For Quick Alerts
ALLOW NOTIFICATIONS  
For Daily Alerts

ಅಡುಗೆ ಟಿಪ್ಸ್ - ಓನ್ಲೀ ಫಾರ್ ಬ್ಯಾಚುಲರ್

|

ಬ್ಯಾಚುಲರ್ ಆಗಿದ್ದು ಕೆಲಸದ ನಿಮಿತ್ತ ಮನೆಯಿಂದ ತುಂಬಾ ದೂರ ಬಂದು ಅಪಾರ್ಟ್ ಮೆಂಟ್ ನಲ್ಲೋ, ಬಾಡಿಗೆ ಮನೆಯಲ್ಲೂ ತಮ್ಮ ಇತರ ಬ್ಯಾಚುರಲ್ ಫ್ರೆಂಡ್ಸ್ ಜೊತೆ ತಂಗಿ ಜೀವನ ನಡೆಸುತ್ತಿರುವವರೆಗೆ ಪ್ರತಿನಿತ್ಯ ಕಾಡುವ ಸಮಸ್ಯೆಯೆಂದರೆ ಅಡುಗೆಯದ್ದೇ ಎಂದರೆ ಒಪ್ಪುತ್ತೀರ ತಾನೆ?

ಕೆಲವರಂತೂ ಈ ಅಡುಗೆಯ ಸಹವಾಸ ಯಾರಿಗೆ ಬೇಕು? ಕ್ಯಾಂಟೀನ್ ನಲ್ಲಿ ಅಥವಾ ಹೋಟೆಲ್ ನಲ್ಲಿ ತಿಂದರಾಯ್ತು ಎಂದು ಕೂಲಾಗಿರುತ್ತಾರೆ. ಆದರೆ ಎಷ್ಟಾದರೂ ಮನೆ ಅಡುಗೆ-ಮನೆ ಅಡುಗೆಯೇ ಕಣ್ರೀ. ದಿನಾ ಹೋಟೆಲ್ ಅಡುಗೆ ತಿನ್ನುತ್ತಿದ್ದರೆ ಮೈ ಬೆಳೆಯುವುದು ಮತ್ತೆ ಕೆಲವರಿಗೆ ಗ್ಯಾಸ್ಟ್ರಿಕ್, ಮತ್ತಿತರ ಸಮಸ್ಯೆ ಕಂಡು ಬರುತ್ತದೆ. ಏಕೆ ಈ ತಾಪತ್ರಯ? ನೀವೇ ಅಡುಗೆ ಮಾಡಿ, ಅಡುಗೆ ಕಲಿಯುವುದು ಖಂಡಿತ ತಪ್ಪಲ್ಲ, ಮುಂದೆ ಮದುವೆಯಾಗಿ ಹೆಂಡತಿ ಮುನಿಸಿಕೊಂಡು ಅಡುಗೆ ಮಾಡದಿದ್ದರೆ ನೀವು ಮಾಡಿ ಹೊಟ್ಟೆ ತುಂಬಿಸಿಕೊಳ್ಳಬಹುದು, ಏನಂತೀರಿ.

ಅಡುಗೆ ಮಾಡುತ್ತೇವೆ ಎಂದು ಉಪ್ಪು , ಹುಳಿ, ಖಾರ, ತರಕಾರಿ ಎಲ್ಲಾ ಹಾಕಿ ಮಾಡಿದರೆ ಅಡುಗೆ ರೆಡಿಯಾಗುವುದಿಲ್ಲ, ಎಲ್ಲದಕ್ಕೂ ಒಂದು ಹದ ಇರುತ್ತದೆ, ಹಾಗೇ ಮಾಡಿದರೆ ಮಾತ್ರ ರುಚಿಯಾದ ಅಡುಗೆ ಮಾಡಲು ಸಾಧ್ಯ. ಚಿಂತೆ ಮಾಡಬೇಡಿ, ಕನ್ನಡ ಬೋಲ್ಡ್ ಸ್ಕೈ ಈ ವಿಷಯದಲ್ಲಿ ನಿಮಗೆ ಸಹಾಯ ಮಾಡುತ್ತದೆ. ಅಡುಗೆ ವಿಷಯದಲ್ಲಿ ಏನಾದರೂ ಡೌಟ್ ಇದ್ದರೆ ನಮ್ಮನ್ನು ಕೇಳಿ, ನಾವು ಸಹಾಯ ಮಾಡುತ್ತೇವೆ.

ಆರೋಗ್ಯಕರ ಅಡುಗೆ ಮಾಡಿಕೊಂಡು ತಿನ್ನಲು ರೆಡಿನಾ? ಹಾಗಾದರೆ ಮೊದಲು ನೀವು ಮಾಡಬೇಕಾದದು ಈ ಕೆಳಗಿನ ಸಾಮಾಗ್ರಿಗಳು ನಿಮ್ಮ ಅಡುಗೆ ಮನೆಯಲ್ಲಿ ಇರುವಂತೆ ನೋಡಿಕೊಳ್ಳಿ. ಏಕೆಂದರೆ ಪಲ್ಯ, ಸಾರು ಇವುಗಳಿಗೆ ಸಾಮಾನ್ಯವಾಗಿ ಈ ಪದಾರ್ಥಗಳನ್ನೇ ಬಳಸಿ ಮಾಡುತ್ತೇವೆ.

ಅಡುಗೆ ಮನೆಯಲ್ಲಿ ಇರಬೇಕಾದ ಪದಾರ್ಥಗಳು
ಉಪ್ಪು
ಖಾರದ ಪುಡಿ
ಅರಿಶಿಣ ಪುಡಿ
ಸಂಬಾರ ಪುಡಿ
ರಸಂ ಪುಡಿ
ಗರಂ ಮಸಾಲ
ಕರಿ ಮೆಣಸಿನ ಪುಡಿ
ಇಂಗು
ಬೆಳ್ಳುಳ್ಳಿ
ಶುಂಠಿ
ಅಥವಾ ಶುಂಠಿ, ಬೆಳ್ಳುಳ್ಳಿ ಪೇಸ್ಟ್
ಸಾಸಿವೆ
ಎಣ್ಣೆ
ಕೊತ್ತಂಬರಿ ಸೊಪ್ಪು
ಕರಿ ಬೇವಿನ ಎಲೆ
ಸ್ವಲ್ಪ ಮೆಂತೆ
ಸ್ವಲ್ಪ ಉದ್ದಿನ ಬೇಳೆ
ಸ್ವಲ್ಪ ಕಡಲೆ ಬೇಳೆ
ಇಷ್ಟು ರೆಡಿ ಮಾಡಿ ಇಡಿ. ಮುಂದಿನ ಲೇಖನಗಳಲ್ಲಿ ಸರಳ ರೆಸಿಪಿಗಳನ್ನು ತಿಳಿಸುತ್ತೇವೆ.

English summary

Cooking Tips For Bachelor From The Boldsky

Bachelor cooking yourself is a best way to protect your health and cooking not really tough. All you need is a few basic ingredients, without which Indian cooking is almost impossible, We will help you to cook and tasty food.
X
Desktop Bottom Promotion