For Quick Alerts
ALLOW NOTIFICATIONS  
For Daily Alerts

ಅಡುಗೆ ಮನೆಯ ವಿಭಿನ್ನ ಕಲೆಗಾರಿಕೆ

By * ನಿವೇದಿತಾ ಪ್ರಭಾಕರ್, ಬೆಂಗಳೂರು
|
Easy kitchen tips for fresh cooks
ಅಡುಗೆ ಮಾಡುವುದು ಅದ್ಭುತ ಕಲೆ. ಅಡುಗೆ ಮನೆಯನ್ನು ನೀಟಾಗಿಟ್ಟುಕೊಳ್ಳುವುದು ಮತ್ತು ಅಡುಗೆ ಪದಾರ್ಥಗಳನ್ನು ಕೆಡದಂತೆ ಬಳಸುವುದು ಕೂಡ ಒಂದು ಕಲೆಯೇ. ಕೆಲ ಸಣ್ಣಪುಟ್ಟ ಅಂಶಗಳನ್ನು ತಿಳಿದುಕೊಂಡರೆ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಬಹುದು ಮತ್ತು ಅಡುಗೆಮನೆಯಲ್ಲಿ ಶಿಸ್ತು ತರಬಹುದು.

* ಅಕ್ಕಿ ಅಥವಾ ಬೇಳೆಯ ಡಬ್ಬಿಗೆ ಕೈಹಾಕುವ ಮೊದಲು ಕೈ ಒಣಗಿರಲಿ. ಹಸಿಕೈಯಿಂದ ಹಿಡಿದರೆ ಹುಳ ಹಿಡಿಯುವುದು ಖಂಡಿತ.
* ಅಕ್ಕಿಯಲ್ಲಿ ನುಸಿಯಾಗದಿರಲು ಡಬ್ಬಿಯಲ್ಲಿ ಒಂದು ಈರುಳ್ಳಿಯನ್ನು ಹೂತಿಡಿ. ಹುಳ ಆಗುವುದಿಲ್ಲ.
* ಅನ್ನ ಮಾಡುವ ಮೊದಲು ಎರಡನೇ ಬಾರಿ ತೊಳೆದ ಅಕ್ಕಿಯ ನೀರನ್ನು ಹಾಗೇ ಚೆಲ್ಲದೆ, ಸಕ್ಕರೆ, ನಿಂಬೆರಸ ಸೇರಿಸಿ ಪಾನಕ ಮಾಡಿ ಕುಡಿಯಬಹುದು. ದೇಹಕ್ಕೆ ಅದು ತಂಪು ತಂಪು.
* ತುಂಡರಿಸಿ ತಿನ್ನದೇ ಪ್ರಿಜ್ಜಲ್ಲಿಟ್ಟ ಸೇಬು ಕಂದು ಬಣ್ಣಕ್ಕೆ ತಿರುಗದಿರಲು ಉಪ್ಪು ಲೇಪಿಸಿ.
* ಡಬ್ಬಿಯಲ್ಲಿ ಶೇಕರಿಸಿಟ್ಟ ಸಕ್ಕರೆಗೆ ಇರುವೆ ಬಾರದಿರಲು ಒಂದೆರಡು ಲವಂಗಗಳನ್ನು ಸೇರಿಸಿಡಿ.
* ಈರುಳ್ಳಿ ಹೆಚ್ಚುವಾಗ ಕಣ್ಣೀರು ಬರದಿರಲು ಅರ್ಧ ಹೆಚ್ಚಿ ನೀರಲ್ಲಿ ಕೆಲಹೊತ್ತು ನೆನೆ ಇಡಿ.
* ಹಾಲಿನ ಪಾತ್ರೆ ತಟಪಟ ಸದ್ದು ಮಾಡದಿರಲು ಪಾತ್ರೆಗೆ ಹಾಲು ಹಾಕುವ ಮೊದಲು ಸ್ವಲ್ಪ ನೀರು ಹಾಕಿ.
* ಹಾಲು ಕಾಯಿಸದೆ ಬಹಳ ಹೊತ್ತು ಇಟ್ಟಿದ್ದರೆ, ನಂತರ ಕಾಸುವಾಗ ಚಿಟಿಕೆ ತಿನ್ನುವ ಸೋಡಾ ಸೇರಿಸಿ ಕಾಯಿಸಿ, ಒಡೆಯುವುದಿಲ್ಲ.
* ಆಲೂಗಡ್ಡೆ ಬೇಗನೆ ಬೇಯಬೇಕಿದ್ದರೆ ಸ್ವಲ್ಪ ಹೊತ್ತು ಉಪ್ಪಿನ ನೀರಲ್ಲಿ ನೆನೆಸಿಟ್ಟು ನಂತರ ಬೇಯಿಸಿ.
* ಮೊಸರು ಹುಳಿಹುಳಿಯಾಗಿದ್ದರೆ ಅದಕ್ಕೆ ಸ್ವಲ್ಪ ನೀರು ಸೇರಿಸಿ ಎರಡು ತಾಸು ಬಿಡ್ಡು ನೀರನ್ನು ಬಸಿದರೆ ಮೊಸರು ಮತ್ತೆ ಸಿಹಿಯಾಗಿರುತ್ತದೆ.
* ಗೋಬಿ ಮಂಚೂರಿ ಮಾಡುವ ಮೊದಲು ನೀರಿನಲ್ಲಿ ಚಿಟಿಕೆ ಉಪ್ಪು ಮತ್ತು ಅರಿಷಿಣ ಸೇರಿಸಿ ಹೂಕೋಸು ತುಣುಕುಗಳನ್ನು ನೀರಲ್ಲಿ ಮುಳುಗಿಸಿ. ಹುಳಗಳು ಹೂಕೋಸಿಂದ ಹೊರಬರುತ್ತವೆ.
* ಉಪ್ಪಿಟ್ಟು, ಅವಲಕ್ಕಿಯಂಥ ತಿಂಡಿಗೆ ಉಪ್ಪು ಜಾಸ್ತಿಯಾದರೆ ಇನ್ನಷ್ಟು ನಿಂಬೆರಸ ಹಿಂಡಿದರೆ ಉಪ್ಪಿನಂಶ ಕಡಿಮೆಯಾಗುತ್ತದೆ.

Story first published: Thursday, April 1, 2010, 18:16 [IST]
X
Desktop Bottom Promotion