For Quick Alerts
ALLOW NOTIFICATIONS  
For Daily Alerts

ಒಂಟಿಜೀವನ, ಒಂದು ಸುಂದರ ಅನುಭವ, ಅನುಭವಿಸಿದವರಿಗೆಯೇ ಗೊತ್ತು!

By Arshad
|

ಕೆಲವು ವ್ಯಕ್ತಿಗಳು ಜೀವನದಲ್ಲಿ ಏನಾದರೂ ಮಹತ್ತರವಾದ ಸಾಧನೆಯನ್ನು ಸಾಧಿಸಲು ವಿವಾಹಬಂಧನಕ್ಕೆ ಒಳಗಾಗದಿರುವುದೇ ಒಳ್ಳೆಯದು ಎಂದು ಭಾವಿಸಿ ಇದೇ ಪ್ರಕಾರ ನಡೆದುಕೊಳ್ಳುತ್ತಾರೆ. ಮಾಜಿ ಅಧ್ಯಕ್ಷ ದಿವಂಗತ ಅಬ್ದುಲ್ ಕಲಾಂ ಇದಕ್ಕೊಂದು ಜ್ವಲಂತ ಉದಾಹರಣೆಯಾಗಿದ್ದರು. ಕೆಲವೊಮ್ಮೆ ಸಂಬಂಧದಲ್ಲಿ ಯಾವುದೋ ಒಂದು ಕುಂದು ಎದುರಾಗಿ ಸಂಬಂಧ ಕೊನೆಗೊಂಡು ಮತ್ತೊಮ್ಮೆ ಒಂಟಿಯಾಗುವ ಸಂದರ್ಭ ಎದುರಾದರೆ ಹೆಚ್ಚಿನವರು ಜೀವನವೇ ಕೊನೆಗೊಂಡ ಹಾಗೆ ವರ್ತಿಸುತ್ತಾರೆ.

ಜೀವನದಲ್ಲಿ ಒಂಟಿಯಾಗಿದ್ದಾಗ ಜೋಡಿಯಾಗಿರಬೇಕೆಂದು ಬಯಸುವುದು, ಜೋಡಿಯಾಗಿದ್ದಾಗ ಅನಿವಾರ್ಯವಾಗಿ ಎದುರಾಗುವ ತೊಡಕುಗಳನ್ನು ಕಂಡಾಗ ಒಂಟಿಯಾಗಿದ್ದರೇ ಚೆನ್ನಿತ್ತು ಅನ್ನಿಸುವುದು ಒಂದು ಸಹಜವೂ ಆದ ವ್ಯಂಗ್ಯವಾಗಿದೆ. ನಿಸರ್ಗ ಪ್ರತಿ ಗಂಡಿಗೊಂದು ಹೆಣ್ಣು ಎಂಬ ಜೊತೆಯನ್ನು ಮೊದಲೇ ನಿರ್ಧರಿಸುತ್ತದೆಯಂತೆ....

ಒಂಟಿತನದ ಮೂಲಕ ದೊರಕಬಹುದಾದ ಆರೋಗ್ಯಕರ ಪ್ರಯೋಜನಗಳು

ಒಂಟಿತನದ ಮೂಲಕ ದೊರಕಬಹುದಾದ ಆರೋಗ್ಯಕರ ಪ್ರಯೋಜನಗಳು

ಹೌದು, ಒಂಟಿತನದ ಮೂಲಕ ಕೆಲವಾರು ಆರೋಗ್ಯಕರ ಪ್ರಯೋಜನಗಳಿವೆ ಎಂದು ಕೆಲವು ಸಂಶೋಧನೆಗಳ ಮೂಲಕ ದೃಢಪಡಿಸಲಾಗಿದೆ. ಅಂದರೆ ಬ್ರಹ್ಮಚರ್ಯ ಪಾಲಿಸುವ ವ್ಯಕ್ತಿಗಳು ಉತ್ತಮ ಆರೋಗ್ಯ ಹೊಂದಿರುತ್ತಾರೆ. ಇವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾ, ಆರೋಗ್ಯಕರ ಜೀವನಶೈಲಿ, ನಿಯಮಿತ ವ್ಯಾಯಾಮ, ಸಮರ್ಪಕ ಆಹಾರಸೇವನೆಯ ಮೂಲಕ ಉತ್ತಮ ಆರೋಗ್ಯ ಪಡೆದಿರುತ್ತಾರೆ. ಇವರು ನಿದ್ದೆಗಾಗಿ ಹೆಚ್ಚಿನ ಸಮಯ ವ್ಯಯಿಸುತ್ತಾರೆ ಹಾಗೂ ಗಾಢನಿದ್ದೆಯನ್ನೂ ಹೆಚ್ಚು ಕಾಲ ಪಡೆಯುತ್ತಾರೆ. ಅಂದರೆ ಸಂಬಂಧದಲ್ಲಿರುವವರಿಗಿಂತಲೂ ಸುಖಕರ ನಿದ್ದೆಯನ್ನು ಪಡೆಯುವ ಮೂಲಕ ಇವರ ಆರೋಗ್ಯ ಉಳಿದವರಿಗಿಂತ ಹೆಚ್ಚು ಉತ್ತಮವಾಗಿರುತ್ತದೆ.

ಒಂಟಿಯಾಗಿದ್ದಾಗ ಹೆಚ್ಚಿನ ಸ್ವಾತಂತ್ರ್ಯವಿರುತ್ತದೆ

ಒಂಟಿಯಾಗಿದ್ದಾಗ ಹೆಚ್ಚಿನ ಸ್ವಾತಂತ್ರ್ಯವಿರುತ್ತದೆ

ಸಂಬಂಧದಲ್ಲಿದ್ದಾಗ ನಿಮಗೆ ಬೇಕೋ, ಬೇಡವೋ ನಿಮ್ಮ ಸ್ವಾತಂತ್ರ್ಯವನ್ನು ಕೊಂಚ ಮಟ್ಟಿಗಾದರೂ ತ್ಯಾಗ ಮಾಡಲೇ ಬೇಕಾಗುತ್ತದೆ. ಆದರೆ ಒಂಟಿಯಾಗಿರುವವರಿಗೆ ಈ ಹಂಗು ಇಲ್ಲದೇ ಇರುವ ಕಾರಣ ಯಾವಾಗ ಮನಸ್ಸು ಬಂತೋ ಆಗ ಎಲ್ಲೆಲ್ಲೋ ತಿರುಗಾಡುವ ಸ್ವಾತಂತ್ರ್ಯ ಪಡೆದಿರುತ್ತಾರೆ. ಅಲ್ಲದೇ ನಿಮಗೆ ಇಷ್ಟ ಬಂದ ಕೆಲಸವನ್ನು ಮಾಡಲು, ಇಷ್ಟವಿಲ್ಲದ ಕೆಲಸವನ್ನು ಮಾಡದೇ ಇರುವ ಅನುಕೂಲವೂ ಇದೆ. ನಿಮ್ಮ ಇಷ್ಟದ ಹವ್ಯಾಸ ಅಥವಾ ನಿಮ್ಮ ವೈಯಕ್ತಿಯ ಏಳ್ಗೆಗಾಗಿ ಶ್ರಮಿಸಲು ಹೆಚ್ಚಿನ ಕಾಲಾವಕಾಶ ದೊರಕುತ್ತದೆ.

ಆರ್ಥಿಕವಾಗಿಯೂ ಹೆಚ್ಚಿನ ಉಳಿತಾಯ

ಆರ್ಥಿಕವಾಗಿಯೂ ಹೆಚ್ಚಿನ ಉಳಿತಾಯ

ನೀವು ಏನು ಗಳಿಸುತ್ತೀರೋ ಅವೆಲ್ಲವೂ ನಿಮ್ಮದೇ ಆಗಿದ್ದು ನಿಮ್ಮ ಖರ್ಚು ಸಹಾ ಮಿತವಾಗಿಯೇ ಇರುವ ಕಾರಣ ಗರಿಷ್ಟ ಉಳಿತಾಯ ಸಾಧಿಸಲು ಸಾಧ್ಯ. ಆದರೆ ಸಂಬಂಧದಲ್ಲಿದ್ದರೆ ಅನಿವಾರ್ಯವಾಗಿ ಹಾಗೂ ಅನಗತ್ಯವಾಗಿ ಕೆಲವಾರು ಖರ್ಚುಗಳನ್ನು ಮಾಡಿಯೇ ಮಾಡಬೇಕಾಗುತ್ತದೆ. ಒಂಟಿಯಾಗಿದ್ದಾಗ ನಿಮ್ಮ ಇಷ್ಟಕ್ಕೆ ತಕ್ಕಂತೆ ಖರ್ಚು ಮಾಡುವ ಸ್ವಾತಂತ್ರ್ಯ ನಿಮಗಿರುತ್ತದೆ.

ಆರ್ಥಿಕವಾಗಿಯೂ ಹೆಚ್ಚಿನ ಉಳಿತಾಯ

ಆರ್ಥಿಕವಾಗಿಯೂ ಹೆಚ್ಚಿನ ಉಳಿತಾಯ

ಒಂಟಿಯಾಗಿದ್ದರೆ ನಿಮ್ಮ ಹವ್ಯಾಸ ಅಥವಾ ಅಭಿರುಚಿಗೆ ತಕ್ಕಂತಹ ಹಲವಾರು ಗೆಳೆಯರನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ಸಂಬಂಧದಲ್ಲಿದ್ದರೆ ನಿಮ್ಮ ಕೆಲವು ಗೆಳೆಯರನ್ನಾದರೂ ನಿಮ್ಮ ಸಂಗಾಗಿ ಇಷ್ಟಪಡದಿರಲು ಸಾಧ್ಯ. ಆಗ ಸಂಗಾತಿಯ ಪಕ್ಷ ವಹಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಿಂದ ಈ ಸ್ನೇಹಿತನನ್ನು ಕಳೆದುಕೊಳ್ಳಬೇಕಾಗುತ್ತದೆ. ಆದರೆ ಒಂಟಿಯಾಗಿದ್ದಾಗ ಈ ತೊಂದರೆ ಉದ್ಭವವಾಗುವ ಪ್ರಶ್ನೆಯೇ ಇಲ್ಲದುದರಿಂದ ನಿಮ್ಮ ಸ್ನೇಹಿತರಿಗೆ ಎಷ್ಟು ಸಮಯ ನೀಡುತ್ತೀರಿ ಎಂಬುದನ್ನು ನೀವೇ ನಿರ್ಧರಿಸಿಕೊಂಡು ಸಮಾಜದೊಂದಿಗೆ ಹೆಚ್ಚಿನ ಒಡನಾಟದಲ್ಲಿರಬಹುದು.

ನಿಮಗಾಗಿ ’ಸ್ವಂತ’ ಸಮಯ ವಿನಿಯೋಗಿಸಲು ಸಾಧ್ಯ

ನಿಮಗಾಗಿ ’ಸ್ವಂತ’ ಸಮಯ ವಿನಿಯೋಗಿಸಲು ಸಾಧ್ಯ

ಸಂಬಂಧದಲ್ಲಿದ್ದಾಗ ನಿಮ್ಮ ಸಮಯ ಎಂಬುದೇ ಮರೀಚಿಕೆ. ಏಕೆಂದರೆ ಪ್ರತಿಕ್ಷಣವೂ ನಿಮ್ಮ ಸಮಯದ ಬಗ್ಗೆ ಸಂಗಾತಿಗೆ ವರದಿ ಒಪ್ಪಿಸಬೇಕಾಗಿರುತ್ತದೆ. ಹಾಗಾಗಿ ನಿಮ್ಮ ಸ್ವಂತ ಸಮಯವನ್ನು ಪಡೆದುಕೊಳ್ಳುವುದು ಕಷ್ಟಕರ. ಆದರೆ ಒಂಟಿಯಾಗಿದ್ದಾಗ ನಿಮ್ಮ ಉದ್ಯೋಗ ಅಥವಾ ಇತರ ಬದ್ದತೆಯ ಸಮಯವನ್ನು ಹೊರತುಪಡಿಸಿದರೆ ಉಳಿದೆಲ್ಲಾ ಸಮಯವೆಲ್ಲಾ ನಿಮ್ಮದೇ. ಇದನ್ನು ನೀವು ಹೇಗೆ ಬೇಕಾದರೂ ಉಪಯೋಗಿಸಿಕೊಳ್ಳಬಹುದು.

ನಿಮ್ಮ ’ಆರಾಮ ವಲಯ’ದಿಂದ ಹೊರಹೋಗಲೊಂದು ಅವಕಾಶ

ನಿಮ್ಮ ’ಆರಾಮ ವಲಯ’ದಿಂದ ಹೊರಹೋಗಲೊಂದು ಅವಕಾಶ

ಒಂದು ವೇಳೆ ನೀವು ಒಂಟಿಯಾಗಿದ್ದು ಜೋಡಿಯಾಗಲು ಸಿದ್ಧರಿದ್ದೀರೆಂದರೆ ನಿಮ್ಮ ಮುಂದೆ ಬಹಳಷ್ಟು ಆಯ್ಕೆಗಳಿರುತ್ತವೆ. ನಿಮ್ಮ ಕನಸಿನ ಆಯ್ಕೆಯ ವ್ಯಕ್ತಿ ನಿಮ್ಮ ಮುಂದಿದ್ದು ನಿಮ್ಮ ಮನಸ್ಸಿನ ಭಾವನೆಯನ್ನು ಹಂಚಿಕೊಳ್ಳಲು ಅವಕಾಶ ಅಥವಾ ಧೈರ್ಯವಿಲ್ಲದೇ ಹೋಗಿದ್ದು ಈಗ ಆ ಅವಕಾಶವನ್ನೇಕೆ ಉಪಯೋಗಿಸಿಕೊಳ್ಳಬಾರದು? ನಿಮ್ಮ ಒಂಟಿತನದ ಮೂಲಕ ದೊರಕಿರುವ ಸಮಯಾವಕಾಶ ಹಾಗೂ ಇತರ ತೊಡಕುಗಳಿಲ್ಲದೇ ಇರುವ ಸಂದರ್ಭವನ್ನು ನೀವು ಇದುವರೆಗೆ ಪರಿಗಣಿಸದೇ ಇದ್ದ ಹಾಗೂ ನಿಮ್ಮ ಊಹೆಗೆ ತೀರಾ ವಿರುದ್ಧ ವ್ಯಕ್ತಿತ್ವದ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶವನ್ನಾಗಿ ಏಕೆ ಬಳಸಬಾರದು? ಯಾರಿಗೆ ಗೊತ್ತು? ನೀವು ಕನಸುಮನಸಿನಲ್ಲಿಯೂ ಯೋಚಿಸದೇ ಇದ್ದ ಭಾಗ್ಯದ ದೇವತೆ ನಿಮ್ಮ ಜೀವನವನ್ನು ಬೆಳಗಲು ಆಗಮಿಸಬಹುದು!

English summary

Ways To Enjoy Being Single

Have you been through a turbulent break-up? Maybe, you haven't been in a relationship for a long time. It is also possible that you have always been single and are now dying to be in a relationship; but it just isn't happening. Fret not, as being single is not the worst thing to happen to you. We know it is cliché but it is true - Your true love is out there somewhere. He/she is just taking his/her own time to get to you. You will someday surely meet the one that is destined for you. But until then, you need to learn how to rock being single.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more