For Quick Alerts
ALLOW NOTIFICATIONS  
For Daily Alerts

ಪಿಜ್ಜಾ ಹಟ್ ಗೆ ಹೋಗೋ ಪ್ರೇಮಿಗಳಿಗೆ ಕೆಂಪುಗುಲಾಬಿ

By ಮಂಜು
|
Pizza Hut, V'day Special
ವ್ಯಾಲೆಂಟಿನ್ ಡೇ ಎಂದ್ರೆ ಪ್ರೇಮಿಗಳಿಗೆ ಮಾತ್ರವಲ್ಲ ವ್ಯಾಪಾರಿಗಳಿಗೂ ಬಲು ಪ್ರೀತಿ. ಹೂವಿನಂಗಡಿ, ಗ್ರಿಟಿಂಗ್ಸ್ ಅಂಗಡಿಗಳಲ್ಲಿ ವ್ಯಾಪಾರ ಬಲುಜೋರು. ಗ್ರೀಟಿಂಗ್ ಅಂಗಡಿಗಳಲ್ಲಿ ಪ್ರೀತಿ ನಿವೇದನೆಯ ಕಾರ್ಡ್ ಗಳು ನೇತಾಡುತ್ತಿದ್ದರೆ, ಮಾರ್ಕೆಟ್ ನಲ್ಲಿ ನೋಡಿದರೆ ಹೃದಯಾಕಾರದ ಕೆಂಪು ಬಣ್ಣದ ಗೊಂಬೆಗಳು ಎಂತಹ ಅರಸಿಕನ ಗಮನವನ್ನು ಕೂಡ ಅದರತ್ತ ನೋಡುವತ್ತ ಮಾಡುತ್ತದೆ.

ಮೈ ವ್ಯಾಲೆಂಟೈನ್ , ಐ ಲವ್ ಯೂ ಇತ್ಯಾದಿ ಬರಹಗಳಿರುವ ಗ್ರೀಟಿಂಗ್ಸ್ ಗಳನ್ನು ಪ್ರೇಮಿಗಳು ಮುಗಿಬಿದ್ದು ಖರೀದಿಸುತ್ತಾರೆ. ಪ್ರೇಮಿಗಳ ದಿನಕ್ಕೆ ಎಲ್ಲೆಲ್ಲೂ ಇಂತಹ ವಿಶೇಷತೆಯಿರುತ್ತದೆ. ಬೇಕರಿಯಲ್ಲಿರುವ ಕೇಕ್ ನಲ್ಲಿ ಹೃದಯ ಮೂಡಿರುತ್ತದೆ.

ವಿದೇಶದಲ್ಲಿ ವ್ಯಾಲೆಂಟೈನ್ಸ್ ಡೇ ಸ್ಟೆಷಲ್ ಆಗಿ ಪಿಜ್ಜಾ ಹಟ್ ನಲ್ಲಿ 10,010 ಡಾಲರ್ ನ ಎಂಗೇಜ್ ಮೆಂಟ್ ಪ್ಯಾಕೇಜ್ ಇದೆ. ಈ ಸೌಲಭ್ಯ ಹತ್ತು ಜನರಿಗಷ್ಟೇ ಸೌಲಭ್ಯವಿದ್ದು ಪ್ರೇಮಿಗಳ ಪಿಜ್ಜಾ ಹಟ್ ನಲ್ಲಿ ತಮ್ಮ ಪ್ರೇಮಿಗಳ ದಿನವನ್ನು ಆಚರಿಸಬಹುದಾಗಿದೆ ಎಂಬ ಸುದ್ದಿ ಇತ್ತೀಚೆಗೆ ಓದಿದ್ದೆ.

ಇದೇ ರೀತಿ ನಮ್ಮ ಬೆಂಗ್ಳೂರು ಪಿಜ್ಜಾ ಹಟ್ ಗಳಲ್ಲಿ ಏನೇನು ವಿಶೇಷ ಇರಬಹುದು ಎಂದು ತಿಳಿಯಲು ನಾನು ಜಯನಗರ ಪಿಜ್ಜಾ ಹಟ್ ಗೆ ಪ್ರಯಾಣ ಬೆಳೆಸಿದೆ. ಹೆಚ್ಚಿನ ಪಿಜ್ಜಾ ಹಟ್ ಗಳಲ್ಲಿ ಪ್ರೇಮಿಗಳ ದಿನಕ್ಕೆ ಯಾವುದೇ ವಿಶೇಷತೆ ಇಲ್ಲವೆಂಬ ಉತ್ತರ ಬಂತು.

"ಪ್ರೇಮಿಗಳ ದಿನಕ್ಕೆ ಭಾರತದ ಪಿಜ್ಜಾ ಹಟ್ ನಲ್ಲಿ ಯಾವುದೇ ವಿಶೇಷವಿಲ್ಲ ಏಕೆಂದರೆ ಅದು ನಮ್ಮ ಸಂಸ್ಕೃತಿ ಅಲ್ಲ. ಆದ್ದರಿಂದ ಆ ದಿನ ಬಂದ ಪ್ರೇಮಿಗಳು ಗುಲಾಬಿಕೊಟ್ಟು ಸ್ವಾಗತಿಸುತ್ತೇವೆ" ಹೀಗಂತ ಪಿಜ್ಜಾ ಹಟ್ ಮ್ಯಾನೇಜರೊಬ್ಬರು ಹೇಳಿದರು.

ಪಿಜ್ಜಾವೂ ದೇಶಿ ಸಂಸ್ಕೃತಿಯಲ್ಲ ಎನ್ನಬೇಕೆಂದುಕೊಂಡವಳನ್ನು ಅಲ್ಲಿದ್ದ ಬಾಯಲ್ಲಿ ನಿರೂರಿಸುವ ಪಿಜ್ಜಾವೊಂದು ತಡೆಯಿತು.

English summary

A Rose Gift For Lover In Pizza Hut | V'day Special | ಪ್ರೇಮಿಗಳ ದಿನಕ್ಕೆ ಪಿಜ್ಜಾಹಟ್ ನೀಡುವ ಗುಲಾಬಿ | ವ್ಯಾಲೆಂಟೈನ್ಸ್ ಡೇ ಸ್ಪೆಷಲ್

Not only lovers, vendor also very much happy in this month. because they getting much profit in this special day. I had the curiosity what will be the special for v'day. I got special answer for my question. Take a look.
Story first published: Monday, February 13, 2012, 16:11 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more