For Quick Alerts
ALLOW NOTIFICATIONS  
For Daily Alerts

ಅಮ್ಮಾ ಊರು ಏನೇ ಅಂದರೂ ನೀನು ನನ್ನ ದೇವರು...

ಭೂಮಿಗೆ ಬಂದ ಮಗು ಮಾತನಾಡಲು ಕಲಿಯುವುದೇ ಅಮ್ಮ ಎನ್ನುವ ಪದದಿಂದ. ಒಂದು ಹಂತದಲ್ಲಿ ಆಕೆ ಮಕ್ಕಳಿಗೆ ಪೋಷಕಿಯಾದರೆ ಇನ್ನೊಂದು ಹಂತದಲ್ಲಿ ಆಕೆ ಸ್ನೇಹಿತೆಯಾಗುತ್ತಾಳೆ. ಮಕ್ಕಳಿಗೆ ಆಕೆ ಸರಿಯಾದ ದಾರಿಯನ್ನು ತೋರಿಸಿಕೊಡುತ್ತಾಳೆ.

By Hemanth
|

ಅಮ್ಮಾ ಊರು ಏನೇ ಅಂದರೂ ನೀನು ನನ್ನ ದೇವರು... ಎನ್ನುವ ಜನಪ್ರಿಯ ಹಾಡನ್ನು ಕನ್ನಡ ನಾಡಿನ ಪ್ರತಿಯೊಬ್ಬರು ಕೇಳಿರುತ್ತಾರೆ. ಅಮ್ಮನ ಬಗ್ಗೆ ಬಂದಿರುವಂತಹ ಹಾಡುಗಳು ಹಾಗೂ ಸಿನಿಮಾಗಳು ಹಲವಾರು. ಅಮ್ಮನನ್ನು ವರ್ಣಿಸಲು ಅಸಾಧ್ಯ. ಹುಟ್ಟಿದಾಗಿನಿಂದ ಬೆಳೆದು ದೊಡ್ಡವರಾಗುವ ತನಕ ಪ್ರತಿಯೊಂದು ಹಂತದಲ್ಲೂ ಅಮ್ಮ ನಮಗೆ ನೆರವಾಗುತ್ತಾಳೆ. ತನ್ನ ಕಷ್ಟಗಳನ್ನು ನುಂಗಿಕೊಂಡು ಮಕ್ಕಳ ಕಷ್ಟವನ್ನು ನಿವಾರಿಸಲು ಮುಂದಾಗುತ್ತಾಳೆ. ಈತನಿಗೆ ಎರಡೂ ಕೈಗಳಿಲ್ಲ, ಆದರೆ ತಾಯಿಯನ್ನು ಮಗುವಿನಂತೆ ಸಾಕುತ್ತಿದ್ದಾನೆ!

Mother

ತಾಯಿಯ ಪ್ರೀತಿ, ಆಕೆ ಕಲಿಸಿದ ಶಿಸ್ತು ಮತ್ತು ಹೊರಜಗತ್ತಿನಿಂದ ಆಕೆ ನಮ್ಮನ್ನು ರಕ್ಷಿಸುವಂತಹ ರೀತಿ ಅದ್ಭುತವಾಗಿರುವಂತದ್ದಾಗಿದೆ. ಭೂಮಿಗೆ ಬಂದ ಮಗು ಮಾತನಾಡಲು ಕಲಿಯುವುದೇ ಅಮ್ಮ ಎನ್ನುವ ಪದದಿಂದ. ಒಂದು ಹಂತದಲ್ಲಿ ಆಕೆ ಮಕ್ಕಳಿಗೆ ಪೋಷಕಿಯಾದರೆ ಇನ್ನೊಂದು ಹಂತದಲ್ಲಿ ಆಕೆ ಸ್ನೇಹಿತೆಯಾಗುತ್ತಾಳೆ. ಮಕ್ಕಳಿಗೆ ಆಕೆ ಸರಿಯಾದ ದಾರಿಯನ್ನು ತೋರಿಸಿಕೊಡುತ್ತಾಳೆ. ಅಮ್ಮ ಜೀವನದಲ್ಲಿ ಯಾವೆಲ್ಲಾ ಪಾತ್ರ ವಹಿಸುತ್ತಾಳೆ ಎನ್ನುವುದರ ಬಗ್ಗೆ ನಿಮಗೆ ಈಗಲೇ ತಿಳಿದಿರಬಹುದು. ಆದರೂ ತಾಯಿಯ ಮಹತ್ವ ಸಾರುವ ಲೇಖನವನ್ನು ನಿಮ್ಮ ಮುಂದಿಡಲಾಗಿದೆ.....

ಆಕೆಗೆ ರಾತ್ರಿ ಕೆಟ್ಟ ಕನಸುಗಳು ಬಿದ್ದಾಗ...

ಆಕೆಗೆ ರಾತ್ರಿ ಕೆಟ್ಟ ಕನಸುಗಳು ಬಿದ್ದಾಗ...

ಬಾಲ್ಯದಲ್ಲಿ ನೀವು ನೆರೆಯ ಮಕ್ಕಳೊಂದಿಗೆ ಜಗಳವಾಡಿಕೊಂಡು ಬಂದು ತಾಯಿಯಲ್ಲಿ ದೂರು ಸಲ್ಲಿಸಿದಾಗ ಆಕೆ ಬಂದು ನಿಮ್ಮ ಪರ ಅವರೊಂದಿಗೆ ಜಗಳವಾಡಿದ್ದಾಳೆ. ರಾತ್ರಿ ಕೆಟ್ಟ ಕನಸುಗಳು ಬಿದ್ದಾಗ ನೀವು ಆಕೆಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾ ಇದ್ದೀರಿ. ಆಕೆ ಯಾವಾಗಲೂ ಮಕ್ಕಳಿಗೆ ರಕ್ಷಕಿಯಾಗಿರುತ್ತಾಳೆ.

ನೋವನ್ನು ಓಡಿಸುವಾಕೆ

ನೋವನ್ನು ಓಡಿಸುವಾಕೆ

ಶಾಲೆಯಲ್ಲಿ ಬಿದ್ದು ಗಾಯಗೊಂಡಾಗ ಆಕೆ ನಿಮ್ಮ ಗಾಯದ ಬಗ್ಗೆ ಸಂಪೂರ್ಣ ಗಮನಹರಿಸುತ್ತಾಳೆ. ಜ್ವರದಿಂದ ಬಳಲುವಾಗ ಅಥವಾ ಇನ್ಯಾವುದೇ ಅನಾರೋಗ್ಯದ ಸಮಯದಲ್ಲಿ ಆಕೆ ನಿಮ್ಮ ಜತೆಗಿರುತ್ತಾಳೆ. ಹದಿಹರೆಯದಲ್ಲಿ ಪ್ರೇಮದಲ್ಲಿ ಬಿದ್ದು ಸಂಬಂಧ ಮುರಿದು ಬಿದ್ದಾಗ ತಾಯಿಯ ಹೆಗಲಿಗೆ ತಲೆಯಿಟ್ಟು ಅಳುತ್ತೀರಿ. ಪ್ರತೀ ಸಲ ಆಕೆಯ ಹೃದಯ ಮುರಿದರೂ ಅದನ್ನಾಕೆ ತೋರಿಸಿಕೊಡುವುದಿಲ್ಲ.

ಬೇಡಿಕೆ ಈಡೇರಿಸುವಾಕೆ

ಬೇಡಿಕೆ ಈಡೇರಿಸುವಾಕೆ

ಸ್ನೇಹಿತರೊಂದಿಗೆ ರಜೆಯಲ್ಲಿ ಸುತ್ತಾಡಲು ಹೋಗಲು ನೀವು ತಂದೆಯಲ್ಲಿ ಹಣ ಕೇಳಿದರೂ ಅವರು ನೀಡಿರಲಿಕ್ಕಿಲ್ಲ. ಆದರೆ ತಾಯಿ ಮಾತ್ರ ಮುಂದೆ ಬಂದು ತಂದೆಗೆ ಎಲ್ಲವನ್ನು ವಿವರಿಸಿ ಹಣ ತೆಗೆಸಿಕೊಡುತ್ತಾ ಇದ್ದದ್ದು ನಿಮಗೆ ನೆನಪಿರಬಹುದು.

ಅಡುಗೆ ಮಾಡಿಕೊಡುವಾಕೆ

ಅಡುಗೆ ಮಾಡಿಕೊಡುವಾಕೆ

ತಾಯಿ ಯಾವಾಗಲೂ ತನ್ನ ಮಗನಿಗೆ ಅಡುಗೆಯವಳಾಗಿ ಕೆಲಸ ಮಾಡುತ್ತಾಳೆ. ಮಧ್ಯರಾತ್ರಿ ವೇಳೆ ನೀವು ಮನೆಗೆ ಬಂದಾಗ ಬಿಸಿಬಿಸಿಯಾದ ಅಡುಗೆ ಮಾಡಿಕೊಡುವಾಕೆ ತಾಯಿಯಲ್ಲದೆ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಆ ದಿನಗಳನ್ನು ನೀವು ಖಂಡಿತವಾಗಿಯೂ ಕಳಕೊಳ್ಳಲಿದ್ದೀರಿ.

ನಿಮಗಾಗಿ ಕಾಯುವಾಕೆ

ನಿಮಗಾಗಿ ಕಾಯುವಾಕೆ

ನೀವು ಕಚೇರಿಯಿಂದ ಬರುವಾಗ ಅಥವಾ ಯಾವುದೋ ಪಾರ್ಟಿಗೆ ಹೋಗಿ ಬರುವಾಗ ಎಷ್ಟೇ ಹೊತ್ತಾದರೂ ಕೂಡ ತಾಯಿ ನಿಮಗಾಗಿ ಕಾಯುತ್ತಾ ಕುಳಿತಿರುತ್ತಾಳೆ. ಆಕೆ ಎಷ್ಟು ಬಳಲಿದ್ದಾಳೆ ಮತ್ತು ಊಟ ಮಾಡಿದ್ದಾಳೆಯಾ ಎಂದು ನೀವು ಯಾವತ್ತಾದರೂ ಕೇಳಿದ್ದೀರಾ?

ಆಕೆಯನ್ನು ವಿಲನ್ ರೀತಿ ನೋಡಬೇಡಿ

ಆಕೆಯನ್ನು ವಿಲನ್ ರೀತಿ ನೋಡಬೇಡಿ

ಕೆಲವೊಂದು ಸಂದರ್ಭದಲ್ಲಿ ಹಲವಾರು ಮಂದಿಗೆ ತಾಯಿ ವಿಲನ್ ಆಗುತ್ತಾಳೆ. ಆದರೆ ಆಕೆ ಹೀಗೆ ಯಾಕೆ ಮಾಡಿದ್ದಾಳೆಂದು ನಿಮಗೆ ತಿಳಿಯುವ ಹೊತ್ತಿಗೆ ಆಕೆಯನ್ನು ಕಳೆದುಕೊಂಡಿರುತ್ತೀರಿ ಅಥವಾ ಕ್ಷಮೆಯಾಚಿಸುವಂತಹ ಪರಿಸ್ಥಿತಿಯಲ್ಲಿ ನೀವು ಇರುವುದಿಲ್ಲ. ಆಕೆ ಇನ್ನೂ ನಿಮ್ಮ ಜೀವನದಲ್ಲಿ ಇದ್ದರೆ ಆಕೆಯ ಬಗ್ಗೆ ಗಮನಹರಿಸಿ ಮತ್ತು ಆಕೆಯನ್ನು ವಿಲನ್ ರೀತಿ ನೋಡಬೇಡಿ.

ತಾಯಿ ಸ್ನೇಹಿತೆ

ತಾಯಿ ಸ್ನೇಹಿತೆ

ನೀವು ಹದಿಹರೆಯಕ್ಕೆ ತಲುಪುತ್ತಾ ಇರುವಂತೆ ತಾಯಿ ನಿಮ್ಮ ಸ್ನೇಹಿತೆಯಾಗುತ್ತಾಳೆ. ತಾಯಿಯೊಂದಿಗೆ ನಿಮ್ಮ ಕನಸುಗಳು ಹಾಗೂ ಯೋಚನೆಗಳನ್ನು ಹಂಚಿಕೊಳ್ಳಬಹುದಾಗಿದೆ. ಆಕೆ ನಿಮ್ಮೆಲ್ಲಾ ಕನಸುಗಳು ಹಾಗೂ ಯೋಜನೆಗಳನ್ನು ಕಿವಿಕೊಟ್ಟು ಕೇಳುತ್ತಾಳೆ. ಆಕೆ ಯಾವುದನ್ನೂ ಅರ್ಥ ಮಾಡಿಕೊಳ್ಳುತ್ತಿಲ್ಲವೆಂದು ಭಾವಿಸಬೇಡಿ.

English summary

What Does Being A ‘Mother’ Mean To A Man?

There is a popular phrase about motherhood which says, “God can’t be everywhere, that’s why he has created a mother”. This is enough to describe the word 'mother’. The person who wipes out your tears while you’re in distress; the person who encourages you to go along no matter how many difficulties you face in life; Mother is the person whom God himself has sent here.
X
Desktop Bottom Promotion