For Quick Alerts
ALLOW NOTIFICATIONS  
For Daily Alerts

ರೆಸಿಪಿ: ಆಹಾ! ಟೇಸ್ಟಿ...ಟೇಸ್ಟಿ ಟೊಮೆಟೊ ತೊಕ್ಕು

Posted By:
|

ತೊಕ್ಕು ಇದೊಂದು ಅನ್ನದ ಜೊತೆ ನೆಚ್ಚಿಕೊಂಡು ಸವಿಯಬಹುದಾದ ಸೈಡ್ ಐಟಂ ಆಗಿದೆ. ಹುಣಸೆ ಹಣ್ಣಿನ ತೊಕ್ಕು, ಟೊಮೆಟೊ ತೊಕ್ಕು ಹೀಗೆ ಬಗೆ ಬಗೆಯ ತೊಕ್ಕು ತಯಾರಿಸಲಾಗುವುದು, ಇದನ್ನು ಉಪ್ಪಿನಕಾಯಿ ಬೇಕಾದರೂ ಹೇಳಬಹುದು.

tomato thokku recipe

ನಾವಿಲ್ಲಿ ಟೊಮೆಟೊ ತೊಕ್ಕು ಮಾಡುವುದರ ಬಗ್ಗೆ ಹೇಳಿದ್ದೇವೆ, ಟೊಮೆಟೊ ತೊಕ್ಕು ಕೂಡ ಹಲವಾರು ರುಚಿಯಲ್ಲಿ ತಯಾರಿಸುತ್ತಾರೆ. ಈ ಟೊಮೆಟೊ ತೊಕ್ಕು ಮಾಡಿಟ್ಟರೆ ಒಂದು ತುತ್ತು ಅನ್ನ ಜಾಸ್ತಿಯೇ ತಿನ್ನುತ್ತೇವೆ, ಅಷ್ಟೊಂದು ರುಚಿ ಅನಿಸುವುದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

tomato thokku recipe, ಟೊಮೆಟೊ ತೊಕ್ಕು ರೆಸಿಪಿ
tomato thokku recipe, ಟೊಮೆಟೊ ತೊಕ್ಕು ರೆಸಿಪಿ
Prep Time
10 Mins
Cook Time
30M
Total Time
40 Mins

Recipe By: Reena TK

Recipe Type: Pickle

Serves: depend

Ingredients
  • ಬೇಕಾಗುವ ಸಾಮಗ್ರಿ

    3-4 ಹಣ್ಣಾದ ಟೊಮೆಟೊ

    2 ಹಸಿ ಮೆಣಸಿನಕಾಯಿ

    1 ಚಮಚ ಸಾಸಿವೆ

    1 ಚಮಚ ಜೀರಿಗೆ

    ಅರ್ಧ ಚಮಚ ಮೆಂತೆ

    ಸ್ವಲ್ಪ ಕರಿಬೇವು

    1 ಚಮಚ ಖಾರದ ಪುಡಿ

    ಸ್ವಲ್ಪ ಇಂಗು2 ಚಮಚ ಎಳ್ಳೆಣ್ಣೆ

    ರುಚಿಗೆ ತಕ್ಕ ಉಪ್ಪು

Red Rice Kanda Poha
How to Prepare
  • ಮಾಡುವ ವಿಧಾನ

    * ಟೊಮೆಟೊ ಮತ್ತು ಹಸಿ ಮೆಣಸಿನಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಬೌಲ್‌ನಲ್ಲಿ ಇಡಿ.

    * ದಪ್ಪ ತಳವಿರುವ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ. ಅದು ಚಟ್‌ಪಟ್ ಶಬ್ದ ಮಾಡುವಾಗ ಜೀರಿಗೆ ಹಾಕಿ, ನಂತರ ಮಂತೆ, ಸ್ವಲ್ಪ ಇಂಗು, ಕರಿಬೇವು ಹಾಕಿ ಒಂದೆರಡು ಸೆಕೆಂಡ್ ಆಡಿಸಿ.

    * ಈಗ ಕತ್ತರಿಸಿದ ಟೊಮೆಟೊವನ್ನು ಹಾಕಿ ಉರಿ ಕಡಿಮೆ ಮಾಡಿ ಪಾತ್ರೆಯ ಬಾಯಿ ಮುಚ್ಚಿ 10-15 ನಿಮಿಷ ಬೇಯಿಸಿ, ಈ ಮಧ್ಯೆ ಒಂದೆರಡು ಬಾರಿ ಸೌಟ್‌ನಿಂದ ಆಡಿಸಿ.

    * ನಂತರ ಖಾರದ ಪುಡಿ ಸೇರಿಸಿ, ರುಚಿಗೆ ತಕ್ಕ ಉಪ್ಪು ಹಾಕಿ, ಪ್ಯಾನ್‌ನ ಬಾಯಿ ಮುಚ್ಚದೆ ಬೇಯಿಸಿ.

    * ಅದರ ನೀರಿನಂಶ ಆವಿಯಾಗಲಿ.ನಂತರ ಗ್ಯಾಸ್‌ ಆಫ್‌ ಮಾಡಿ ತಣ್ಣಗಾದ ಮೇಲೆ ಅದನ್ನು ಗ್ಲಾಸ್‌ ಜಾರ್‌ನಲ್ಲಿ ಹಾಕಿಡಿ. ಇದನ್ನು ಇಡ್ಲಿ, ದೋಸೆ, ಅನ್ನ ಇವುಗಳ ಜೊತೆ ಸರ್ವ್ ಮಾಡಿ.

Instructions
  • ನೀವು ಇದನ್ನು ತುಂಬಾ ಗಟ್ಟಿಯಾಗಿ ಬೇಕೆಂದರೆ ನೀರಿನಂಶ ಸಂಫೂರ್ಣ ಆವಿಯಾಗುವವರೆಗೆ ಬೇಯಿಸಬೇಕು. ಇದನ್ನು ಹುಳಿ ಟೊಮೆಟೊ ಹಾಕಿದರೆ ಮತ್ತಷ್ಟು ರುಚಿ.
Nutritional Information
  • ಕೊಬ್ಬು - 2 ಗ್ರಾಂ
  • ಕಾರ್ಬ್ಸ್ - 2 ಗ್ರಾಂ
  • ನಾರಿನಂಶ - 0.6ಗ್ರಾಂ
[ 4 of 5 - 60 Users]
X
Desktop Bottom Promotion