For Quick Alerts
ALLOW NOTIFICATIONS  
For Daily Alerts

ವ್ಯಾಲೆಂಟೈನ್ಸ್ ಡೇ ರೋಸ್ ಡೇಯಿಂದ ಪ್ರಾರಂಭ

|

ಫೆಬ್ರವರಿ ತಿಂಗಳು ಬಂತೆಂದರೆ ಪ್ರೇಮಿಗಳಿಗೆ ಎಲ್ಲಿಲ್ಲದ ಸಂಭ್ರಮ. ತನ್ನ ಪ್ರೀತಿಯ ವ್ಯಕ್ತಿಗೆ ಈ ಭಾರಿ ಏನು ಗಿಪ್ಟ್ ಕೊಡಬೇಕೆಂಬ ಗುಂಗಿನಲ್ಲಿಯೇ ಇರುತ್ತಾರೆ. ಇನ್ನು ಯಾರಿಗಾದರೂ ಪ್ರಪೋಸ್ ಮಾಡಬೇಕೆಂದು ಬಯಸುವವರು ಈ ಪ್ರೇಮಿಗಳ ದಿನದಲ್ಲಿ ಹೇಳಿಯೇ ಬಿಡುವೆ ಎಂದು ಮೊಂಡ ಧೈರ್ಯದಿಂದ ಹೇಳಲು ಕಾತುರಾಗಿ ಕಾಯುತ್ತಿರುತ್ತಾರೆ.

ಪ್ರೇಮಿಗಳ ದಿನವನ್ನು ಆಚರಿಸುವುದು ನಮ್ಮ ಸಂಸ್ಕೃತಿಗೆ ಸೂಕ್ತವಲ್ಲ ಎಂದು ಕೆಲವರು ವಿರೋಧಿಸುತ್ತಿದ್ದರೂ ಪ್ರತಿ ವರ್ಷ ಹಿಂದಿನ ವರ್ಷಕ್ಕಿಂತ ವಿಜೃಂಭಣೆಯಿಂದ ಪ್ರೇಮಿಗಳ ದಿನವನ್ನು ಆಚರಿಸುವುದನ್ನು ನಾವು ಕಾಣಬಹುದು.

ಈ ದಿನದ ಆಚರಣೆ ಈ ದಿನ ಅಂದರೆ ಫೆಬ್ರವರಿ 7ರಿಂದಲೇ ಆರಂಭವಾಗುತ್ತದೆ. ಮೊದಲು ರೋಸ್ ಡೇಯಿಂದ ಪ್ರಾರಂಭವಾಗಿ ವ್ಯಾಲೆಂಟೈನ್ಸ್ ಡೇವರೆಗೆ ಇರುತ್ತದೆ. ಅವುಗಳ ಬಗ್ಗೆ ಈ ಕೆಳಗೆ ಹೇಳಲಾಗಿದೆ ನೋಡಿ:

ಫೆಬ್ರವರಿ 7-ರೋಸ್ ಡೇ

ಫೆಬ್ರವರಿ 7-ರೋಸ್ ಡೇ

ಕೆಂಪು ರೋಸ್ ಅಥವಾ ರೋಸ್ ಹೂವಿನ ಗುಚ್ಛದ ಜೊತೆ ಗ್ರೀಟಿಂಗ್ ಕಾರ್ಡ್ ಇಟ್ಟು ತನ್ನ ಲವರ್ ಗೆ ಕೊಡುವುದು ರೋಸ್ ಡೇಯ ವಿಶೇಷ.

ಪ್ರತಿಯೊಂದು ರೋಸ್ ಬಣ್ಣ ಸಂಬಂಧದ ಬಗ್ಗೆ ಹೇಳುತ್ತದೆ. ಬಿಳಿ ರೋಸ್ ಪರಿಶುದ್ಧ ಪ್ರೇಮದ ಸಂಕೇತ. ಕೆಂಪು ರೋಸ್ ಗಾಢವಾದ ಪ್ರೀತಿಯ ಸಂಕೇತ. ನಿಮ್ಮ ಗಾಢವಾದ ಪ್ರೀತಿ ಮತ್ತು ಪರಿಶುದ್ಧವಾದ ಪ್ರೇಮದ ಸಂಕೇತ ಬಿಳಿ ಮತ್ತು ಕೆಂಪು ರೋಸ್ ಮಿಶ್ರಿತ ಬೊಕ್ಕೆ ಕೊಡಬಹುದು.

ಫೆ. 8-ಪ್ರಪೋಸ್ ಡೇ

ಫೆ. 8-ಪ್ರಪೋಸ್ ಡೇ

ಈ ದಿನ ನಮಗೆ ಇಷ್ಟವಾದ ವ್ಯಕ್ತಿಗೆ ನಮಗೆ ಅವರ ಮೇಲೆರುವ ಪ್ರೀತಿಯನ್ನು ವ್ಯಕ್ತ ಪಡಿಸುವ ದಿನ.

ಫೆ.9-ಚಾಕಲೇಟ್ ಡೇ

ಫೆ.9-ಚಾಕಲೇಟ್ ಡೇ

ಈ ದಿನ ತಾವು ಪ್ರೀತಿಸುತ್ತಿರುವ ವ್ಯಕ್ತಿಗೆ ಚಾಕಲೇಟ್ ಮತ್ತು ಗ್ರೀಟಿಂಗ್ ಕೊಟ್ಟು ಪರಸ್ಪರ ಧನ್ಯವಾದ ಹೇಳಿಕೊಳ್ಳುತ್ತಾರೆ. ಲವರ್ಸ್ ಗಳು ಮಾತ್ರವಲ್ಲ, ಮದುವೆಯಾದವರೂ ತನ್ನ ಬಾಳ ಸಂಗಾತಿಗೆ ಈ ಸ್ಪೆಷೆಲ್ ಗಿಫ್ಟ್ ಕೊಟ್ಟರೆ ಅವರು ಖಂಡಿತ ಖುಷಿಯಾಗುತ್ತಾರೆ.

ಫೆ.10-ಟೆಡ್ಡಿ ಡೇ

ಫೆ.10-ಟೆಡ್ಡಿ ಡೇ

ಈ ದಿನ ಬಾಯ್ಸ್ ತಮ್ಮ ಗರ್ಲ್ ಫ್ರೆಂಡ್ ಸಾಫ್ಟ್ ಟೆಡ್ಡಿ ಬೇರ್ ಅನ್ನು ಕೊಡುತ್ತಾರೆ. ಸಾಮಾನ್ಯವಾಗಿ ಹುಡುಗಿಯರಿಗೆ ಕರಡಿಯನ್ನು ಕಂಡರೆ ಭಯ ಪಡುತ್ತಾರೆ, ಟೆಡ್ಡಿ ಬೇರ್ ಕಂಡರೆ ಅಪ್ಪಿಕೊಳ್ಳುತ್ತಾರೆ.

ಫೆ11-ಪ್ರಾಮಿಸ್ ಡೇ

ಫೆ11-ಪ್ರಾಮಿಸ್ ಡೇ

ಎಂದೆಂದಿಗೂ, ಯಾವತ್ತಿಗೂ ನಾನು ನಿನ್ನ ಜೊತೆಯಲ್ಲಿಯೇ ನಿನ್ನ ಸುಖ , ದುಃಖಗಳಲ್ಲಿ ಬಾಗಿಯಾಗುತ್ತೇನೆ ಎಂದು ಪ್ರಾಮಿಸ್ ಮಾಡುವ ದಿನ.

ಫೆ.12- ಹಗ್ ಡೇ

ಫೆ.12- ಹಗ್ ಡೇ

ನಮ್ಮ ಪ್ರೀತಿಯ ಅಪ್ಪುಗೆ ಅವರನ್ನು ನಾವು ಎಷ್ಟು ಪ್ರೀತಿಸುತ್ತಿದ್ದೇವೆ ಎಂಬ ಸಂದೇಶ ನೀಡುತ್ತದೆ.

ಫೆ.13-ಕಿಸ್ ಡೇ

ಫೆ.13-ಕಿಸ್ ಡೇ

ಕಿಸ್ ಡೇಯೆಂದು ವಿದೇಶದಲ್ಲಿ ಪ್ರೇಮಿಗಳು ಪರಸ್ಪರ ಚುಂಬಿಸುತ್ತಾರೆ. ಇನ್ನು ಇಲ್ಲಿ ಈ ದಿನವನ್ನು ಹೇಗೆ ಆಚರಿಸಬೇಕೆನ್ನುವುದು ನಿಮಗೆ ಬಿಟ್ಟದ್ದು.

ಫೆ. 14-ವ್ಯಾಲೆಂಟೈನ್ಸ್ ಡೇ

ಫೆ. 14-ವ್ಯಾಲೆಂಟೈನ್ಸ್ ಡೇ

ಪ್ರೇಮಿಗಳ ಸಡಗರ, ಸಂಭ್ರಮದ ಹಬ್ಬ ವ್ಯಾಲೆಂಟೈನ್ಸ್ ಡೇ. ನಿಮ್ಮ ಪ್ರೀತಿ ಶುದ್ಧವಾಗಿರಲಿ. ಪ್ರೀತಿ ಅಮರವಾಗಿರಲಿ, ಹ್ಯಾಪಿ ವ್ಯಾಲೆಂಟೈನ್ಸ್ ಡೇ.

English summary

Valentines Day Start From Rose Day | Love And Relationship | ವ್ಯಾಲೆಂಟೈನ್ಸ್ ಡೇ ರೋಸ್ ದಿನದಿಂದ ಪ್ರಾರಂಭ | ಪ್ರೀತಿ ಮತ್ತು ಸಂಬಂಧ

Valentine Week starts with a Rose Day. On the Rose Day, Lovers greet one another with lovely, crimson red roses. Take your partner to the romantic dinner or send a acknowledgement cards to a secret love.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more