್ದರೆ ಇದನ್ನು ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಿ.

English summary

Don't Just Fall In Love Being Unsure!

What makes us fall in love? Why do we go for the wrong ones keeping love in front of our eyes? Why make sudden love when you know it won't last? Things about love that we haven't learned and we still force ourselves into loving someone is the reason for break-ups all around the world.
X
Desktop Bottom Promotion