For Quick Alerts
ALLOW NOTIFICATIONS  
For Daily Alerts

ಥತ್, ನಿನಗೆ ಕೆಂಪು ಸೀರೆ ಇಷ್ಟವೆಂದು ಗೊತ್ತಿರಲೇ ಇಲ್ಲ

By * ವಿದ್ಯಾಶಂಕರ ಹರಪನಹಳ್ಳಿ, ಟೂಲೂಸ್, ಫ್ರಾನ್
|
An ode to my lover
ಗೌರಿ ಎಂದಾಕ್ಷಣ ನೆನಪಾಯಿತು ನೋಡು, ಸೀತಾದೇವಿ ಹೆಸರಿಟ್ಟು ಕೊಂಡವರಿಗೆ, ಕೂತಾಗ ನೆಲಮುಟ್ಟುವ ಉದ್ದ ಜಡೆಯಿದ್ದವರಿಗೆ, ಬದುಕಲ್ಲಿ ಕಷ್ಟಗಳು ಹೆಚ್ಚಂತೆ... ನಿನಗೋ ಎರಡು ಅನ್ವಯ, ಬದುಕಲ್ಲಿ ಇಂತದೆಲ್ಲವನ್ನು ನಂಬದ ನಾನು... ಆ ಕ್ಷಣದಿಂದಲೇ ಆ ನಂಬಿಕೆಯನ್ನು ಗಾಢವಾಗಿ ಅಪ್ಪಿಕೊಂಡುಬಿಟ್ಟೆ. ಅದಕ್ಕೆಂದೇ ನಿನ್ನ ನಾನು ಕರೆಯುತ್ತಿದ್ದುದು ಗೌರಿ ಎಂದು. ಮೊದಮೊದಲು ನಿರಾಕರಿಸಿದರು ಕೊನೆಗೆ ನೀನು ಅದಕ್ಕೆ ಒಪ್ಪಿಕೊಂಡೆ ಮತ್ತು ಹೊಂದಿಕೊಂಡೆ. ಪ್ರೇಮಿಸುವವರ ಮನಸ್ಸು ಎಷ್ಟು ನಿರ್ಮಲವೋ ಅಷ್ಟೇ ಹುಚ್ಚು ಕಲ್ಪನೆಯ, ಮುದ್ದು ಮುಚ್ಚಟೆಯ ಗೂಡು!

ಊಫ್..! ಎರಡು ವರುಷ, ಎರಡು ನಿಮಿಷದಂತೆ ಕಳೆದು ಹೋಯಿತು. ನಾ ಬರೆದ ಕೆಟ್ಟ ಪದ್ಯಗಳನ್ನು ತಿದ್ದಿದೆ ಜೊತೆಜೊತೆಗೆ ನನ್ನ ಬದುಕನ್ನು. ನನಗೆ ಸತತ ಸೋಲಿನ ನಂತರ ಕೊನೆಗೂ ಕೆಲಸ ಸಿಕ್ಕಾಗ, ಸ್ವರ್ಗದಲ್ಲಿರುವ ನನ್ನ ಅಮ್ಮ ಬಿಟ್ಟರೆ ಹೆಚ್ಚು ಸಂತೋಷ ಪಟ್ಟಿದ್ದು ನೀನೆ. ಹೊಸದಾಗಿ ಶಾಲೆಗೆ ಸೇರುವ ಪುಟ್ಟ ಮಗುವಿನ ಹಾಗೆ ನನ್ನನು ಬಟ್ಟೆ ಅಂಗಡಿಗೆ ಕರೆದೊಯ್ದೊದೆ, ಶ್ರದ್ದೆಯಿಂದ ಆರಿಸಿ ಬಟ್ಟೆ ಕೊಡಿಸಿದೆ, ಸಿಹಿ ತಿನಿಸಿ ನನ್ನ ಗೆಲುವಿನಲ್ಲಿ ನೀನು ಭಾಗವಾದೆ. ಮೊದಲ ಸಂಬಳದಲ್ಲಿ ನಿನಗೆ ಪ್ರೀತಿಯಿಂದ ತಂದ ಸೀರೆಯನ್ನು ಸ್ವೀಕರಿಸಲು ಎಷ್ಟೊಂದು ಹಠಮಾಡಿದೆ ನೀನು... ಕೊನೆಗೆ ನಾನು ಗಂಡಸು ಎಂಬ ಅಹಂಕಾರ ಬಿಟ್ಟು ಕಣ್ಣೀರು ಹಾಕಿದಾಗಲೇ ನೀನು ಸೀರೆ ಸ್ವೀಕರಿಸಿ ಜೊತೆಗೆ ಬೋರಾಗುವಷ್ಟು ಉಳಿತಾಯದ ಪಾಠ ಮಾಡಿದೆ.

ಕ್ಷಮಿಸು! ಆ ದಿನ ಗೊತ್ತಾಗದೆ ಪೆದ್ದು ಪೆದ್ದಾಗಿ ಸೀಮಂತಕ್ಕೆ ತರುವ ಹಾಗೆ... ಹಸಿರು ಸೀರೆ ತಂದಿದ್ದೆ. ಎಷ್ಟೋ ದಿನಗಳ ನಂತರ ನನಗೆ ಗೊತ್ತಾಗಿದ್ದು ನಿನಗೆ ಕೆಂಪು ಬಣ್ಣ ಇಷ್ಟವೆಂದು. ಅದರೂ ನಿನ್ನ ಪ್ರೀತಿ ದೊಡ್ಡದು, ಸಂತೋಷದಿಂದ ಅದನ್ನುಟ್ಟು ನನ್ನೊಟ್ಟಿಗೆ ಸಂಭ್ರಮಿಸಿದೆ. ಆದರೂ ನಾನಾಗಿಯೇ ಒತ್ತಾಯ ಮಾಡಿ ಕೇಳುವವರೆಗೂ ಒಂದೇ ಒಗೆತಕ್ಕೆ ಸೀರೆ ಬಣ್ಣ ಬಿಟ್ಟಿದ್ದು, ಅರ್ಧಕ್ಕೆ ಅರ್ಧ ಶ್ರಿಂಕಾಗಿದ್ದು ನನಗೆ ಹೇಳಲೇ ಇಲ್ಲ. ಈಗಲೂ ನನ್ನ ಕಡೆಯಿಂದ ನಿನಗೆ ಒಂದು ಹಸಿರು... ಅಲ್ಲಲ್ಲ ಕೆಂಪು ಸೀರೆ ಬಾಕಿಯಿದೆ.

English summary

An ode to my lover | Love letter by Vidyashankar Harapanahalli | ಎರಡು ಹನಿ ಕಣ್ಣೀರು, ಬಿಕ್ಕಿನೊಂದಿಗೆ, ನಾನು | ವಿದ್ಯಾಶಂಕರ ಹರಪನಹಳ್ಳಿ ಪ್ರೇಮ ಪತ್ರ

An ode to my lover. The person who taught discipline, sincerity, dedication is none other than my lover. Though I am not married to you, I adore you forever. Love letter by Vidyashankar Harapanahalli.
Story first published: Saturday, February 11, 2012, 18:47 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more