For Quick Alerts
ALLOW NOTIFICATIONS  
For Daily Alerts

ಬ್ರೇಕ್ ಅಪ್ ಶಾಕ್ ಗಂಡಸರಿಗೇ ಹೆಚ್ಚಾಗಿ ಕಾಡುತ್ತದೆಯಂತೆ!

By Deepu
|

ಅಮರ ಮಧುರ ಈ ಪ್ರೇಮ, ಇದು ಏಳು ಜನ್ಮಗಳ ಸಂಬಂಧ ಎಂಬಂತಿರುವ ಒಂದು ಸಂಬಂಧವು ಮುರಿದು ಬಿದ್ದರೆ, ಅದರಿಂದ ಉಂಟಾಗುವ ನೋವು ಅಷ್ಟು ಇಷ್ಟಲ್ಲ. ಬ್ರೇಕಪ್‌ಗೆ ಮೊದಲು ಹಲವಾರು ವಿಚಾರಗಳು ನಿಮ್ಮಿಬ್ಬರ ಮಧ್ಯೆ ಕಿಚ್ಚನ್ನು ಹಚ್ಚಿರುತ್ತವೆ. ಬೇರೆಯಾದಾಗ ಮನಸ್ಸಿಗೆ ಸ್ವಲ್ಪ ದಿನ ಶಾಂತಿ ಸಿಗುತ್ತದೆಯಾದರು ಅದು ಕ್ಷಣಿಕ. ಆದರೆ ಬ್ರೇಕ ಅಪ್ ಆದ ನಂತರ ಜೀವನ ಮುಂದೆ ಸಾಗಿದಾಗ ಅದರ ಕಷ್ಟ ಗೊತ್ತಾಗುತ್ತದೆ.

ಒಂದು ವೇಳೆ ನೀವು ಇತ್ತೀಚೆಗಷ್ಟೆ ಬೇರೆಯಾಗಿದ್ದಲ್ಲಿ, ಒಂದು ಸಂಬಂಧ ಮಾತ್ರ ಮುರಿದು ಬಿತ್ತು ಎಂದು ಭಾವಿಸಿರಬಹುದು. ಆದರೆ ಬೇರೆಯಾದ ಮಾತ್ರಕ್ಕೆ ಎಲ್ಲವು ಬದಲಾಗುವುದಿಲ್ಲ ಮತ್ತು ಸರಿಹೋಗುವುದಿಲ್ಲ. ಒಬ್ಬರಿಗೆ ಇದರಿಂದ ಸಂತೋಷವಾದಲ್ಲಿ ಮತ್ತೊಬ್ಬರಿಗೆ ಇದರಿಂದ ದುಃಖವುಂಟಾಗಿಯೇ ಆಗುತ್ತದೆ.

ಕೆಲವರಿಗೆ ಇದು ಹೊಸ ಜೀವನದ ಮುನ್ನುಡಿಯಾದರೆ, ಇನ್ನೂ ಕೆಲವರಿಗೆ ಜೀವನ ಅಂತ್ಯವಾಗಿ ಇದು ಕಾಣುತ್ತದೆ. ಸಂಬಂಧದ ಬಗ್ಗೆ ಅಧ್ಯಯನ ಮಾಡಿರುವ ತಜ್ಞರ ಪ್ರಕಾರ ನೀವು ಈ ಸಂದರ್ಭದಲ್ಲಿ ಸಕಾರಾತ್ಮಕವಾಗಿ ಆಲೋಚನೆ ಮಾಡಬೇಕಂತೆ. ನಿಮ್ಮ ಸಂಗಾತಿಯಲ್ಲಿರುವ ನಕಾರಾತ್ಮಕ ಅಂಶಗಳನ್ನು ಪರಿಗಣಿಸಿದಾಗ, ನಿಮ್ಮ ಜೀವನವು ಈಗ ಸಕಾರಾತ್ಮಕವಾಗಿ ಸಾಗುವತ್ತ ಅಡಿಯಿರಿಸಿದೆ ಎಂದು ಭಾವಿಸಿ. ನಿಜವಾಗಿ ಹೇಳಬೇಕೆಂದರೆ ಈ ಬ್ರೇಕ್ ಅಪ್ ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆಯನ್ನು ತರುತ್ತದೆ ಎಂದು ನಂಬಿ. ಬ್ರೇಕ್ ಅಪ್ ನೋವಿವಿಂದ ಹೊರಬರುವುದು ಹೇಗೆ?

ಪ್ರತಿಯೊಂದು ಬ್ರೇಕ್ ಅಪ್ ನಿಮ್ಮ ಜೀವನದಲ್ಲಿ ಕೆಲವೊಂದು ಸನ್ನಿವೇಶಗಳನ್ನು ಎದುರಿಸುವಂತೆ ಮಾಡುತ್ತದೆ. ಅದರಲ್ಲೂ ಗಂಡಸರಿಗೆ ಇದರಿಂದ ಇನ್ನೂ ಸ್ವಲ್ಪ ಕಷ್ಟವಾಗಬಹುದು. ಅವರು ತಮ್ಮ ಜೀವನವನ್ನು ಮತ್ತಷ್ತು ಮುಗುಳ್ನಗೆಯೊಂದಿಗೆ ಎದುರಿಸಲು ಸಿದ್ಧರಾಗಬೇಕಾಗುತ್ತದೆ. ಆದ್ದರಿಂದ ಭಗ್ನ ಹೃದಯಿ ಗಂಡಸರೆ ನಿಮ್ಮ ತಲೆಯನ್ನು ಮತ್ತಷ್ಟು ಮೇಲಕ್ಕೆ ಎತ್ತಿ, ಜೀವನದಲ್ಲಿ ಒಳ್ಳೆಯದನ್ನು, ಒಳ್ಳೆಯ ಮೌಲ್ಯಗಳನ್ನು ಇರಿಸಿಕೊಂಡು ಮುಂದೆ ಸಾಗಿ. ನಿಮ್ಮ ಜೀವನದಲ್ಲಿ ಸಂಬಂಧ ಮುರಿದು ಬಿದ್ದ ಮೇಲೆ ಏನೆಲ್ಲಾ ಎದುರಿಸಬೇಕಾಗಿ ಬರುತ್ತದೆ ಎಂಬುದರ ಸಣ್ಣ ಪಕ್ಷಿನೋಟವನ್ನು ಇಲ್ಲಿ ನೀಡಿದ್ದೇವೆ ಓದಿ...

Things Men Learn From A Breakup

ಒಂಟಿಯಾಗಿರುವುದು ತಪ್ಪಲ್ಲ
ನೀವು ಬ್ರೇಕಪ್ ಆದ ನಂತರ ನಿಮ್ಮ ಮನಸ್ಸಿನಲ್ಲಿ ಹಲವಾರು ವಿಚಾರಗಳು ಬಂದು ಹೋಗಬಹುದು. ಈ ಸಮಯದಲ್ಲಿ ನೀವು ಒಂಟಿಯಾಗಿರುವುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಒಂಟಿಯಾಗಿರಬೇಕಾಗುತ್ತದೆ ಅದು ತಪ್ಪು ಅಲ್ಲ. ಪ್ರಪಂಚದಲ್ಲಿ ಹಲವರು ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ನಿಮ್ಮ ಹೆಸರು ಸಹ ಆ ಪಟ್ಟಿಯಲ್ಲಿ ಸೇರ್ಪಡೆಯಾಗಬಹುದು. ಸ್ವಲ್ಪ ದಿನಗಳ ಮಟ್ಟಿಗಾದರು ಇದು ನಿಮಗೆ ಅನ್ವಯಿಸುತ್ತದೆ.

ಮುಂದಿನ ಬಾರಿ ನೀವು ಸಲಹೆಯನ್ನು ಕೇಳಬೇಕಾಗುತ್ತದೆ

ನಿಮ್ಮ ಪ್ರೀತಿ ಪಾತ್ರರು ಮತ್ತು ಹಿತೈಷಿಗಳ ಮಾತನ್ನು ಮುಂದಿನ ಬಾರಿಯಾದರು ಕೇಳಿ. ನಿಮ್ಮ ಸಂಗಾತಿಯಾಗಲು ಯಾರಾದರು ಮುಂದೆ ಬಂದರೆ ಜಾಗರೂಕತೆಯಿಂದ ನಿರ್ಧಾರ ತೆಗೆದುಕೊಳ್ಳಿ. ಅವರಲ್ಲಿ ನೀವು ಬಯಸುವ ಅಂಶಗಳು ಇವೆಯೇ ಎಂದು ಪರೀಕ್ಷಿಸಿಕೊಳ್ಳಿ. ನಿಮ್ಮನ್ನು ಅವರು ಇಷ್ಟಪಟ್ಟಿದ್ದಲ್ಲಿ, ನಿಮ್ಮ ಮನಸ್ಸಿಗೆ ಘಾಸಿ ಮಾಡಿದ ಹಿಂದಿನ ಅನುಭವಗಳನ್ನು ಮರೆಯದೆ, ಪರಿಸ್ಥಿತಿಯನ್ನು ಪುನರಾವಲೋಕನ ಮಾಡಿ. ಇದು ಮತ್ತೆ ನೀವು ಅಪಾಯಕ್ಕೆ ಸಿಕ್ಕುವುದನ್ನು ತಪ್ಪಿಸುತ್ತದೆ. ಬ್ರೇಕ್ ಅಪ್‌ನ ಎಂಟು ಘಟ್ಟಗಳು

ನಿಮಗೆ ಮತ್ತಷ್ಟು ಒಳ್ಳೆಯದು ಸಿಗಲೇಬೇಕು

ಒಂದು ವೇಳೆ ನಿಮ್ಮ ಹೃದಯವು ಒಡೆದ ಕನ್ನಡಿಯಾಗಿದ್ದಲ್ಲಿ, ನೆನಪಿಡಿ. ನಿಮ್ಮ ಜೀವನ ಅಲ್ಲಿಗೆ ಮುಗಿದಿಉ ಹೋಗುವುದಿಲ್ಲ. ನಿಮಗೆ ನಿಮ್ಮ ಹಿಂದಿನ ಜೀವನಕ್ಕಿಂತ ಉತ್ತಮವಾದುದು ಸಿಗಲೇಬೇಕು. ಅದು ಸಿಕ್ಕೇ ಸಿಕ್ಕುತ್ತದೆ. ಇದನ್ನು ನಿಮ್ಮ ಮನಸ್ಸಿನಲ್ಲಿ ಯಾವಾಗಲು ನೆನಪಿಸಿಕೊಳ್ಳಿ.
English summary

Things Men Learn From A Breakup

Going through a breakup is one of the most difficult stages in one's life. If you have recently got your heart broken to someone you thought a relationship would last, we totally understand how you must be feeling. For many, a breakup may seem like an end of the world, but according to relationship experts, you should see the brighter side, rather the positive side of a breakup.
X
Desktop Bottom Promotion