ಗಂಡಸರಿಗೆ ಅದು ಮಾತ್ರ ಏಕೆ ಬೇಕು? ಪ್ರಾಮಾಣಿಕ ಕಾರಣಗಳು

By: Deepu
Subscribe to Boldsky

ಹೆಂಗಸರ ಬಳಿ ಗಂಡಸರ ಕುರಿತು ಹಲವಾರು ದೂರುಗಳು ಇರುತ್ತವೆ. ಅದರಲ್ಲಿ "ಅವರಿಗೆ ಯಾವಾಗಲು ಅದು ಮಾತ್ರ ಏಕೆ ಬೇಕು? ಎಂಬ ದೂರು ಸಹ ಇರುತ್ತದೆ. "ಅದು" ಬೇಕು ಎಂದಾಗ ಹಲವಾರು ಹೆಂಗಸರು, ತಲೆನೋವು, ಮೈ-ಕೈ ನೋವು ಎಂದು ಕಾರಣಗಳನ್ನು ನೀಡಿ ಏಕೆ ತಪ್ಪಿಸಿಕೊಳ್ಳುತ್ತಾರೆ ಎಂಬುದು ಗಂಡಸರ ದೂರು. ಅಧ್ಯಯನಗಳಲ್ಲಿ ಕಂಡು ಬಂದಿರುವ ಅಂಶವೆಂದರೆ, ಮಹಿಳೆಯರಿಗೆ ಎಲ್ಲದ್ದಕ್ಕಿಂತ ಹೆಚ್ಚಾಗಿ ಪ್ರೀತಿ ಮತ್ತು ಕಾಳಜಿ ಬೇಕಾಗುತ್ತದೆ; ಆದರೆ ಗಂಡಸರು ಮೊದಲು ದೈಹಿಕ ಸುಖವನ್ನು ಬಯಸುತ್ತಾರೆ.

ಆದರೆ ಗಂಡಸರು ಸಹ ಪ್ರೀತಿಸುತ್ತಾರೆ. ಆದರೆ ಅದಕ್ಕೆ ಸ್ವಲ್ಪ ಸಮಯ ತಗುಲುತ್ತದೆ. ಇದೇಕೆ ಹೀಗಾಗುತ್ತದೆ? ಎಂದರೆ ಗಂಡಸರು ಮತ್ತು ಹೆಂಗಸರು ಬೇರೆ ಬೇರೆ ಅಲ್ಲವೇ?, ಅವರಿಗೆ ಅವರದೆ ಆದ ಖಚಿತ ಆಯಾಮಗಳು, ಅಭಿರುಚಿಗಳು ಮತ್ತು ಅಭಿಲಾಷೆಗಳು ಇರುತ್ತವೆ. ಒಬ್ಬರನ್ನೊಬ್ಬರು ಅಪಾರ್ಥ ಮಾಡಿಕೊಳ್ಳುವ ಬದಲು, ಮಾನವರ ವಿಕಾಸ ಮತ್ತು ಅಭಿವೃದ್ಧಿ ಹೇಗಾಯಿತು ಮತ್ತು ಇವರಿಬ್ಬರ ಸ್ವಭಾವ ಎಂತಹದು ತಿಳಿದುಕೊಂಡರೆ, ಇಬ್ಬರು ಚೆನ್ನಾಗಿ ಬಾಳಬಹುದು. ಬನ್ನಿ ಗಂಡಸರಿಗೆ ಈ ಆರೋಪ ಬರಲು ಕಾರಣಗಳು ಏನು ಎಂದು ತಿಳಿದುಕೊಳ್ಳೋಣ.

ಗಂಡಸರಿಗೆ ಅದು ಏಕೆ ಬೇಕು

ಗಂಡಸರಿಗೆ ಅದು ಏಕೆ ಬೇಕು

"ಅದಾ... ಅದಕ್ಕೆ" ಒಂದು ಹಾರ್ಮೊನ್ ಕಾರಣ. ಅದರ ಹೆಸರು ಟೆಸ್ಟೋಸ್ಟಿರೋನ್, ಅದು ಬೆಡ್‍ರೂಮಿಗೆ ಹೋಗೋಣ ಎಂಬ ಬಯಕೆಯನ್ನು ಉಂಟು ಮಾಡುತ್ತಿರುತ್ತದೆ. ಗಂಡಸರಲ್ಲಿ ಇದು ಹೆಚ್ಚಾಗಿರುತ್ತದೆ, ಹೆಂಗಸರಲ್ಲಿ ಇದು ಗಂಡಸರಿಗಿಂತ 19.9 ಪಟ್ಟು ಕಡಿಮೆಯಿರುತ್ತದೆ!

ಹೆಂಗಸರು

ಹೆಂಗಸರು "ಅದಿಲ್ಲದೆ" ಬದುಕಬಲ್ಲರು...

ಅಧ್ಯಯನಗಳ ಪ್ರಕಾರ ಗಂಡಸರು 'ಅದಿಲ್ಲದೆ' ಬರೋಬ್ಬರಿ ಸತತ 20 ದಿನಗಳ ಕಾಲ ಆರಾಮಾಗಿ ಬದುಕಬಲ್ಲರು, ಆದರೆ ಹೆಂಗಸರು "ಅದಿಲ್ಲದೆ" ಒಂದು ವರ್ಷದವರೆಗೆ ಜೀವಿಸಬಲ್ಲರಂತೆ!!!.

ಗಂಡಸರು ಏಕೆ ಹಲವಾರು ಸಂಗಾತಿಗಳನ್ನು ಬಯಸುತ್ತಾರೆ...

ಗಂಡಸರು ಏಕೆ ಹಲವಾರು ಸಂಗಾತಿಗಳನ್ನು ಬಯಸುತ್ತಾರೆ...

ಹಣಕಾಸು ಮತ್ತು ಸಂಪನ್ಮೂಲಗಳ ನೀತಿಗಳು ಗಂಡಸರಿಗೆ ಒಬ್ಬೊಬ್ಬರೆ ಸಂಗಾತಿಗಳನ್ನು ಹೊಂದುವ ಅನಿವಾರ್ಯತೆಯನ್ನು ಉಂಟು ಮಾಡುತ್ತವೆ. ಆದರೂ ಮನಸ್ಸಿನಲ್ಲಿ ಅಥವಾ ಸಮಯ ಪೂರಕವಾಗಿರುವಾಗ ಗಂಡಸರು ಹಲವಾರು ಸಂಗಾತಿಗಳನ್ನು ಹೊಂದುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ.

ಹೆಂಗಸರ ಹಾಗೂ ಗಂಡಸರ ಮನೋಭಾವ

ಹೆಂಗಸರ ಹಾಗೂ ಗಂಡಸರ ಮನೋಭಾವ

ಸಾಮಾನ್ಯವಾಗಿ ಹೆಂಗಸು ತನ್ನನ್ನು ಮದುವೆಯಾಗುವವನು ಒಳ್ಳೆಯ ಅಪ್ಪ ಆಗುವಂತಹವನಾಗಿರಬೇಕು, ಒಳ್ಳೆಯ ಗಂಡ ಎನಿಸಿಕೊಳ್ಳಬೇಕು ಮತ್ತು ಹೆಂಗಸರ ಕುರಿತು ಉತ್ತಮ ಭಾವನೆಯನ್ನು ಹೊಂದಿರಬೇಕು ಎಂದು ಕೋರಿಕೊಳ್ಳುತ್ತಾರೆ. ಆದರೆ ಗಂಡಸರು ತಮ್ಮ ಇಷ್ಟಕ್ಕೆ ಕುಣಿಯುವ, ತಮ್ಮೊಡನೆ ತೀರಾ ಸಲುಗೆಯಿಂದ ಮತ್ತು "ಅದಕ್ಕೆ" ಅನುಕೂಲಕರವಾಗಿರುವ ಗರ್ಲ್ ಫ್ರೆಂಡ್ ಬೇಕೆಂದು ಕೋರಿಕೊಳ್ಳುತ್ತಾರೆ.

ಗಂಡಸರಿಗೆ ಲೆಕ್ಕ ಮುಖ್ಯ, ಹೆಂಗಸರಿಗೆ ಗುಣಮಟ್ಟ ಮುಖ್ಯ

ಗಂಡಸರಿಗೆ ಲೆಕ್ಕ ಮುಖ್ಯ, ಹೆಂಗಸರಿಗೆ ಗುಣಮಟ್ಟ ಮುಖ್ಯ

ತಾವು "ಅದನ್ನು" ಎಷ್ಟು ಬಾರಿ ಮಾಡಿದೆವು ಎಂದು ಗಂಡಸರು ಲೆಕ್ಕ ಹಾಕುತ್ತಾರೆ. ಆದರೆ ಹೆಂಗಸರು ಮಾಡಿದ್ದರಲ್ಲಿ ಎಷ್ಟು ಆನಂದವಿತ್ತು ಎಂದು ಆಲೋಚಿಸುತ್ತಾರೆ. ಗಂಡಸರಿಗೆ ಇದರಲ್ಲಿ ಸಿಕ್ಕುವ ಆನಂದವು ಮುಖ್ಯವಾದರೆ, ಹೆಂಗಸರಿಗೆ ಪ್ರತಿ ಬಾರಿ ಅದರಿಂದ ಎಷ್ಟು ಮಟ್ಟಿಗೆ ತೃಪ್ತಿ ದೊರೆಯಿತು ಎಂದು ಆಲೋಚಿಸುತ್ತಾರೆ.

ಗಂಡಸರಿಗೆ ಒತ್ತಡಗಳೆಂದರೆ ಆಗುವುದಿಲ್ಲ

ಗಂಡಸರಿಗೆ ಒತ್ತಡಗಳೆಂದರೆ ಆಗುವುದಿಲ್ಲ

ಹೌದು, ಗಂಡಸರಿಗೆ ಆಗಾಗ 'ಆ' ಭಾವನೆಗಳು ಕೆರಳಿ ಬಿಡುತ್ತವೆ. ಆಗ ಅವರ ದೇಹದಲ್ಲಿ ದೈಹಿಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಅವರು ಆ ಒತ್ತಡವನ್ನು ಹೊರಗೆ ಹಾಕುವ ಮಾರ್ಗವನ್ನು ಹುಡುಕುತ್ತಾರೆ. ಅದು ಏನಾದರು ಸರಿ, ಮೊದಲು ಅವರು ಅದನ್ನು ಹೊರಗಡೆ ಹಾಕಬೇಕು ಅಷ್ಟೇ, ಅದೇ ಅವರ ಗುರಿಯಾಗಿರುತ್ತದೆ.

 
English summary

Reasons Why Men Want Only Sex

Many women wonder why men want only 'that'. And many men wonder why women come up with excuses like headache. Research reveals that women value love and care more than anything else; but men crave more for the physical act first. But wait, men are capable of love but they take time to develop it. Why is it so? Well, males and females are wired differently. Now, let us look into certain factors that have brought the 'womaniser' image to men.
Story first published: Monday, February 22, 2016, 14:57 [IST]
Subscribe Newsletter