For Quick Alerts
ALLOW NOTIFICATIONS  
For Daily Alerts

ಇದೀಗ ತಾನೆ ಮದುವೆಯಾದ ಹುಡುಗಿಗೆ

By * ಸುಶೀಲಾ ಗೋಪಾಲ್‌
|
Just married girl (pic by mike)
ಹುಡುಗಿ ಚೆನ್ನಾಗಿ ಓದಿದ್ದಾಳೆ, ಒಳ್ಳೆ ಕೆಲಸದಲ್ಲಿದ್ದಾಳೆ, ಬಿಡುವಿದ್ದಾಗ ಕಸೂತಿ ಮಾಡುತ್ತಾಳೆ, ಚಿತ್ರ ಬಿಡಿಸುತ್ತಾಳೆ, ತಕ್ಕಮಟ್ಟಿಗೆ ಕಾಫಿ ಮಾಡುವುದನ್ನೂ ಕಲಿತಿದ್ದಾಳೆ. ಆದರೆ, ಏನು ಮಾಡುವುದು ಸೀರೆ ಉಡಲು ಬರುವುದಿಲ್ಲ, ಅಡುಗೆಮನೆ ಕಡೆಗೆ ತಲೆನೂ ಹಾಕಿಲ್ಲ. ಪರವಾಗಿಲ್ಲ, ಇದೀಗ ತಾನೆ ಮದುವೆಯಾಗಿ ಗಂಡನ ಮನೆ ಹೊಸ್ತಿಲು ತುಳಿದು ಅಡುಗೆಮನೆ ಅಂದ ಕೂಡಲೆ ಕಕ್ಕಾಬಿಕ್ಕಿಯಾಗುವ ಇಂಥ ಹುಡುಗಿಗಾಗಿ ಕೆಲ ಅಡುಗೆಮನೆ ಟಿಪ್ಸ್. ಈ ಟಿಪ್ಸ್ ಗಳು ಅಡುಗೆ ಪ್ರವೀಣೆಯರಿಗೆ ಖಂಡಿತ ಅಲ್ಲ.

* ಹುರುಳಿಕಾಯಿ, ಗೋರಿಕಾಯಿಗಳನ್ನು ಮಾರುಕಟ್ಟೆಯಿಂದ ತಂದ ಕೂಡಲೇ ನಾರು ಬಿಡಿಸಿಟ್ಟರೆ ಕಾಯಿ ಬಲಿಯದು.

* ಹುರುಳಿಕಾಯಿ ಹಾಗೂ ಗೋರಿಕಾಯಿಗಳನ್ನು ಹುರಿಯುವಾಗ ಒಂದು ಚಿಟಿಕೆ ಉಪ್ಪು ಅಥವಾ ಸಕ್ಕರೆ ಹಾಕಿದರೆ ಅದರ ಹಸಿರು ಬಣ್ಣ ಹಾಗೆಯೇ ಉಳಿಯುವುದು.

* ತಾಜಾ ಹಸಿ ಮೆಣಸಿನಕಾಯಿಯ ತೊಟ್ಟು ಬಿಡಿಸಿಟ್ಟರೆ ಅದು ಬೇಗ ಹಣ್ಣಾಗುವುದಿಲ್ಲ.

* ಮಸಾಲೆ ತಯಾರಿಸುವಾಗ ರುಬ್ಬುವ ಖಾರಕ್ಕೆ ಒಂದೆರಡು ಹಸಿ ಟೊಮೇಟೊ ಹಾಕಿ. ಇದರಿಂದ ಸಾರು ಒಳ್ಳೆಯ ಬಣ್ಣ ಪಡೆಯುವುದಲ್ಲದೆ ರುಚಿ ಹೆಚ್ಚುವುದು.

* ಹಸಿ ಮೆಣಸಿನಕಾಯಿ ಖಾರಕ್ಕೆ ಉಪ್ಪಿನ ಜತೆ ಸ್ವಲ್ಪ ನಿಂಬೆರಸವನ್ನೂ ಹಾಕಿ ತಿರುವಿದರೆ ಬಹಳ ದಿನಗಳವರೆಗೂ ತಿನ್ನಲು ಬಳಸಬಹುದು.

* ಹುರುಳಿಕಾಯಿ, ಗೋರಿಕಾಯಿ, ಕ್ಯಾರೆಟ್‌ಗಳು ಬಾಡಿದ್ದರೆ ಸ್ವಲ್ಪ ಹೊತ್ತು ಉಪ್ಪು ನೀರಿನಲ್ಲಿ ಹಾಕಿಡಿ. ಮತ್ತೆ ಮೊದಲಿನ ತಾಜಾತನ ಮರಳುವುದು.

* ಕೈಗೆ ಸ್ವಲ್ಪ ಕೊಬ್ಬರಿ ಎಣ್ಣೆ ಸವರಿಕೊಂಡು ಬೀಟ್‌ರೂಟ್‌ ಹೆಚ್ಚಿದರೆ ಕೈ ಕೆಂಪಾಗದು.

* ಪರಂಗಿ ಹಣ್ಣು ಅಥವಾ ಕಾಯಿ ಹೆಚ್ಚುವಾಗ ಮೊದಲು ಸಿಪ್ಪೆ ತೆಗೆದು ಅನಂತರ ತೊಟ್ಟು ಹಾಗೂ ತುದಿ ತೆಗೆಯಿರಿ. ಇದರಿಂದ ಹಾಲು ಜಿನುಗಿ ಜಾರುವುದು ತಪ್ಪುತ್ತದೆ.

* ಪುದೀನಾ ಚಟ್ನಿ ರುಬ್ಬುವಾಗ ಸ್ವಲ್ಪ ನಿಂಬೆರಸ ಹಾಕಿದರೆ ಚಟ್ನಿಯ ಬಣ್ಣ ಹಸಿರಾಗಿಯೇ ಇರುವುದು.

* ಅಕ್ಕಿರೊಟ್ಟಿ ಮಾಡಲು ಹಿಟ್ಟನ್ನು ಬೇಯಿಸುವಾಗ ಒಂದು ಟೇಬಲ್‌ ಚಮಚ ಚಿರೋಟಿ ರವೆ ಹಾಕಿದರೆ ರೊಟ್ಟಿಯ ಅಂಚು ಸೀಳುವುದಿಲ್ಲ.

Story first published: Monday, July 5, 2010, 17:28 [IST]
X
Desktop Bottom Promotion