For Quick Alerts
ALLOW NOTIFICATIONS  
For Daily Alerts

ರೆಸಿಪಿ: ರುಚಿ-ರುಚಿಯಾದ ಟೊಮ್ಯಾಟೊ ಬಾತ್‌

Posted By:
|

ಬೆಳಗ್ಗೆ ಅವಸರದಲ್ಲಿ, ಆಫೀಸ್ ಗೆ ಲಂಚ್ ಬಾಕ್ಸ್ ಗೆ ಏನನ್ನಾದರೂ ರೆಡಿ ಮಾಡಬೇಕು ಅಂದ್ರೆ ಮನೆ ಹೆಂಗಸರಿಗೆ ತಲೆನೋವಿನ ವಿಷಯವೇ ಸರಿ. ಅದರಲ್ಲೂ ದಿನವೂ ಹೊಸತನ್ನೇನಾದರೂ ಮಾಡಬೇಕು ಎಂದು ಬಯಸುವವರಿಗೆ ಯೋಚನೆ ಇನ್ನಷ್ಟು ಜಾಸ್ತಿ.

tomato bath recipe,

ಹಾಗಾಗಿ ಇದಕ್ಕೆಲ್ಲ ಪರಿಹಾರಾರ್ಥವಾಗಿ ರುಚಿಕರವಾಗಿ ಮಾಡಬಹುದಾದ ಟೊಮ್ಯಾಟೊ ರೈಸ್ ಬಾಲ್ ಜೊತೆ ಬಂದಿದ್ದೇವೆ.

tomato bath recipe, ಟೊಮ್ಯಾಟೊ ಬಾತ್‌ ರೆಸಿಪಿ
tomato bath recipe, ಟೊಮ್ಯಾಟೊ ಬಾತ್‌ ರೆಸಿಪಿ
Prep Time
30 Mins
Cook Time
30M
Total Time
1 Hours0 Mins

Recipe By: Poornima Hegde

Recipe Type: Breakfast

Serves: 4

Ingredients
  • ಮಸಾಲೆ ರುಬ್ಬುವುದಕ್ಕೆ:

    ಚಕ್ಕೆ - 2 ತುಂಡುಗಳು

    ಲವಂಗ - 4-5

    ಶುಂಠಿ - 4 ತುಂಡುಗಳು

    ಬೆಳ್ಳುಳ್ಳಿ -10 ಎಸಳುಗಳು

    ಕಾಳು ಮೆಣಸು - 10

    ತೆಂಗಿನ ತುರಿ - ಸ್ವಲ್ಪ

    ಕೊತ್ತಂಬರಿ ಸೊಪ್ಪು - ಒಂದು ಮುಷ್ಠಿಯಷ್ಟು

    ಹೆಚ್ಚಿಕೊಂಡ ಈರುಳ್ಳಿ -ಒಂದು ಸಣ್ಣ ಗಾತ್ರದ್ದು

    ಈ ಎಲ್ಲಾ ಸಾಮಗ್ರಿಗಳನ್ನು ಒಂದು ಮಿಕ್ಸರ್ ಜಾರ್ ಗೆ ಹಾಕಿ ಸ್ವಲ್ಪ ನೀರು ಬೆರೆಸಿ ರುಬ್ಬಿಟ್ಟುಕೊಳ್ಳಿ.

    ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು:

    ಪಲಾವ್ ಎಲೆ - 2

    ಚಕ್ಕೆ - 2 ತುಂಡುಗಳು

    ನಕ್ಷತ್ರ ಮೊಗ್ಗು - ಒಂದು

    ಏಲಕ್ಕಿ - 2-3

    ಅಡುಗೆ ಎಣ್ಣೆ - 5 ಟೇಬಲ್ ಸ್ಪೂನ್ (ಜೊತೆಗೆ ಒಂದು ಚಮಚ ತುಪ್ಪವನ್ನು ಸೇರಿಸಬಹುದು)

    ಈರುಳ್ಳಿ - ಮಧ್ಯಮ ಗಾತ್ರದ 2-3 ಹೆಚ್ಚಿಟ್ಟುಕೊಂಡಿದ್ದು

    ಟೊಮ್ಯಾಟೋ - ಮಧ್ಯಮ ಗಾತ್ರದ 3-4 ಹೆಚ್ಚಿಟ್ಟುಕೊಂಡಿದ್ದು

    ಹಸಿಮೆಣಸು - 4-5 (ನಿಮ್ಮ ಖಾರಕ್ಕೆ ತಕ್ಕ ಹಾಗೆ ಬಳಸಿ)

    ಹಸಿ ಬಟಾಟಿ / ಬೇಯಿಸಿಕೊಂಡ ಬಟಾಣಿ - ಒಂದು ಕಪ್

    ಸಬ್ಬಸಿಗೆ ಸೊಪ್ಪು - ಸ್ವಲ್ಪ (Optional)

    ಉಪ್ಪು - ರುಚಿಗೆ ತಕ್ಕಷ್ಟು

    ಅರಿಶಿನ - ಚಿಟಿಕೆಯಷ್ಟು

    ಅನ್ನ - ಒಂದೂವರೆ ಕಪ್

Red Rice Kanda Poha
How to Prepare
  • ಮಾಡುವ ವಿಧಾನ:

    ಮೊದಲು ಬಾಣಲೆಗೆ ಎಣ್ಣೆ (ಒದು ಚಮಚ ತುಪ್ಪವನ್ನೂ ಸೇರಿಸಬಹುದು) ಯನ್ನು ಹಾಕಿ ಬಿಸಿ ಮಾಡಿ, ಇದಕ್ಕೆ ಪಲಾವ್ ಎಲೆ ಚಕ್ಕೆ, ಮೊಗ್ಗು, ಏಲಕ್ಕಿ ಎಲ್ಲವನ್ನೂ ಹಾಕಿ ಹುರಿದುಕೊಳ್ಳಿ.

    ನಂತರ ಹೆಚ್ಚಿಟ್ಟುಕೊಂಡ ಹಸಿ ಮೆಣಸನ್ನು ಸೇರಿಸಿ. ಈಗ ಈರುಳ್ಳಿಯನ್ನು ಸೇರಿಸಿ ಒಂದೈದು ನಿಮಿಷ ಎಣ್ಣೆಯಲ್ಲೇ ಬೇಯಲು ಬಿಡಿ. ನಂತರ ಹೆಚ್ಚಿಟ್ಟುಕೊಂಡ ಟೊಮ್ಯಾಟೊವನ್ನು ಸೇರಿಸಿ ಇವೆಲ್ಲವೂ ಚೆನ್ನಾಗಿ ಬೆಂದ ಮೇಲೆ ಪರಿಮಳಕ್ಕೆ ಸಬ್ಬಸ್ಸಿಗೆ ಸೊಪ್ಪನು ಸೇರಿಸಿ (ಬೇಕಿದ್ದರೆ ಮಾತ್ರ) ಇನ್ನು ಬಟಾಟಿಯನ್ನು ಸೇರಿಸಿ ಮಿಕ್ಸ್ ಮಾಡಿ. ಆನಂತರ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ.

    ಇನ್ನು ಉಪ್ಪು ಹಾಗೂ ಚಿಟಿಕೆ ಅರಿಶಿನವನ್ನು ಸೇರಿಸಿ ಮಿಕ್ಸ್ ಮಾಡಿ, ಕೊನೆಯಲ್ಲಿ ಉದುರುದುರಾಗಿ ಮಾಡಿಟ್ಟುಕೊಂಡ ಅನ್ನವನ್ನು ಬೆರೆಸಿದರೆ ರುಚಿಕರವಾದ ಟೊಮ್ಯಾಟೊ ಬಾತ್ ರೆಡಿ!

Instructions
  • ನೀವು ಕುಕ್ಕರ್‌ನಲ್ಲಿ ಮಾಡುವುದಾದರೆ ಅನ್ನುವನ್ನು ಪ್ರತ್ಯೇಕಾಗಿ ಬೇಯಿಸಬೇಕಾಗಿಲ್ಲ, ಮೊದಲಿಗೆ ಒಗ್ಗರಣೆ ಕೊಟ್ಟು ನಂತರ ಅಕ್ಕಿ ಹಾಕಿ, ಬೇಯಲು ತಕ್ಕ ನೀರು ಹಾಕಿ ಬೇಯಸಬಹುದು. ಆದರೆ ಅನ್ನ ಪ್ರತ್ಯೇಕ ಮಾಡಿಟ್ಟರೆ ಉದುರು-ಉದುರಾಗಿ ಚೆನ್ನಾಗಿರುತ್ತದೆ.
Nutritional Information
  • ಸರ್ವ್ - 1 ಬೌಲ್
  • ಕೊಬ್ಬು - 12ಗ್ರಾಂ
  • ಪ್ರೊಟೀನ್ - 4 ಗ್ರಾಂ
  • ಕಾರ್ಬ್ಸ್ - 31ಗ್ರಾಂ
  • ನಾರಿನಂಶ - 3ಗ್ರಾಂ

ಮಾಡುವ ವಿಧಾನ:
ಮೊದಲು ಬಾಣಲೆಗೆ ಎಣ್ಣೆ (ಒದು ಚಮಚ ತುಪ್ಪವನ್ನೂ ಸೇರಿಸಬಹುದು) ಯನ್ನು ಹಾಕಿ ಬಿಸಿ ಮಾಡಿ, ಇದಕ್ಕೆ ಪಲಾವ್ ಎಲೆ ಚಕ್ಕೆ, ಮೊಗ್ಗು, ಏಲಕ್ಕಿ ಎಲ್ಲವನ್ನೂ ಹಾಕಿ ಹುರಿದುಕೊಳ್ಳಿ. ನಂತರ ಹೆಚ್ಚಿಟ್ಟುಕೊಂಡ ಹಸಿ ಮೆಣಸನ್ನು ಸೇರಿಸಿ.

Tomato Bath recipe
Tomato Bath recipe

ಈಗ ಈರುಳ್ಳಿಯನ್ನು ಸೇರಿಸಿ ಒಂದೈದು ನಿಮಿಷ ಎಣ್ಣೆಯಲ್ಲೇ ಬೇಯಲು ಬಿಡಿ.

Tomato Bath recipe
Tomato Bath recipe

ನಂತರ ಹೆಚ್ಚಿಟ್ಟುಕೊಂಡ ಟೊಮ್ಯಾಟೊವನ್ನು ಸೇರಿಸಿ ಇವೆಲ್ಲವೂ ಚೆನ್ನಾಗಿ ಬೆಂದ ಮೇಲೆ ಪರಿಮಳಕ್ಕೆ ಸಬ್ಬಸ್ಸಿಗೆ ಸೊಪ್ಪನು ಸೇರಿಸಿ (ಬೇಕಿದ್ದರೆ ಮಾತ್ರ) ಇನ್ನು ಬಟಾಟಿಯನ್ನು ಸೇರಿಸಿ ಮಿಕ್ಸ್ ಮಾಡಿ. ಆನಂತರ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ.

Tomato Bath recipe
Tomato Bath recipe

ಇನ್ನು ಉಪ್ಪು ಹಾಗೂ ಚಿಟಿಕೆ ಅರಿಶಿನವನ್ನು ಸೇರಿಸಿ ಮಿಕ್ಸ್ ಮಾಡಿ, ಕೊನೆಯಲ್ಲಿ ಉದುರುದುರಾಗಿ ಮಾಡಿಟ್ಟುಕೊಂಡ ಅನ್ನವನ್ನು ಬೆರೆಸಿದರೆ ರುಚಿಕರವಾದ ಟೊಮ್ಯಾಟೊ ಬಾತ್ ರೆಡಿ!

Tomato Bath recipe
[ 3.5 of 5 - 39 Users]
X
Desktop Bottom Promotion