For Quick Alerts
ALLOW NOTIFICATIONS  
For Daily Alerts

ರವಿ ಬರೆದ ಸಾಲಿಗೆ ಸವಿಯ ಮರು ಸವಾಲು

By * ರವಿ ಮತ್ತು ಸವಿತಾ, ಉತ್ತರ ಕೆರೋಲಿನಾ, ಅಮೆರ�
|
Ravishankar and Savitha, North Carolina, USA
ಕೆಂಪು ಗುಲಾಬಿಯ ರಂಗಿನ ಬೆಡಗಿಗೆ
ಇಬ್ಬನಿ ಹನಿಯ ಜೇನಿನ ಸಿಂಚನ
ಹನಿ ಹನಿ ಜೇನಲಿ ಮೀಯುತ ಮಿಡಿದು
ಹೃದಯದ ಭಾವತರಂಗವು ಮೊರೆದು
ಉಕ್ಕಲು ಚಿಮ್ಮಿ ಮುತ್ತಿನ ತೊರೆಯು
ಝಲ್ಲನೆ ತಾಗಿ ಪ್ರೇಮದ ನಶೆಯು
ಮುತ್ತಿನ ಮತ್ತಿಗೆ ಸ್ಪಂದಿಸಿ ಒಲವು
ಗುಯ್ಯ್ಂಗರೆತಕ್ಕೂ ಮೂಡಿತು ಲಯವು
ದುಂಬಿಯು ಹೂವನು ಬರಸೆಳೆದಾಗ
ಕಣ್ಣಿನ ಅಂಚಲಿ ಬಯಕೆಯ ರಾಗ
ಮಧುವನು ಹೀರುತ ಮೈಮರೆತಾಗ
ಕಾಮನು ಬಿಲ್ಲನು ಹೂಡಿರುವಾಗ
ಸೃಷ್ಟಿಯ ಮೋಡಿಯ ಲೀಲೆಯಿದು
ಪ್ರೇಮದ ಹಬ್ಬಕೆ ನಾಂದಿಯಿದು

ರವಿ ಬರೆದ ಸಾಲಿಗೆ ಸವಿಯ ಮರು ಸವಾಲು, ಸವಿಯ ಸವಾಲಿಗೆ ರವಿಯ ಮತ್ತೊಂದು ಸಾಲು ಹೀಗೆ ನಡೆದ ಸಾಲು ಸವಾಲಿನ ಪ್ರೀತಿಯ ಸಂವಾದದಲ್ಲಿ ಮೂಡಿಬಂದದ್ದು "ಪ್ರೇಮದ ಹಬ್ಬ".

ಅಮೆರಿಕಾದ ಸಂಪಿಗೆ ಕನ್ನಡ ಕೂಟ ಕಳೆದ ವರ್ಷ ಪ್ರೇಮಿಗಳ ದಿನದಂದು 'ರೋಮ್ಯಾಂಟಿಕ್ ಜೋಡಿ' ಸ್ಪರ್ಧೆ ನಡೆಸಿತ್ತು. ದಂಪತಿಗಳು ವ್ಯಾಲಂಟೈನ್ಸ್ ಡೇ ಹೇಗೆ ಆಚರಿಸುತ್ತಾರೆ ಎಂಬುದನ್ನು ಅತ್ಯಂತ ಸೃಜನಶೀಲವಾಗಿ ಬರೆಯಬೇಕಾಗಿತ್ತು. ಆ ಸ್ಪರ್ಧೆಯಲ್ಲಿ ರವಿಶಂಕರ್ ಮತ್ತು ಸವಿತಾ ರವಿಶಂಕರ್ ಜೋಡಿ ಮೊದಲ ಬಹುಮಾನ ಗೆದ್ದಿತ್ತು.

ರವಿ ಮತ್ತು ಸವಿತಾ ದಂಪತಿಗಳು 'ಹಣದಿಂದ ಕೊಳ್ಳಲಾಗದ ವಸ್ತುಗಳು' ವಿಷಯವನ್ನು ಆಯ್ದುಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಮತ್ತು ಜಯಶಾಲಿಯಾಗಿದ್ದರು. ಆ ಸಂದರ್ಭದಲ್ಲಿ ದಂಪತಿಗಳಿಬ್ಬರು ಜೋಡಿಯಾಗಿಯೇ ಬರೆದ ಕವನ, ಪ್ರೇಮಿಗಳಿಗಾಗಿಯೇ ಇಲ್ಲಿ ಅರ್ಪಿಸಲಾಗಿದೆ. ಪ್ರೇಮಿಗಳಿಗೆ ಪ್ರೇಮದ ಶುಭಾಶಯಗಳು.

English summary

Things that money can't buy | Poem by Savitha Ravishankar | ರವಿ ಬರೆದ ಸಾಲಿಗೆ ಸವಿಯ ಮರು ಸವಾಲು

In 2011 Sampige Kannada Koota, USA had held a contest for most romantic couple. Ravishankar and Savitha Ravishankar from North Carolina won the 'Most Romantic Couple' title. Ravi and Savitha had chosen theme as 'things that money cant buy', that's when they wrote this poem together. Happy Valentine's Day.
Story first published: Tuesday, February 14, 2012, 12:47 [IST]
X
Desktop Bottom Promotion