For Quick Alerts
ALLOW NOTIFICATIONS  
For Daily Alerts

ಪ್ರೇಮಿಗಳ ದಿನವನ್ನು ಈ ಬಾರಿ ಕೊಂಚ ಡಿಫರೆಂಟ್ ಆಗಿ ಆಚರಿಸಿ!

By CM prasad
|

ಪ್ರೇಮಿಗಳ ದಿನಾಚರಣೆ ಇನ್ನೇನು ಹತ್ತಿರ ಬರುತ್ತಿದೆ. ವಿಶ್ವದೆಲ್ಲೆಡೆ ಪ್ರೇಮಿಗಳು ಈ ದಿನದ ರಂಗನ್ನು ಆಸ್ವಾದಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಸಹ ಯಾವುದಾದರೂ ಒಂದು ವಿಧದಲ್ಲಿ ನಿಮ್ಮಾಕೆಗೆ ಆನಂದವನ್ನು ಉಂಟುಮಾಡಿ. ಎಂದಿನಂತೆ ಆಕೆಯನ್ನು ಪ್ರಣಯಾಂಕಿತ ಮೇಣದ ಬತ್ತಿಯ ಬೆಳಕಿನ ಊಟಕ್ಕೆ ಕರೆದೊಯ್ಯುವಿರಿ ಅಲ್ಲವೇ? ಇದರೊಂದಿಗೆ ನಿಮ್ಮಾಕೆಯನ್ನು ಇನ್ನೂ ಅತ್ಯಾಶ್ಚರ್ಯ ಪಡುವಂತೆ ಸಂಭ್ರವಮನ್ನು ದುಪ್ಪಟ್ಟುಗೊಳಿಸುವಂತಹ ಕೆಲವು ಸಂಗತಿಗಳನ್ನು ನಿಮಗಾಗಿ ನಾವು ನೀಡುತ್ತಿದ್ದೇವೆ.

ನೀವು ಈ ಬಾರಿ ಆಕೆಗೆ ವ್ಯಕ್ತಪಡಿಸಲಿಚ್ಛಿಸಿರುವ ವಿಧಾನವು ಆಕೆಯ ಮನಸೂರೆಗೊಂಡು ಆಕೆಯಲ್ಲಿ ಪ್ರೇಮಪ್ರಲಾಪದ ಹುಚ್ಚು ಹೆಚ್ಚಾಗಿ ಇನ್ನಷ್ಟು ಆನಂದವನ್ನು ಉಂಟುಮಾಡುತ್ತದೆ. "ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲೀ" ಹಾಡನ್ನು ಗುನುಗದಿರಲು ಮರೆಯದಿರಿ. ಪ್ರೇಮಿಗಳ ದಿನಾಚರಣೆ: ನಿಬ್ಬೆರಗಾಗಿಸುವ ರಂಜನೀಯ ಸಂಗತಿಗಳು!

ಇದಕ್ಕೆ ಯುವತಿಯರೂ ಹೊರತಾಗಿಲ್ಲ. ನೀವೂ ಸಹ ನಿಮ್ಮಾತನಿಗೆ ಹೆಚ್ಚು ಆಶ್ಚರ್ಯವುಂಟು ಮಾಡುವ ರೀತಿಯಲ್ಲಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಇದರಿಂದ ಆತನು ಆಕಾಶದಲ್ಲಿ ತೇಲುವಂತಾಗಿ ನಿಮ್ಮ ಮೇಲೆ ಇನ್ನಷ್ಟು ಪ್ರೀತಿಯ ಹುಚ್ಚು ಹೆಚ್ಚಾಗುತ್ತದೆ. ಈ ದಿನದಂದ ಒಬ್ಬರನ್ನೊಬ್ಬರು ಪ್ರೇಮಿಸಿಕೊಂಡು, ಚುಂಬನದಿಂದ ತಬ್ಬಿಕೊಂಡು ಆನಂದದಿಂದ ಮುದ್ದಾಡಿಕೊಳ್ಳಿ. ಈ ದಿನದ ತಯಾರಿಯ ಬಗ್ಗೆ ಇಂದೇ ಯೋಜಿಸಿಕೊಳ್ಳಿ.

ನಿಮ್ಮ ಉಡುಗೊರೆಗಳ ಹಂಚಿಕೆ ಹೀಗೆ ಆನಂದದ ಕ್ಷಣಗಳನ್ನು ಕಳೆಯಲು ಸಿದ್ಧರಾಗಿ. ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಇದಕ್ಕಿಂತ ಒಳ್ಳೆಯ ಉಪಾಯ ಇನ್ನೊಂದಿಲ್ಲ. ಮತ್ತೇಕೆ ತಡ, ನಾವು ನೀಡಿರುವ ಕೆಲ ವಿಶೇಷ ಸಂಗತಿಗಳನ್ನು ಒಮ್ಮೆ ಅವಲೋಕಿಸಿ ಅದನ್ನು ಅನುಸರಿಸುವ ಬಗೆಯನ್ನು ಯೋಜಿಸಿಕೊಳ್ಳಿ. ಇದರಿಂದ ಈ ವರ್ಷದ ಪ್ರೇಮಿಗಳ ದಿನಾಚರಣೆ ನಿಮ್ಮ ಮನದಲ್ಲಿ ಅಚ್ಚಳಿಯದೇ ಉಳಿಯುವುದು ಖಂಡಿತ. ವಿವರಗಳಿಗೆ ಮುಂದೆ ಓದಿ.

ಪ್ರೀತಿಯ ಜಾರ್ ಅನ್ನು ಸೃಷ್ಟಿ ಮಾಡಿ

ಪ್ರೀತಿಯ ಜಾರ್ ಅನ್ನು ಸೃಷ್ಟಿ ಮಾಡಿ

ಇದೊಂದು ವಿಶಿಷ್ಟ ವಿಧಾನವಾಗಿದ್ದು, ನಿಮ್ಮಾಕೆಯನ್ನು ನಿಜಕ್ಕೂ ಆಶ್ಚರ್ಯಪಡಿಸದೇ ಇರದು. ನೀವು ಪ್ರತಿನಿತ್ಯ ಆಕೆ ವ್ಯಕ್ತಪಡಿಸುವ ಮತ್ತು ಹೇಳಲಿಚ್ಛಿಸುವ ಮಾತುಗಳನ್ನು ಸಣ್ಣ ಕಾಗದದಲ್ಲಿ ಬರೆದು ಜಾರ್‌ನಲ್ಲಿ ಹಾಕುತ್ತಾ ಹೋಗಿ. ಹೀಗೆ ನಿಮ್ಮ ಮನಸಿನ ಮಾತುಗಳನ್ನು ಶೇಖರಿಸಿದ ಜಾರ್ ಅನ್ನು ಈ ದಿನ ನಿಮ್ಮಾಕೆ ನೀಡಿ. ನಿಮ್ಮ ಮನದ ಮಾತುಗಳು ಆಕೆಗೆ ಹೊಸ ಪ್ರಪಂಚಕ್ಕೆ ಎಳೆದೊಯ್ಯುತ್ತವೆ.

ನಕ್ಷತ್ರಗಳ ಕಡೆ ನೋಟ

ನಕ್ಷತ್ರಗಳ ಕಡೆ ನೋಟ

ನಕ್ಷತ್ರಗಳ ಕಡೆ ದಿಟ್ಟಿಸಿ ನೋಡುವ ಪ್ರಕ್ರಿಯೆಯು ಪ್ರಣಯಾಂಕುರ ಸೃಷ್ಟಿಸುವುದರಲ್ಲಿ ಮಹತ್ವದ್ದಾಗಿದೆ. ನಿಮ್ಮ ಹೊದಿಕೆಯನ್ನು ಬದಿಯಲ್ಲಿರಿಸಿ, ಬಿಸಿ ಚಾಕ್ಲೇಟ್ ನೊಂದಿಗೆ ಈ ಪ್ರೇಮಿಗಳ ದಿನವನ್ನು ಆನಂದದಿಂದ ಆಚರಿಸಲು ಮರೆಯದಿರಿ.

 ಆಟ ಆಡಿ

ಆಟ ಆಡಿ

ನಿಮ್ಮಾಕೆಯೊಂದಿಗೆ ಆನಂದದ ಕ್ಷಣ ಕಳೆಯಲು ಸಾಕಷ್ಟು ಆಟಗಳಿದ್ದು, ಇವುಗಳನ್ನು ಆಡುತ್ತಾ ಈ ಪ್ರೇಮಿಗಳ ದಿನವನ್ನು ಸಂಭ್ರಮಿಸಿರಿ. ಇದನ್ನು ಮುಚ್ಚಿದ ಅಂಗಳದಲ್ಲಿ ಅನುಸರಿಸಬೇಕಿದ್ದರೆ ಸೆಕ್ಸ್ ಗೇಮ್ಸ್ ಅನ್ನು ಪ್ರಯತ್ನಿಸಬಹುದು. ಇವು ನಿಮಗೆ ಇನ್ನೂ ಹೆಚ್ಚಿನ ಆನಂದವನ್ನು ಉಂಟುಮಾಡಿ ಒಬ್ಬರನ್ನೊಬ್ಬರು ಇನ್ನೂ ಹತ್ತಿರವಾಗಲು ಸಹಕಾರಿಯಾಗಲಿದೆ.

ಸ್ಪಾಗೆ ತೆರಳಿ

ಸ್ಪಾಗೆ ತೆರಳಿ

ಸ್ಪಾಗಳು ನಿಮಗೆ ವಿಶ್ರಾಂತಿ ಮತ್ತು ಆಹ್ಲಾದಕರ ಅನುಭವ ನೀಡುತ್ತದೆ. ನೀವಿಬ್ಬರೂ ವಾರಪೂರ್ತಿ ಕೆಲಸದ ಮಾಡುವ ಪ್ರವೃತ್ತಿಯಿದ್ದರೆ ಸ್ಪಾಗೆ ಒಟ್ಟಾಗಿ ತೆರಳುವುದು ಒಳಿತು. ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡಿ ನಿಮಗೆ ಉಲ್ಲಾಸಕರ ಅನುಭವವನ್ನು ನೀಡುತ್ತದೆ.

ಸಿನಿಮಾಗೆ ಹೋಗಿ

ಸಿನಿಮಾಗೆ ಹೋಗಿ

ಆಗಾಗ್ಗೆ ಹೋಗುತ್ತಿರುತ್ತೇವಲ್ಲ ಎಂದು ಕೇಳಬಹುದು. ಪ್ರೇಮಿಗಳ ದಿನದಂದು ಹೋಗಿ ಸಿನಿಮಾ ನೋಡಿದರೆ ಅದು ಸ್ಮರಣೀಯ ಸಿನಿಮಾ ಆಗುತ್ತದೆ. ಅಸಲಿಗೆ ಸಿನಿಮಾ ನೋಡಿದೆವು ಎಂಬುದಕ್ಕಿಂತ ಪಕ್ಕಪಕ್ಕ ಕತ್ತಲಲ್ಲಿ, ಒಟ್ಟಿಗೆ ಎರಡು ಗಂಟೆಗು ಹೆಚ್ಚು ಸಮಯ ಪಾಪ್ ಕಾರ್ನ್ ಮೆಲ್ಲುತ್ತ, ಕೋಕ್ ಹೀರುತ್ತ, ಕೈ ಕೈ ಹಿಡಿದು ಕೂತಿದ್ದೆವು ಎಂಬ ನೆನಪು ನಿಮಗೆ ತುಂಬಾ ಕಾಲ ಕಾಡುತ್ತದೆ.

ಡಿನ್ನರ್

ಡಿನ್ನರ್

ಪ್ರೇಮಿಗಳ ದಿನವನ್ನು ಆಚರಿಸಲು ಇದು ಸಹ ಒಂದು ಉತ್ತಮವಾದ ಆಲೋಚನೆ. ಒಂದು ಒಳ್ಳೆಯ ರೊಮ್ಯಾಂಟಿಕ್ ಆಗಿರುವ ಹೋಟೆಲ್ ಆರಿಸಿ. ಅಲ್ಲಿಗೆ ನಿಮ್ಮ ಸಂಗಾತಿಯನ್ನು ಬರ ಹೇಳಿ. ಸಾಕು, ನಿಮ್ಮ ಸಂಗಾತಿ ಬಂದು ನಿಮ್ಮನ್ನು ಒಮ್ಮೆ ಅಪ್ಪಿಕೊಂಡು, ಡಿನ್ನರ್‌ಗೆ ನಗೆಯ ಬೆಳದಿಂಗಳನ್ನು ಚೆಲ್ಲುತ್ತಾರೆ. ಪರಸ್ಪರ ಮಾತನಾಡಲು, ಹಳೆಯ ನೆನಪುಗಳನ್ನು ಮತ್ತು ಮುಂದಿನ ಕನಸುಗಳನ್ನು ಹಂಚಿಕೊಳ್ಳಲು ಇದು ಒಳ್ಳೆಯ ಆಲೋಚನೆ

.

English summary

Romantic ways to show your love on Valentine's Day

This Valentines Day, it is time to do something special for your loved one. Each year, I am sure you take her out on that special romantic candle light date, right? But, what if we told you that this Valentine's day 2016, you can surprise her with multiple things that will make her heart melt even more.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more