For Quick Alerts
ALLOW NOTIFICATIONS  
For Daily Alerts

ಬರೀ 10 ನಿಮಿಷದಲ್ಲಿ ತಯಾರಿಸಿ ರುಚಿ ರುಚಿಯಾದ ಬೀಟ್‍ರೂಟ್ ಹಲ್ವಾ!

By Super
|

ಬೀಟ್‍ರೂಟ್ ಯಾರಿಗೆ ತಾನೇ ಗೊತ್ತಿಲ್ಲ. ಕಡುಗೆಂಪು ಬಣ್ಣದ ಈ ತರಕಾರಿಯು ನೋಡಲು ಹೀಗಿದ್ದದರು, ಸಿಹಿಯಾಗಿ ಸೇವಿಸಲು ಅತ್ಯಂತ ರುಚಿಕರವಾಗಿರುತ್ತದೆ. ಬೀಟ್‍ರೂಟ್‍ನಿಂದ ಹಲವಾರು ಖಾದ್ಯಗಳನ್ನು ತಯಾರಿಸಬಹುದು. ಇದಕ್ಕೆ ಇದರಿಂದ ದೊರೆಯುವ ಆರೋಗ್ಯಕರವಾದ ಪ್ರಯೋಜನಗಳೆ ಕಾರಣ. ಈ ಬೀಟ್‍ರೂಟ್‍ಗಳನ್ನು ನಿಮ್ಮ ಆಹಾರದಲ್ಲಿ ನಾನಾ ಬಗೆಯಲ್ಲಿ ಸೇರಿಸಿಕೊಳ್ಳಬಹುದು. ಇದನ್ನು ಕತ್ತರಿಸಿ ಅದರ ಮೇಲೆ ನಿಂಬೆರಸವನ್ನು ಚಿಮುಕಿಸಿಕೊಂಡು ಸಲಾಡ್ ಬೇಕಾದರೆ ಮಾಡಿಕೊಳ್ಳಬಹುದು.

ಇಲ್ಲವಾದಲ್ಲಿ ಇದನ್ನು ರೋಸ್ಟ್ ಮಾಡಿ ಉಪ್ಪಿನಕಾಯಿ ಮಾಡಿಕೊಳ್ಳಬಹುದು. ಹಾಗಾದರೆ ಬೀಟ್‍ರೂಟನ್ನು ಮತ್ತೆ ಯಾವ ಬಗೆಯಲ್ಲಿ ಮತ್ತಷ್ಟು ರುಚಿಕರವಾಗಿ ಮಾಡಿಕೊಂಡು ತಿನ್ನಬಹುದು? ಎಂಬುದು ನಿಮ್ಮ ಪ್ರಶ್ನೆಯೇ, ಹಾಗಾದರೆ ಎಂದಾದರು ಬೀಟ್‍ರೂಟ್ ಹಲ್ವಾ ಮಾಡಿಕೊಂಡು ತಿಂದಿದ್ದೀರಾ? ಬೀಟ್‍ರೂಟ್ ಹಲ್ವಾ ಈ ತರಕಾರಿಯನ್ನು ತಿನ್ನಲು ಹೇಳಿ ಮಾಡಿಸಿದಂತಹ ಮಾರ್ಗವಾಗಿರುತ್ತದೆ. ಇದು ಹಲ್ವಾಗಳ ಪೈಕಿ ರುಚಿಕರವಾದ ಒಂದು ಹಲ್ವಾವಾಗಿ ಗುರುತಿಸಲ್ಪಟ್ಟಿದೆ.

Yummy Beetroot Halwa Recipe

ಬೀಟ್‍ರೂಟ್‍ನಲ್ಲಿ ಪೊಟಾಶಿಯಂ, ಮ್ಯೆಗ್ನಿಶಿಯಂ, ಕಬ್ಬಿಣಾಂಶ, ವಿಟಮಿನ್ ಎ, ಬಿ6 ಮತ್ತು ಸಿ, ಫೋಲಿಕ್ ಆಮ್ಲ, ಕಾರ್ಬೋಹೈಡ್ರೆಟ್‍ಗಳು, ಪ್ರೋಟಿನ್, ಆಂಟಿಆಕ್ಸಿಡೆಂಟ್‍ಗಳು ಮತ್ತು ಕರಗುವಂತಹ ನಾರಿನಂಶ ಎಲ್ಲವೂ ಇದೆ. ಬೀಟ್‍ರೂಟ್‍ನಲ್ಲಿ ಹಲವಾರು ಆರೋಗ್ಯಕರ ಪ್ರಯೋಜನಗಳು ಅಡಗಿವೆ. ಇದು ಸದೃಢತೆಯನ್ನು ಹೆಚ್ಚಿಸುತ್ತದೆ, ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ, ಮಧುಮೇಹವನ್ನು ನಿಯಂತ್ರಿಸುತ್ತದೆ, ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ. ಯಾವುದೇ ಹಬ್ಬಕ್ಕೂ ಸಲ್ಲುವ ವಿವಿಧ ಹಣ್ಣುಗಳ ಹಲ್ವಾ

Yummy Beetroot Halwa Recipe

ಜೊತೆಗೆ ಇದು ಕೂದಲು ಮತ್ತು ತ್ವಚೆಗು ಸಹ ಪ್ರಯೋಜನಕಾರಿ. ವಯಸ್ಸಾದಂತೆ ಕಾಣುವುದನ್ನು ಇದು ತಡೆಯುತ್ತದೆ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಹೀಗೆ ಇದರ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ. ಈ ಎಲ್ಲಾ ಕಾರಣಗಳಿಂದ ಇದನ್ನು ನಿಮ್ಮ ಆಹಾರದಲ್ಲಿ ತಪ್ಪದೆ ಸೇರಿಸಿಕೊಳ್ಳಬೇಕಾದ ತರಕಾರಿಯಾಗಿ ಇದು ಗುರುತಿಸಲ್ಪಟ್ಟಿದೆ. ಇದರ ಪ್ರಯೋಜನಗಳನ್ನು ಗರಿಷ್ಠ ಪ್ರಮಾಣದಲ್ಲಿ ನಿಮ್ಮದನ್ನಾಗಿಸಿಕೊಳ್ಳಲು ಬೀಟ್‍ರೂಟ್ ಹಲ್ವಾ ರೆಸಿಪಿ ಉತ್ತಮ ಮಾರ್ಗವಾಗಿದೆ. ಇದು ಬೀಟ್‍ರೂಟ್ ಖಾದ್ಯಗಳಲ್ಲಿಯೇ ಅತ್ಯುತ್ತಮವಾದ ಖಾದ್ಯವಾಗಿದೆ. ಇಂದು ಬೋಲ್ಡ್‌ಸ್ಕೈ ನಿಮ್ಮೊಂದಿಗೆ ಬೀಟ್‍ರೂಟ್ ಹಲ್ವಾ ಮಾಡುವ ಬಗೆಯನ್ನು ಹಂಚಿಕೊಳ್ಳುತ್ತಿದೆ. ಬನ್ನಿ ಈ ಆರೋಗ್ಯಕರವಾದ ಮತ್ತು ಪೋಷಕಾಂಶಭರಿತವಾದ ಬೀಟ್‍ರೂಟ್ ಹಲ್ವಾ ತಯಾರಿಸುವುದನ್ನು ತಿಳಿದುಕೊಳ್ಳಿ.

Yummy Beetroot Halwa Recipe

ತಯಾರಿಕೆಗೆ ತಗುಲುವ ಸಮಯ : 10 ನಿಮಿಷ

ಅಡುಗೆಗೆ ತಗುಲುವ ಸಮಯ: 60 ನಿಮಿಷ

ಬೀಟ್‍ರೂಟ್ ಹಲ್ವಾ ಮಾಡಲು ಬೇಕಾದ ಪದಾರ್ಥಗಳು:

*ಬೀಟ್‍ರೂಟ್ - 4

*ಹಾಲು - 2 ಕಪ್

*ಸಕ್ಕರೆ - 1/2 ಕಪ್ ಅಥವಾ ರುಚಿಗೆ ತಕ್ಕಷ್ಟು

Yummy Beetroot Halwa Recipe

*ಏಲಕ್ಕಿ ಪುಡಿ - 1 ಟೀ ಚಮಚ

*ತುಪ್ಪ - 3 ಟೇಬಲ್ ಚಮಚ

*ಗೋಡಂಬಿ - ಸ್ವಲ್ಪ

*ಒಣ ದ್ರಾಕ್ಷಿ - ಸ್ವಲ್ಪ

*ಬಾದಾಮಿ - ಒಂದು ಹಿಡಿ

*ಕೋವಾ - 100 ಗ್ರಾಂ (ಐಚ್ಛಿಕ)

*ಮಂದಗೊಳಿಸಿದ ಹಾಲು - ನಿಮ್ಮ ರುಚಿಗೆ ತಕ್ಕಷ್ಟು (ಐಚ್ಛಿಕ)

Yummy Beetroot Halwa Recipe

ಬೀಟ್‍ರೂಟ್ ಹಲ್ವಾ ತಯಾರಿಸುವ ವಿಧಾನ

1. ಬೀಟ್‍ರೂಟನ್ನು ಚೆನ್ನಾಗಿ ತೊಳೆದು, ಹ್ಯಾಂಡ್ ಗ್ರೇಟರಿನಿಂದ ಸಿಪ್ಪೆಯನ್ನು ಸುಲಿಯಿರಿ.

2. ತುಪ್ಪವನ್ನು ಆಳವಾದ ತಳವಿರುವ ಬಾಣಲೆಯಲ್ಲಿ ಹಾಕಿಕೊಂಡು ಕಾಯಿಸಿ.

3. ಗೋಡಂಬಿ, ಬಾದಾಮಿ ಬೀಜಗಳನ್ನು ತುಪ್ಪದಲ್ಲಿ ಹಾಕಿ, ಕಡಿಮೆ ಉರಿಯಲ್ಲಿ ಸ್ವಲ್ಪ ಹೊತ್ತು ಹುರಿಯಿರಿ. ಇದರಿಂದ ಅವುಗಳು ಗರಿಗರಿಯಾಗುತ್ತವೆ.

4. ನಂತರ ಅವುಗಳನ್ನು ಬಾಣಲೆಯಿಂದ ತೆಗೆದು ಪಕ್ಕದಲ್ಲಿಡಿ.

5. ಸಿಪ್ಪೆ ತೆಗೆದ ಬೀಟ್‍ರೂಟ್‍ಗಳನ್ನು ಬೆಚ್ಚಗಿನ ತುಪ್ಪದಲ್ಲಿ ಹಾಕಿ ಮತ್ತು ಸ್ವಲ್ಪ ಹೊತ್ತು ಕಡಿಮೆ ಹುರಿಯಲ್ಲಿ ಹುರಿಯಿರಿ.

6. ಈಗ, ಇದಕ್ಕೆ ಹಾಲು ಮತ್ತು ಕೋವಾವನ್ನು ಹಾಕಿ. ಕಡಿಮೆ ಹುರಿಯಲ್ಲಿ ಹುರಿಯಿರಿ.

Yummy Beetroot Halwa Recipe

7. ನಂತರ, ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕಡಿಮೆ ಗಾತ್ರದ ಹುರಿಯಲ್ಲಿ ಬೇಯಿಸಿ ಮತ್ತು ಆಗಾಗ ಚೆನ್ನಾಗಿ ಕಲೆಸಿ ಕೊಡಿ.

8. ಇದರ ರುಚಿ ಮತ್ತಷ್ಟು ಹೆಚ್ಚಾಗಲು ಮಂದಗೊಳಿಸಿದ ಹಾಲನ್ನು ಬೆರೆಸಿ.

9. ಹಾಲು ಮತ್ತಷ್ಟು ಮಂದಗೊಳ್ಳುವವರೆಗೆ ಹಾಗು ಮಿಶ್ರಣವು ಗಟ್ಟಿಯಾಗುವವರೆಗೆ ಬೇಯಿಸುತ್ತ ಇರಿ.

10. ಹುರಿಯನ್ನು ಆರಿಸಿ ಮತ್ತು ಗೋಡಂಬಿ, ಬಾದಾಮಿ ಮತ್ತು ಒಣ ದ್ರಾಕ್ಷಿಗಳಿಂದ ಹಲ್ವಾವನ್ನು ಅಲಂಕರಿಸಿ.

11. ಈಗ ಬೀಟ್‍ರೂಟ್ ಹಲ್ವಾ ಬಡಿಸಲು ಸಿದ್ಧವಾಗಿದೆ. ಆರೋಗ್ಯಕರವಾದ ಹಲ್ವಾವನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಹಂಚಿಕೊಂಡು ಸೇವಿಸಿ.

English summary

Yummy Beetroot Halwa Recipe

Beetroot, which is also called chukandar in Hindi, is a dark red vegetable. The beetroot tastes sweet and is soft to eat. Beetroot features in many recipes because of its health benefits. So, how to eat beetroot so that it tastes awesome? Have you ever tried beetroot halwa recipe? This is one of the tastiest halwa recipes.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more