For Quick Alerts
ALLOW NOTIFICATIONS  
For Daily Alerts

ಪರಿಸ್ಥಿತಿಗೆ ಅನುಗುಣವಾಗಿ ಪ್ರೀತಿಯ ರೂಪ ಬದಲಾಗುವುದು!

By Hemanth
|

ಮನುಷ್ಯ ಭೂಮಿ ಮೇಲೆ ವಾಸಿಸಲು ಇರುವಂತಹ ಪ್ರಮುಖ ಅಂಶಗಳಲ್ಲಿ ಒಂದು ಪ್ರೀತಿ. ಆ ಪ್ರೀತಿಗೆ ಬೀಳದವರು ತುಂಬಾ ಕಡಿಮೆ. ಪ್ರೀತಿ ಎನ್ನುವುದು ಬಾಲ್ಯದಿಂದ ಹಿಡಿದು ವೃದ್ಧಾಪ್ಯದ ತನಕ ಪ್ರತಿಯೊಬ್ಬರಿಗೂ ಸಿಕ್ಕೇ ಸಿಗುತ್ತದೆ. ಇಂತಹ ಪ್ರೀತಿ ಸಿಗದವರು ತುಂಬಾ ಕಡಿಮೆ ಎನ್ನಬಹುದು. ಹಲವಾರು ವಿಧಗಳಲ್ಲಿ ಪ್ರೀತಿಯು ನಮ್ಮ ಜೀವನದಲ್ಲಿ ಬಂದು ಹೋಗುತ್ತದೆ. ಕುಟುಂಬದ ಒಳಗಡೆಯೇ ಪ್ರೀತಿಯಿರುವುದು. ಸ್ನೇಹಿತರ ಮಧ್ಯೆ ಪ್ರೀತಿಯಿರುವುದು, ಎಲ್ಲವನ್ನು ಮೀರಿದ ಪ್ರೀತಿಯು ಇರುವುದು. ಯಾರಾದರೂ ಪ್ರೀತಿಯಲ್ಲಿ ಬಿದ್ದು ಪ್ರೇಮವಿವಾಹವಾದರೆ ಆಗ ಆ ಕುಟುಂಬದ ಎಲ್ಲ ಸದಸ್ಯರ ಪ್ರೀತಿಯು ಆಕೆ ಅಥವಾ ಆತನಿಗೆ ಸಿಗುವುದು.

ವರ್ಷಗಳು ಉರುಳುತ್ತಾ ಸಾಗಿದಂತೆ ಪ್ರೀತಿಯು ತನ್ನ ರೂಪ ಬದಲಾಯಿಸಿಕೊಳ್ಳಬಹುದು. ಆದರೆ ಅದರ ಮೂಲರಸವು ಹಾಗೆ ಇರುವುದು. ನಿಕಿತಾ ಮತ್ತು ರೋಹಿತ್ ನಡುವಿನ ಪ್ರೀತಿಯ ಬಗ್ಗೆ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ರೋಹಿತ್ ನ ಸೋದರ ರೋಹನ್ ತನ್ನ ಪ್ರೀತಿಯ ರೂಪ ಬದಲಾಯಿಸಿಕೊಂಡ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ. ಈ ಭೂಮಿ ಮೇಲೆ ಪ್ರೀತಿಗಿಂತ ಬಲಿಷ್ಠವಾದ ಮತ್ತೊಂದು ಸ್ವತ್ತಿಲ್ಲ ಎನ್ನುವುದು ಈ ಕಥೆಯು ನಿಮಗೆ ತಿಳಿಸುತ್ತದೆ. ಪ್ರೀತಿಯ ಶಕ್ತಿಯ ಬಗ್ಗೆ ತಿಳಿಯಲು ನೀವು ಮುಂದಕ್ಕೆ ಓದುತ್ತಾ ಹೋಗಿ...

ಎಲ್ಲವೂ ಆರಂಭವಾಗಿದ್ದು ಎಲ್ಲಿ?

ಎಲ್ಲವೂ ಆರಂಭವಾಗಿದ್ದು ಎಲ್ಲಿ?

ನಿಕಿತಾ ಮತ್ತು ರೋಹಿತ್ ಶಾಲಾ ದಿನಗಳಿಂದಲೇ ಸಹಪಾಠಿಗಳು. ಬಾಲ್ಯದ ಸ್ನೇಹವು ಹದಿಹರೆಯಕ್ಕೆ ಬರುತ್ತಿರುವಂತೆ ಪ್ರೀತಿಯಲ್ಲಿ ಸಾಗಿತು. 12ರ ತರಗತಿ ಬಳಿಕ ರೋಹಿತ್ ಸೇನೆಗೆ ಸೇರುವ ದೃಷ್ಟಿಯಿಂದ ಎನ್ ಡಿಎ ಕಲಿಯಲು ಹೋದ. ನಿಕಿತಾ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಶಿಕ್ಷಕಿಯಾಗಲು ಬಯಸಿದಳು.

ವೃತ್ತಿ ಆಕಾಂಕ್ಷೆ ಮನವರಿಕೆ ಮಾಡಿಕೊಳ್ಳುತ್ತಾ....

ವೃತ್ತಿ ಆಕಾಂಕ್ಷೆ ಮನವರಿಕೆ ಮಾಡಿಕೊಳ್ಳುತ್ತಾ....

ಪದವಿ ಬಳಿಕ ರೋಹಿತ್ ಭಾರತೀಯ ಸೇನೆಯಲ್ಲಿ ಅಧಿಕಾರಿಯಾದ. ನಿಕಿತಾ ಕೂಡ ತನ್ನ ಬಿ.ಎಡ್. ಮುಗಿಸಿಕೊಂಡು ಇಂದೋರ್ ನಲ್ಲಿ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದಳು. ವೃತ್ತಿ ನಿಶ್ಚಿತವಾದ ಕಾರಣ ಅವರಿಬ್ಬರು ತಮ್ಮ ಸಂಬಂಧವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿದರು.

ಕುಟುಂಬದವರಿಗೆ ತಿಳಿಯಿತು

ಕುಟುಂಬದವರಿಗೆ ತಿಳಿಯಿತು

ತಮ್ಮಿಬ್ಬರ ಸಂಬಂಧದ ಬಗ್ಗೆ ಕುಟುಂಬದವರಿಗೆ ತಿಳಿಸಿದಾಗ ಅವರು ಇದನ್ನು ತುಂಬಾ ಸಂಭ್ರಮದಿಂದ ಒಪ್ಪಿಕೊಂಡರು. ರೋಹಿತ್ ಕುಟುಂಬ ನಿಕಿತಾಳನ್ನು ಮಗಳಂತೆ ಬರಮಾಡಿಕೊಂಡಿತು. ರೋಹಿತ್ ಕೂಡ ತನ್ನ ಅತ್ತೆ ಮನೆಯವರಿಗೆ ಹೊಂದಿಕೊಂಡ.

ಕನಸಿನ ಮದುವೆ

ಕನಸಿನ ಮದುವೆ

ಎರಡು ಕುಟುಂಬಗಳಿಂದ ಅನಿರೀಕ್ಷಿತವಾದ ಪ್ರತಿಕ್ರಿಯೆ ಬಂದ ಬಳಿಕ ಜೋಡಿಗೆ ತಮ್ಮ ಕನಸು ನಿಜವಾದ ಭಾವನೆಯಾಯಿತು. ನಿಕಿತಾ ತನ್ನ ಗಂಡನ ಮನೆಗೆ ಬೇಗನೆ ತಲುಪಿದಳು ಮತ್ತು ಅವರಿಬ್ಬರು ಹನಿಮೂನ್ ಪ್ಯಾರಿಸ್ ನಲ್ಲಿ ಮಾಡಲು ನಿರ್ಧರಿಸಿದರು. ಅವರಿಗೆ ಒಂದು ಕಾಲ್ಪನಿಕ ಕಥೆಯು ವಾಸ್ತವವಾಗಿ ಬದಲಾದಂತೆ ಕಾಣಿಸಿತು.

ಅವರು ಆಯ್ಕೆ ಮಾಡಿಕೊಂಡ ಜೀವನ

ಅವರು ಆಯ್ಕೆ ಮಾಡಿಕೊಂಡ ಜೀವನ

ಮದುವೆಯಾದ ಒಂದೇ ತಿಂಗಳಲ್ಲಿ ರೋಹಿತ್ ಸೇನೆಯಲ್ಲಿ ಕರ್ತವ್ಯಕ್ಕೆ ಹಾಜರಾದ. ನಿಕಿತಾ ಕೂಡ ತನ್ನ ಅತ್ತೆ ಮನೆಯಲ್ಲಿ ಹೊಸ ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಇದ್ದಳು. ರೋಹಿತ್ ನ ತಂದೆತಾಯಿ ಮತ್ತು ಕಿರಿಯ ಸೋದರ ರೋಹನ್ ಅವಳನ್ನು ತುಂಬು ಹೃದಯದಿಂದ ಸ್ವಾಗತಿಸಿದರು.

ಇದು ಕರ್ತವ್ಯದ ಕರೆ

ಇದು ಕರ್ತವ್ಯದ ಕರೆ

ಸೇನೆಯಲ್ಲಿ ಕರ್ತವ್ಯದ ನಡುವೆಯೂ ರೋಹಿತ್ ಮನೆ ಸಮಾಚಾರ ಕೇಳುತ್ತಲಿದ್ದ. ಒಂದು ತಿಂಗಳಲ್ಲಿ ಎಲ್ಲರೂ ಹೊಂದಿಕೊಂಡ ಬಗ್ಗೆ ಆತನಿಗೆ ತುಂಬಾ ಖುಷಿಯಿತ್ತು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಚಂಬಾ ಅರಣ್ಯದಲ್ಲಿ ಉಗ್ರರು ದಾಳಿ ಮಾಡಲು ಸಜ್ಜಾಗಿದ್ದಾರೆನ್ನುವ ಮಾಹಿತಿ ಮೇಲೆ ಆತ ತನ್ನ ತುಕುಡಿಯನ್ನು ಸಜ್ಜುಗೊಳಿಸಿದ.

ದುರ್ಘಟನೆ ನಡೆದೇ ಹೋಯಿತು

ದುರ್ಘಟನೆ ನಡೆದೇ ಹೋಯಿತು

ಭಾರತೀಯ ಸೇನೆಯು ಎಲ್ಲಾ ಉಗ್ರರರನ್ನು ಜೀವಂತವಾಗಿ ಸೆರೆ ಹಿಡಿಯಲು ಯಶಸ್ವಿಯಾದರು. ಆದರೆ ಇದಕ್ಕಾಗಿ ದೇಶವು ಯುವ ಲೆಫ್ಟಿನೆಂಟ್ ರೋಹಿತ್ ಅಗ್ನಿಹೋತ್ರಿಯ ಪ್ರಾಣ ತೆರಬೇಕಾಯಿತು.

ಸಕಲ ಗೌರವ

ಸಕಲ ಗೌರವ

ರೋಹಿತ್ ಹುತಾತ್ಮನಾಗುತ್ತಿರುವಂತೆ ಮನೆಯಲ್ಲಿನ ಪರಿಸ್ಥಿತಿ ಕೂಡ ಬದಲಾಯಿತು. ಸಂಪೂರ್ಣ ದೇಶವು ರೋಹಿತ್ ಸಾಹಸದ ಬಗ್ಗೆ ಮಾತನಾಡಿತು.(ಮುಂದಿನ ಗಣರಾಜ್ಯೋತ್ಸವ ವೇಳೆ ರೋಹಿತ್ ಗೆ ಅಶೋಕ ಚಕ್ರ ನೀಡಿ ಗೌರವಿಸಲಾಯಿತು) ಇದು ಸಂಪೂರ್ಣವಾಗಿ ನಿಕಿತಾ ಜೀವನದ ಮೇಲೆ ಪರಿಣಾಮ ಬೀರಿತು. ದೇಶವು ಯುವ ಸೇನಾನಿಯ ಕಳಕೊಂಡರೆ, ನಿಕಿತಾ ತನ್ನ ಬಾಳಿನ ಪ್ರೀತಿಯನ್ನೇ ಕಳೆದುಕೊಂಡಳು. ಇನ್ನು ಬದುಕಿ ಪ್ರಯೋಜನವಿಲ್ಲವೆಂದು ಆಕೆ ಭಾವಿಸಲು ಆರಂಭಿಸಿದಳು.

ಕುಟುಂಬದವರ ಬೆಂಬಲ

ಕುಟುಂಬದವರ ಬೆಂಬಲ

ನಿಕಿತಾಗೆ ತುಂಬಾ ಸಣ್ಣ ವಯಸ್ಸಾಗಿದ್ದ ಕಾರಣ ಎರಡೂ ಕುಟುಂಬಗಳಲ್ಲಿ ದುಃಖ ಮಡುಗಟ್ಟಿತ್ತು. ಈ ದುರ್ಘಟನೆ ಬಳಿಕ ನಿಕಿತಾಗೆ ಯಾವುದೇ ವಿಷಯದಲ್ಲೂ ಆಸಕ್ತಿ ಉಳಿಯಲಿಲ್ಲ. ಎರಡು ಕುಟುಂಬದವರು ಈ ಸಮಯದಲ್ಲಿ ನಿಕಿತಾಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಇನ್ನು ಸಾಕು

ಇನ್ನು ಸಾಕು

ತನ್ನ ಅತ್ತಿಗೆ ಈ ರೀತಿ ದುಃಖದಲ್ಲಿ ಇರುವುದನ್ನು ನೋಡಲು ರೋಹನ್ ಗೆ ಸಾಧ್ಯವಾಗಲಿಲ್ಲ. ತನ್ನ ಹಿರಿಯ ಸೋದರನ ಸಾವಿನಿಂದ ವೃದ್ಧಾಪ್ಯದಲ್ಲಿದ್ದ ತಂದೆತಾಯಿ ಮತ್ತು ವಿಧವೆ ಅತ್ತಿಗೆಯ ಜವಾಬ್ದಾರಿಯು ರೋಹನ್ ಮೇಲೆ ಬಿತ್ತು. ಜವಾಬ್ದಾರಿ ಮತ್ತು ಅತ್ತಿಗೆ ಮೇಲಿನ ಪ್ರೀತಿಯಿಂದ ಆತ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡ.

ಆರಂಭದಲ್ಲಿ ಅಸಮಾಧಾನ

ಆರಂಭದಲ್ಲಿ ಅಸಮಾಧಾನ

ಮೊದಲ ಸಲ ನಿಕಿತಾ ಈ ಮದುವೆಗೆ ನೇರನೇರವಾಗಿ ನಿರಾಕರಿಸಿ ಬಿಟ್ಟಳು. ನಿಕಿತಾಳಿಗೆ ರೋಹಿತ್ ಮೊದಲ ಹಾಗೂ ಕೊನೆಯ ಪ್ರೀತಿಯಾಗಿದ್ದ. ಆಕೆ ಬೇರೆಯವರನ್ನು ಮದುವೆಯಾಗುವ ಬಗ್ಗೆ ಯೋಚಿಸಲಿಕ್ಕೂ ಸಾಧ್ಯವಿರಲಿಲ್ಲ. ರೋಹನ್ ನ ಮದುವೆಯಾಗುವ ಆಲೋಚನೆಯು ಎರಡೂ ಕುಟುಂಬದವರನ್ನು ಖುಷಿಪಡಿಸಿತು. ಭಾವನಾತ್ಮಕವಾಗಿ ಕುಟುಂಬ ಸದಸ್ಯರಿಂದ ಬಂದ ಒತ್ತಡದ ಮುಂದೆ ನಿಕಿತಾ ತಲೆಬಾಗಬೇಕಾಯಿತು ಮತ್ತು ಅವರಿಬ್ಬರು ಸರಳವಾಗಿ ಕೋರ್ಟ್ ನಲ್ಲಿ ಮದುವೆಯಾದರು.

ಪ್ರೀತಿ ಮೊಳಕೆಯೊಡೆಯಿತು

ಪ್ರೀತಿ ಮೊಳಕೆಯೊಡೆಯಿತು

ಪರಿಸ್ಥಿತಿಯ ಒತ್ತಡದಲ್ಲಿ ಇಬ್ಬರ ಮಧ್ಯೆ ನಡೆದ ಮದುವೆಯು ಇಬ್ಬರಲ್ಲಿ ಪ್ರೀತಿ ಮೂಡುವಂತೆ ಮಾಡಿತು. ಇವರಿಬ್ಬರ ನಡುವಿನ ಹೊಂದಾಣಿಕೆಯು ಇಡೀ ವಿಶ್ವಕ್ಕೆ ಮಾದರಿಯಾಯಿತು. ನಿಕಿತಾ ಸಂಬಂಧದಲ್ಲಿ ರೋಹನ್ ನ ಪ್ರೀತಿಯು ಪರಿಸ್ಥಿತಿಗೆ ಅನುಗುಣವಾಗಿ ಬದಲಾಯಿತು. ತಮ್ಮ ಅತ್ತಿಗೆ ಮೇಲಿದ್ದ ಪ್ರೀತಿಯ ರೂಪ ಪತ್ನಿಯ ಪ್ರೀತಿಗೆ ತಿರುಗಿತು. ಆದರೆ ಸಂಪೂರ್ಣ ಪಯಣದಲ್ಲಿ ನಿಜವಾದ ಪ್ರೀತಿಯು ಅಂತಿಮವಾಗಿ ಗೆಲುವು ಪಡೆಯಿತು.

ವರುಷಗಳು ಉರುಳಿದಾಗ...

ವರುಷಗಳು ಉರುಳಿದಾಗ...

ಇವರಿಬ್ಬರ ಪ್ರೀತಿಗೆ ಈಗ ದಶಕದ ಸಮಯ. ಇವರ ಮಗ ಎಂಟು ವರ್ಷದ ರಾಘವ್ ಇವರಿಬ್ಬರ ಪ್ರೀತಿಪಾತ್ರನಾಗಿದ್ದಾನೆ. ಆತ ಕೂಡ ತನ್ನ ದೊಡ್ಡಪ್ಪನಂತೆ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಲು ಬಯಸಿದ್ದಾನೆ. ರೋಹನ್, ನಿಕಿತಾ ಮತ್ತು ಎರಡು ಕುಟುಂಬದವರ ಪ್ರೀತಿ ಮತ್ತು ಆಶೀರ್ವಾದ ಆತನ ಜತೆಗಿದೆ. ನಿಕಿತಾಳ ಪ್ರೀತಿ ನೈಜ ಪ್ರೀತಿಯಲ್ಲವೆಂದಾದರೆ, ಅದು ಏನೆಂದು ನನಗೂ ತಿಳಿದಿಲ್ಲ.

English summary

because-love-changes-its-form-when-situation-demands-it-to

The power of this love is so strong that it may change its form in the course of years; but the essence of the same remains unhindered. Read on to know the love story of Nikita and Rohit and how the love that existed between her and Rohit's younger brother Rohan changed its form when the situation demanded as such. This story tells us that there is no force on this earth that is stronger than that of love. Read on to know more about this mesmerizing power of love.
X
Desktop Bottom Promotion