For Quick Alerts
ALLOW NOTIFICATIONS  
For Daily Alerts

ಪ್ರೀತಿಯ ನಿವೇದನೆಗೆ ಇದಕ್ಕಿಂತ ಒಳ್ಳೆಯ ವಿಧಾನ ಉಂಟೇ!

By Super
|

ಫೆಬ್ರವರಿ ಎಂದಾಕ್ಷಣ ಪ್ರೇಮಿಗಳಲ್ಲಿ ಎಲ್ಲಿಲ್ಲದ ಉತ್ಸಾಹ, ಆನಂದ, ಉಲ್ಲಾಸದಿಂದ ಪ್ರಣಯ ಪಕ್ಷಿಗಳಂತೆ ಹಾರಾಡುತ್ತಿರುತ್ತಾರೆ. ಎಲ್ಲಾ ಪ್ರೇಮಿಗಳು ಫೆಬ್ರವರಿ ಮಾಸಕ್ಕಾಗಿ ಕಾತರದಿಂದ ಕಾಯುತ್ತಿರುತ್ತಾರೆ. ಏಕೆಂದರೆ ಫೆಬ್ರವರಿ 14 ಅನ್ನು ಪ್ರೇಮಿಗಳ ದಿನಾಚರಣೆಯಾಗಿ ವಿಶ್ವದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ನವ ಪ್ರೇಮಿಗಳಂತೂ ಫೆಬ್ರವರಿಯಲ್ಲಿ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಕಾತರದಿಂದ ಕಾಯುತ್ತಿರುತ್ತಾರೆ. ಫೆಬ್ರವರಿ ಮಾಸವು ಮತ್ತೆ ಬಂದಿದ್ದು, ಈ ಪ್ರೇಮಿಗಳ ದಿನಾಚರಣೆಯನ್ನು ಆನಂದದಿಂದ ನೆನಪಿನಲ್ಲಿ ಉಳಿಯುವ ಹಾಗೆ ಆಚರಿಸಿಕೊಳ್ಳಿ. ಈ ನಡುವೆ ಪ್ರೇಮಿಗಳ ದಿನಾಚರಣೆಯನ್ನು ನಿಮ್ಮ ಮನಸ್ಸಿಗೆ ಹಿತ ನೀಡುವ ಹಾಗೆ ಹಾಗೂ ನಿಮ್ಮ ಸಂಗಾತಿಗೆ ಸರ್ಪ್ರೈಸ್ ನೀಡಲು ಸರಿಯಾಗಿ ಯೋಜಿಸಿಕೊಳ್ಳಿ. ಪ್ರೀತಿಯ ನಿವೇದನೆ ಆ ನನ್ನ ಹುಡುಗನಿಗೆ

ಈ ಬಾರಿಯ ಪ್ರೇಮಿಗಳ ದಿನಾಚರಣೆಯಂದು ನಿಮ್ಮ ಪ್ರೀತಿಪಾತ್ರರಿಗೆ ಪ್ರೇಮ ನಿವೇದನೆಯನ್ನು ಮಾಡಲಿಚ್ಛಿಸಿದ್ದರೆ, ಮೊದಲಿಗೆ ಸರಿಯಾಗಿ ಯೋಜಿಸಿಕೊಳ್ಳಿ. ಯುವಕರು ತಮ್ಮ ನಿವೇದನೆಯಲ್ಲಿ ಪ್ರಣಯ ಮಿಶ್ರಿತ ಮಾತುಗಳನ್ನು ಆಡವಾಗ ವಿಫಲಹೊಂದುತ್ತಾರೆ. ಆದ್ದರಿಂದ ಯುವಕರು ಎಚ್ಚೆತ್ತುಕೊಂಡು ನಿಮ್ಮಾಕೆಯನ್ನು ನಿಮ್ಮತ್ತ ಸೆಳೆಯಲು ಹೊಸ ಹೊಸ ಉಪಾಯಗಳನ್ನು ಅನುಸರಿಸಿ ಈ ದಿನವನ್ನು ಇನ್ನಷ್ಟು ಮನಮೋಹಕವಾಗುವಂತೆ ಮಾಡಿ ನಿಮ್ಮಾಕೆಯೇ ನಿಜವಾದ ಅದೃಷ್ಟವಂತೆ ಎಂಬುದನ್ನು ಬಿಂಬಿಸಿ. ಹೃದಯದಲ್ಲಿ ಬಂದು ಅವಲಕ್ಕಿ ಕುಟ್ಟಿ ಹೋಗುವವಳೆ

ಅನೇಕ ಹುಡುಗಿಯರಿಗೆ ಸಹಜವಾದ ಸಾಮಾನ್ಯವಾದ ವಿಧಾನಗಳ ಬಳೆಕೆಯು ಹೆಚ್ಚು ಪ್ರಿಯವೆನಿಸುವುದಿಲ್ಲ. ಗುಲಾಬಿ ಗೊಂಚಲನ್ನು ಹಿಡಿದು ಮೊಣಕಾಲೂರಿ ಪ್ರೇಮ ನಿವೇದನೆ ಮಾಡುವ ವಿಧಾನವು ಹಳೆಯದಾಗಿದ್ದು, ಇದನ್ನು ಈಗಿನ ಹುಡುಗಿಯರು ಇಷ್ಟ ಪಡುವುದಿಲ್ಲ. ಇದು ಸಾಂಪ್ರದಾಯಿಕ ಶೈಲಿಯಾಗಿದ್ದರೂ ಸಹ ಇನ್ನೂ ಅನೇಕ ವಿಧಾನಗಳು ಚಾಲ್ತಿಯಲ್ಲಿವೆ. ಹೆಚ್ಚು ಆಕರ್ಷಿಸುವ ವಿವಿಧ ಪ್ರೇಮ ನಿವೇದನಾ ಶೈಲಿಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ಈ ವಿಶಿಷ್ಟ ಶೈಲಿಗಳನ್ನು ಅನುಸರಿಸಿ ನಿಮ್ಮ ಪ್ರೀತಿ ಪಾತ್ರರಿಗೆ ವಿಶೇಷ ರೀತಿಯಲ್ಲಿ ಪ್ರೇಮ ನಿವೇದನೆ ಮಾಡಲು ಸಿದ್ಧರಾಗಿ. ಈ ದಿನವನ್ನು ನಿಮ್ಮದಾಗಿಸಿಕೊಳ್ಳಲು ವಿವರಗಳಿಗೆ ಮುಂದೆ ಓದಿ...

ನಿಮಗಿಷ್ಟವಾದ ಸ್ಥಳವನ್ನು ಆಯ್ಕೆಮಾಡಿಕೊಳ್ಳಿ

ನಿಮಗಿಷ್ಟವಾದ ಸ್ಥಳವನ್ನು ಆಯ್ಕೆಮಾಡಿಕೊಳ್ಳಿ

ನೀವಿಬ್ಬರೂ ಹೆಚ್ಚು ಹೊತ್ತು ಕಾಲ ಕಳೆಯುವ ನಿಮಗಿಷ್ಟವಾದ ಸ್ಥಳವನ್ನು ಆಯ್ದುಕೊಳ್ಳಿ. ನಿಮ್ಮ ಕನಸಿನ ರಜಾ ಸ್ಥಳವನ್ನು ಸಹ ಆಯ್ಕೆ ಮಾಡಿಕೊಳ್ಳಬಹುದು.

ಸಿನಿಮಾ ನೋಡುವಾಗ ನಿವೇದನೆ ಮಾಡಿ

ಸಿನಿಮಾ ನೋಡುವಾಗ ನಿವೇದನೆ ಮಾಡಿ

ಹಲವಾರು ಬಾರಿ ನೀವಿಬ್ಬರೂ ಸಿನಿಮಾ ನೋಡುವಾಗ ಅನೇಕ ವಿಚಾರಗಳನ್ನು ಹಂಚಿಕೊಂಡಿರುತ್ತೀರಿ. ಹೀಗಾಗಿ ಸಿನಿಮಾ ನೋಡುವಾಗ ಪ್ರಣಯ ಸನ್ನಿವೇಶಗಳು ಕಣ್ಣಿಗೆ ಬಿದ್ದಾಗ ಪ್ರೇಮ ನಿವೇದನೆ ಮಾಡಿದರೆ, ನಿಮ್ಮಾಕೆಯ ಹೃದಯ ಕರಗಿ ನಿಮ್ಮ ಪ್ರೀತಿಯನ್ನು ಆನಂದದಿಂದ ಬಾಚಿಕೊಳ್ಳುತ್ತಾರೆ. ಇದೊಂದು ವಿಶಿಷ್ಟ ವಿಧಾನ.

ಟೀಶರ್ಟ್ ಅನ್ನು ಉಡುಗೊರೆಯಾಗಿ ನೀಡಿ

ಟೀಶರ್ಟ್ ಅನ್ನು ಉಡುಗೊರೆಯಾಗಿ ನೀಡಿ

ಅಂತರ್ಜಾಲದಲ್ಲಿ ಅನೇಕ ಟೀ ಶರ್ಟ್‌ಗಳು ಲಭ್ಯವಿದ್ದು, ಪ್ರೇಮ ನಿವೇದನೆ ಮಾಡುವ ಪದಗಳುಳ್ಳ ಟೀಶರ್ಟ್ ಅನ್ನು ಉಡುಗೊರೆಯಾಗಿ ನೀಡಿ. ಹೌದು, ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದಲ್ಲಿ ನಿಮಗಿಷ್ಟವಾದ ಪದಗಳನ್ನು ಟೀಶರ್ಟ್ ಮೇಲೆ ಮೂಡಿಸುವ ಅವಕಾಶಗಳಿದ್ದು, ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ನಿವೇದನೆ ಮಾಡಿಕೊಳ್ಳುವ ಟೀಶರ್ಟ್ ಅನ್ನು ಉಡುಗೊರೆಯಾಗಿ ನೀಡಿ. ಈ ನಿವೇದನೆಗೆ ನಿಮ್ಮಾಕೆಯು ಮನಸೋಲದೇ ಇರಲಾರಳು.

ಭಿತ್ತಿಪತ್ರದ ಮುಖೇನ ನಿವೇದನೆ

ಭಿತ್ತಿಪತ್ರದ ಮುಖೇನ ನಿವೇದನೆ

ಒಂದು ಭಿತ್ತಿಪತ್ರದಲ್ಲಿ ನಿಮ್ಮಾಕೆಯ ಮುದ್ದಿನ ಹೆಸರನ್ನು ಬರೆದು ಒಂದು ಮುಖ್ಯವಾದ ಪ್ರಶ್ನೆಯನ್ನು ಬರೆದು ಆಕೆಯ ಮನೆಯ ಅಥವಾ ಕಚೇರಿಯ ಕಿಟಕಿಯ ಬದಿಯಲ್ಲಿ ಆಕೆಗೆ ಕಾಣುವಂತೆ ಇರಿಸಿ. ಇದನ್ನು ನಿಮ್ಮಾಕೆಯು ನೋಡಿದ ತಕ್ಷಣ ಸಂಭ್ರಮದಿಂದ ನಿಮ್ಮ ನಿವೇದನೆಯನ್ನು ಆನಂದದಿಂದ ಒಪ್ಪಿಕೊಳ್ಳುತ್ತಾಳೆ.

ಆಗಸದಲ್ಲಿ ನಿವೇದಿಸಿ

ಆಗಸದಲ್ಲಿ ನಿವೇದಿಸಿ

ನೀವು ನಿಮಗಿಷ್ಟವಾದ ಸ್ಥಳಕ್ಕೆ ಆಗಸದಲ್ಲಿ ಪ್ರಯಾಣಿಸುವಾಗ ಈ ನಿವೇದನೆಯ ಪ್ರಶ್ನೆಯನ್ನು ಹಂಬಲದಿಂದ ಕೇಳಿಕೊಳ್ಳಿ. ಆಗಸದ ತಂಗಾಳಿಯಲ್ಲಿ ಈ ನಿವೇದನೆಯು ಆಕೆಗೆ ಹೆಚ್ಚು ಪ್ರಿಯವೆನಿಸಿ ಆನಂದದಿಂದ ನಿಮ್ಮನ್ನು ತಬ್ಬಿಕೊಳ್ಳದೇ ಇರಲಾರಳು.

English summary

Valentine's Fever: Best Proposal Ideas To Try This Month

February! It's the month of celebration. When love is in the air, you seem to be on cloud nine! This is the month when we all start planning for the Great #"Valentine's Day". If you are planning to propose your special one, this is the right time to do it. When it comes to being romantic, men fail to impress and woo their girl. So, try these unique proposal ideas and make your day special. Read on to know more.
Story first published: Thursday, February 4, 2016, 16:17 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more