For Quick Alerts
ALLOW NOTIFICATIONS  
For Daily Alerts

ಈ ಮ್ಯಾರೇಜ್ ಕಿಲ್ಲರ್ಸ್ ಬಗೆ ಎಚ್ಚರವಾಗಿರಿ!

|

ಮ್ಯಾರೇಜ್ ಕಿಲ್ಲರ್ಸ್ ಬಗೆ ಕೇಳಿದ್ದೀರಾ? ಗೊತ್ತಿಲ್ಲ ಅಂದರೆ ಆ ಮ್ಯಾರೀಜ್ ಕಿಲ್ಲರ್ಸ್ ಯಾರು ಅನ್ನುವುದು ಮದುವೆಯಾದವರು ಹಾಗೂ ಮದುವೆ ಆಗಬೇಕೆಂದು ಆಲೋಚನೆ ನಡೆಸುತ್ತಿರುವವರು ತಿಳಿದುಕೊಳ್ಳುವುದು ಒಳ್ಳೆಯದು.

ವಿಚ್ಛೇದನ, ಅನೈತಿಕ ಸಂಬಂಧ, ದಂಪತಿಗಳ ನಡುವೆ ಸದಾ ಜಗಳ ಈ ರೀತಿ ದಾಂಪತ್ಯದಲ್ಲಿ ಬಿರುಕು ಉಂಟಾಗಲು ಯಾರು ಕಾರಣ ಅನ್ನುವುದು ಗೊತ್ತೇ? ನಮ್ಮಲ್ಲೇ ಇರುವ ಮ್ಯಾರೇಜ್ ಕಿಲ್ಲರ್ಸ್! ಸಾಕಷ್ಟು ಬಾರಿ ಗಂಡ-ಹೆಂಡತಿ ಬೇರೆಯಾಗಲು ಮೂರನೇಯ ವ್ಯಕ್ತಿ ಕಾರಣ ಎಂದು ಸುಲಭದಲ್ಲಿ ಬೊಟ್ಟು ಮಾಡುತ್ತೇವೆ. ಈ ಮ್ಯಾರೇಜ್ ಕಿಲ್ಲರ್ಸ್ ನಮ್ಮಲ್ಲಿ ಇಲ್ಲದಿದ್ದರೆ trust me ನಿಮ್ಮಿಬ್ಬರನ್ನು ವಿಧಿಯಿಂದಲೂ ದೂರಮಾಡಲು ಸಾಧ್ಯವಿಲ್ಲ. ಇಷ್ಟೆಲ್ಲಾ ಹೇಳಿದ ಮೇಲೆ ಸಂಬಂಧವನ್ನು ಕೊಲ್ಲುವ ಕಟುಕರು ಯಾರು ಎಂದು ತಿಳಿಯಬೇಡವೇ? ಸುಂದರ ದಾಂಪತ್ಯವನ್ನು ಹಾಳು ಮಾಡುವ ಕೊಲೆಕಟುಕರು ಯಾರು ಎಂದು ನೋಡೋಣ ಬನ್ನಿ:

ಈಗೋ (ego)

ಈಗೋ (ego)

ದಂಪತಿಗಳ ನಡುವೆ ಈಗೋ ಒಂದು ಇದ್ದು ಬಿಟ್ಟರೆ ಮುಗಿಯಿತು. ನಾನೇ ಸರಿ ಅನ್ನುವ ಈಗೋ ಸಂಬಂಧವನ್ನು ಹಾಳು ಮಾಡುವ ಮೊದಲ ಅಸ್ತ್ರ. ಸಂಸಾರ ಎಂಬ ಆಟದಲ್ಲಿ ಇಬ್ಬರೂ ಗೆಲ್ಲಬೇಕು. ಒಬ್ಬರು ಗೆದ್ದು, ಇನ್ನೊಬ್ಬರು ಸೋತರೆ ಜೀವನ ಕಷ್ಟ.

ಸಂಶಯ

ಸಂಶಯ

ಸಂಶಯ ಅನ್ನುವುದು ಕ್ಯಾನ್ಸರ್ ರೋಗದಂತೆ. ಜೀವನದ ನೆಮ್ಮದಿಯನ್ನೇ ಹಾಳು ಮಾಡಿ ಬಿಡುತ್ತದೆ. ನಿಮ್ಮ ಬಾಳಸಂಗಾತಿಗೆ ನಿಮ್ಮ ಮೇಲೆ ಸಂಶಯ ಬರುವಂತೆ ಯಾವತ್ತೂ ನಡೆದುಕೊಳ್ಲಬೇಡಿ. ನೀವು ಕೂಡ ಅವರ ಮೇಲೆ ಸಂಶಯಪಡಬೇಡಿ.

ಮಾತುಕತೆ ಇಲ್ಲದಿರುವುದು

ಮಾತುಕತೆ ಇಲ್ಲದಿರುವುದು

ಎಷ್ಟೋ ಸಂಸಾರಗಳಲ್ಲಿ ಗಂಡ-ಹೆಂಡತಿಯ ನಡುವೆ ಮಾತುಕತೆ ಇರುವುದಿಲ್ಲ. ಸಮಾಜದ ಕಣ್ಣಿಗಷ್ಟೇ ಗಂಡ-ಹೆಂತಿ, ಮನೆಯಲ್ಲಿ ಇಬ್ಬರು ಜೊತೆಯಲ್ಲಿ ಕುಳಿತು ತಮ್ಮ ಸುಖ, ದುಃಖಗಳನ್ನು ಹಂಚಿಕೊಳ್ಳುವುದೇ ಇಲ್ಲ. ಗಂಡ ಹೆಂಡತಿಯ ನಡುವೆ ಸಂವಹನ ಇಲ್ಲದಿದ್ದರೆ ದಾಂಪತ್ಯವೆಂಬ ಬದುಕಿನ ಕಟ್ಟಡವು ಭದ್ರ ತಳವಿಲ್ಲದೆ ಕುಸಿದು ಬೀಳಬಹುದು.

 ಸಮಯ

ಸಮಯ

ಈಗೀನ ಆಧುನಿಕ ಜೀವನಶೈಲಿಯಲ್ಲಿ ಹೆಚ್ಚಿನ ದಂಪತಿಗಳು ಎದುರಿಸುತ್ತಿರುವ ಅತೀ ದೊಡ್ಡ ಸಮಸ್ಯೆಯೆಂದರೆ ಸಮಯದ ಅಭಾವ! ಇಬ್ಬರು ಜೊತೆಯಲ್ಲಿ ಕಳೆಯಲು ಸಮಯವೇ ಸಿಗುವುದಿಲ್ಲ. ಶಿಫ್ಟ್ ವರ್ಕ್, ಅದೀಕ ಕೆಲಸದ ಒತ್ತಡ, ಕೆರಿಯರ್ ಇವುಗಳ ಜೊತೆಗೆ ಬಾಳಸಂಗಾತಿಗೂ ಸ್ವಲ್ಪ ಸಮಯವನ್ನು ಮೀಸಲಿಡಲು ಮರೆಯಬೇಡಿ. ಈಗ ನೀವು ತುಂಬಾ ಬ್ಯೂಸಿಯಾದರೆ ಮುಂದೊಂದು ದಿನ ನಿಮ್ಮ ಕನಸ್ಸನ್ನು ನೀವು ತಲುಪಿ ಅದರ ಖುಷಿಯನ್ನು ಹಂಚಿಕೊಳ್ಳಬೇಕೆಂದು ಬಯಸಿದಾಗ ಸಂಗಾತಿ ಜೊತೆಯಲ್ಲಿರುವುದಿಲ್ಲ.

 ಅಭದ್ರತೆ

ಅಭದ್ರತೆ

ಮಹಿಳೆಯರು ತಮ್ಮ ಪುರುಷ ನಮಗೆ ಎಲ್ಲಾ ರೀತಿಯಲ್ಲೂ ರಕ್ಷಣೆಯನ್ನು ನೀಡಬೇಕೆಂದು ಬಯಸುತ್ತಾರೆ. ಮನೆಯವರ ಮುಂದೆ, ಫ್ರೆಂಡ್ಸ್ ಮುಂದೆ ಅವಳನ್ನು ಬೈಯಬೇಡಿ, ಹೀಯಾಳಿಸಬೇಡಿ. ಅವಳಿಗೆ ಎಲ್ಲಾ ಸಮಯದಲ್ಲಿ ನಿಮ್ಮ ಬೆಂಬಲ ಇರುತ್ತದೆ ಎಂದು ಧೈರ್ಯ ತುಂಬಿ.

ಕೊಂಕು ನುಡಿ

ಕೊಂಕು ನುಡಿ

ಕೆಲವರಿಗೆ ಒಂದು ಕೆಟ್ಟ ಅಭ್ಯಾಸವಿರುತ್ತದೆ. ತನ್ನ ಬಾಳ ಸಂಗಾತಿ ಏನೇ ಮಾಡಿದರೂ ತಪ್ಪು ಕಂಡು ಹಿಡಿಯುವುದು ಕೊಂಕು ನುಡಿಯುವುದು. ಈ ಅಭ್ಯಾಸ ಕೆಲ ಹೆಂಡತಿಯರಲ್ಲಿರುತ್ತದೆ, ಕೆಲ ಗಂಡಂದಿರಲ್ಲಿ ಕೂಡ ಇರುತ್ತದೆ. ಸುಂದರ ಸಂಸಾರ ಬೇಕೆನ್ನುವವರು ಈ ಅಭ್ಯಾಸವನ್ನು ಬಿಡುವುದು ಒಳ್ಳೆಯದು.

ಕೆಟ್ಟ ಪದಗಳು

ಕೆಟ್ಟ ಪದಗಳು

ಹೇಳಿದ ಮಾತನ್ನು ತಿರುಗಿಸಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಮಾತು, ನಿಮ್ಮ ಗಂಡ/ಹೆಂಡತಿಯ ಮನಕ್ಕೆ ಘಾಸಿ ಉಂಟುಮಾಡದಿರಲಿ.

ಮನೆಯವರ ಮಧ್ಯ ಪ್ರವೇಶ

ಮನೆಯವರ ಮಧ್ಯ ಪ್ರವೇಶ

ಗಂಡ-ಹೆಂಡತಿಯ ನಡುವೆ ಏನಾದರೂ ವೈಮನಸ್ಸು ಬಂದರೆ ಅದನ್ನು ಮನೆಯವರ ತನಕ ತೆಗೆದುಕೊಂಡು ಹೋಗಬೇಡಿ. ನೀವೇ ಪರಿಹರಿಸಿಕೊಳ್ಳಿ, ಫ್ರೆಂಡ್ಸ್ ಮನೆಯವರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ಮತ್ತಷ್ಟು ಕೆಟ್ಟದಾಗಬಹುದು.

ಸಾಂಸ್ಕೃತಿಕ ಕಲಹ

ಸಾಂಸ್ಕೃತಿಕ ಕಲಹ

ಬೇರೆ-ಬೇರೆ ಧರ್ಮದವರು ಪ್ರೀತಿಸಿ ಮದುವೆಯಾದರೆ ತನ್ನ ಧರ್ಮದ ಹೆಸರಿನಲ್ಲಿ ಕಚ್ಚಾಡಬಾರದು. ಜಾತಿ ಬೇರೆಯಾಗಿದ್ದರೆ ಮನೆಯವರ ವಿರುದ್ಧವೂ ಇರುತ್ತದೆ. ಅಂತದರಲ್ಲಿ ಮದುವೆಯಾದ ಮೇಲೆ ಧರ್ಮ, ಜಾತಿಯ ಹೆಸರಿನಲ್ಲಿ ಜಗಳವಾಡುತ್ತಿದ್ದರೆ ಉರಿಯುವ ಬೆಂಕಿಗೆ ಮನೆಯವರು ತುಪ್ಪ ಸುರಿದು ನಿಮ್ಮನ್ನು ಭಷ್ಮ ಮಾಡಿ ಬಿಡುತ್ತಾರೆ. ಪ್ರೀತಿಯ ಮುಂದೆ ಜಾತಿ, ಧರ್ಮದ ಕಟ್ಟಳೆಯಿಲ್ಲ ಅನ್ನುವುದನ್ನು ಬಾಳಿ ತೋರಿಸಿ.

 ಜಿಗುಪ್ಸೆ

ಜಿಗುಪ್ಸೆ

ಅನೇಕ ಕಾರಣಗಳಿಂದ ಜಿಗುಪ್ಸೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಜಿಗುಪ್ಸೆ ಉಂಟಾದ ವ್ಯಕ್ತಿಗೆ ಸಾಂತ್ವಾನ ಬೇಕಾಗುತ್ತದೆ. ಸಂಸಾರದ ಮೇಲೆಯೇ ಜಿಗುಪ್ಸೆ ಉಂಟಾಗುವಂತೆ ನಡೆದುಕೊಳ್ಳಬಾರದು.

English summary

Top 10 Marriage Killers To Beware Of |Love And Relationship | ಮ್ಯಾರೇಜ್ ಕಿಲ್ಲರ್ ಬಗೆ ಎಚ್ಚರವಾಗಿರಿ | ಪ್ರೀತಿ ಮತ್ತು ಸಂಬಂಧ

Emotions like contempt, ego and suspicion kill a marriage. If you don't want your marriage to die a slow death, then please take a note of the following marriage killers.
 
X
Desktop Bottom Promotion