For Quick Alerts
ALLOW NOTIFICATIONS  
For Daily Alerts

ಪ್ರೇಮಿಗಳ ದಿನಕ್ಕೆ ಏನೆಲ್ಲಾ ಯೋಜನೆ ಹಾಕಿಕೊಂಡಿರುವಿರಿ?

|

ಈ ಪ್ರೇಮಿಗಳ ದಿನಕ್ಕೆ ಏನೆಲ್ಲ ಯೋಜನೆ ಮಾಡಿಕೊಂಡಿದ್ದೀರಿ? ಬನ್ನಿ ಈ ದಿನಕ್ಕಾಗಿ ನಾವು ಕೆಲವೊಂದು ರೊಮ್ಯಾಂಟಿಕ್ ಸಲಹೆಗಳನ್ನು ನೀಡುತ್ತಿದ್ದೇವೆ. ಒಂದು ವೇಳೆ ನಿಮಗೆ ಯಾವುದೆ ಯೋಜನೆಗಳು ಇಲ್ಲದಿದ್ದಲ್ಲಿ, ನಮ್ಮ ಅಂಕಣದಲ್ಲಿರುವ ಯೋಜನೆಗಳನ್ನು ಪಾಲಿಸಿ. ನಿಮ್ಮ ಜೀವನದಲ್ಲಿ ಪ್ರೀತಿಯನ್ನು ತುಂಬಿಸಲು ನೋಡುತ್ತಿದ್ದೀರಾ, ಹಾಗಾದರೆ ಅದಕ್ಕೆ ಪ್ರೇಮಿಗಳ ದಿನ ಹೇಳಿ ಮಾಡಿಸಿದ ದಿನ ಎಂದು ಬೇರೆ ಹೇಳಬೇಕಿಲ್ಲ. ಬೇರೆ ದಿನಕ್ಕಾಗಿ ಕಾಯಬೇಡಿ!

ಯಾವಾಗಲು ಖುಷಿಯನ್ನು ಹಂಚಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಅದರಲ್ಲೂ ನೀವು ಪ್ರೀತಿಯಲ್ಲಿ ಮುಳುಗಿದ್ದರೆ ಮುಗಿದು ಹೋಯಿತು. ಸ್ವಲ್ಪ ಹೆಚ್ಚಿಗೆ ಮಾಡಿದರು ತಪ್ಪೇನಿಲ್ಲ. ಸ್ವಲ್ಪ ತುಂಟತನ, ಸ್ವಲ್ಪ ಸೃಜನಶೀಲತೆ, ಸ್ವಲ್ಪ ಹುಚ್ಚುತನ ಇದೇ ತಾನೇ ಪ್ರೀತಿ, ಏನೇ ಮಾಡಿ ನಿಮ್ಮ ಸಂಬಂಧದಲ್ಲಿ ಈ ದಿನವನ್ನು ಎಂದಿಗು ಮರೆಯಬಾರದು. ಅದಕ್ಕಾಗಿ ಈ ವಿಶೇಷ ದಿನವನ್ನು ಒಟ್ಟಿಗೆ ಕಳೆಯಿರಿ. ನಿಮ್ಮ ಸ್ವಂತ ಸೃಜನಶೀಲತೆಯನ್ನು ಬಳಸಿ, ನಿಮ್ಮ ಸಂಗಾತಿಗೆ ಈ ದಿನವನ್ನು ವಿಶೇಷ ದಿನವನ್ನಾಗಿಸಿ. ಇಂತಹದ್ದೆ ಮಾಡಬೇಕು ಎಂಬುದಕ್ಕೆ ಯಾವುದೇ ಮಿತಿಗಳು ಪ್ರೀತಿಯಲ್ಲಿರುವವರಿಗೆ ಇಲ್ಲ. ಏನು ಬೇಕಾದರು ಮಾಡಿ. ಒಟ್ಟಿನಲ್ಲಿ ಪ್ರೀತಿ ಪೂರ್ವಕವಾಗಿ ಮಾಡಿ.

ಸ್ನಾನ ಮಾಡಿ

Romantic Things To Do Together On Valentine's day

ಒಟ್ಟಿಗೆ ಸ್ನಾನ ಮಾಡಿ, ಇದಕ್ಕಿಂತ ರೊಮ್ಯಾಂಟಿಕ್ ಆದ ಸಂಗತಿ ನಿಮಗೆ ಬೇಕಾ? ಈ ಪ್ರೇಮಿಗಳ ದಿನದಂದು ಒಟ್ಟಿಗೆ ಸ್ನಾನ ಮಾಡಿ. ಹುಟ್ಟುಡುಗೆಯಲ್ಲಿ ಒಟ್ಟಿಗೆ ಸ್ನಾನ ಮಾಡಿ. ತುಂಟತನದ ಪರಮಾವಧಿಯಾದ ಈ ಕ್ರಿಯೆಯು ನಿಮಗೆ ಒಳ್ಳೆಯ ಸಂಭ್ರಮವನ್ನು ನೀಡುವುದರ ಜೊತೆಗೆ, ಒಳ್ಳೆಯ ನೆನಪನ್ನು ಸಹ ನೀಡುತ್ತದೆ. ಪ್ರೇಮಿಗಳ ದಿನದ ಆರಂಭಕ್ಕೆ ಇದು ಹೇಳಿ ಮಾಡಿಸಿದ ಸಲಹೆ

ಅಡುಗೆ ಮಾಡಿ

Romantic Things To Do Together On Valentine's day

ಒಟ್ಟಿಗೆ ಅಡುಗೆ ಮಾಡಿ, ಇದೇನು ಅಷ್ಟೇನು ರೊಮ್ಯಾಂಟಿಕ್ ಅಲ್ಲ ಎಂದು ನೀವು ಭಾವಿಸಬಹುದು. ಆದರೆ ಒಟ್ಟಿಗೆ ಇಬ್ಬರು ಕೂಡಿ ತಯಾರಿಸಿಕೊಳ್ಳುವ ಅಡುಗೆಯ ರುಚಿ ಪ್ರೇಮಿಗಳ ದಿನದ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಡುಗೆ ಮಾಡುವಾಗ ಪರಸ್ಪರ ಸಹಾಯ ಮಾಡಿಕೊಳ್ಳುವಾಗ ದೊರೆಯುವ ಥ್ರಿಲ್ ಅದ್ಭುತವಾಗಿರುತ್ತದೆ ಒಮ್ಮೆ ಪ್ರಯತ್ನಿಸಿ ನೋಡಿ. ಪ್ರೇಮಿಗಳ ದಿನದಂದು ಹಸಮಣೆಯೇರಿದ ಸೆಲೆಬ್ರಿಟಿಗಳು

ಬೈಕ್

Romantic Things To Do Together On Valentine's day

ಈ ದಿನ ಒಂದು ರೋಡ್ ಟ್ರಿಪ್ ಹೋಗಿ ಬನ್ನಿ. ನಿಮ್ಮ ಪ್ರಯಾಣ ನಿಮಗೆ ಒಂದು ಅದ್ಭುತ ಅನುಭವವನ್ನು ನೀಡುತ್ತದೆ. ಎಲ್ಲಿಗೆ ಹೋಗಬೇಕು, ಎಷ್ಟು ದೂರ ಹೋಗಬೇಕು ಎಂದು ಆಲೋಚಿಸಬೇಡಿ. ಸುಮ್ಮನೆ ಹೋಗಿ ಬನ್ನಿ ಸಾಕು! ಅದರ ರೋಮಾಂಚನ ನಿಮಗೆ ದೊರೆಯುತ್ತದೆ.

ಸಿನಿಮಾಗೆ ಹೋಗಿ

Romantic Things To Do Together On Valentine's day

ಆಗಾಗ್ಗೆ ಹೋಗುತ್ತಿರುತ್ತೇವಲ್ಲ ಎಂದು ಕೇಳಬಹುದು. ಪ್ರೇಮಿಗಳ ದಿನದಂದು ಹೋಗಿ ಸಿನಿಮಾ ನೋಡಿದರೆ ಅದು ಸ್ಮರಣೀಯ ಸಿನಿಮಾ ಆಗುತ್ತದೆ. ಅಸಲಿಗೆ ಸಿನಿಮಾ ನೋಡಿದೆವು ಎಂಬುದಕ್ಕಿಂತ ಪಕ್ಕಪಕ್ಕ ಕತ್ತಲಲ್ಲಿ, ಒಟ್ಟಿಗೆ ಎರಡು ಗಂಟೆಗು ಹೆಚ್ಚು ಸಮಯ ಪಾಪ್ ಕಾರ್ನ್ ಮೆಲ್ಲುತ್ತ, ಕೋಕ್ ಹೀರುತ್ತ, ಕೈ ಕೈ ಹಿಡಿದು ಕೂತಿದ್ದೆವು ಎಂಬ ನೆನಪು ನಿಮಗೆ ತುಂಬಾ ಕಾಲ ಕಾಡುತ್ತದೆ.

ಡ್ಯಾನ್ಸ್

Romantic Things To Do Together On Valentine's day

ಸಂಗಾತಿಗಳು ಪರಸ್ಪರ ಡಾನ್ಸ್ ಪ್ರಿಯರಾಗಿದ್ದರೆ, ಇದಕ್ಕಿಂತ ಒಳ್ಳೆಯ ಆಲೋಚನೆ ಇನ್ನಿಲ್ಲ. ಡ್ಯಾನ್ಸ್ ಬರದೆ ಇರುವವರು ಸಹ ಡ್ಯಾನ್ಸ್ ಮಾಡಬಹುದು. ಸುಮ್ಮನೆ ನಿಮ್ಮಿಬ್ಬರ ನೆಚ್ಚಿನ ಹಾಡನ್ನು ಹಾಕಿ ಕುಣಿಯಿರಿ. ನೋಡಿ ನಿಮ್ಮ ದೇಹಗಳು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು.

ಡಿನ್ನರ್

Romantic Things To Do Together On Valentine's day

ಪ್ರೇಮಿಗಳ ದಿನವನ್ನು ಆಚರಿಸಲು ಇದು ಸಹ ಒಂದು ಉತ್ತಮವಾದ ಆಲೋಚನೆ. ಒಂದು ಒಳ್ಳೆಯ ರೊಮ್ಯಾಂಟಿಕ್ ಆಗಿರುವ ಹೋಟೆಲ್ ಆರಿಸಿ. ಅಲ್ಲಿಗೆ ನಿಮ್ಮ ಸಂಗಾತಿಯನ್ನು ಬರ ಹೇಳಿ. ಸಾಕು, ನಿಮ್ಮ ಸಂಗಾತಿ ಬಂದು ನಿಮ್ಮನ್ನು ಒಮ್ಮೆ ಅಪ್ಪಿಕೊಂಡು, ಡಿನ್ನರ್‌ಗೆ ನಗೆಯ ಬೆಳದಿಂಗಳನ್ನು ಚೆಲ್ಲುತ್ತಾರೆ. ಪರಸ್ಪರ ಮಾತನಾಡಲು, ಹಳೆಯ ನೆನಪುಗಳನ್ನು ಮತ್ತು ಮುಂದಿನ ಕನಸುಗಳನ್ನು ಹಂಚಿಕೊಳ್ಳಲು ಇದು ಒಳ್ಳೆಯ ಆಲೋಚನೆ. ಚುಕ್ಕಿ ಚಂದ್ರಮನಲ್ಲೂ ನಿನ್ನನ್ನೇ ಹುಡುಕುತ್ತಾ...

ಹಂಚಿಕೊಳ್ಳಿ

Romantic Things To Do Together On Valentine's day

ಒಂದು ಫ್ರೂಟ್ ಸಲಾಡ್ ಅಥವಾ ಐಸ್ ಕ್ರಿಮ್, ಮಾಖೋಹಾಲ್ ಹೀಗೆ ನೀವು ಇಷ್ಟಪಡುವ ಯಾವುದಾದರು ಒಂದು ತಿನಿಸು ಅಥವಾ ಪಾನೀಯವನ್ನು ಒಂದೇ ಒಂದು ಆರ್ಡರ್ ಮಾಡಿ. ಪರಸ್ಪರ ಹಂಚಿಕೊಂಡು ತಿನ್ನಿ. ಆದಷ್ಟು ಸಮಯ ತೆಗೆದುಕೊಳ್ಳಬಹುದಾದ ತಿಂಡಿ ಅಥವಾ ಪಾನೀಯ ಇದ್ದಷ್ಟು ಹೆಚ್ಚು ಕಾಲ ಕಳೆಯಬಹುದು. ಈ ಪ್ರೇಮಿಗಳ ದಿನಕ್ಕೆ ಇದು ಸಹ ಒಂದು ಒಳ್ಳೆಯ ಆಲೋಚನೆಯಾಗಿರುತ್ತದೆ. ತಡ ಮಾಡದೆ ಇವುಗಳಲ್ಲಿ ಯಾವುದಕ್ಕಾದರು ಒಂದಕ್ಕೆ ಅಥವಾ ನಿಮ್ಮದೆ ಆದ ಪ್ರತ್ಯೇಕ ಯೋಜನೆಗೆ ಸಿದ್ಧರಾಗಿ. ಪ್ರೇಮಿಗಳ ದಿನದ ಶುಭಾಶಯಗಳು.

English summary

Romantic Things To Do Together On Valentine's day

What are your plans for Valentine's day? Well, there are so many romantic things to do together on that day. If you are running out of ideas, just take a look at this post and get going. If you wish to inject enough romance into your love life, valentine's day is the right day. Don't wait for any other day!
Story first published: Thursday, February 12, 2015, 14:51 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more