For Quick Alerts
ALLOW NOTIFICATIONS  
For Daily Alerts

ರುಚಿ ರುಚಿ ಅಡುಗೆ : ಕಿಚನ್‌ ಕ್ವೀನ್‌ಗೆ ಕಿವಿಮಾತುಗಳು

By * ಅಮೃತಾ
|
Cooking Tips
* ದೋಸೆ ಮತ್ತು ಇಡ್ಲಿ ಮಲ್ಲಿಗೆ ಹೂವಿನಂತೆ ಮೃದುವಾಗಿದ್ದರೆ ಚೆನ್ನ! ಅದಕ್ಕಾಗಿ ಹೋಟೆಲ್‌ಗೆ ಹೋಗುವುದೇನು ಬೇಕಿಲ್ಲ. ದೋಸೆ ಅಥವಾ ಇಡ್ಲಿಗೆ ಅಕ್ಕಿ ರುಬ್ಬುವಾಗ ಒಂದಿಷ್ಟು ಅನ್ನ ಮತ್ತು ಉದ್ದಿನ ಬೇಳೆ ಸೇರಿಸಿ.

* ಅಕ್ಕಿ ಮತ್ತಿತರ ಧಾನ್ಯಗಳನ್ನು ನೀವು ಡಬ್ಬದಲ್ಲಿ ಸಂಗ್ರಹಿಸಿಡೋದು ಸರಿ. ಆದರೆ ಸಣ್ಣ ಹುಳಗಳ ಕಾಟ ಇದೆಯಲ್ಲ, ಏನ್‌ ಮಾಡೋದು ಅನ್ನುವಿರಾ? ಯೋಚಿಸಬೇಡಿ; ಡಬ್ಬದೊಳಕ್ಕೆ ಬೇವಿನ ಕಡ್ಡಿ ಮತ್ತು ಕೆಲವು ಅರಿಶಿಣದ ತುಂಡುಗಳನ್ನು ಹಾಕಿ.

* ಕಷ್ಟ ಪಟ್ಟು, ಪ್ರೀತಿಯಿಂದ ಚಪಾತಿ/ ರೊಟ್ಟಿಗೆ ಪಲ್ಯ ಮಾಡಿದರೆ, ಅದಕ್ಕೆ ಉಪ್ಪು ಜಾಸ್ತಿಯಾಗಿದೆ! ಚಿಂತೆ ಬಿಡಿ, ಸ್ವಲ್ಪ ಅಕ್ಕಿಹಿಟ್ಟನ್ನು ಸೇರಿಸಿ.

* ಮೊಸರು ಸಕತ್‌ ಹುಳಿ ಅನ್ನಿಸುತ್ತಿದೆಯೇ? ನಾಲಕ್ಕು ಕಪ್‌ ನೀರನ್ನು ಅದಕ್ಕೆ ಹಾಕಿ. ಅರ್ಧ ಗಂಟೆ ಆದ ಮೇಲೆ, ಮೇಲಿನ ನೀರನ್ನು ಬಗ್ಗಿಸಿಬಿಡಿ.

* ಚಪಾತಿ ಮೃದುವಾಗಿದ್ದರೆ ಚೆನ್ನಾ ಅಲ್ವಾ? ಅದಕ್ಕಾಗಿ ಹಿಟ್ಟು ಕಲಸುವಾಗ ಸ್ವಲ್ಪ ಮೊಸರು ಬಳಸಿ. ಅಥವಾ ಬಾಳೆಹಣ್ಣನ್ನು ಕಿವುಚಿ.

* ಆಲೂಗಡ್ಡೆ ಪಲ್ಯ ಮತ್ತು ಉಪ್ಪಿಟ್ಟಿಗೆ ನಿಂಬೆಹಣ್ಣನ್ನು ಹಿಂಡಿ. ಅದರ ರಸ ಸೇರಿದ ಮೇಲೆ ರುಚಿಯೋ ರುಚಿ.

English summary

Tasty Cooking Tips by Amrutha | Kitchen tips | ಕಿಚನ್‌ ಕ್ವೀನ್‌ಗೆ ಕಿವಿಮಾತುಗಳು

Karnataka Kitchen : Useful cooking Tips by Amrutha.
Story first published: Wednesday, April 5, 2006, 16:50 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X