For Quick Alerts
ALLOW NOTIFICATIONS  
For Daily Alerts

ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ..!

By Deepu
|

ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ...ಹಾಡು ಕೇಳಿದ್ದೀರಲ್ಲವೇ? ನಿಜ ನೀವು ಪ್ರೀತಿಯಲ್ಲಿ ಬೀಳುವವರೆಗೆ ಅದರ ಅನುಭವ ನಿಮಗೆ ಗೊತ್ತಾಗುವುದಿಲ್ಲ. ಇದು ಮನುಷ್ಯನನ್ನು ಸಂತೋಷಪಡಿಸುವುದರ ಜೊತೆಗೆ ದುಃಖವನ್ನೂ ಪಡಿಸುತ್ತದೆ ಎಂಬುದನ್ನು ಮಾತ್ರ ಮರೆಯುವಂತಿಲ್ಲ! ಯಾರು ಪ್ರೀತಿಯ ಬಲೆಗೆ ಬೀಳುತ್ತಾರೆಯೋ ಅವರ ಪ್ರಕಾರ ಪ್ರೀತಿ ಎಂಬುದು ಒಂದು ಕಾಯಿಲೆ, ಅಥವಾ ಮನೋರೋಗವಂತೆ!

ಹೌದು ಪ್ರೀತಿಯೇ, ಒಂಥರಾ ಮಾಯೆ, ಇದರ ಹೆಸರು ಕೇಳಿದರೆ ಸಾಕು ಸುಮಾರು ಜನರ ಎದೆಯಲ್ಲಿ ಏನೋ ಒಂಥರಾ... ಆಗುತ್ತದೆ. ಅದು ಬರೀ ಎದೆಯಲ್ಲಿಯೇ ಅಲ್ಲದೆ ದೇಹದ ಇತರೆಡೆಗಳಲ್ಲಿಯೂ ಅನುಭವಕ್ಕೆ ಬರಬಹುದು. ಅವರ ಇಡೀ ದೇಹವೆ ಚಿಟ್ಟೆಯಷ್ಟು ಹಗುರಾಗಿ ಗಾಳಿಯಲ್ಲಿ ತೇಲಾಡುವ ಅನುಭವವನ್ನು ಅವರು ಪಡೆಯುತ್ತಿರುತ್ತಾರೆ. ಈ ಅನುಭವವನ್ನು ಪ್ರತಿಯೊಬ್ಬರು ತಮ್ಮ ಜೀವನದ ಒಂದಲ್ಲ ಒಂದು ಘಟ್ಟದಲ್ಲಿ ಪಡೆದಿರುತ್ತಾರೆ.

ಇದೊಂದು ಅನುಪಮವಾದ ಮತ್ತು ವಿವರಿಸಲಾಗದ ಅನನ್ಯ ಅನುಭವ. ಈ ಅವಧಿಯಲ್ಲಿ ನಿಮಗೆ ಏನು ಆಗುತ್ತದೊ ಅದನ್ನು ವಿವರಿಸಲು ನಿಮ್ಮಿಂದಲೂ ಸಹ ಸಾಧ್ಯವಾಗುವುದಿಲ್ಲ. ಹೀಗೆ ಪ್ರೀತಿಯಲ್ಲಿ ನೀವು ಮುಳುಗಿ ತೇಲುತ್ತಿದ್ದೀರಿ ಎಂಬ ಮಾತನ್ನು ಪುಷ್ಟೀಕರಿಸುವ ಹಲವಾರು ಸಂಕೇತಗಳು, ಸೂಚನೆಗಳನ್ನು ಸ್ಲೈಡ್ ಶೋ ಮೂಲಕ ಪ್ರಸ್ತುತ ಪಡಿಸಿದ್ದೇವೆ ಮುಂದೆ ಓದಿ...

ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ!

ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ!

ನಿಜ ಪ್ರೀತಿಯಲ್ಲಿ ಬಿದ್ದರೆ ಮುಗಿಯಿತು, ಮಾತು ಮರೆತು ಹೋಗುತ್ತೆ, ಕೇಳ ಬೇಕಾದುದು ಗಂಟಲಿನಲ್ಲಿಯೇ ಕರಗಿ ಹೋಗುತ್ತದೆ. ಅವರು ಪಕ್ಕದಲ್ಲಿರುವಾಗ ನೀವು ಉದ್ವೇಗಗೊಳ್ಳುತ್ತೀರಿ. ಏನಾದರು ಸರಿ ಅವರ ಸುತ್ತ-ಮುತ್ತ ನೀವು ಓಡಾಡುತ್ತ ಇರಲು ಇಷ್ಟಪಡುವಿರಿ.

ಅದ್ಭುತವಾದ ಕೆಮಿಸ್ಟ್ರಿ

ಅದ್ಭುತವಾದ ಕೆಮಿಸ್ಟ್ರಿ

ನಾವು ಪ್ರೀತಿಸುವವರ ನಡುವೆ ಒಂದು ಅದ್ಭುತವಾದ ಕೆಮಿಸ್ಟ್ರಿ ಇರುವುದು ನಿಮ್ಮ ಗಮನಕ್ಕೆ ಬರುತ್ತದೆ. ಇಬ್ಬರೂ ಒಂದೇ ಬಾರಿಗೆ ನೆನೆಸಿಕೊಳ್ಳುವುದು, ನೆನೆದಾಗ ಫೋನ್ ಬರುವುದು, ಹೀಗೆ ಸುಮಾರು ವಿಚಾರಗಳು ಪ್ರೀತಿಯಲ್ಲಿ ಸಹಜವಾಗಿ ನಡೆಯುತ್ತಿರುತ್ತವೆ. ಇದರಿಂದಾಗಿ ನೀವು ಅವರನ್ನು ಮತ್ತಷ್ಟು ಪ್ರೀತಿಸಲು ತೊಡಗುವಿರಿ. ಅದೇ ಸಮಯಕ್ಕೆ ನಾವು ಪ್ರೀತಿಸುವವರ ಬಗ್ಗೆ ಕಡಿಮೆ ತಿಳಿದುಕೊಂಡಿರುತ್ತೇವೆ ಎಂಬುದನ್ನು ಮರೆಯಬಾರದು. ಒಮ್ಮೆ ಒಬ್ಬ ವ್ಯಕ್ತಿಯನ್ನು ಪ್ರೀತಿಸಲು ಆರಂಭಿಸಿದರೆ ಅವರ ಎಲ್ಲಾ ಓರೆ ಕೋರೆಗಳು ನಮಗೆ ಕಾಣಿಸುವುದೇ ಇಲ್ಲ.

ಅವರ ಪ್ರತಿಕ್ರಿಯೆಗಾಗಿ ನೀವು ಕಾಯುತ್ತಾ ಕೂರುತ್ತೀರಿ

ಅವರ ಪ್ರತಿಕ್ರಿಯೆಗಾಗಿ ನೀವು ಕಾಯುತ್ತಾ ಕೂರುತ್ತೀರಿ

ನಿಮ್ಮ ಫೋನ್ ಅನ್ನು ಪದೇ ಪದೇ ನೀವು ನೋಡುತ್ತೀರಿ, ಅವರಿಂದ ಒಂದು ಕರೆ ಅಥವಾ ಸಂದೇಶ ಬಂದಿದೆಯೇ ಎಂದು. ಈ ಸಮಯದಲ್ಲಿ ನಿಮ್ಮ ತಾಳ್ಮೆ ಎಲ್ಲೋ ಕಳೆದು ಹೋಗಿರುತ್ತದೆ. ಆಗ ಅವರು ನಿಮಗೆ ಪ್ರತಿಕ್ರಿಯಿಸಿದರೆ ನೀವು ಲಾಟರಿಯಲ್ಲಿ ಗೆದ್ದಷ್ಟೇ ಸಂತೋಷಪಡುತ್ತೀರಿ. ಆಗ ನೀವು ನಿಮ್ಮ ತಾಳ್ಮೆಗೆ ನೀವೇ ಬೆನ್ನು ತಟ್ಟಿಕೊಳ್ಳುವಿರಿ

ಸುಮ್ ಸುಮ್‍ನೆ ನಗುತಿರಿ!

ಸುಮ್ ಸುಮ್‍ನೆ ನಗುತಿರಿ!

ಇದು ನೀವು ಪ್ರೀತಿಯಲ್ಲಿ ಬಿದ್ದಿದ್ದೀರಿ ಎಂಬುದಕ್ಕೆ ಸಿಗುವ ಸ್ಪಷ್ಟ ಸೂಚನೆಗಳಲ್ಲಿ ಒಂದು. ನಿಮ್ಮೊಳಗೆ ಏನೋ ಆನಂದ, ಏನೋ ಉಲ್ಲಾಸ, ಉತ್ಸಾಹ ಎಲ್ಲವೂ ಕೂಡಿ ಆಗುತ್ತಿರುತ್ತದೆ. ಆಗ ಅದನ್ನು ತಡೆಯಲಾಗದೆ ನೀವು ಆಗಾಗ ನಗುತ್ತ ಇರುತ್ತೀರಿ.

ಸರಿಯಾಗಿ ನಿದ್ದೆ ಬಾರದಿರುವುದು...!

ಸರಿಯಾಗಿ ನಿದ್ದೆ ಬಾರದಿರುವುದು...!

ಹೌದು ಇದು ಪ್ರೀತಿಯ ಸೈಡ್ ಎಫೆಕ್ಟ್, ಹೌದು ಏಕೆಂದರೆ ಅವರು ನಿಮ್ಮ ಮನಸ್ಸಿನಿಂದ ಮರೆಯಾಗಲು ಆಗುವುದಿಲ್ಲ, ಮತ್ತು ನಿಮಗೆ ನಿದ್ದೆ ಮಾಡಲಾಗುವುದಿಲ್ಲ.

English summary

Signs That Prove You Are Madly Falling In Love

There are many different kinds of love and there's no single way to know whether you're really feeling it — or just in the throes of a serious infatuation. Still, if you pay attention to how you feel and act around your special someone, you should be able to figure out whether you're really in love. If you want to know how to do it, just follow these steps.
Story first published: Friday, April 29, 2016, 17:28 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more