For Quick Alerts
ALLOW NOTIFICATIONS  
For Daily Alerts

ಡೇಟಿಂಗ್ ವಿಷಯದಲ್ಲಿ ಪುರುಷರನ್ನು ಮಾತ್ರ ನಂಬಬೇಡಿ!

By Super
|

ಒಲುಗೆಳೆತನ ಅಥವಾ ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರೊಂದಿಗೆ ಸಂಬಂಧ ಕುದುರಿಸುವ ಯತ್ನ ಇತ್ತೀಚೆಗೆ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಈ ಇಬ್ಬರೂ ಮಹಿಳೆಯರಿಗೆ ಇದರ ಬಗ್ಗೆ ತಿಳಿಯದಿರುವಂತೆ ಎಚ್ಚರಿಕೆ ವಹಿಸುತ್ತಾ, ಮಧ್ಯಾಹ್ನದ ಊಟಕ್ಕೆ ಒಬ್ಬರೊಂದಿಗೆ, ರಾತ್ರಿ ಊಟಕ್ಕೆ ಇನ್ನೊಬ್ಬರೊಂದಿಗೆ ಮಾಡುತ್ತಾ, ಇಬ್ಬರೊಂದಿಗೂ ಆಣೆ ಪ್ರಮಾಣ ಭಾಷೆಗಳನ್ನು ಪಡೆಯುತ್ತಾ ಸಮಯ ಕಳೆಯುವ ಪರಿ ಇಂದು ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಮದುವೆ ಮುಂಚೆ ಡೇಟಿಂಗ್, ಸರಿಯೋ? ತಪ್ಪೋ?

ಇವರಲ್ಲಿ ಕೆಲವರು ಮಾತ್ರ ತಮ್ಮ ಇನ್ನೊಬ್ಬ ಮಹಿಳೆಯೊಂದಿಗಿನ ಸಂಬಂಧವನ್ನು ನೇರವಾಗಿ ಹೇಳಿಕೊಳ್ಳುತ್ತಾರೆ. ಪಾಶ್ಚಾತ್ಯ ದೇಶಗಳಿಗೆ ಬಂದಿದ್ದು ಭಾರತಕ್ಕೆ ಬರಲು ಹೆಚ್ಚಿನ ಸಮಯ ಬೇಕಾಗಿಲ್ಲ. ಅಥವಾ ಈಗಾಗಲೇ ಇಲ್ಲಿ ಪ್ರಾರಂಭವಾಗಿರಲೂ ಬಹುದು. ಪಾಶ್ಚಾತ್ಯ ದೇಶದಲ್ಲಿ ಇದು ಸಾಮಾನ್ಯವಾದರೂ ಸಾಂಪ್ರಾದಾಯಿಕ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ನೀಡುವ ಭಾರತದಂತಹ ದೇಶಗಳಿಗೆ ಈ ಬಗೆಯನ್ನು ಅರಗಿಸಿಕೊಳ್ಳಲಾಗದ ಮಾತು. ಅದರಲ್ಲೂ ಭಾರತೀಯ ಪುರುಷರು ಈ ವಿದ್ಯೆಯಲ್ಲಿ ಹೆಚ್ಚಿನ ಸಾಧ್ಯತೆ ಪಡೆಯಲು ಸಾಧ್ಯವಿಲ್ಲ. ಡೇಟಿಂಗ್ ವಿಷಯದಲ್ಲಿ ಹುಡುಗಿಯರಿಗೆ ನಾಚಿಕೆ ಜಾಸ್ತಿಯಂತೆ!

ಏಕೆಂದರೆ ಭಾರತೀಯ ಮಹಿಳೆಯರು ತಮ್ಮ ಮೆಚ್ಚಿನ ಪುರುಷ ತಮಗೆ ಮಾತ್ರ ಸೀಮಿತನಾಗಿರಬೇಕು, ಇಲ್ಲದಿದ್ದರೆ ಆತನಿಂದ ಮೋಸ ಹೋದೆವು ಎಂಬ ಭಾವನೆಯನ್ನು ತಳೆಯುವುದರಿಂದ ಈ ಚಕ್ಕಂದ ಹೆಚ್ಚಿನ ಕಾಲ ನಡೆಯಲು ಸಾಧ್ಯವೂ ಇಲ್ಲ. ಸಮಾಜವೂ, ಸಂಸ್ಕೃತಿಯೂ, ಧರ್ಮವೂ ಇದನ್ನು ಭಾರತದಲ್ಲಿ ಸಮ್ಮತಿಸುವುದಿಲ್ಲ. ಇಷ್ಟಿದ್ದರೂ ಪುರುಷರು ಎರಡು ದೋಣಿಗಳಲ್ಲಿ ಕಾಲಿಡಲು ಕಾರಣವೇನು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಕೇವಲ ಹೆಚ್ಚಿನ ಮೋಜಿಗಾಗಿ

ಕೇವಲ ಹೆಚ್ಚಿನ ಮೋಜಿಗಾಗಿ

ಸಾಮಾನ್ಯವಾಗಿ ಪುರುಷರು ಕೇವಲ ಮೋಜಿಗಾಗಿ ಡೇಟಿಂಗ್ ಮಾಡುತ್ತಾರೆ. ಈ ಮೋಜಿನ ಮಜಲನ್ನು ಕೊಂಚ ಹೆಚ್ಚಿಸಲು ಎರಡನೆಯ ಡೇಟಿಂಗ್ ಗೆ ವಿಸ್ತರಿಸುತ್ತಾರೆಯೇ ವಿನಃ ಈ ಸಂಬಂಧಗಳನ್ನು ಜೀವನಪರ್ಯಂತ ಸಾಗಿಸುವ ನಿಟ್ಟಿನ ಯಾವುದೇ ಇರಾದೆ ಅವರಲ್ಲಿ ಇರುವುದಿಲ್ಲ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಈ ಇಬ್ಬಗೆಯ ಮೋಜಿನ ಧಾವಂತದಲ್ಲಿ ಎರಡೂ ದೋಣಿಗಳು ವಿರುದ್ಧ ದಿಕ್ಕಿನಲ್ಲಿ ತಿರುಗಿ ಪುರುಷ ನದಿಯಲ್ಲಿ ಮುಳುಗುವ ಸಂಭವವೇ ಹೆಚ್ಚು.

ಅತ್ಯುತ್ತಮ ಸಂಗಾತಿಯನ್ನು ಆರಿಸಲು

ಅತ್ಯುತ್ತಮ ಸಂಗಾತಿಯನ್ನು ಆರಿಸಲು

ಪುರುಷರು ತಮಗೆ ಸಂಗಾತಿಯಾಗಿ ಬರುವವಳು ಎಲ್ಲಾ ರೀತಿಯಿಂದಲೂ ಸೂಕ್ತಳಿರಬೇಕು ಎಂದು ನಿರೀಕ್ಷಿಸುತ್ತಾರೆ. ಈ ನಿಟ್ಟಿನಲ್ಲಿ ಅತಿ ಸೂಕ್ತ ಮಹಿಳೆಗಾಗಿ ಹುಡುಕಾಟ ನಡೆಸುತ್ತಾರೆ. ಪರಿಣಾಮವಾಗಿ ಡಬ್ಬಲ್, ತ್ರಿಬ್ಬಲ್ ಡೇಟಿಂಗ್ ಅನಿವಾರ್ಯವಾಗುತ್ತದೆ.

ತಮ್ಮ ಆಯ್ಕೆಯ ಸಂಖ್ಯೆಯನ್ನು ಹೆಚ್ಚಿಸಲು

ತಮ್ಮ ಆಯ್ಕೆಯ ಸಂಖ್ಯೆಯನ್ನು ಹೆಚ್ಚಿಸಲು

ಕೆಲವು ಪುರುಷರು ಯಾವುದೊಂದು ವಸ್ತುವನ್ನು ಕೊಂಡುಕೊಳ್ಳುವ ಮುನ್ನ ಹೆಚ್ಚಿನ ಆಯ್ಕೆಗಳಿರಬೇಕು ಎಂದು ಬಯಸುತ್ತಾರೆ. ಇದೇ ಗುಣ ಜೀವನಸಂಗಾತಿಯ ಆಯ್ಕೆಯಲ್ಲಿಯೂ ನಡೆಯುತ್ತದೆ. ಈ ನಿಟ್ಟಿನಲ್ಲಿ ಮುಂದುವರೆದವರಿಗೆ ಏಕಕಾಲದಲ್ಲಿ ವಿವಿಧ ಮಹಿಳೆಯರೊಂದಿಗೆ ಡೇಟಿಂಗ್ ಮಾಡಬೇಕಾಗಿ ಬರುತ್ತದೆ. ಕಾಲಕ್ರಮೇಣ ಇಬ್ಬರು ಮಹಿಳೆಯೊಂದಿಗಿನ ಸರಸ ಎಂತಹ ಅಪಾಯದ ಕೆಲಸ ಎಂಬುದು ಅರಿವಾಗುತ್ತದೆ.

ಮಹಿಳೆಯರನ್ನು ಇನ್ನೂ ಆಳವಾಗಿ ಅರಿಯಲು

ಮಹಿಳೆಯರನ್ನು ಇನ್ನೂ ಆಳವಾಗಿ ಅರಿಯಲು

ಮಹಿಳೆಯನ್ನು ಅರಿಯಲು ಸೃಷ್ಟಿಕರ್ತ ಬ್ರಹ್ಮನಿಗೇ ಸಾಧ್ಯವಾಗದಿರುವಾಗ ಇಬ್ಬರು ಮಹಿಳೆಯರನ್ನು ಏಕಕಾಲದಲ್ಲಿ ಒರೆಹಚ್ಚಿ ಇನ್ನೂ ಆಳವಾಗಿ ಅರಿಯುವ ಪ್ರಯತ್ನವನ್ನು ಕೆಲವು ತಿಳಿಗೇಡಿ ಪುರುಷರು ನಡೆಸುತ್ತಾರೆ. ತಮ್ಮನ್ನು ಆಳವಾಗಿ ಅರಿಯಲು ಯತ್ನಿಸುತಿದ್ದಾನೆಂದರೆ ಅರಿತ ಕೂಡಲೇ ಮಹಿಳೆಯರು ಈತನನ್ನೇ ಆಳವಾದ ಗೊಂದಲದಲ್ಲಿ ಮುಳುಗಿಸಿಬಿಡುತ್ತಾರೆ.

ಈಗಿರುವುದಕ್ಕಿಂತ ಚೆನ್ನಾಗಿರುವ ಅನುಭವ ಪಡೆಯಲು

ಈಗಿರುವುದಕ್ಕಿಂತ ಚೆನ್ನಾಗಿರುವ ಅನುಭವ ಪಡೆಯಲು

ಕೆಲವು ಪುರುಷರು ತಮ್ಮ ಹಿಂದಿನ ದಿನಗಳಲ್ಲಿ ಮೋಸ ಹೋಗಿರುವುದು, ತಿರಸ್ಕರಿಸಲ್ಪಟ್ಟಿರುವುದು ಮೊದಲಾದ ಕಾರಣದಿಂದ ಖಿನ್ನತೆ ಅನುಭವಿಸುತ್ತಿರುತ್ತಾರೆ. ಒಂದು ಸಂಬಂಧದ ಮೂಲಕ ಈ ಖಿನ್ನತೆಯಿಂದ ಹೊರಬಂದು ಹಿಂದಿನ ದಿನಕ್ಕಿಂತ ಚೆನ್ನಾಗಿರುವ ಅನುಭವ ಪಡೆಯಲು ಡಬ್ಬಲ್ ಡೇಟಿಂಗ್ ಮೊರೆ ಹೋಗುತ್ತಾರೆ. ಮೊದಮೊದಲು ಚೆನ್ನಾಗಿರುವ ಅನುಭವ ಪಡೆದರೂ ಕಾಲಕ್ರಮೇಣ ಇದರ ಪರಿಣಾಮವಾಗಿ ಹಿಂದಿಗಿಂತಲೂ ಹೆಚ್ಚಿನ ಖಿನ್ನತೆಗೆ ಒಳಗಾಗುವ ಸಂಭವ ಹೆಚ್ಚು.

ಕೊಂಚ ಕಾಲ ಟೈಂ ಪಾಸ್ ಮಾಡಲು

ಕೊಂಚ ಕಾಲ ಟೈಂ ಪಾಸ್ ಮಾಡಲು

ಬಸ್ಸಿಗೆ ಕಾಯುತ್ತಿರುವಾಗ ಕಾಲ ಕಳೆಯಲು ಸಾಧ್ಯವಾಗದೇ ಇರುವವರಿಗೆ ಕಡ್ಲೆಕಾಯಿ ತಿನ್ನುವುದು ಒಂದು ಉತ್ತಮ ಪರಿಹಾರವಾಗಿದೆ. ಇದೇ ರೀತಿ ಕೇವಲ ಸಮಯಹರಣಕ್ಕಾಗಿ ಡೇಟಿಂಗ್ ಅನ್ನು ಕೆಲವರು ಒಂದು ಆಯ್ಕೆಯಾಗಿ ಪರಿಗಣಿಸುತ್ತಾರೆ. ಆದರೆ ಮಹಿಳೆಯರು ಇದರ ಬಗ್ಗೆ ತಿಳಿದುಬರುತ್ತಿದ್ದಂತೆಯೇ ಇಂತಹವರಿಗೆ ಚೆನ್ನಾಗಿ ಬುದ್ಧಿ ಕಲಿಸುತ್ತಾರೆ.

English summary

Reasons Why Men Double Date

Double dating has picked up off late in most of the urban areas of the world. Many men love the concept of dating two women at a time without their knowledge. This means a man goes to lunch with one woman and goes to dinner with another woman. And he keeps it a secret. Of course, some men openly tell that they double date.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more