7 ಜಗತ್ತ್ ಪ್ರಸಿದ್ಧ ಐತಿಹಾಸಿಕ ಲವ್ ಸ್ಟೋರಿ

Posted By:
Subscribe to Boldsky

ಪ್ರೀತಿ ಯಾರಿಗೆ, ಯಾವಾಗ ಹುಟ್ಟುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರೀತಿಯ ಮಾಯೆಗೆ ಸಿಕ್ಕಿ ಹಾಕಿಕೊಳ್ಳದೆ ವ್ಯಕ್ತಿಗಳು ತುಂಬಾ ಅಪರೂಪ. ಯುವ ಪ್ರೇಮಿಗಳನ್ನು ನೋಡಿದಾಗ ಹಿರಿಯರು "ನಮ್ಮ ಕಾಲ ಎಷ್ಟು ಚೆನ್ನಾಗಿತ್ತು, ಈಗೀನ ಮಕ್ಕಳು ಪ್ರೀತಿ, ಪ್ರೇಮವೆಂದು ಹಾಳಾಗಿ ಹೋಗಿದ್ದಾರೆ" ಎಂದು ಬೈಯ್ಯುತ್ತಾರೆ.

ಪ್ರೀತಿ ಅನ್ನುವುದು ಇವತ್ತು ನೆನ್ನೆ ಹುಟ್ಟಿದ್ದಲ್ಲ, ಅನಾದಿ ಕಾಲದಿಂದಲೂ ಇದೆ. ಪುರಾಣದಲ್ಲಿ ದುಷ್ಯಂತ-ಶಕುಂತಳಾ,  ರಾಧೆ- ಕೃಷ್ಣ ಹೀಗೆ ಅನೇಕ ಪುರಾಣ ಪ್ರೇಮ ಕಥೆಗಳನ್ನು ಕೇಳಿರುತ್ತೀರಾ.

ಇನ್ನು ರಾಜರ ಕಾಲದ ಪ್ರೇಮ ಕಥೆಗಳನ್ನು ಓದಿರುತ್ತೀರಿ.  ರಾಜ ಷಹಜಹಾನ್ ರಾಣಿ ಮುಮ್ತಾಜ್ ಳ ಮೇಲಿಟ್ಟ ಪ್ರೇಮದ ದ್ಯೋತಕವಾದ ತಾಜ್ ಮಹಲ್ ಜಗತ್ತ್ ಪ್ರಸಿದ್ಧವಾಗಿದೆ.  ಇಲ್ಲಿ ನಾವು  ಐತಿಹಾಸಿಕ ಪ್ರೇಮ ಕಥೆಗಳಿಂದ  ಆಯ್ದ  ಪ್ರಸಿದ್ಧ ಅಮರ ಪ್ರೇಮಿಗಳ ಬಗ್ಗೆ ಚಿತ್ರ ಮಾಹಿತಿ ನೀಡಿದ್ದೇವೆ ನೋಡಿ:

ದುಷ್ಯಂತ ಮತ್ತು ಶಕುಂತಲಾ ಕಥೆ

ದುಷ್ಯಂತ ಮತ್ತು ಶಕುಂತಲಾ ಕಥೆ

ದುಷ್ಯಂತ ಮತ್ತು ಶಕುಂತಲಾಳ ನಡುವೆ ಪ್ರಣಯಾಂಕುರವಾಗಿ ಕೊನೆಗೆ ಅವಳನ್ನು ಮರೆತು ಬಿಡುವ ದುಷ್ಯಂತ, ದುಷ್ಯಂತನ ಪ್ರೀತಿಯ ಕುಡಿಯನ್ನು ಹೊತ್ತು ಕಷ್ಟಪಡುವ ಶಕುಂತಾಳ ಈ ಕಥೆ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.

ರಾಣಿ ವಿಕ್ಟೋರಿಯಾ ಮತ್ತು ರಾಜ ಆಲ್ಬರ್ಟ್

ರಾಣಿ ವಿಕ್ಟೋರಿಯಾ ಮತ್ತು ರಾಜ ಆಲ್ಬರ್ಟ್

ಬ್ರಿಟನ್ ರಾಣಿ ವಿಕ್ಟೋರಿಯಾ ಮತ್ತು ರಾಜ ಆಲ್ಬರ್ಟ್ ಬಕ್ಕಿಂಗ್ ಹ್ಯಾಮ್ ಪ್ಯಾಲೆಸ್ ನಲ್ಲಿ ಬಾಳಿ ಮೊದಲ ರಾಜ-ರಾಣಿ. ರಾಣಿ ತನ್ನ ಡೈರಿಯಲ್ಲಿ ತಮ್ಮ ಪ್ರೇಮಕಾವ್ಯವನ್ನು ಬರೆದಿದ್ದಾರೆ.

 ಷಹಜಹಾನ್ ಮತ್ತು ಮುಮ್ತಾಜ್

ಷಹಜಹಾನ್ ಮತ್ತು ಮುಮ್ತಾಜ್

ಮುಮ್ತಾಜ್ ಳದು ಒಂದು ದುರಂತ ಕಥೆಯಾಗಿದ್ದರೂ ಷಹಜಹಾನ್ ಅವಳ ಮೇಲಿನ ಪ್ರೇಮಕ್ಕಾಗಿ ಕಟ್ಟಿಸಿದ ತಾಜ್ ಮಹಲ್ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿದೆ.

ನೆಪೋಲಿಯನ್ ಮತ್ತು ಜೋಸೆಫೈನೆ

ನೆಪೋಲಿಯನ್ ಮತ್ತು ಜೋಸೆಫೈನೆ

ನೆಪೋಲಿಯನ್ ನ ಕ್ರೂರ ಆಡಳಿತದ ಬಗ್ಗೆ ಸಾಕಷ್ಟು ಕೇಳಿದ್ದೇವೆ. ನೆಪೋಲಿಯನ್ ಕ್ರೂರಿಯಾಗಿದ್ದರೂ ತನ್ನ ಹೆಂಡತಿ ಜೋಸೆಫೈನೆಳನ್ನು ತುಂಬಾ ಪ್ರೀತಿಸುತ್ತಿದ್ದನು. ಅವಳಿಗೆ ಮಕ್ಕಳಾಗಾದ ಕಾರಣ ದೂರವಾದರು.

ಕ್ಲಿಯೋಪಾತ್ರಾ ಮತ್ತು ಮಾರ್ಕ್ ಆಂಟೆನಿ

ಕ್ಲಿಯೋಪಾತ್ರಾ ಮತ್ತು ಮಾರ್ಕ್ ಆಂಟೆನಿ

ಷೇಕ್ಸ್ ಪಿಯರ್ ಇವರಿಬ್ಬರ ಪ್ರೇಮವನ್ನು ಬಹಳ ರಸವತ್ತಾಗಿ ವರ್ಣಿಸಿದ್ದಾರೆ. ಇವರಿಬ್ಬರ ಪ್ರೀತಿ ಅಮರವಾಗಿದೆ.

ರೋಮಿಯೋ ಮತ್ತು ಜೂಲಿಯೆಟ್

ರೋಮಿಯೋ ಮತ್ತು ಜೂಲಿಯೆಟ್

ರೋಮಿಯೋ, ಜೂಲಿಯೆಟ್ ಪ್ರೇಮ ಕಥೆ ಕೇಳುತ್ತಿದ್ದರೆ ಮೈ ಜುಮ್ಮೆನ್ನುತ್ತದೆ. ಅವರಿಬ್ಬರು ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿ ಅಮರ ಪ್ರೇಮಿಗಳಾದರು.

ಸಲೀಂ ಮತ್ತು ಅನಾರ್ಕಲಿ

ಸಲೀಂ ಮತ್ತು ಅನಾರ್ಕಲಿ

ಇದು ಕೂಡ ಒಂದು ಪ್ರಸಿದ್ಧ ಐತಿಹಾಸಿಕ ಪ್ರೇಮ ಕಥೆ. ರಾಜ ಕುಮಾರ ಸಲೀಂ ತನ್ನ ಅರಮನೆಯ ಸೇವಕಿಯಲ್ಲಿ ಪ್ರೇಮದಲ್ಲಿ ಬೀಳುತ್ತಾನೆ. ರಾಜ ಮನೆತನದವರಿಗೆ ಸಹಿಸಲು ಸಾಧ್ಯವಾಗಲಿಲ್ಲ. ಸಲೀಂ ಅನ್ನು ಅನಾರ್ಕಲಿಯಿಂದ ದೂರ ಮಾಡಲು ರಾಜ ಅನಾರ್ಕಲಿಯನ್ನು ಜೀವಂತವಾಗಿ ಸಮಾಧಿ ಮಾಡಿದನು.

English summary

7 Historical Love Stories For V Day | Love And Relationship | ವ್ಯಾಲೆಂಟೈನ್ಸ್ ಡೇಗೆ ಐತಿಹಾಸಿಕ ಲವ್ ಸ್ಟೋರಿ | ಪ್ರೀತಿ ಮತ್ತು ಸಂಬಂಧ

There are many romantic love stories with a good as well as tragic ending from history. These historical love stories have a special space in the heart of millions worldwide. Love stories from around the world have become immortal.
Subscribe Newsletter