For Quick Alerts
ALLOW NOTIFICATIONS  
For Daily Alerts

ಮೆಣಸಿನಕಾಯಿ ತಿಂದಾಗ ಏನು ಮಾಡಬೇಕು?

By Rajendra
|
Home remedy for burning mouth
ಒಮ್ಮೊಮ್ಮೆ ಊಟ ಮಾಡಬೇಕಾದರೆ ಚಟಕ್ಕನೆ ಹಸಿಮೆಣಸಿನಕಾಯಿ ಹಲ್ಲಿಗೆ ಸಿಕ್ಕಿ ಅಪ್ಪಚ್ಚಿಯಾಗುತ್ತದೆ. ಬಾಯಲ್ಲೆಲ್ಲಾ ಒಂದೇ ತರಹ ಖಾರ ಖಾರ. ನಾಲಿಗೆ ತಣ್ಣಗಾಗಲಿ ಎಂದು ಹಾ...ಹಾ... ಎಂದು ಗಾಳಿ ಎಳೆದುಕೊಳ್ಳುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ನೀವೇನು ಮಾಡುತ್ತೀರಾ?

ಇನ್ನೇನು ಮಾಡಲು ಸಾಧ್ಯ; ಒಂದು ಲೋಟ ನೀರು ಕುಡಿದು ಖಾರ ನೀಗಿಸಿಕೊಳ್ಳುತ್ತೇವೆ ಅಂತೀರಾ ಅಲ್ವಾ? ಆದರೆ ನೀರು ಕುಡಿದಷ್ಟು ಮಾತ್ರಕ್ಕೆ ಖಾರ ಕಮ್ಮಿಯಾಗಲ್ಲ. ಕಾರಣ... ಹಸಿಮೆಣಸಿನಕಾಯಿ ಕಚ್ಚಿದ ಕೂಡಲೆ ಅದರಲ್ಲಿನ ಎಣ್ಣೆ ಗುಣಗಳು ಬಾಯಲ್ಲೆಲ್ಲಾ ಪಸರಿಸುತ್ತವೆ.

ಇಂತಹ ಸಂದರ್ಭದಲ್ಲಿ ನೀರು ಕುಡಿಯುವುದರಿಂದ ಪ್ರಯೋಜನವಾಗದು. ನೀರು ಎಣ್ಣೆಯನ್ನು ಗ್ರಹಿಸುವುದಿಲ್ಲ. ಹಾಗಾಗಿ ಬಾಯಿಯ ಖಾರ ಕೂಡಲೆ ನೀಗುವುದಿಲ್ಲ. ಹಾಗಿದ್ದರೆ ಏನು ಮಾಡಬೇಕು ಗೊತ್ತೆ...! ಇಲ್ಲಿದೆ ನೋಡಿ ಮನೆ ಮದ್ದು. ಎರಡು ಹನಿ ಮಜ್ಜಿಗೆ ಅಥವಾ ಒಂದು ಚಮಚ ಮೊಸರನ್ನು ಬಾಯಲ್ಲಿ ಹಾಕಿಕೊಳ್ಳಿ.

ಮಜ್ಜಿಗೆ ಅಥವಾ ಮೊಸರು ಎಣ್ಣೆಯ ಅಂಶವನ್ನು ಹೀರಿಕೊಳ್ಳುತ್ತವೆ. ಹಾಗಾಗಿ ಖಾರ ಕೂಡಲೆ ಕಡಿಮೆಯಾಗುತ್ತದೆ. ಅದೇ ರೀತಿ ಮಕ್ಕಳು ಊಟ ಮಾಡುವಾಗ ಹಸಿಮೆಣಸಿನಕಾಯಿ ತಿಂದರೆ ಅರ್ಧ ಲೋಟ ಹಾಲು ಇಲ್ಲವೆ ಬ್ರೆಡ್ಡಿನ ಚೂರನ್ನು ತಿನ್ನಿಸಬೇಕು ಎನ್ನುತ್ತಾರೆ ಆಹಾರ ನಿಪುಣರು. ಬೇಕಿದ್ದರೆ ಇಂದಿನ ಊಟದ ಜೊತೆ ಮೆಣಸಿನಕಾಯೊಂದನ್ನು ತಿಂದು ಪರೀಕ್ಷಿಸಿ ನೋಡಿ! ಆದರೆ, ಪಕ್ಕದಲ್ಲೇ ಮೊಸರು ಅಥವಾ ಮಜ್ಜಿಗೆಯನ್ನು ಇಟ್ಟುಕೊಳ್ಳುವುದನ್ನು ಮರೆಯಬೇಡಿ.

Story first published: Tuesday, May 18, 2010, 11:47 [IST]
X
Desktop Bottom Promotion