For Quick Alerts
ALLOW NOTIFICATIONS  
For Daily Alerts

ಮೈಕ್ರೋವೇವ್ ಅಡುಗೆಗೆ ಕೆಲ ಸಲಹೆಗಳು

|
Microwave Cooking Tips
ಮೈಕ್ರೋವೇವ್ ಬಂದ ಮೇಲೆ ಅನೇಕ ರುಚಿಕರ ತಿಂಡಿಗಳನ್ನು ಮನೆಯಲ್ಲಿಯೇ ಮಾಡಬಹುದಾಗಿದೆ, ಅಲ್ಲದೆ ಇದರಲ್ಲಿ ಅಡುಗೆಯನ್ನು ಕಡಿಮೆ ಅವಧಿಯಲ್ಲಿ ಮಾಡಬಹುದಾಗಿರುವುದರಿಂದ ಇದರ ಜನಪ್ರಿಯತೆ ಕೂಡ ಹೆಚ್ಚಾಗುತ್ತಿದೆ. ಅಡುಗೆಯನ್ನು ರುಚಿಕರವಾಗಿ ಮತ್ತು ಸುಲಭವಾಗಿ ಮಾಡಬಹುದಾದರೂ ಇದರಲ್ಲಿ ಅಡುಗೆ ಮಾಡುವಾಗ ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.

1. ಮೈಕ್ರೋವೇವ್ ನಲ್ಲಿ ಆಹಾರ ಬೇಯಿಸುವಾಗ ಮಿತಿ ಮೀರಿ ಬೇಯಿಸಿಬಾರದು. ತುಂಬಾ ಬೇಯಿಸಿದರೆ ಆಹಾರ ಬೆಂದು ಹಿಟ್ಟಿನ ರೀತಿಯಾಗುವುದು. ಆಹಾರವನ್ನು ಮುಕ್ಕಾಲು ಭಾಗದಷ್ಟು ಬೇಯಿಸಿ ನಂತರ ಸ್ಟ್ಯಾಂಡಿಂಗ್ ಟೈಮ್ ನಲ್ಲಿ ಬೇಯಿಸುವುದು ಒಳ್ಳೆಯದು.

2. ಮೈಕ್ರೋವೇವ್ ನಲ್ಲಿ ಆಹಾರ ಬೇಯಿಸಲು ಇಡುವ ಪಾತ್ರೆಯು ಚೌಕಾಕಾರದಲ್ಲಿರುವುದಕ್ಕಿಂತ ದುಂಡಗೆ ಇರುವ ಪಾತ್ರೆ ಒಳ್ಳೆಯದು. ಚೌಕಾಕಾರದ ಪಾತ್ರೆಯಲ್ಲಿ ಅದರ ನಾಲ್ಕು ಮೂಲೆಯಲ್ಲಿರುವ ಆಹಾರ ಅಧಿಕವಾಗಿ ಬೇಯುವುದು. ಮೈಕ್ರೋವೇವ್ ನಲ್ಲಿ ಪಾತ್ರೆಯು ಒಂದೇ ರೀತಿಯಲ್ಲಿ ಬೇಯಲು ದುಂಡಗೆ ಇರುವ ಪಾತ್ರೆ ಬಳಸುವುದು ಒಳ್ಳೆಯದು.

3. ಆಹಾರವನ್ನು ಬೇಯಲು ಇಡುವಾಗಲೇ ಉಪ್ಪು ಹಾಕಿ ಇಟ್ಟರೆ ಬೇಯಲು ಅಧಿಕ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಆಹಾರ ಮುಕ್ಕಾಲು ಭಾಗ ಬೆಂದ ನಂತರ ಉಪ್ಪು ಹಾಕಿದರೆ ಆಯಿತು.

4. ಆಹಾರವನ್ನು ಬೇಯಲು ಇಡುವಾಗ ಅಗತ್ಯವಿರುವುದಕ್ಕಿಂತ ಅಧಿಕ ನೀರು ಹಾಕಬಾರದು. ಏಕೆಂದರೆ ಅಧಿಕ ನೀರು ಹಾಕಿದಷ್ಟು ಬೇಯಲು ಅಧಿಕ ಸಮಯ ತೆಗೆದುಕೊಳ್ಳುತ್ತದೆ.

5. ಮೈಕ್ರೋವೇವ್ ನಲ್ಲಿ ಡೀಪ್ ಫ್ರೈ ಮಾಡಬಾರದು.

6. ಪುಡ್ಡಿಂಗ್ ಅನ್ನು ಮೈಕ್ರೋವೇವ್ ನಲ್ಲಿ ಮಾಡುವಾಗ ಮದ್ಯ (ಆಲ್ಕೋಹಾಲ್) ಹಾಕಬಾರದು, (ಮದ್ಯ ಬೆಂಕಿಯನ್ನು ಆಕರ್ಷಿಸುತ್ತದೆ)

7. ಮೊಟ್ಟೆಯನ್ನು ಸಿಪ್ಪೆ ಸಹಿತ ಮೈಕ್ರೋವೇವ್ ನಲ್ಲಿ ಬೇಯಿಸಬಾರದು.

8. ಗ್ರೇವಿ ಮಾಡುವಾಗ ಸ್ವಲ್ಪ ಆಳವಾದ ಪಾತ್ರೆಯನ್ನು ಬಳಸಿ ಮಾಡಬೇಕು. ಅದರಲ್ಲೂ ಪಾತ್ರೆಯಲ್ಲಿ ಮಕ್ಕಾಲು ಭಾಗದಷ್ಟು ಮಾತ್ರ ಆಹಾರ ಸಾಮಾಗ್ರಿಗಳನ್ನು ಹಾಕಬೇಕು.

9. ಆಹಾರ ಪಾತ್ರೆಯನ್ನು ಮುಚ್ಚಲು ಅಲ್ಯುಮಿನಿಯಂ ಪಾತ್ರೆ ಬಳಸಬಾರದು. ಆಹಾರಗಳಾದ ಲಡ್ಡು, ಬರ್ಫಿ ಇವುಗಳನ್ನು ಮತ್ತೆ ಸಿಲ್ವರ್ ಶೀಟ್ ನಲ್ಲಿಟ್ಟು ಬಿಸಿ ಮಾಡಬಾರದು.

10. ಕೇಕ್ ಮಾಡುವಾಗ ಪಾತ್ರೆಯಲ್ಲಿ ಅರ್ಧದಷ್ಟು ಮಾತ್ರ ಕೇಕ್ ಮಿಶ್ರಣ ಹಾಕಬೇಕು, ಆಗ ಮಾತ್ರ ಕೇಕ್ ಗೆ ಸರಿಯಾಗಿ ಉಬ್ಬಲು ಸಹಾಯಕವಾಗುವುದು.

English summary

Microwave Cooking Tips | Cookery Tips | ಮೈಕ್ರೋವೇವ್ ಅಡುಗೆಗೆ ಕೆಲ ಸಲಹೆಗಳು | ಅಡುಗೆಗೆ ಕೆಲ ಸಲಹೆಗಳು

Cookery tips helps us to cook in a proper way. Nowadays using microwaves for cooking is quite common. But While preparing cooking in microwave it's better to knew few tips.
Story first published: Friday, June 29, 2012, 12:27 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more