Just In
- 1 hr ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 2 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 3 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 3 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತರಕಾರಿ ಮಿಶ್ರಿತ ರವಾ ಉಪ್ಪಿಟ್ಟು ಪಾಕವಿಧಾನ
ತರಕಾರಿ ಮಿಶ್ರಿತ ರವಾ ಉಪ್ಪಿಟ್ಟು ಪಾಕವಿಧಾನ
ತರಕಾರಿ ಮಿಶ್ರಿತ ರವಾ ಉಪ್ಪಿಟ್ಟು ದಕ್ಷಿಣ ಭಾರತೀಯರ ಸಾಂಪ್ರದಾಯಿಕ ಉಪಹಾರಗಳಲ್ಲಿ
ಒಂದು. ಇದನ್ನು ಉಪ್ಮಾ, ಖಾರಾ ಬಾತ್ ಎಂದು ಕರೆಯುತ್ತಾರೆ. ಇದನ್ನು ಸವಿಯುವಾಗ
ಕೇಸರಿ ಬಾತ್ ಅನ್ನು ಜೊತೆಗೆ ಸೇಸೇರಿಸುವುದು ಒಂದು ಸುಂದರವಾದ ಸಂಯೋಜನೆ
ಎನ್ನಬಹುದು. ಇದರ ತಯಾರಿಯಲ್ಲಿ ಬಳಸುವ ಕ್ಯಾರೆಟ್, ಕ್ಯಾಪ್ಸಿಕಮ್, ಬಟಾಣಿ,
ಉಪ್ಪು, ಕೊತ್ತಂಬರಿ ಸೊಪ್ಪು ಹಾಗೂ ಉಪ್ಪು ಇದರ ರುಚಿಯನ್ನು ಹೆಚ್ಚಿಸುತ್ತವೆ.
ಆರೋಗ್ಯಕರ ಉಪಹಾರಗಳಲ್ಲಿ ಒಂದಾದ ಈ ತಿಂಡಿಯನ್ನು ಬಹಳ ಸರಳ ಹಾಗೂ ಸುಲಭ ವಿಧಾನಗಳಲ್ಲಿ ತಯಾರಿಸಬಹುದು. ಇದನ್ನು ಕೆಲವರು ಭೋಜನಕ್ಕೂ ತಯಾರಿಸುತ್ತಾರೆ. ಈ ಉಪಹಾರದಲ್ಲಿ ಹೆಚ್ಚು ಎಣ್ಣೆಯನ್ನು ಬಳಸಲಾಗುತ್ತದೆ. ರವಾ ಮತ್ತು ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುವುದರಿಂದ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುವುದು.
ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಮುಂಜಾನೆಯ ಉಪಹಾರವಾಗಿ ಈ ತಿಂಡಿಯನ್ನು ತಯಾರಿಸಲಾಗುತ್ತದೆ. ಇದನ್ನು ನೀವು ಸಹ ತಯಾರಿಸಿ ಸವಿಯಬೇಕು ಎನ್ನುವ ಉತ್ಸಾಹದಲ್ಲಿದ್ದರೆ ಈ ಮುಂದೆ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಿ.
Recipe By: ಕಾವ್ಯಶ್ರೀ ಎಸ್.
Recipe Type: ಉಪಹಾರ
Serves: 2-3
-
ಎಣ್ಣೆ - 10 ಟೇಬಲ್ ಚಮಚ
ಸಾಸಿವೆ - 1 ಟೀ ಚಮಚ
ಉದ್ದಿನ ಬೇಳೆ -1 ಟೀ ಚಮಚ
ಕಡ್ಲೆ ಬೇಳೆ -1 ಟೀ ಚಮಚ
ಕರಿಬೇವು -6-8 ಎಸಳು
ಶುಂಠಿ - 1 ಇಂಚು (ತುರಿದಿರುವುದು)
ಕೊತ್ತಂಬರಿ ಸೊಪ್ಪು -1/4 ಕಪ್
ತೆಂಗಿನ ತುರಿ -1/2 ಕಪ್
ಹೆಚ್ಚಿಕೊಂಡ ಈರುಳ್ಳಿ -1 ಕಪ್
ಕ್ಯಾಪ್ಸಿಕಮ್ -1/2 ಕಪ್
ಹಸಿ ಮೆಣಸಿನಕಾಯಿ -5-6 (ತುಂಡುಗಳು)
ನಿಂಬೆ ರಸ - ಅರ್ಧ ನಿಂಬೆ ಹಣ್ಣು
ಹೆಚ್ಚಿಕೊಂಡ ಕ್ಯಾರೆಟ್ -1/2 ಕಪ್
ಬಟಾಣಿ -1/4 ಕಪ್
ಸೂಜಿ ರವಾ - ಒಂದು ಬೌಲ್ನ 3/4 ಭಾಗ
ಉಪ್ಪು -3/4 ಟೇಬಲ್ ಚಮಚ
ನೀರು -3 ಬೌಲ್
-
1. ಒಂದು ದಪ್ಪ ತಳದ ಪಾತ್ರೆಯಲ್ಲಿ ರವಾ ಹಾಕಿ ಬಿಸಿ ಮಾಡಿ.
2. ಸುಮಾರು 3-5 ನಿಮಿಷಗಳಕಾಲ, ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವವರೆಗೂ ಹುರಿಯಿರಿ.
3. ಹುರಿದ ನಂತರ ಒಂದು ಬೌಲ್ಗೆ ವರ್ಗಾಯಿಸಿ ಒಂದೆಡೆ ಇಡಿ.
4. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
5. ನಂತರ ಉದ್ದಿನ ಬೇಳೆ ಮತ್ತು ಸಾಸಿವೆಯನ್ನು ಹಾಕಿ.
6. ನಂತರ ಕಡ್ಲೆ ಬೇಳೆ ಮತ್ತು ತುರಿದುಕೊಂಡ ಶುಂಠಿ ಸೇರಿಸಿ.
7. ಚೆನ್ನಾಗಿ ಕಲುಕಿ.
8. ಕರಿಬೇವಿನ ಎಲೆ ಮತ್ತು ಹೆಚ್ಚಿಕೊಂಡ ಹಸಿಮೆಣಸಿನ ಕಾಯನ್ನು ಸೇರಿಸಿ ಕಲುಕಿ.
9. ನಂತರ ಹೆಚ್ಚಿಕೊಂಡ ಈರುಳ್ಳಿ ಹಾಕಿ. ಅದು ತಿಳಿ ಕಂದು ಬಣ್ಣಕ್ಕೆ ತಿರುಗುವ ವರೆಗೆ ಹುರಿಯಿರಿ.
10. ನಂತರ ಹೆಚ್ಚಿಕೊಂಡ ಕ್ಯಾರೆಟ್ ಸೇರಿಸಿ.
11. ಚೆನ್ನಾಗಿ ತಿರುವಿ ಹಾಗೂ ಸ್ವಲ್ಪ ಸಮಯ ಬೇಯಲು ಬಿಡಿ.
12. ನಂತರ ಹೆಚ್ಚಿಕೊಂಡ ಕ್ಯಾಪ್ಸಿಕಮ್ ಮತ್ತು ಬಟಾಣಿಯನ್ನು ಸೇರಿಸಿ.
13. ನಂತರ 3 ಬೌಲ್ ನೀರನ್ನು ಸೇರಿಸಿ. ಸಾಮಾನ್ಯವಾಗಿ ಒಂದು ಕಪ್ ರವಾಕ್ಕೆ ಎರಡು ಕಪ್ ಅಥವಾ ಮೂರು ಕಪ್ ನೀರಿನ ಪ್ರಮಾಣ ಬಳಸುತ್ತಾರೆ. ಅದು ನಿಮ್ಮ ಆಧ್ಯತೆಗೆ ಬಳಸಬಹುದು.
14. ತೆಂಗಿನ ತುರಿ ಮತ್ತು ಉಪ್ಪನ್ನು ಸೇರಿಸಿ.
15. ನಂತರ ಮುಚ್ಚಳವನ್ನು ಮುಚ್ಚಿ 8-10 ನಿಮಿಷಗಳಕಾಲ ಬೇಯಲು ಬಿಡಿ.
16. ನಂತರ ಮುಚ್ಚಳವನ್ನು ತೆರೆದು ಒಮ್ಮೆ ಮಿಶ್ರಣವನ್ನು ತಿರುವಿ.
17. ನಿಧಾನವಾಗಿ ರವಾವನ್ನು ಸೇರಿಸುತ್ತಾ ಹೋಗಿ. ರವಾ ಗಂಟಾಗದಂತೆ ತಿರುವುತ್ತಿರಬೇಕು.
18. ಎಲ್ಲಾ ಸಾಮಾಗ್ರಿಗಳು ಬೆರೆತುಕೊಳ್ಳಲು ಚೆನ್ನಾಗಿ ತಿರುವುತ್ತಿರಬೇಕು.
19. ನೀರು ಸಂಪೂರ್ಣವಾಗಿ ಆವಿಯಾಗುವವರೆಗೂ ಮುಚ್ಚಳವನ್ನು ಮುಚ್ಚಿಡಬೇಕು.
20. ನಂತರ ಮುಚ್ಚಳವನ್ನು ತೆರೆದು ಅರ್ಧ ಟೇಬಲ್ ಚಮಚ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಚೆನ್ನಾಗಿ ಮಿಶ್ರಗೊಳಿಸಿ.
21. ನಂತರ ಉರಿಯನ್ನು ಆರಿಸಿ.
22. ನಂತರ ಒಂದು ಟೇಬಲ್ ಚಮಚ ನಿಂಬೆ ರಸವನ್ನು ಸೇರಿಸಿ ಮಿಶ್ರಗೊಳಿಸಿ.
23 ಬಳಿಕ ಒಂದು ಬೌಲ್ಗೆ ವರ್ಗಾಯಿಸಿ, ಬಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.
- ತರಕಾರಿಯನ್ನು ಒಗ್ಗರಣೆ ಮಾಡುವ ಮೊದಲೇ ರವಾವನ್ನು ಹುರಿದಿಟ್ಟುಕೊಂಡಿರಬೇಕು. ಕ್ಯಾಪ್ಸಿಕಮ್ ಬಹುಬೇಗ ಬೇಯುವುದರಿಂದ ಕೊನೆಯಲ್ಲಿ ಸೇರಿಸಿ
- ಹುರಿದುಕೊಂಡ ರವಾ ಗಂಟಾಗದಂತೆ ನಿಧಾನವಾಗಿ ಸೇರಿಸುತ್ತಾ ಹೋಗಬೇಕು
- ಅಲಂಕಾರಕ್ಕಾಗಿ ಕೊತ್ತಂಬರಿ ಸೊಪ್ಪು, ತೆಂಗಿನ ತುರಿ ಹಾಗೂ ನಿಂಬೆ ರಸವನ್ನು ಸೇರಿಸುವುದರಿಂದ ರುಚಿಯನ್ನು ಹೆಚ್ಚಿಸಬಹುದು.
- ಪ್ರಮಾಣ - 1 ಬೌಲ್ ಉಪ್ಪಿಟ್ಟು
- ಕ್ಯಾಲೋರಿ - 180 ಕ್ಯಾಲ್
- ಕೊಬ್ಬು - 4.4 ಗ್ರಾಂ
- ಪ್ರೋಟೀನ್ - 11 ಗ್ರಾಂ
- ಕಾರ್ಬೋಹೈಡ್ರೇಟ್ - 59 ಗ್ರಾಂ
- ಫೈಬರ್ - 2.9 ಗ್ರಾಂ
ಹಂತ ಹಂತವಾದ ಚಿತ್ರವಿವರಣೆ:
1. ಒಂದು ದಪ್ಪ ತಳದ ಪಾತ್ರೆಯಲ್ಲಿ ರವಾ ಹಾಕಿ ಬಿಸಿ ಮಾಡಿ.
2. ಸುಮಾರು 3-5 ನಿಮಿಷಗಳಕಾಲ, ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವವರೆಗೂ
ಹುರಿಯಿರಿ.
3. ಹುರಿದ ನಂತರ ಒಂದು ಬೌಲ್ಗೆ ವರ್ಗಾಯಿಸಿ ಒಂದೆಡೆ ಇಡಿ.
4. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
5. ನಂತರ ಉದ್ದಿನ ಬೇಳೆ ಮತ್ತು ಸಾಸಿವೆಯನ್ನು ಹಾಕಿ.
6. ನಂತರ ಕಡ್ಲೆ ಬೇಳೆ ಮತ್ತು ತುರಿದುಕೊಂಡ ಶುಂಠಿ ಸೇರಿಸಿ.
7. ಚೆನ್ನಾಗಿ ಕಲುಕಿ.
8. ಕರಿಬೇವಿನ ಎಲೆ ಮತ್ತು ಹೆಚ್ಚಿಕೊಂಡ ಹಸಿಮೆಣಸಿನ ಕಾಯನ್ನು ಸೇರಿಸಿ
ಕಲುಕಿ.
9. ನಂತರ ಹೆಚ್ಚಿಕೊಂಡ ಈರುಳ್ಳಿ ಹಾಕಿ. ಅದು ತಿಳಿ ಕಂದು ಬಣ್ಣಕ್ಕೆ ತಿರುಗುವ ವರೆಗೆ ಹುರಿಯಿರಿ.
10. ನಂತರ ಹೆಚ್ಚಿಕೊಂಡ ಕ್ಯಾರೆಟ್ ಸೇರಿಸಿ.
11. ಚೆನ್ನಾಗಿ ತಿರುವಿ ಹಾಗೂ ಸ್ವಲ್ಪ ಸಮಯ ಬೇಯಲು ಬಿಡಿ.
12. ನಂತರ ಹೆಚ್ಚಿಕೊಂಡ ಕ್ಯಾಪ್ಸಿಕಮ್ ಮತ್ತು ಬಟಾಣಿಯನ್ನು ಸೇರಿಸಿ.
13. ನಂತರ 3 ಬೌಲ್ ನೀರನ್ನು ಸೇರಿಸಿ. ಸಾಮಾನ್ಯವಾಗಿ ಒಂದು ಕಪ್ ರವಾಕ್ಕೆ
ಎರಡು ಕಪ್ ಅಥವಾ ಮೂರು ಕಪ್ ನೀರಿನ ಪ್ರಮಾಣ ಬಳಸುತ್ತಾರೆ. ಅದು ನಿಮ್ಮ ಆಧ್ಯತೆಗೆ
ಬಳಸಬಹುದು.
14. ತೆಂಗಿನ ತುರಿ ಮತ್ತು ಉಪ್ಪನ್ನು ಸೇರಿಸಿ.
15. ನಂತರ ಮುಚ್ಚಳವನ್ನು ಮುಚ್ಚಿ 8-10 ನಿಮಿಷಗಳಕಾಲ ಬೇಯಲು ಬಿಡಿ.
16. ನಂತರ ಮುಚ್ಚಳವನ್ನು ತೆರೆದು ಒಮ್ಮೆ ಮಿಶ್ರಣವನ್ನು ತಿರುವಿ.
17. ನಿಧಾನವಾಗಿ ರವಾವನ್ನು ಸೇರಿಸುತ್ತಾ ಹೋಗಿ. ರವಾ ಗಂಟಾಗದಂತೆ
ತಿರುವುತ್ತಿರಬೇಕು.
18. ಎಲ್ಲಾ ಸಾಮಾಗ್ರಿಗಳು ಬೆರೆತುಕೊಳ್ಳಲು ಚೆನ್ನಾಗಿ
ತಿರುವುತ್ತಿರಬೇಕು.
19. ನೀರು ಸಂಪೂರ್ಣವಾಗಿ ಆವಿಯಾಗುವವರೆಗೂ ಮುಚ್ಚಳವನ್ನು ಮುಚ್ಚಿಡಬೇಕು.
20. ನಂತರ ಮುಚ್ಚಳವನ್ನು ತೆರೆದು ಅರ್ಧ ಟೇಬಲ್ ಚಮಚ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಚೆನ್ನಾಗಿ ಮಿಶ್ರಗೊಳಿಸಿ.
21. ನಂತರ ಉರಿಯನ್ನು ಆರಿಸಿ.
22. ನಂತರ ಒಂದು ಟೇಬಲ್ ಚಮಚ ನಿಂಬೆ ರಸವನ್ನು ಸೇರಿಸಿ ಮಿಶ್ರಗೊಳಿಸಿ.
23. ಬಳಿಕ ಒಂದು ಬೌಲ್ಗೆ ವರ್ಗಾಯಿಸಿ, ಬಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.