ಚುಂಬಿಸುವಾಗ ಕಣ್ಣುಗಳನ್ನು ಮುಚ್ಚುವುದು ಯಾಕೆ?

By: Hemanth
Subscribe to Boldsky

ಸರಸ ಸಲ್ಲಾಪ ಹೇಗೆ ಮಾಡಬೇಕು ಎನ್ನುವುದನ್ನು ಯಾವ ಶಾಲೆಗಳಲ್ಲೂ ಕಲಿಸಿಕೊಡುವುದಿಲ್ಲ. ಅದರಲ್ಲೂ ಚುಂಬನ ನೀಡುವಂತಹ ವಿಷಯ ಪ್ರತಿಯೊಬ್ಬರಿಗೂ ತನ್ನಿಂದ ತಾನೇ ತಿಳಿದುಬರುತ್ತದೆ. ಕೆಲವು ಸಿನಿಮಾಗಳ ಮೂಲಕ ಇದನ್ನು ತಿಳಿದುಕೊಂಡಿರಬಹುದು.

ಆದರೆ ಸಿನಿಮಾ ನೋಡದವರೂ ಚುಂಬಿಸುವುದಿಲ್ಲವೇ ಎನ್ನುವ ಪ್ರಶ್ನೆ ಕಾಡುತ್ತದೆ. ಇಂತಹ ವಿಷಯಗಳನ್ನು ಯಾರೂ ಹೇಳಿಕೊಡಬೇಕಿಲ್ಲ. ಅದು ತನ್ನಿಂದ ತಾನೇ ಬರುತ್ತದೆ. ಅದರಲ್ಲೂ ಚುಂಬಿಸುವಾಗ ಕಣ್ಣು ಮುಚ್ಚಿಕೊಳ್ಳುವುದು ಸಹಜ. ಇದನ್ನು ನೀವು ನೋಡಿರಬಹುದು.

ಚುಂಬಿಸುವಾಗ ಕಣ್ಣು ಮುಚ್ಚಿಕೊಳ್ಳಬೇಕು ಎಂದು ಯಾರಾದರೂ ನಿಯಮಗಳನ್ನು ಮಾಡಿದ್ದಾರೆಯಾ? ಅಥವಾ ಕಣ್ಣು ತೆರೆದಿದ್ದರೆ ಸಂಗಾತಿಗೆ ಕೆಟ್ಟ ಭಾವನೆಯಾಗುತ್ತದೆಯಾ ಎನ್ನುವ ಪ್ರಶ್ನೆಗಳು ಏಳುತ್ತದೆ. ಚುಂಬನದ ಬಗ್ಗೆ ಕೆಲ ಇಂಟರೆಸ್ಟಿಂಗ್ ಅಂಶಗಳು

ಸಾಮಾನ್ಯವಾಗಿ ಇನ್ನೊಬ್ಬ ವ್ಯಕ್ತಿಯನ್ನು ಚುಂಬಿಸುವಾಗ ನೈಸರ್ಗಿಕವಾಗಿಯೇ ಕಣ್ಣುಗಳು ಮುಚ್ಚಿ ಹೋಗುತ್ತದೆ. ಚುಂಬನದ ಬಗ್ಗೆ ಇರುವ ಕೆಲವೊಂದು ರೋಚಕತೆಗಳನ್ನು ನೀವಿಲ್ಲಿ ಓದಿಕೊಳ್ಳಿ.....

ಚುಂಬನವೇ ಹಾಗೆ, ಅದೊಂದು ರೀತಿಯ ಮಾಯಾ ಜಾದೂ....

ಚುಂಬನವೇ ಹಾಗೆ, ಅದೊಂದು ರೀತಿಯ ಮಾಯಾ ಜಾದೂ....

ಚುಂಬನವೇ ಹಾಗೆ, ಅದೊಂದು ರೀತಿಯ ವಿಶೇಷ ಸಂತೋಷವನ್ನು ಉಂಟು ಮಾಡುತ್ತದೆ. ಕೆಲವರಿಗೆ ಲೈಂಗಿಕ ಕ್ರಿಯೆಗಿಂತ ಹೆಚ್ಚು ಚುಂಬನ ಸಂತೋಷವನ್ನು ನೀಡುವುದು. ಗೊಂದಲಗಳಿಂದ ಕೂಡಿರುವ ಮನಸ್ಸು ಕೂಡ ಚುಂಬನದ ವೇಳೆ ತಟಸ್ಥವಾಗುತ್ತದೆ.

ಚುಂಬನವೇ ಹಾಗೆ, ಅದೊಂದು ರೀತಿಯ ಮಾಯಾ ಜಾದೂ....

ಚುಂಬನವೇ ಹಾಗೆ, ಅದೊಂದು ರೀತಿಯ ಮಾಯಾ ಜಾದೂ....

ಅಲ್ಲದೆ ಕಣ್ಣುಗಳನ್ನು ಮುಚ್ಚಿದ್ದರೆ ಚುಂಬನವನ್ನು ಆನಂದಿಸಬಹುದು. ಅದೇ ಕಣ್ಣುಗಳು ತೆರೆದೇ ಇದ್ದರೆ ಆಗ ಅಡ್ಡಿಯಾಗಬಹುದು. ಇದಕ್ಕಾಗಿ ಕಣ್ಣುಗಳು ಮುಚ್ಚಿರುತ್ತದೆ.

ಚುಂಬನದ ವೇಳೆ ಮಹಿಳೆಯರು.....

ಚುಂಬನದ ವೇಳೆ ಮಹಿಳೆಯರು.....

ಇನ್ನೊಂದು ತಮಾಷೆಯ ವಿಚಾರವೆಂದರೆ ಚುಂಬನದ ವೇಳೆ ಮಹಿಳೆಯರು ಹೆಚ್ಚಾಗಿ ಜೇಮ್ಸ್ ಬಾಂಡ್ ನನ್ನು ನೆನಪಿಸಿಕೊಳ್ಳುತ್ತಾರಂತೆ. ಕಣ್ಣು ತೆರೆದರೆ ಅವರಿಗೆ ನಿರಾಶೆಯಾಗುವುದು ಖಚಿತ....!

ಚುಂಬನದ ವೇಳೆ ಮಹಿಳೆಯರು.....

ಚುಂಬನದ ವೇಳೆ ಮಹಿಳೆಯರು.....

ಯಾವುದೇ ವ್ಯಕ್ತಿ ನಿಮ್ಮ ಹತ್ತಿರಕ್ಕೆ ಬಂದು ಚುಂಬಿಸಲು ಆರಂಭಿಸಿದಾಗ ನೀವು ಸ್ವಯಂ ಜಾಗೃತವಾಗಿರುತ್ತೀರಿ ಅಲ್ಲವೇ? ಜಾಗೃತ ಸ್ಥಿತಿ ಮತ್ತು ನಾಚಿಕೆಯಿಂದ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತೇವೆ ಎಂದು ಕೆಲವರು ಹೇಳುತ್ತಾರೆ. ಅಲ್ಲದೆ ಮುಚ್ಚಿದ ಕಣ್ಣುಗಳು ಆರಾಮವನ್ನು ನೀಡುತ್ತದೆ. ಇದರಿಂದಾಗಿ ಆ ಸವಿಸವಿ ಕ್ಷಣದ ಭಾವನೆಗಳ ಕಡಲಿನಲ್ಲಿ ತೇಳುವಂತೆ ಮಾಡುತ್ತದೆ.

ಚುಂಬನವೆನ್ನುವುದು ಉದ್ರೇಕಿಸುವಂತಹ ಕ್ರಿಯೆ

ಚುಂಬನವೆನ್ನುವುದು ಉದ್ರೇಕಿಸುವಂತಹ ಕ್ರಿಯೆ

ಚುಂಬನವೆನ್ನುವುದು ಉದ್ರೇಕಿಸುವಂತಹ ಕ್ರಿಯೆಯಾಗಿದೆ. ಕೋಮಲ, ಶೃಂಗಾರ ಮತ್ತು

ಭಾವನಾತ್ಮಕವಾಗಿರುವುದೇ ಚುಂಬನ. ಇದನ್ನು ಸಂಪೂರ್ಣವಾಗಿ ಅನುಭವಿಸುವ ಸಲುವಾಗಿ ಕಣ್ಣುಗಳನ್ನು ಮುಚ್ಚಬೇಕಾಗುತ್ತದೆ.

ಮೆದುಳಿಗೆ ತುಂಬಾ ಕಠಿಣ ಕೆಲಸವಾಗಿರುವ ಕೆಲಸ....

ಮೆದುಳಿಗೆ ತುಂಬಾ ಕಠಿಣ ಕೆಲಸವಾಗಿರುವ ಕೆಲಸ....

ಇತರ ಕಡೆ ಗಮನ ನೀಡುವ ವೇಳೆ ಕಣ್ಣುಗಳಿಗೆ ಗಮನಹರಿಸುವುದು ಮೆದುಳಿಗೆ ತುಂಬಾ ಕಠಿಣ ಕೆಲಸವಾಗಿರುವ ಕಾರಣದಿಂದಾಗಿ ಅದು ಕಣ್ಣುಗಳನ್ನು ಮುಚ್ಚುತ್ತದೆ.

ಮೆದುಳಿಗೆ ತುಂಬಾ ಕಠಿಣ ಕೆಲಸವಾಗಿರುವ ಕೆಲಸ....

ಮೆದುಳಿಗೆ ತುಂಬಾ ಕಠಿಣ ಕೆಲಸವಾಗಿರುವ ಕೆಲಸ....

ಯಾವುದೇ ಒಂದು ಪತ್ರಿಕೆಯನ್ನು ನಿಮ್ಮ ಕಣ್ಣುಗಳಿಗೆ ತುಂಬಾ ಹತ್ತಿರವಾಗಿ ಹಿಡಿಯಿರಿ. ಆಗ ಕಣ್ಣುಗಳಿಗೆ ಹೆಚ್ಚಿನ ಆಯಾಸವಾಗುತ್ತದೆ ಮತ್ತು ಚಿತ್ರಗಳು ಮಂಜಾಗಿ ಕಾಣಿಸುತ್ತದೆ. ಇಷ್ಟು ಹತ್ತಿರದಿಂದ ಕಣ್ಣುಗಳಿಗೆ ಯಾವುದೇ ವಸ್ತುಗಳನ್ನು ನೋಡಲು ಸಾಧ್ಯವಿಲ್ಲ. ಇದರಿಂದ ಕಣ್ಣುಗಳು ಮುಚ್ಚಿಕೊಳ್ಳುತ್ತವೆ.

 
English summary

Reasons Why People Kiss with Their Eyes Closed

Have you ever kissed someone? Have you observed the fact that we tend to close eyes while kissing? In fact, closed eyes resemble your passion. But did someone create this rule or custom? If you keep your eyes open will your partner feel bad? Now, let us know more facts about this phenomena...
Story first published: Saturday, September 24, 2016, 23:14 [IST]
Please Wait while comments are loading...
Subscribe Newsletter