For Quick Alerts
ALLOW NOTIFICATIONS  
For Daily Alerts

20 ಅತ್ಯುತ್ತಮ ಅಡುಗೆ ಟಿಪ್ಸ್

By Super
|

ನೀವು ಆರೋಗ್ಯವಾಗಿರಬೇಕು, ಸುಂದರವಾಗಿ ಕಾಣಬೇಕು ಎಂದಾದಲ್ಲಿ ಅದನ್ನು ತಿನ್ನಬೇಡಿ ಇದನ್ನು ತಿನ್ನಬೇಡಿ ಎಂದು ನಿಮಗೆ ಯಾರಾದರೂ ಹೇಳುತ್ತಿದ್ದಾರೆ ಎಂದಾದರೆ ಅವರು ನಿಮಗೆ ಸುಳ್ಳು ಹೇಳುತ್ತಿದ್ದಾರೆ! ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ! ಅವರು ನಿಮ್ಮ ಮೇಲಿನ ಕೋಪವನ್ನು ಈ ರೀತಿ ತೋರಿಸುತ್ತಿದ್ದಾರೆ ಎಂದುಕೊಳ್ಳಿ! ನೀವು ಹೀಗೆಲ್ಲಾ ಏನೂ ತಿನ್ನದೇ ಇಷ್ಟಪಡುವ ತಿಂಡಿ ತಿನ್ನದೇ ಇರಬೇಕಾದ ಅಗತ್ಯ ಸ್ವಲ್ಪವೂ ಇಲ್ಲ. ಬಿಂದಾಸ್ ಆಗಿ ನಿಮಗೆ ಬೇಕಾದ ಆಹಾರವನ್ನು ತಿನ್ನುತ್ತಾ ಇರಬಹುದು. ನಿಮ್ಮ ಒಳ್ಳೆಯ ಆರೋಗ್ಯಕ್ಕೆ ಸದೃಢ ಮೈಕಟ್ಟಿಗೆ ಬರಿ ನೀವು ತಿನ್ನುವ ತಿಂಡಿಗಳೇ ಕಾರಣವಲ್ಲ. ಹಾಗಾದರೆ ವಯಸ್ಸಾದಂತೆ ಆಕರ್ಷಕ ಮೈಕಟ್ಟು, ಒಳ್ಳೆಯ ಆರೋಗ್ಯ ಇರಬೇಕಾದರೆ ಏನು ಮಾಡಬೇಕು ಎಂದು ತಿಳಿಯಿವ ಕುತೂಹಲ ಇದ್ದರೆ ಮುಂದೆ ಕಣ್ಣು ಹಾಯಿಸಿ.

ನೀವು ಮಾಡುವ ಕೆಲವೊಂದು ಅಡುಗೆಗಳನ್ನು ಬದಲಾಯಿಸಬೇಕು. ಜೊತೆಗೆ ಅಡುಗೆ ಮಾಡುವ ವಿಧಾನವೂ ಬದಲಾಗಬೇಕು. ಮಾಡುವ ಅಡುಗೆಯನ್ನೇ ಸ್ವಲ್ಪ ಬೇರೆ ರೀತಿ ಮಾಡಿ. ಆದರೆ ಹೇಗೆ? ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಸಹಾಯಕ್ಕೆ ನಾವಿದ್ದೇವೆ. ಅದನ್ನೂ ನಾವೇ ಹೇಳಿ ಕೊಡುತ್ತೇವೆ. ಕ್ಯಾಲೋರಿಯನ್ನು ಕಡಿಮೆ ಮಾಡಿ ಕೊಬ್ಬಿನಂಶವನ್ನು ಇಲ್ಲವಾಗಿಸಿದರೆ ಸಾಕು. ಅದಕ್ಕಾಗಿ ಇಲ್ಲಿ ಕೆಲವು ದಾರಿಗಳಿವೆ. ಎಲ್ಲವನ್ನೂ ಪಾಲಿಸಿ ಅತ್ಯಾಕರ್ಷಕರಾಗುತ್ತೀರೋ ಅಥವಾ ಕೆಲವನ್ನು ಮಾತ್ರ ಪಾಲಿಸಿ ಚೆಂದ ಕಾಣುತ್ತೀರೋ ಆಯ್ಕೆ ನಿಮಗೆ ಬಿಟ್ಟದ್ದು.

1.ಮೊದಲನೆಯದಾಗಿ ಕೊಬ್ಬಿನಂಶದಿಂದ ದೂರವಿರಿ

1.ಮೊದಲನೆಯದಾಗಿ ಕೊಬ್ಬಿನಂಶದಿಂದ ದೂರವಿರಿ

ಹೀಗೆಂದ ಮಾತ್ರಕ್ಕೆ ಕೊಬ್ಬಿನಂಶದಿಂದ ಸಂಪೂರ್ಣ ದೂರವಿದ್ದು ಬರಿಯ ಸಪ್ಪೆ ಅಡುಗೆ ಮಾತ್ರ ಸೇವಿಸಿ ಎಂದು ನಾವೆನ್ನುತ್ತಿಲ್ಲ. ಆದಷ್ಟು ಕಡಿಮೆ ಮಾಡಿ. ಹಾಗೆ ತಿನ್ನುವಾಗ ಸಂಸ್ಕರಿಸದ ಪ್ರಾಕೃತಿಕ ಕೊಬ್ಬಿನಂಶ ಇರುವ ವಸ್ತುಗಳನ್ನೇ ಆರಿಸಿಕೊಳ್ಳಿ. ಉದಾಹರಣೆಗೆ ಕಡಲೆ, ಬೀಜಗಳು, ಮೀನು, ಆಲೀವ್ ಹಣ್ಣುಗಳು, ಅವಕಾಡೊಗಳು ಇತ್ಯಾದಿಗಳನ್ನು ಸೇವಿಸಿ. ಇವುಗಳಲ್ಲಿ ಒಮೆಗಾ - 3 ಕೊಬ್ಬಿನಂಶದ ಆಸಿಡ್ ಗಳು ಇರುತ್ತವೆ ಇವು ನಿಮ್ಮ ದೇಹಕ್ಕೆ ಅಗತ್ಯ.

2. ಎರಡನೆಯೆ ಜಾಗೃತೆ ಹಾಲಿನ ಕುರಿತಾದದ್ದು

2. ಎರಡನೆಯೆ ಜಾಗೃತೆ ಹಾಲಿನ ಕುರಿತಾದದ್ದು

ಹಾಲನ್ನು ಬಳಸುವಾಗ ದನದ ಹಾಲು ಮತ್ತು ಕೆನೆ ತೆಗೆದ ಹಾಲನ್ನು ಆರಿಸಿಕೊಳ್ಳಿ. ಪೂರ್ಣ ಪ್ರಮಾಣದ ಕೊಬ್ಬಿನಂಶ ಇರುವ ಹಾಲನ್ನು ಆದಷ್ಟು ದೂರವಿಡಿ. ಎರಡು ದಿನ ರುಚಿಗೆ ಸಪ್ಪೆ ಅನ್ನಿಸಬಹುದು ಆದರೆ ಇದರಿಂದ ಸುಧಾರಿಸುವ ಆರೋಗ್ಯವನ್ನು ನೋಡಿದ ನಂತರ ನೀವು ಕೊಬ್ಬಿನಂಶದ ಹಾಲನ್ನು ಮರೆತು ಹೋಗುತ್ತೀರಿ.

3. ಚೆನ್ನಾಗಿ ಹುರಿದ ವಸ್ತುಗಳನ್ನೇ ನಿಮ್ಮ ಅಡುಗೆಯಲ್ಲಿ ಬಳಸಿ

3. ಚೆನ್ನಾಗಿ ಹುರಿದ ವಸ್ತುಗಳನ್ನೇ ನಿಮ್ಮ ಅಡುಗೆಯಲ್ಲಿ ಬಳಸಿ

ಬೇಯಿಸುವ ಮೊದಲು ತರಕಾರಿಗಳನ್ನು ಚೆನ್ನಾಗಿ ಹುರಿದು ಬೇಯಿಸಿದರೆ ಬೇಗನೇ ಬೇಯುತ್ತವೆ ಜೊತೆಗೆ ಅವುಗಳ ರುಚಿಯೂ ದುಪ್ಪಟ್ಟಾಗುತ್ತದೆ. ನಂಬಿಕೆ ಬರುತ್ತಿಲ್ಲವೇ. ಇಂದೇ ಮಾಡಿ ನೋಡಿ. ಪ್ರತಿ ದಿನ ಇಂತಹುದೇ ಅಡುಗೆ ಬೇಕೆನ್ನುತ್ತೀರಿ.

4. ಅಡುಗೆ ಮಾಡುವಾಗ ಕೆಲವೊಂದು ವಿಧಾನಗಳನ್ನು ಕರಗತ ಮಾಡಿಕೊಳ್ಳಿ

4. ಅಡುಗೆ ಮಾಡುವಾಗ ಕೆಲವೊಂದು ವಿಧಾನಗಳನ್ನು ಕರಗತ ಮಾಡಿಕೊಳ್ಳಿ

ಅಡುಗೆ ಮಾಡುವಾಗ ಕೆಲವೊಂದು ವಿಧಾನಗಳನ್ನು ಕರಗತ ಮಾಡಿಕೊಳ್ಳಿ ಅವುಗಳೆಂದರೆ: ಬೇಯಿಸುವುದು, ಬ್ರೈಸಿಂಗ್, ಬ್ರಾಯ್ಲಿಂಗ್ ಮತ್ತು ಗ್ರಿಲ್ಲಿಂಗ್, ಪೋಚಿಂಗ್, ಹುರಿಯುವುದು ಮತ್ತು ಆವಿಯಿಂದ ಬೇಯಿಸುವುದು ಈ ಎಲ್ಲಾ ವಿಧಾನಗಳು ರುಚಿಕರ ಮತ್ತು ಆರೋಗ್ಯದಾಯಕ.

5. ಬೆಣ್ಣೆಯನ್ನು ಬಳಸಿ ಮಾಡುವ ಅಡುಗೆಗಳನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಿ

5. ಬೆಣ್ಣೆಯನ್ನು ಬಳಸಿ ಮಾಡುವ ಅಡುಗೆಗಳನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಿ

ಜೊತೆಗೆ ಪ್ರಾಣಿಗಳ ಕೊಬ್ಬಿನ ಅಂಶದ ಜೊತೆಗೆ ಬೇಯಿಸುವ ವಿಧಾನವನ್ನು ದೂರವಿಡಿ. ಇವು ನಿಮ್ಮ ಆರೋಗ್ಯಕ್ಕೆ ಖಂಡಿತ ಒಳ್ಳೆಯದಲ್ಲ.

6. ಎಣ್ಣೆಯ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡಿ

6. ಎಣ್ಣೆಯ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡಿ

ನಾವು ಹೇಳುತ್ತಿರುವುದು ನಾನ್ ಸ್ಟಿಕ್ ತವೆಗಳ ಬಗ್ಗೆ ಎಂದು ನೀವು ಊಹಿಸಿರಬಹುದು. ನಿಜ. ನಾನ್ ಸ್ಟಿಕ್ ಪಾತ್ರೆಗಳು ಕಡಿಮೆ ಎಣ್ಣೆಯ ಬಳಕೆ ಮಾಡಿ ಅಡುಗೆ ಮಾಡಬಹುದಾದ ಪಾತ್ರೆಗಳು, ಇವನ್ನೇ ಹೆಚ್ಚು ಬಳಸಿ.

7. ಕೊಬ್ಬಿನಂಶದ ಮಿತ ಬಳಕೆಗೆ ಟಿಪ್ಸ್

7. ಕೊಬ್ಬಿನಂಶದ ಮಿತ ಬಳಕೆಗೆ ಟಿಪ್ಸ್

ಇನ್ನೂ ಹೆಚ್ಚಿನ ಕೊಬ್ಬಿನ ಅಂಶವನ್ನು ಕಡಿಮೆ ಮಾಡಬೇಕು ಎಂದು ನಿಮಗೆ ಅನ್ನಿಸುತ್ತಿದ್ದಲ್ಲಿ ವಿಧಾನಗಳು ನಮ್ಮ ಬಳಿ ಇವೆ. ಅವುಗಳಲ್ಲಿ ಒಂದು ವಿಧಾನ ವೆಂದರೆ ಕುಕ್ಕಿಂಗ್ ಸ್ಪ್ರೇ ಯನ್ನು ಬಳಸಿ. ಅಥವಾ ಇನ್ನೊಂದು ವಿಧಾನವೆಂದರೆ ಪಾಸ್ಟ್ರಿ ಬ್ರಷ್ ಅನ್ನು ಬಳಸುವುದು.

8.ಸಮ ಪ್ರಮಾಣದಲ್ಲಿ ಉಪ್ಪಿನ ಬಳಕೆ

8.ಸಮ ಪ್ರಮಾಣದಲ್ಲಿ ಉಪ್ಪಿನ ಬಳಕೆ

ಉಪ್ಪಿಗಿಂತ ರುಚಿ ಬೇರೆಯಿಲ್ಲ ನಿಜ ಆದರೆ ಒಂದೇ ಸಮನೆ ಉಪ್ಪನ್ನು ಬೆರೆಸುವುದರ ಬದಲಾಗಿ ಅಡುಗೆ ಮಾಡಿ ರುಚಿ ನೋಡಿ ನಂತರ ಬೇಕಾದಷ್ಟೇ ಉಪ್ಪನ್ನು ಬೆರೆಸಿ. ಆಲೀವ್ ಆಯಿಲ್, ವಿನೆಗರ್ ಅಥವಾ ಲಿಂಬೆ ಹಣ್ಣಿನ ರಸವನ್ನು ಅಡುಗೆ ಬೇಯುವ ಕೊನೆಯಲ್ಲಿ ಹಾಕಿದರೆ ಉಪ್ಪು ನೀಡಿದ ಸ್ವಾದವನ್ನೇ ನೀಡುತ್ತದೆ. ಹೀಗೆ ಉಪ್ಪನ್ನು ಆದಷ್ಟು ಕಡಿಮೆ ಬಳಸಿ. ಅತಿಯಾದರೆ ಅಮೃತವೂ ವಿಷ ನೆನಪಿರಲಿ!

9. ಕೆಲವೊಮ್ಮೆ ಎಣ್ಣೆ ಬಳಸದೆ ಅಡುಗೆ ಮಾಡಿ

9. ಕೆಲವೊಮ್ಮೆ ಎಣ್ಣೆ ಬಳಸದೆ ಅಡುಗೆ ಮಾಡಿ

ಪ್ರತಿ ಬಾರಿ ಎಣ್ಣೆಯನ್ನು ಬಳಸಿ ಅಡುಗೆ ಮಾಡುವ ಬದಲಾಗಿ ಸ್ಟಾಕ್, ವೈನ್, ಲಿಂಬೆ ಹಣ್ಣಿನ ರಸ, ವಿನೆಗರ್ ಅಥವಾ ಬರಿಯ ನೀರನ್ನು ಬಳಸಿ ಅಡುಗೆ ಮಾಡಿ. ಈ ಎಲ್ಲವೂ ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಲ್ಲ ಹಾಗೂ ಇದರಿಂದಾಗಿ ಎಣ್ಣೆಯ ಬಳಕೆಯೂ ಬಹಳ ಕಡಿಮೆಯಾಗುತ್ತದೆ.

10. ಮೀನು ಒಳ್ಳೆಯದು

10. ಮೀನು ಒಳ್ಳೆಯದು

ಮೀನಿನಲ್ಲಿ ಪ್ರೊಟೀನ್ ಅಂಶ ಹೆಚ್ಚಾಗಿರುತ್ತದೆ ಹಾಗೂ ಕೊಬ್ಬಿನ ಅಂಶ ಬಹಳ ಕಡಿಮೆಯಾಗಿರುತ್ತದೆ. ಹಾಗೂ ಬಹಳ ಮುಖ್ಯವಾಗಿ ನಿಮ್ಮ ಆರೋಗ್ಯಕ್ಕೆ ಸಹಕಾರಿಯಾದ ಒಮೆಗಾ 3 ಕೊಬ್ಬಿನ ಅಂಶ ಹೇರಳವಾಗಿ ದೊರೆಯುತ್ತದೆ.

11. ಕಡಿಮೆ ಕೊಬ್ಬಿನಂಶ ಇರುವ ಆಹಾರಗಳನ್ನು ಬಳಸಿ

11. ಕಡಿಮೆ ಕೊಬ್ಬಿನಂಶ ಇರುವ ಆಹಾರಗಳನ್ನು ಬಳಸಿ

ಕಡಿಮೆ ಕೊಬ್ಬಿನ ಅಂಶ ಇರುವ ಮೊಸರು, ಹಾಲಿನ ಬಳಕೆ ಮಾಡಿ. ಕೊಬ್ಬಿನ ಅಂಶ ತೆಗೆದ ಹಾಲು ಅಥವಾ ಜೋಳವನ್ನು ಬಳಸುವುದರ ಮೂಲಕ ಕ್ರೀಮ್, ಸಾಸ್ ಮತ್ತು ಸೂಪ್ ಗಳ ಬಳಕೆಯನ್ನು ಕಡಿಮೆ ಮಾಡಿ.

12. ಉಪ್ಪಿನ ಬಳಕೆಯನ್ನು ಹತೋಟಿಯಲ್ಲಿಡಿ

12. ಉಪ್ಪಿನ ಬಳಕೆಯನ್ನು ಹತೋಟಿಯಲ್ಲಿಡಿ

ಆದಷ್ಟು ಉಪ್ಪಿನ ಬಳಕೆಯನ್ನು ಕಡಿಮೆ ಮಾಡುವ ವಿಧಾನಗಳನ್ನು ಯೋಚಿಸಿ. ಒಂದು ಉದಾಹರಣೆ ನಾವೇ ಕೊಡುತ್ತೇವೆ: ತಾಜಾ ಅಥವಾ ಶೈತ್ಯೀಕರಿಸಿದ ತರಕಾರಿಗಳನ್ನು ಬಳಸಿ. ಸಂಸ್ಕರಿಸಿದ ತರಕಾರಿಗಳನ್ನು ದೂರವಿಡಿ ಕಾರಣ, ಸಂಸ್ಕರಣೆ ಮಾಡುವ ತರಕಾರಿಗಳಲ್ಲಿ ಉಪ್ಪನ್ನು ಬಳಸಿ ಕೆಡದಂತೆ ಇಟ್ಟಿರುತ್ತಾರೆ ಇದು ರಕ್ತದೊತ್ತಡವನ್ನು ಬಹಳವಾಗಿ ಹೆಚ್ಚಿಸುತ್ತದೆ.

13. ಸ್ಕಿನ್ ಔಟ್ ಚಿಕನ್

13. ಸ್ಕಿನ್ ಔಟ್ ಚಿಕನ್

ಚಿಕನ್ ನ ಚರ್ಮವನ್ನು ತೆಗೆದು ಕೊಬ್ಬಿನಂಶವನ್ನು ಮಾಂಸದಿಂದ ತೆಗೆಯಿರಿ. ಇದು ಹಲವು ಕ್ಯಾಲೋರಿಗಳನ್ನು ನಿಮ್ಮ ದೇಹ ಸೇರುವುದನ್ನು ತಪ್ಪಿಸುತ್ತದೆ ಹಾಗೂ ನೀವು ಆರೋಗ್ಯವಾಗಿರಲು ಸಹಾಯಕ.

14. ಎಣ್ಣೆಯನ್ನು ಸ್ಪ್ರೇ ಮಾಡಿ ಅಡುಗೆ ಮಾಡುವ ವಿಧಾನ

14. ಎಣ್ಣೆಯನ್ನು ಸ್ಪ್ರೇ ಮಾಡಿ ಅಡುಗೆ ಮಾಡುವ ವಿಧಾನ

ನೀವು ತರಕಾರಿಗಳನ್ನು ಹುರಿಯುವಾಗ ಅವನ್ನು ಒಂದು ಪಾನ್ ನಲ್ಲಿ ಹಾಕಿ ಎಣ್ಣೆಯನ್ನು ಸ್ಪ್ರೇ ಮಾಡಿ. ಇದು ಅಡುಗೆಯ ಸಮಯದಲ್ಲಿ ತರಕಾರಿಗಳು ಎಣ್ಣೆಯನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಇದಕ್ಕೆ ಇನ್ನೊಂದು ಉಪಾಯವೂ ಇದೆ. ನಿಮಗೆ ಯಾವುದು ಸುಲಭವೋ ಅದನ್ನು ಆರಿಸಿ. ಮೊದಲು ಮೈಕ್ರೋವೇವ್ ಓವನ್ ನಲ್ಲಿ ಬೇಯಿಸಿ ನಂತರ ಒಂದೆರಡು ನಿಮಿಷ ಬೆಂಕಿಯಲ್ಲಿ ಸುಟ್ಟು ಆಹಾರ ಸೇವಿಸಿ.

15. ಸಂಸ್ಕರಿಸಿದ ಸಾಸ್ ಬಳಕೆಯನ್ನು ಕಡಿಮೆ ಮಾಡಿ

15. ಸಂಸ್ಕರಿಸಿದ ಸಾಸ್ ಬಳಕೆಯನ್ನು ಕಡಿಮೆ ಮಾಡಿ

ಅಡುಗೆಯನ್ನು ಬಡಿಸುವಾಗ ಅದು ಚೆನ್ನಾಗಿ ಕಾಣಬೇಕು ನಿಜ ಆದರೆ ನಮ್ಮ ಆರೋಗ್ಯವನ್ನು ಇದಕ್ಕೆ ಪಣಕ್ಕಿಡಬಾರದು ಅಲ್ಲವೇ? ಹೌದು ಎಂದಾದರೆ ಸೋಯಾ ಸಾಸ್, ಟೊಮೆಟೊ ಸಾಸ್ ಮತ್ತು ಸಂಸ್ಕರಿಸಿದ ಸಾಸ್ ಬಳಕೆಯನ್ನು ಕಡಿಮೆ ಮಾಡಿ.

16. ಎಣ್ಣೆ ಅಥವಾ ಮಾರ್ಗರಿನ್ ಅನ್ನು ಕಡಿಮೆ ಪ್ರಮಾಣದಲ್ಲಿ ಬಳಸಿ

16. ಎಣ್ಣೆ ಅಥವಾ ಮಾರ್ಗರಿನ್ ಅನ್ನು ಕಡಿಮೆ ಪ್ರಮಾಣದಲ್ಲಿ ಬಳಸಿ

ಎಣ್ಣೆಯನ್ನು ಕಡಿಮೆ ಮಾಡಿ ಅದರ ಬದಲಿಗೆ ಏನು ಬಳಸಬಹುದು ಎಂದು ಯೋಚಿಸುತ್ತೀದ್ದೀರಾ ಉತ್ತರ ಇಲ್ಲಿದೆ. ಚೆನಾಗಿ ಹಿಸುಕಿದ ಸೋಯಾ ಮೊಸರು ಎಣ್ಣೆಗೆ ಸರಿಯಾದ ಬದಲಿ ವ್ಯವಸ್ಥೆ. ಅಗಸೆ ಭೋಜನವೂ ಕೆಲವೊಂದು ಎಣ್ಣೆಯನ್ನು ದೂರವಿಡಲು ಸರಿಯಾದ ಮಾರ್ಗ.

17. ಇನ್ಸ್ಟಾಂಟ್ ಅಡುಗೆಯಿಂದ ದೂರವಿರಿ

17. ಇನ್ಸ್ಟಾಂಟ್ ಅಡುಗೆಯಿಂದ ದೂರವಿರಿ

ಇನ್ಸ್ಟಾಂಟ್ ಪಾಸ್ತಾ ಅಥವಾ ನೂಡಲ್ಸ್ ಸಂಸ್ಕರಿಸಿದ ಸೂಪ್ ಮಿಕ್ಸ್ ಗಳು, ಚಿಪ್ಸ್ ಮತ್ತು ಉಪ್ಪು ಹಚ್ಚಿದ ಕಡಲೆ ಬೀಜಗಳು. ಇವುಗಳಲ್ಲಿ ಒಂದು ಸಾಮಾನ್ಯ ಆರೋಗ್ಯ ವೈರಿಯಿದೆ ಏನೆಂದು ಊಹಿಸಬಲ್ಲಿರಾ? ಸರಿ. ನಿಮ್ಮ ಊಹೆ ಸರಿಯಾಗಿದೆ. ಈ ಎಲ್ಲವುಗಳಲ್ಲಿ ಉಪ್ಪಿನ ಅಂಶ ಬಹಳ ಹೆಚ್ಚಾಗಿದೆ. ಇವುಗಳ ಸೇವನೆಯನ್ನು ಕಡಿಮೆ ಮಾಡಿದಲ್ಲಿ ಉಪ್ಪಿನ ಅಂಶವನ್ನು ಬಹಳವಾಗಿ ಕಡಿಮೆ ಮಾಡಿದಂತೆ.

18. ವಿಟಮಿನ್ ಹಾಳಾಗದಂತೆ ಅಡುಗೆ ಮಾಡಿ

18. ವಿಟಮಿನ್ ಹಾಳಾಗದಂತೆ ಅಡುಗೆ ಮಾಡಿ

ನೀರಿನಲ್ಲಿ ಬೆರೆಯುವ ವಿಟಮಿನ್ ಗಳ ನಷ್ಟವನ್ನು ತಪ್ಪಿಸುವ ಸಲುವಾಗಿ ತರಕಾರಿಗಳ ಸಿಪ್ಪೆಯನ್ನು ತೆಗೆಯುವ ಬದಲಾಗಿ ಅವುಗಳನ್ನು ನೀರಿನಲ್ಲಿ ಚೆನ್ನಾಗಿ ತಿಕ್ಕಿ ತೊಳೆಯಿರಿ. ಕಾರಣ ಹೆಚ್ಚಿನ ವಿಟಮಿನ್ ಗಳು ಸಿಪ್ಪೆಯ ಭಾಗದಲ್ಲಿ ಇರುತ್ತವೆ. ಬೇಯಿಸುವ ಬದಲಾಗಿ ತರಕಾರಿಗಳನ್ನು ಮೈಕ್ರೋವೇವ್ ಓವನ್ ನಲ್ಲಿ ಬೇಯಿಸಿ. ನಿಮಗೆ ಬೇಯಿಸಿದ ಅಡುಗೆಯೇ ಇಷ್ಟ ಎಂದಾದಲ್ಲಿ ಸ್ವಲ್ಪ ನೀರಿನಲ್ಲಿ ಬೇಯಿಸಿ ಹಾಗೂ ಹೆಚ್ಚು ಬೇಯಿಸಬೇಡಿ.

19. ಮೂಲಿಕೆಗಳು ಮತ್ತು ಸಂಬಾರ ಪದಾರ್ಥಗಳ ಬಳಕೆ

19. ಮೂಲಿಕೆಗಳು ಮತ್ತು ಸಂಬಾರ ಪದಾರ್ಥಗಳ ಬಳಕೆ

ಅಡುಗೆಗೆ ಬಳಸಬಹುದಾದ ಗಿಡಗಳು ಮತ್ತು ಎಲೆಗಳು ಎಲ್ಲಾ ತರಹದ ಅಡುಗೆಯ ರುಚಿಯನ್ನು ಹೆಚ್ಚಿಸುತ್ತವೆ ಮತ್ತು ಆಹಾರವನ್ನು ಹೆಚ್ಚು ಆಕರ್ಷಕವನ್ನಾಗಿಸುತ್ತದೆ. ಇವುಗಳಲ್ಲಿ ಆಹಾರವನ್ನು ಮತ್ತಷ್ಟು ರುಚಿಕರ ಮತ್ತು ಆರೋಗ್ಯದಾಯಕವನ್ನಾಗಿಸುವ ಫೈಟೋಈಸ್ಟ್ರೋಜನ್ ಗಳೂ ಇರುತ್ತವೆ. ಹಲವು ಅಡುಗೆಗಳಲ್ಲಿ ಈ ಗಿಡಗಳು ಮತ್ತು ಎಲೆಗಳು ಎಣ್ಣೆ ಮತ್ತು ಉಪ್ಪಿನ ಬದಲಾಗಿ ಕೂಡ ಬಳಸಬಹುದಾಗಿದೆ.

20. ಆರೋಗ್ಯಕರ ಅಡುಗೆ

20. ಆರೋಗ್ಯಕರ ಅಡುಗೆ

ಎಲೆಗಳು ಬಹಳ ಹೆಚ್ಚಿನ ಸ್ವಾದವನ್ನು ಕೊಡುತ್ತವೆ ಇವುಗಳ ಸ್ವಾದವು ಹೆಚ್ಚು ಬೇಯಿಸಿದರೆ ಕೆಡುತ್ತದೆ ಆದ್ದರಿಂದ ಕೊನೆಯಲ್ಲಿ ಇವುಗಳನ್ನು ಸೇರಿಸಿ.

English summary

20 Healthy Cooking Tips

Instead, you just have to modify your basic recipes and change your cooking methods. Here are some easy ways to cut calories and burn fat, with these simple cooking techniques.
X
Desktop Bottom Promotion